ಕೊರೊನ ಆರ್ಭಟದ ಮಧ್ಯೆ ನಿನ್ನ ಡ್ರೋನ್ ಹಾರಿಸಿಬಿಟ್ಟೆಯಲ್ಲ ಪ್ರತಾಪ್.

ಇಲ್ಲಿ ಡ್ರೋನ್ ಪ್ರತಾಪ್ ನ ಕತೆ ಒಂದು ಚಿಕ್ಕ ಉದಾಹರಣೆಯಷ್ಟೇ. ಬೇರೆ ಪ್ರಶಸ್ತಿ ಪಡೆದವರ ಜಾತಕವನ್ನು ಒಮ್ಮೆ ಅವಲೋಕಿಸಿದರೆ ಇನ್ನಷ್ಟು ಕಾಗೆ ಹಾರಿಸಿದವರು ಬೆಳಕಿಗೆ ಬರುತ್ತಾರೆ.  

ಪ್ರತಾಪ ಅವರಿಗೆ ಪ್ರಶಸ್ತಿ, ಹಣ ಎಲ್ಲವೂ ಬಂದು ವರ್ಷಗಳೇ ಕಳೆದವು. ಆದರೆ ಅವರು ಈಗ ಕರೋನ ನಡುವೆ ಬಿಸಿ ಬಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಎಷ್ಟೋ ಜನರಿಗೆ ಮೊದಲು ಡ್ರೋನ್ ಪ್ರತಾಪ್ ಯಾರು ಎನ್ನುವುದೇ  ಗೊತ್ತಿರಲಿಲ್ಲ. ಆಗ ಸಿಕ್ಕ ಸಿಕ್ಕ ಕಾರ್ಯಕ್ರಮಗಳಲ್ಲಿ ಎಳೆದು ತಂದು ಇತನೇ ‘ಡ್ರೋನ್ ಪ್ರತಾಪ’ ಎಂದು ಮನೆ ಮನೆಗೂ ಪರಿಚಯಿಸಿದ್ದು ನಮ್ಮ ಮಾಧ್ಯಮದವರು. ನಮ್ಮ ಮಂಡ್ಯದ ಹುಡುಗ, ಹೆಮ್ಮೆಯ ಹುಡುಗ ಎಂದೆಲ್ಲ ಹೇಳಿ ಅಟ್ಟಕ್ಕೆ ಕೂರಿಸಿದರು. ಜನ  ಮರಳೋ ಜಾತ್ರೆ  ಮರಳೋ ಅನ್ನುವಂತೆ ಜನಗಳು ಮರಳಾದರು ನಿಜ. ಆದರೆ ಮಾಧ್ಯಮದವರು ಮರಳಾಗಿದ್ದು ಇಲ್ಲಿ ವಿಪರ್ಯಾಸ.

ಪ್ರತಾಪ್ ಡ್ರೋನೋ ಹಾರಿಸಿದ್ದು ಒಮ್ಮೆಯೂ ನೋಡಿಲ್ಲ. ಹಾಗಿದ್ದರೆ  ಪ್ರತಾಪ್ ಹಾರಿಸಿದ್ದು ಡ್ರೋನೋ, ಕಾಗೇನೋ ಎನ್ನೋ ಪ್ರಶ್ನೆಗಳು ಇಷ್ಟು ವರ್ಷಗಳ ನಂತರ ಉಲ್ಬಣವಾದಾಗ ಹಾಸ್ಯಾಸ್ಪದವೆನಿಸಿತು. ದೇಶ -ವಿದೇಶದಲ್ಲೆಲ್ಲ ೩೬೦ ಕೆಜಿ ಹೊತ್ತುಕೊಂಡು ಓಡಾಡಿದ್ದೇನೇ ಎಂದು ತನ್ನ ಕಷ್ಟಗಳನ್ನು ಪ್ರತಾಪ್ ಬಿಡಿ ಬಿಡಿಯಾಗಿ, ಒಂದಲ್ಲ- ಎರಡಲ್ಲ ಹಲವಾರು ಕಾರ್ಯಕ್ರಮಗಳಲ್ಲಿ ಸಾರಿ ಸಾರಿ ಹೇಳುವಾಗ ಬಾಯಿ ತೆರೆದು, ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದು ಇದೇ ಪ್ರಶ್ನೆ ಕೇಳುತ್ತಿರುವ ಜನ. ಆಗ ಯಾರಿಗೂ ಅನುಮಾನ ಬರಲಿಲ್ಲ. ಬದಲಾಗಿ ಲಕ್ಷ, ಕೋಟಿ ಹಣಗಳು ಅವರ ಬೊಕ್ಕಸಕ್ಕೆ ಬರುವಂತೆ ಮಾಡಿದರು. ಡ್ರೋನ್ ಪ್ರತಾಪ್ ಏಳು ಕೋಟಿ ಜನರನ್ನು ಮರಳು ಮಾಡಿದ್ದೆ ನಿಜವಾಗಿದ್ದರೇ ಆತ ದಡ್ಡನಲ್ಲ. ಆತನನ್ನು ಕರೆದು ಸನ್ಮಾನಿಸಿ, ಪ್ರಚಾರ ಕೊಟ್ಟವರು ನಿಜವಾದ ದಡ್ಡರು .

97071578_1061252307608487_3798392995531718656_o

ಒಬ್ಬ ಮನುಷ್ಯನ ಸಾಧನೆಯನ್ನು ಸರಿಯಾಗಿ ಪರಿಶೀಲಿಸದೆ ಹೋದರೆ ಮುಂದೆದ್ದೇಳುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ಎನ್ನುವುದಕ್ಕೆ ಇದೇ ಒಂದು ಸಾಕ್ಷಿ. ನಮ್ಮಲ್ಲಿ ಪ್ರತಿ ವರ್ಷ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ನೀಡುತ್ತಾರೆ. ಆ ಪ್ರಶಸ್ತಿ ಪಡೆದವರ ಜಾತಕವನ್ನು ಒಮ್ಮೆ ಅವಲೋಕಿಸಿದರೆ ಇನ್ನಷ್ಟು ಕಾಗೆ ಹಾರಿಸಿದವರು ಬೆಳಕಿಗೆ ಬರುತ್ತಾರೆ. ಇಲ್ಲಿ ಡ್ರೋನ್ ಪ್ರತಾಪ್ ನ ಕತೆ ಒಂದು ಚಿಕ್ಕ ಉದಾಹರಣೆಯಷ್ಟೇ. ಎಷ್ಟೋ ಸಾಧನೆಗೈದ ಜನ ಎಲೆಮರೆಯ ಕಾಯಿಯಂತೆ ಇದ್ದು, ಕೊನೆಗೆ ಬಡತನದಲ್ಲಿಯೇ ಸಾಯುತ್ತಾರೆ.  ಪ್ರೋತ್ಸಾಹ, ಪ್ರಚಾರ ನಿಜವಾಗಿಯೂ ಯಾರಿಗೆ ಧಕ್ಕಬೇಕೋ ಅವರಿಗೆ ಧಕ್ಕುವುದೇ ಇಲ್ಲ.

( ರಾಜ್ಯೋತ್ಸವ ಪ್ರಶಸ್ತಿ; ಪಡೆದ ಮೇಲೆ ರಂಗ ನಿರ್ದೇಶಕ ಆರ್‌ ನಾಗೇಶ್‌ ಹೀಗೆ ಹೇಳಿದ್ದೇಕೆ?)

ಒಬ್ಬ ಸಾಧಕನಿಗೆ ಪ್ರೋತ್ಸಾಹಿಸಿ, ಬೆನ್ನು ತಟ್ಟಿ, ಬೆಳೆಸುವುದು ತಪ್ಪಲ್ಲ.  ಆದರೆ ಅತಿಯಾದ ಹೊಗಳಿಕೆ, ಅತಿಯಾದ ಪ್ರಚಾರ ನೀಡುವುದು ಒಳ್ಳೆಯದಲ್ಲ. ಅಂಬೆಗಾಲಿಡುವಾಗಲೇ ಹಾಡಿ ಹೊಗಳಿ ತಲೆ ಮೇಲೆ ಎತ್ತಿ ಮೆರೆಸುವುದಿದೆಯಲ್ಲ ಅದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಈ ರೀತಿಯ ಹೊಗಳಿಕೆಯು  ಹೀಗೆಯೇ ಮುಂದೊರೆದರೆ ಕಾಗೆ ಹಾರಿಸುವವರ ಕೈಗೆ ಸಿಕ್ಕು ನಾವು ಮೂರ್ಖರಾಗುತ್ತೇವೆ.

ಇಲ್ಲಿ ಪ್ರಶ್ನೆಗಳು ಡ್ರೋನ್ ಪ್ರತಾಪ್ ಒಬ್ಬರ ಮೇಲೆಯೇ ಏಳುವುದಿಲ್ಲ. ಅವರಿಗೆ ಕುಮ್ಮಕು ನೀಡಿದ ಪ್ರತಿಯೊಬ್ಬರ ಮೇಲು ಪ್ರಶ್ನೆ ಮೂಡುತ್ತದೆ. ಮತ್ತು ಒಬ್ಬ ವ್ಯಕ್ತಿಯನ್ನು ಮಾಧ್ಯಮದ ಮೂಲಕ ಜನರಿಗೆ ಪರಿಚಯಿಸುವಾಗ ಮೈಯೆಲ್ಲ ಕಣ್ಣಾಗಿಸಿಕೊಳ್ಳಬೇಕಾದ್ದು ಮಾಧ್ಯಮದ ಕರ್ತವ್ಯ. ಅವರ ಬಗ್ಗೆ ಮಾಧ್ಯಮದವರು ಇಷ್ಟು ದಿನ ತೋರಿಸಿದ್ದು ಸುಳ್ಳು ಕತೆಗಳೇಯಾದರೆ ಇಷ್ಟು ದಿನ ನಾವು ನೋಡಿದ್ದೆಲ್ಲ ಬರೀ ಸುಳ್ಳಾ? ಎನ್ನುವಾಗ ಇಲ್ಲಿ ಯಾರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಮೊದಲು ಬಣ್ಣ ಬಣ್ಣವಾಗಿ ವರ್ಣಿಸಿ, ಅನಂತರ ಡ್ರೋನ್ ನಾ? ಅಥವಾ ಕಾಗೇನಾ? ಅಂತ ಅಡ್ಡ ಗೋಡೆಯ ಮೇಲೆ ದೀಪ ಇಡುವುದು ಎಷ್ಟರ ಮಟ್ಟಿಗೆ ಸರಿ. ಪ್ರತಾಪ್ ತಪ್ಪೇ ಮಾಡಿದ್ದರೆ ಮಾಧ್ಯಮದ ಮೂಲಕವೇ ಬಯಲಿಗೆ ಬರಲಿ. ಜೊತೆಗೆ ಇನ್ನಷ್ಟು ಕಾಗೆ ಹಾರಿಸಿದವರೂ ಕೂಡಾ ಬರಲಿ.

  • ಶಾಲಿನಿ ಹೂಲಿ ಪ್ರದೀಪ್

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW