ಒಂದು ವೆಬ್ ಸಿರೀಸ್ ಕತೆ – ಆತ್ಮ .ಜಿ. ಎಸ್

ಸ್ಲಂ ಒಂದರಲ್ಲಿ ಬೆಳೆದು ಕನಸಿನ ಬೆನ್ನು ಹತ್ತಿ ನಡೆವ ನಾಯಕ ತಾನು ಆರ್ಥಿಕವಾಗಿ ಎತ್ತರಕ್ಕೆ ಏರಿದರೂ ತನ್ನಂತೆ ಇದ್ದ ಜನರಿಗೆ ಸಹಾಯ ಮಾಡಬಹುದಿತ್ತು ಎಂಬ ಭಾವ ಬಾರದೇ ಇರುವುದಿಲ್ಲ.FAADU A Love ಸ್ಟೋರಿ ವೆಬ್ ಸಿರೀಸ್ ಕುರಿತು ಲೇಖಕಿ ಆತ್ಮ .ಜಿ. ಎಸ್ ಅವರು ಬರೆದ ಒಂದು ಲೇಖನ ತಪ್ಪದೆ ಓದಿ….

ಸಿನಿಮಾ : FAADU A Love story
ನಿರ್ದೇಶಕರು: ಅಶ್ವಿನಿ ಐಯ್ಯರ್ ತಿವಾರಿ
ಚಿತ್ರಕಥೆ : ಸೌಮ್ಯ ಜೋಶಿ
ಕಲಾವಿದರು : ಪವೈಲ್ ಗುಲಾಟಿ . ಸೈಯಾಮಿ ಖೇರ್, ಅಭಿಲಾಶ ತಾಪ್ಲಿಯಲ್

ಅಭಯ್ ದುಬೇ ಸವಾಲಿಗೆ ಸವಾಲು ಹಾಕುವ, ವ್ಯವಸ್ಥಿತವಾಗಿ ಬದುಕನ್ನು ಎದುರಿಸುವ ಛಾತಿ ಈತನಿಗೆ ರಕ್ತಗತವಾಗಿ ಬಂದದ್ದಲ್ಲ. ಚಿಕ್ಕಂದಿನಲ್ಲಿ ತಾನು ಕಂಡ ಬದುಕು, ಸುತ್ತಮುತ್ತಲಿನ ಮಂದಿ, ಸರಿಯಾದ ಚಿಕಿತ್ಸೆ ಇಲ್ಲದೆ ನರಳಿದ ತಾಯಿಯ ಅಸಹಾಯಕತೆ ನೋಡಿ ಗಡುಸುತನ ದಕ್ಕಿಸಿಕೊಂಡ ವ್ಯಕ್ತಿತ್ವ. ಗಡುಸು ಭಾವನೆಗಳು ನವಿರಾಗಿ ಹೊರಹೊಮ್ಮುತ್ತಿದ್ದು ಈತನ ಸಾಹಿತ್ಯಕ ಕವನದ ಎಳೆಗಳ ಮೂಲಕ.ಇದರಿಂದಲೇ ಆತನೆಡೆಗೆ ಆಕರ್ಷಿತಳಾಗುವ ಮಂಜರಿ ಈತನಿಗಿಂತ ಎತ್ತರ – ಸಾಮಾಜಿಕ ಸ್ಥರದಲ್ಲಿ.ತನ್ನ ನಿತ್ಯದ ಚಟುವಟಿಕೆ, ಓದು, ಒತ್ತಡ, ಪ್ರೀತಿ ಎಲ್ಲವನ್ನೂ ಪತ್ರದ ಮೂಲಕ ತಂದೆಗೆ ತಿಳಿಸುವ ಮೂಲಕ ಆತನನ್ನೇ ವಿವಾಹ ಆಗುವುದಾಗಿ ತಿಳಿಸುತ್ತಾಳೆ.ಮಗಳ ಪ್ರತಿಯೊಂದು ನಡೆನುಡಿ,ಆಕೆಯ ವ್ಯಕ್ತಿತ್ವದ ಅರಿವಿದ್ದೂ ಮಗಳ ಮದುವೆಗೆ ಸಹಕರಿಸಿ,ಬದುಕು ಕಟ್ಟಲು ಅವಕಾಶ ಮಾಡಿಕೊಟ್ಟವರು ಆಕೆಯ ತಂದೆ. ದುಬೆ ತನ್ನದೇ ನೆಲೆಯಲ್ಲಿ ಛಲದಲ್ಲಿ ಬದುಕುವ ಹಾಗೂ ಅದರ ಜೊತೆಯಲ್ಲಿಯೇ ಬದಲಾಗುವ ಕಥೆಯೇ FAADU A Love story ಕನಸು ಎಲ್ಲರಲ್ಲಿಯೂ ಇರುತ್ತದೆ.ಕೆಲವರಿಗೆ ಅವಕಾಶಗಳು ಸಹಜವಾಗಿಯೇ ಎದುರಾದರೆ ಇನ್ನು ಕೆಲವರು ಛಲದಿಂದ ಅದರ ಬೆನ್ನು ಹತ್ತುವರು.ನಾಯಕ ಅಭಯ್ ಲಭ್ಯವಿರುವ ಯಾವುದೇ ಅವಕಾಶವನ್ನು ಕಳೆದುಕೊಳ್ಳದೆ. ಯಶಸ್ಸಿನ ಏಣಿ ಏರುತ್ತಲೇ ಹೋಗುತ್ತಾನೆ.ಸ್ಲಂ ಒಂದರಲ್ಲಿ ಬೆಳೆಯುವ ಈತನಿಗೆ ಹಣದ ಅಡಚಣೆಯಾದರೂ ಶಾಲೆಯಲ್ಲಿ ಕನಸು ಬಿತ್ತಿದ ಶಿಕ್ಷಕರು ಹಾಗೂ ಅದನ್ನೇ ಸವಾಲಾಗಿ ಸ್ವೀಕರಿಸಿ ತೀರಾ ಕಡಿಮೆ ಹಣದಲ್ಲಿ ಉದ್ದಿಮೆ ಸ್ಥಾಪಿಸಲು ಆರಂಭದಲ್ಲಿ ಹೆಣಗಾಟ.ಇದಕ್ಕೆಂದೇ ಜೂಜಿಗೆ ತೊಡಗುವುದು, ಸಿನಿಮಾ ನಿರ್ಮಾಪಕನ ಪರಿಚಯ, ಆತ ಈತನಿಗೆ ನೀಡುವ ಸಲಹೆ ಎಲ್ಲವೂ ಬದುಕಿನ ಗ್ರಾಫ್ ಏರಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಫೋಟೋ ಕೃಪೆ : google

ಒಳ್ಳೆಯ ಮನೆತನದಲ್ಲಿ,ಒಳ್ಳೆಯ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದ ಮಂಜರಿ ಸ್ಲಂನ ಪುಟ್ಟ ಜೋಪಡಿಯಲ್ಲಿ ಬದುಕಿನ ಪ್ರೀತಿ ಅರಸುತ್ತಾಳೆ. ಸದಾ ಕುಡಿದೆ ಜೀವನ ಸಾಗಿಸುತ್ತಿದ್ದ ಮೈದುನನಿಗೆ ತಾಯಿಯಾಗುತ್ತಾಳೆ. ಗಂಡನ ಛಲದಿಂದ ಗಗನ ಚುಂಬಿ ಮನೆಗೆ ಬಂದರೂ ಆರಕ್ಕೂ ಏರದ ಸ್ಥಿತಪ್ರಜ್ಞ ಮನೋಭಾವ ಪ್ರೇಕ್ಷಕರನ್ನು ಸೆಳೆಯುತ್ತದೆ. ಹಾದಿ ತಪ್ಪಿದ ಮೈದುನನ್ನು ಸರಿದಾರಿಗೆ ತಂದ ಕೀರ್ತಿ ಆಕೆಯದ್ದೆ,ಆದರೆ ಹಣದ ಹಿಂದೆಯೇ ಹೋಗುವ ನಾಯಕನಿಗೆ ಇದು ಗಮನಕ್ಕೆ ಬರುವುದಿಲ್ಲ.

“Galib vs guchi, faiz vs ferarari entered our house in the form of silence “ಮಂಜರಿ ಗಂಡನ ಮನೋಭಾವ,ಬದುಕನ್ನು ನೋಡುವ ರೀತಿ ಬದಲಾದದ್ದನ್ನು ತಿಳಿಸುವ ಇಂತಹ ಸಂಭಾಷಣೆಗಳು ನಮ್ಮನ್ನೂ ನಾವು ಒಮ್ಮೆ ಇಣುಕಿ ನೋಡುವಂತೆ ಮಾಡುತ್ತದೆ.ಹಣದ ಹಿಂದೆಯೇ ಹೋಗಿ ಕೊಲೆಯ case ಒಂದರಲ್ಲಿ ಈತನನ್ನು ಸಿಕ್ಕಿ ಹಾಕಿಸಿದ ಸಂದರ್ಭದಲ್ಲಿ ಗಂಡನಿಗೆ ಆಕೆ ನೀಡುವ ಮಾರ್ಗದರ್ಶನ,ಆತ ತಾಳುವ ನಿಲುವಿನ ಮೂಲಕ ಜಯಗಳಿಸುವಲ್ಲಿ ಕಥೆ ಮುಕ್ತಾಯವಾಗುತ್ತದೆ..ಎದುರಾಳಿಗೆ ನೀನು ಗೆದ್ದೆ ಎಂಬ ಭಾವದಲ್ಲಿ ಬೀಗಿದರು ನನ್ನ ಅಂತಸಾಕ್ಷಿ ನಿನ್ನನ್ನು ಸೋಲುವ ಹಾಗೆ ಮಾಡಿದೆ.ನಾನು ಜೈಲಿನಲ್ಲಿ ಇದ್ದು ಹೊರಬಂದರು ಮನಸ್ಸಿನ ಕಟಕಟೆಯಲ್ಲಿ ಬಂಧಿಯಲ್ಲ.ನೀನಾದರೆ ಸ್ವತಂತ್ರವಾಗಿದ್ದರೂ ಮನೋ ಆಕಾಶದಲ್ಲಿ ಸದಾ ಬಂಧಿಯೇ ಇಂತಹ ಹಲವಾರು ಸಂಭಾಷಣೆಗಳು ಕಥೆಯ ಬಿಗುವನ್ನು ಹಿಡಿದಿಟ್ಟಿದೆ.

ಫೋಟೋ ಕೃಪೆ : google

FAADU Alovestory ಹನ್ನೊಂದು ಕಂತಿನಲ್ಲಿ ಇರುವ ಸುಂದರ ಪ್ರೇಮ ಕಥೆ ಎಂದು ಕರೆಯುವ ಬದಲಾಗಿ ಬದುಕಿನ ಕಥೆ ಎಂದರೆ ಸೂಕ್ತ.

ಪವೈಲ್ ಗುಲಾಟಿ ಕಥೆಗೆ ತಕ್ಕ ಪಾತ್ರ ನಿರ್ವಹಿಸಿದ್ದರೆ, ಸ್ಥಿತಪ್ರಜ್ಞ,ಪ್ರಬುದ್ಧ ವ್ಯಕ್ತಿತ್ವದ ನಟನೆಗೆ ಸಯಾಮಿಖೇರ್ ಮನಸ್ಸನ್ನು ಆಕ್ರಮಿಸುತ್ತಾರೆ. Sony liv ನಲ್ಲಿ ತೆರೆ ಕಂಡಿರುವ ಈ series ನಿರ್ದೇಶಕರು ಅಶ್ವಿನ್ ಅಯ್ಯರ್ ತಿವಾರಿ.

ಸ್ಲಂ ಒಂದರಲ್ಲಿ ಬೆಳೆದು ಕನಸಿನ ಬೆನ್ನು ಹತ್ತಿ ನಡೆವ ನಾಯಕ ತಾನು ಆರ್ಥಿಕವಾಗಿ ಎತ್ತರಕ್ಕೆ ಏರಿದರೂ ತನ್ನಂತೆ ಇದ್ದ ಜನರಿಗೆ ಸಹಾಯ ಮಾಡಬಹುದಿತ್ತು ಎಂಬ ಭಾವ ಬಾರದೇ ಇರುವುದಿಲ್ಲ. ಹಾಗಂತ ಈತ ಬದುಕಿನ ದಾರಿಯಿಂದ ಸ್ವಲ್ಪ ಆಚೆ ಬಂದಾಗ ಈತನ ತಪ್ಪನ್ನು ತಿಳಿಸುವ,ಅಂತಃಸಾಕ್ಷಿಯನ್ನು ಪ್ರಶ್ನಿಸು ಎಂದು ಹೇಳುವ ಪೋಲಿಸ್ ಈತನ ಗೆಳೆಯನೇ ಹೌದು.ಈತ ಸ್ಲಂ ನಲ್ಲಿಯೇ ಇರುವವನು,ಈತನನ್ನು ನಾಯಕ ಭೇಟಿಯಾಗುತ್ತಾನೆ,ತನ್ನ ಮನೆಗೆ ಕರೆಯುತ್ತಾನೆ.ಆ ಮಟ್ಟಿಗೆ ನಾಯಕ್ ಹಣಕಾಸಿನ ಸ್ಥರ ಬದಲಾದರೂ ತನ್ನ ಪ್ರೀತಿಪಾತ್ರರ ಜೊತೆಯಲ್ಲಿ ಬದಲಾಗುವುದಿಲ್ಲ.ಬದುಕಿನಲ್ಲಿ ಎಲ್ಲರೂ ಒಮ್ಮೊಮ್ಮೆ ಮಹತ್ವಾಕಾಂಕ್ಷೆ, ದುರಾಸೆ,ತಪ್ಪು ಗ್ರಹಿಕೆ ಹೀಗೆ ಹಲವಾರು ಕಾರಣಗಳಿಂದ ನಡೆವ ಹಾದಿಯಿಂದ ಪಕ್ಕ ಸರಿದು ನಡೆಯುವಂತಾಗುತ್ತದೆ.ಸರಿಯಾಗಿ ಮಾರ್ಗದರ್ಶನ ಮಾಡುವ ಪತ್ನಿ/ ಪತಿ,ಗೆಳೆಯ/ಗೆಳತಿ ಇದ್ದರೆ ಹಾದಿ ತಪ್ಪುವುದು ಸುಲಭವಲ್ಲ.series ನ ಮಧ್ಯ ಮಧ್ಯದಲ್ಲಿ ಸಾಹಿತ್ಯಕ ವಿಚಾರ ಬರುತ್ತದೆ.ಕೇವಲ ಕಾವ್ಯ ಹೊಟ್ಟೆ ತುಂಬಿಸುವುದಿಲ್ಲ ಎಂದು ಆರಂಭದಲ್ಲಿ ಹೇಳುವ ನಾಯಕನಿಗೆ ಅದೇ ಸಾಹಿತ್ಯ,ಕವಿತೆಗಳು ಈತನನ್ನು ಸನ್ಮಾರ್ಗದಲ್ಲಿ ಹೊರಳುವ ಹಾಗೆ ಮಾಡುತ್ತದೆ.

ಆ ಮಟ್ಟಿಗೆ FAADU ಬದುಕನ್ನು, ತನ್ನವರನ್ನು,ಒಳ್ಳೆಯತನವನ್ನು, ಅಂತರಾತ್ಮವನ್ನು ಪ್ರೀತಿಸುವ love story.


  • ಆತ್ಮ ಜಿ ಎಸ್ , ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW