‘ಚಿರಸತ್ಯ..!’ ಕವನ – ರಶ್ಮಿಪ್ರಸಾದ್(ರಾಶಿ)

‘ಕೈಗೆಟುಕದ ಅದೃಷ್ಟಗಳಲ್ಲಿ ಭರವಸೆ ಇಡುವುದಕ್ಕಿಂತ ಪ್ರಯತ್ನಗಳ ಪಡುತ್ತಿದ್ದರೆ ಯಶಸ್ಸು ಸುಗಮವಲ್ಲವೇ’.??….ರಶ್ಮಿಪ್ರಸಾದ್ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಸರಿದು ಹೋಗುವ ಕಾಲಗರ್ಭವ
ನೆನೆದು ಬೆಲೆಕೊಡುವುದಕ್ಕಿಂತ
ಸಮಯಕ್ಕೆ ಬೆಲೆಕೊಟ್ಟರೆ
ಬದುಕು ಸಾರ್ಥಕಗೊಳ್ಳುವುದಿಲ್ಲವೇ.??

ನುಸುಳಿ ಹೋಗುವ ಕಾಲುದಾರಿಯ
ಹಳಹಳಿಸಿ ನಡೆಯುವುದಕ್ಕಿಂತ
ಪಾದಗಳನ್ನು ನಂಬಿ ನಡೆದರೆ
ಗಮ್ಯವ ಸೇರುವುದಿಲ್ಲವೇ.??

ಕೈಗೆಟುಕದ ಅದೃಷ್ಟಗಳಲ್ಲಿ
ಭರವಸೆ ಇಡುವುದಕ್ಕಿಂತ
ಪ್ರಯತ್ನಗಳ ಪಡುತ್ತಿದ್ದರೆ
ಯಶಸ್ಸು ಸುಗಮವಲ್ಲವೇ.??

ಕಾಣುವ ಕನಸುಗಳಲ್ಲಿ
ಗುರಿಗಳನ್ನು ಹುಡುಕುವುದಕ್ಕಿಂತ
ಕಾಯಕವನ್ನು ಅರಸಿ ನಡೆದರೆ
ಧ್ಯೇಯವು ಫಲಿಸುವುದಿಲ್ಲವೇ.??

ಉರಿಯುವ ದೀಪವನ್ನು
ಅರಸಿ ನಡೆಯುವುದಕ್ಕಿಂತ
ಬೆಳಕನ್ನು ಆರಾಧಿಸಿದರೆ
ಅರಿವು ಮೂಡುವುದಿಲ್ಲವೇ.??

ಉಸಿರಾಡುವ ಜೀವವನ್ನು
ನಂಬಿ ಪ್ರೀತಿಸುವುದಕ್ಕಿಂತ
ಜೀವನವನ್ನು ಪ್ರೀತಿಸಿದರೆ
ಮಧುರಕ್ಷಣಗಳ ಆಸ್ವಾಧಿಸಲಾರಿರೇ.??

ಸುಮ್ಮನೆ ವ್ಯಕ್ತಿಗಳ ಹೊಗಳಿ
ವೈಭವೀಕರಿಸುವುದಕ್ಕಿಂತ
ವ್ಯಕ್ತಿತ್ವಗಳನ್ನು ಗೌರವಿಸಿದರೆ
ತತ್ವಕ್ಕೆ ಬೆಲೆಕೊಟ್ಟಂತಲ್ಲವೇ.??


  • ರಶ್ಮಿಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading