ಹೊಸ ಆವಿಷ್ಕಾರಕ್ಕೆ ಕೈಗನ್ನಡಿ ಚಂದ್ರಯಾನ ೩ – ಲೇಖನ್‌ ನಾಗರಾಜ್

೨೦೧೯ ರಲ್ಲಿ, ೪೨೫ ಕೋಟಿ ವೆಚ್ಚದಲ್ಲಿ ಚಂದ್ರಯಾನ-೨ನ್ನು ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಕೊನೆಯಲ್ಲಿ ತಾಂತ್ರಿಕ ದೋಷದ ಕಾರಣದಿಂದ ಇದು ಕೂಡ ಚಂದ್ರನ ಸ್ಥಳ ತಲುಪುವಲ್ಲಿ ವಿಫಲವಾಯಿತು. ಚಂದ್ರಯಾನ ೩, ಕುರಿತು ಲೇಖನ್‌ ನಾಗರಾಜ್ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾನವ ಬಹಳಷ್ಟು ಪ್ರಬಲನಾಗಿದ್ದಾನೆ. ತನ್ನ ಬುದ್ಧಿ ಶಕ್ತಿಯಿಂದ ಹೊಸ ಹೊಸ ಆವಿಷ್ಕಾರಗಳೊಂದಿಗೆ ಪೃಕೃತಿಗೆ ಸವಾಲಾಗುತ್ತಾ ಇದ್ದಾನೆ. ತನ್ನ ಜ್ಞಾನದಿಂದ, ವಿಜ್ಞಾನವನ್ನು ಇನ್ನಷ್ಟು ಬಲಗೊಳಿಸುತ್ತಾ ಬಂದಿದ್ದಾನೆ. ಇಂದು ನಾವು ಅವಶ್ಯವಿರುವುದೆಲ್ಲಾ, ಅಂಗೈಗೆ ಎಟುಕುವಷ್ಟು ಮುಂದುವರಿದಿದ್ದೇವೆ. ಇಂತಹ ಒಂದು ಹೊಸ ಆವಿಷ್ಕಾರಕ್ಕೆ ಕೈಗನ್ನಡಿ ನಮ್ಮ ಚಂದ್ರಯಾನ-೩.

ಜುಲೈ ೧೪ ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-೩ ರಾಕೆಟ್‌ನ್ನು ೬೦೦ ಕೋಟಿ ವೆಚ್ಚದಲ್ಲಿ ತಯಾರಿಸಿ. ಕೆ. ಶಿವನ್‌ ಅವರ ನೇತೃತ್ವದಲ್ಲಿ ಉಡಾವಣೆ ಮಾಡಲಾಗಿತ್ತು. ಇಂದು ಇದು ಭೂಮಿಯ ಸುತ್ತ ತನ್ನ ಪ್ರಯೋಗವನ್ನು ಮುಗಿಸಿ. ಚಂದ್ರನ ಕಡೆಗೆ ತನ್ನ ಪಥವನ್ನು ಚಲಿಸಿದೆ. ಇದು ನಮ್ಮ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಇದಕ್ಕೂ ಮೊದಲು ಚಂದ್ರಯಾನ-೧ ೩೮೦ ಕೋಟಿ ವೆಚ್ಚದಲ್ಲಿ ೨೦೦೮ ರಲ್ಲಿ ಉಡಾವಣೆ ಮಾಡಲಾಗಿತ್ತು.

ಫೋಟೋ ಕೃಪೆ : google

ತಾಂತ್ರಿಕ ದೋಷದ ಕಾರಣದಿಂದ ಚಂದ್ರಯಾನ-೧ ಯಶಸ್ವಿಯಾಗಿ ಚಂದ್ರನ ಮೇಲ್ಮೈನ್ನು ಸ್ಪರ್ಶಿಸಿದರು. ಶೋಧನೆ ಮಾಡಲಾಗದೆ ಕಂದಕಕ್ಕೆ ಬಡಿದು ಚಂದ್ರನ ನೆಲಕ್ಕೆ ಉರುಳಿತು. ಇದರಿಂದ ಚಂದ್ರನಲ್ಲಿ ನೀರಿನ ವಿಶ್ಲೇಷಣೆಯಾಗಿರುವುದು ತಿಳಿಯಿತು. ನಂತರ ೨೦೧೯ ರಲ್ಲಿ, ೪೨೫ ಕೋಟಿ ವೆಚ್ಚದಲ್ಲಿ ಚಂದ್ರಯಾನ-೨ನ್ನು ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಕೊನೆಯಲ್ಲಿ ತಾಂತ್ರಿಕ ದೋಷದ ಕಾರಣದಿಂದ ಇದು ಕೂಡ ಚಂದ್ರನ ಸ್ಥಳ ತಲುಪುವಲ್ಲಿ ವಿಫಲವಾಯಿತು. ಇದು ಭಾರತೀಯರಿಗೆಲ್ಲಾ ನಿರಾಸೆಯಾಯಿತು.

ಇಸ್ರೋ ಆಫೀಸ್  (ಫೋಟೋ ಕೃಪೆ : google)

ಸಾವಿರಾರು ಕಾರ್ಮಿಕರು, ಅನೇಕ ತಂತ್ರಜ್ಞರು, ವಿಜ್ಞಾನಿಗಳು ನಿರಾಸೆಯಾಗುವಂತೆ ಮಾಡಿತು. ಆದರು ತನ್ನ ಛಲವನ್ನು ಬೆನ್ನು ಬಿಡದ ಇಸ್ರೋ ಇಂದು ಮತ್ತೆ ಮರಳಿ ಯತ್ನವ ಮಾಡಿ ಚಂದ್ರಯಾನ-೩ ಪ್ರಯೋಗ ಮಾಡಿದೆ. ಇದು ಯಶಸ್ಸಿನ ದಾರಿಯಲ್ಲಿ ಸಾಗುತ್ತಿದೆ. ಇದು ಗೆಲುವಿನ ಹಾದಿಯಲ್ಲಿ ಮರಳಿ ಉತ್ತರವಾಗುತ್ತದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಚಂದ್ರನಯಾನದ ಉದ್ದೇಶ.

ತನ್ನ ಬುದ್ಧಿ ಅಮೇರಿಕಾ, ಚೀನಾ, ರಷ್ಯಾ ಬಿಟ್ರೆ ಭಾರತವೆ ನಾಲ್ಕನೆಯ ರಾಷ್ಟ್ರ. ಕೆ.ಶಿವನ್‌ ನೇತೃತ್ವದ ತಂಡ. ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಪ್ರಯೋಗವಾದ ಚಂದ್ರಯಾನ-೩ ನೌಕೆಯು ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಪ್ರಯಾಣ ಆರಂಭಿಸಿದೆ. ಆಗಷ್ಟ್‌ ೨೩ರ ಮಧ್ಯರಾತ್ರಿ ಚಂದ್ರನ ಮೇಲೆ ಲ್ಯಾಂಡಿಂಗ್‌ ಆಗುತ್ತದೆ. ಜುಲೈ ೧೪ ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಆಗಷ್ಟ್‌ ೧ ರಂದು ಭೂಮಿಯಿಂದ ಹೊರ ಕವಚ ದಾಟಿ ಚಂದ್ರನ ಕಡೆಗೆ ಸಾಗುತ್ತಿದೆ.


  • ಲೇಖನ್‌ ನಾಗರಾಜ್ , ಹೊನ್ನಾವರ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW