ಎಲಿವೇಟ್‌ ಪ್ರಶಸ್ತಿ ಗರಿ

ಕ್ಲೀನ್‌ ಟೆಕ್‌, ಅಗ್ರಿ-ಟೆಕ್ ಮತ್ತು ವನ್ಯಜೀವಿ-ತಂತ್ರಜ್ಞಾನದ ಮೂಲಕ ಪರಿಚಿತವಾಗಿರುವ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪೆನಿಯಾದ ಕಟಿಧಾನ್ ಸಂಸ್ಥೆಯೂ ಈ ಬಾರಿ ಎಲಿವೇಟ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಟಿಧಾನ್ನ ಸಂಸ್ಥಾಪಕ ಎಸ್‌.ಆರ್‌. ಅಯಾನ್ ಎಲಿವೇಟ್ 2023-24ನೇ ಸಾಲಿನ ಎಲಿವೇಟ್‌ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬೆಂಗಳೂರಿನ ತಾಜ್‌ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ನಡೆದ ಎಲಿವೇಟ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ವನ್ಯಜೀವಿಗಳ ದಾಳಿಯಿಂದಾಗಿ ಕೃಷಿಯಲ್ಲಿನ ಬೆಳೆ ನಷ್ಟವನ್ನು ಕಡಿಮೆ ಮಾಡಲು ತನ್ನ ಸುಧಾರಿತ ತಾಂತ್ರಿಕ ಪರಿಹಾರಗಳನ್ನು ಒದಗಿಸುವುದರಲ್ಲಿ ಕಟಿಧಾನ್ನ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಸಾಬೀತಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಟಿಧಾನ್ನ ಸಂಸ್ಥಾಪಕ ಎಸ್‌.ಆರ್‌. ಅಯನ್, ಎಲಿವೇಟ್ ಗ್ರಾಂಟ್ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನಮಗೆ ಅತ್ಯಂತ ಹೆಮ್ಮೆ ಎನಿಸುತ್ತದೆ. ಈ ಅದ್ಭುತವಾದ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದರು.

ಸ್ಟಾರ್ಟ್‌ ಆಪ್‌ಗಳಿಗೆ ಬಂಡವಾಳ ಬೆಂಬಲವನ್ನು ಒದಗಿಸುವ ದೇಶದ ಏಕೈಕ ರಾಜ್ಯ ಸರ್ಕಾರವೆಂದರೆ ಅದು ಕರ್ನಾಟಕ. ಹೂಡಿಕೆದಾರರ ಸಂಪರ್ಕಗಳು, ಮಾರುಕಟ್ಟೆ ಪ್ರವೇಶ ಕಾರ್ಯಕ್ರಮಗಳು, ತೆರಿಗೆ ವಿನಾಯಿತಿಗಳು, ಜಾಗತಿಕ ನೆಟ್‌ವರ್ಕ್‌ಗಳನ್ನು ಒದಗಿಸುವಲ್ಲಿ ಸರ್ಕಾರವು ಸದಾ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದರು.


  • ಪ್ರಭುಸ್ವಾಮಿ – ಲೇಖಕರು, ಪತ್ರಕರ್ತರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading