ಕವಿಯತ್ರಿ ಕಾವ್ಯ ದೇವರಾಜ್ ಅವರು ಬರೆದಿರುವ ‘ನಿನ್ನ ಸನಿಹಕೆ’ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸಾವಿರಾರು ಭರವಸೆಯ ನಡುವೆ
ಸೊಗಸಾದ ಕನಸ ತೋರಿ
ಕರೆದೋಯ್ದ ಕನಸ ಪಯಣಕೆ
ಅಷ್ಟೇ!! ಜೊತೆಯಾದ ಮೇಲೆ
ಬರವಸೆಯೊಂದಿಗೆ ಶುರುವಾಗಲಿದ್ದ ಸುಂದರ ಪಯಣ
ಇತಿಶ್ರೀ ಮಾಡಿತು ಕನಸಿನೊಂದಿಗೆ!!
ಜೊತೆಯಲ್ಲಿ ಸಾಗುವೆನೆಂದು ಮಾತು ಕೊಟ್ಟಿದವ
ನನ್ನ ಜೀವ, ಜೀವನ ಎರಡು ನಿನಗೆ ಧಾರೆ ಎಂದಿದ್ದವ, ಏನನ್ನು ನಿನ್ನಲ್ಲಿ ಮರೆಮಾಚಲಾರೆ;
ನಿನ್ನ ಬಿಟ್ಟಿರಲಾರೆ ಎಂದು ಭಾಷೆ ಕೊಟ್ಟಿದ್ದವ
ಏಕೋ ಏನೋ ದೂರಸರಿದ ನನಗೇನು ತಿಳಿಸದೆ.
ಹರಳುರಿದಂತೆ ಉದುರುತ್ತಿದ್ದ ನುಡಿ ಮುತ್ತುಗಳೆಲ್ಲವೂ
ಮೌನವಾಗಿ ಅಡಗಿದವು ಮನದ ಚಿಪ್ಪಿನೊಳಗೆ
ಮನವು ಭಾರವಾಗಿ, ಉಸಿರು ಕಟ್ಟಿದಂತಾಗಿ
ಇತಿಶ್ರೀ ಹಾಡಿತು ಬಾಳು ಕನಸಿನ ನೋಟದೊಂದಿಗೆ.
ಅರ್ಥವಾಗದೆ ಉರುಳಿ ಹೋಯಿತು ಬದುಕು
ಬತ್ತಿ ಹೋಯಿತು ಆಸೆ; ಕಮರಿ ಹೋಯಿತು ಕನಸು
ಮತ್ತೆ ಜೀವ ಚೇತರಿಸಿಕೊಳ್ಳಲಾಗದಷ್ಟು ; ಆದರೂ ನೊಂದ ಜೀವ ಒಳ ನುಡಿಯುತ್ತಿದೆ ಮೆಲ್ಲನೆ
ತಾಳು ಮನವೇ, ಎದೆಗುಂದಬೇಡ
ಬಂದೇ ಬರುವ ಮತ್ತೆ ಅವನು ನಿನ್ನ ಸನಿಹಕೆ!!
- ಕಾವ್ಯ ದೇವರಾಜ್