”ಎದ್ದು ಹೋಗುವಾಗ ಸದ್ದಾಗಲಿಲ್ಲವೇ?…ಪಿಸುನುಡಿ ಸಾಕಿತ್ತು, ಹೋಗುವವನನ್ನು ತಡೆದು ನಿಲ್ಲಿಸುವುದಕ್ಕೆ”…ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಕವಿತೆಯ ಸಾಲುಗಳನ್ನು ಓದುವಾಗ ರೋಮಾಂಚನವಾಗುತ್ತದೆ, ಅರ್ಥಪೂರ್ಣ ಸಾಲುಗಳು ಸಾಹಿತ್ಯ ಪ್ರಿಯರಿಗೆ ರಸದೌತಣ ನೀಡುತ್ತದೆ, ಮುಂದೆ ಓದಿ….
ಡಮರುಗ ನಾದವದು
ಎದೆ ಬಡಿತ
ಎದ್ದು ಹೋಗುವಾಗ ಸದ್ದಾಗಲಿಲ್ಲವೇ?
ಒಂದು ಮೆಲ್ಲುಸಿರ ಪಿಸುನುಡಿ ಸಾಕಿತ್ತು
ಹೋಗುವವನನ್ನು ತಡೆದು ನಿಲ್ಲಿಸುವುದಕ್ಕೆ
ನಿರಾಸಕ್ತಿ ಪ್ರಚೋದಿಸುವುದಿಲ್ಲ
ಒಲವ ಚಿಗುರಿಸುವುದಿಲ್ಲ..
ನಿರುತ್ಸಾಹ ನಿರ್ಲಕ್ಷ್ಯತನವಿರುವೆಡೆ
ಹೆಜ್ಜೆಗಳು ನಿಲ್ಲುತ್ತವೆ ಹೇಗೆ?
ಪ್ರಿಯೆ,
ಮನ ಬಯಸಲಿ
ಹೃದಯ ತುಂಬಲಿ ಪ್ರೀತಿ
ಎಲ್ಲವೂ ಸುಖಾಂತ್ಯವಾಗುತ್ತದೆ
ಬಯಸಿ ಬೆರೆತವರು
ದೂರ ಸರಿಯುವುದೆಂತು ಸಾಧ್ಯ!!
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
