ಮಿತ್ರರ ಆಯ್ಕೆ, ಜೀವನದ ಅಡಿಪಾಯ – ಪ್ರೊ. ರೂಪೇಶ್



ಸ್ನೇಹವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಬೇಕು, ಇಲ್ಲವಾದರೆ ಆಯ್ಕೆ ಮಾಡಿದ ಸ್ನೇಹಿತರಿಂದ ಜೀವನದ ಹಳಿ ತಪ್ಪುವುದು. ಎಂದು ಸ್ನೇಹದ ಮಹತ್ವವದ ಬಗ್ಗೆ ಸುಂದರವಾಗಿ ಪ್ರೊ.ರೂಪೇಶ್ ಅವರು ನಿರೂಪಿಸಿದ್ದಾರೆ. ಓದಿ ಅರ್ಥೈಸಿಕೊಳ್ಳಿ…

ಜೀವನದಲ್ಲಿ #ತಂದೆ_ತಾಯಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದರೆ, ಒಂದು ಮಿತ್ರನನ್ನು, (ಜೀವನ ಸಂಗಾತಿ) ನಾವು ಆಯ್ಕೆ ಮಾಡಬಹುದು. ಕಾಡುಪ್ರಾಣಿ ಹಾಗೂ ಮನುಷ್ಯನಲ್ಲಿ ವ್ಯತ್ಯಾಸ ಇದೆ.

ಕಾಡು ಪ್ರಾಣಿಯನ್ನು ಕಂಡ ಕೂಡಲೇ ನಮಗೆ ಅದರ ಸ್ವಭಾವ ಗೊತ್ತಾಗುತ್ತದೆ. ಮನುಷ್ಯನನ್ನು ಕಂಡ ಕೂಡಲೇ ಅವನ ಮುಖ ಛರ್ಯೆಯಿಂದ ಸ್ವಭಾವ ಗೊತ್ತಾಗುವುದಿಲ್ಲ. ನಾವು ಒಂದು ಜಿಂಕೆಯನ್ನು , ಮೊಲವನ್ನು ಲಾಲನೆ ಮಾಡಬಹುದು, ಆದರೆ ಅಕಸ್ಮಾತ್ ಒಂದು ಹುಲಿ, ಸಿಂಹ, ಚಿರತೆಯನ್ನು ಕಂಡ ಕೂಡಲೇ ಆಕರ್ಷಕವಾದರೂ ಅದನ್ನು ಲಾಲನೆ – ಮುದ್ದಾಡಲು ಹೋಗುವುದಿಲ್ಲ…. ಹಿಂಜರಿಯುತ್ತೇವೆ. ಕಾರಣ ಅವುಗಳು ಆಕ್ರಮಣಕಾರಿ, ಮಾಂಸಾಹಾರಿ, ನಮ್ಮನ್ನು ಕಚ್ಚಿ ತಿನ್ನಬಹುದು ಅಲ್ಲವೇ?

ನಾವು ಕೆಲಸ ಮಾಡುವ ಸಂಸ್ಥೆ/ ಕಾರ್ಖಾನೆ/ ….. ಅಲ್ಲಿರುವ ಅಧ್ಯಕ್ಷ, ಕಾರ್ಯದರ್ಶಿ, ವ್ಯವಸ್ಥಾಪಕ, ನಿರ್ದೇಶಕ, ವಿಭಾಗ ಮುಖ್ಯಸ್ಥ…. ಮುಂತಾದವರು ತುಂಬಾ ಧನಾತ್ಮಕವಾಗಿ ನಮ್ಮ ಕೆಲಸದಲ್ಲಿ ನಮಗೆ ಪ್ರೋತ್ಸಾಹ ಕೊಡುತ್ತಿದ್ದಲ್ಲಿ , ಸಂಕಷ್ಟದಲ್ಲಿ ಹೆಗಲು ಕೊಡುತ್ತಿದ್ದಲ್ಲಿ , ಸಂಸ್ಥೆಯ ಏಳಿಗೆಗೆ ನಮ್ಮ ಮಾರ್ಗದರ್ಶನವನ್ನು ಕನಿಷ್ಟ ಆಲಿಸುತ್ತಿದ್ದಲ್ಲಿ, ಆ ಸಂಸ್ಥೆ ತುಂಬಾ ವಿಶಾಲವಾಗಿ ವಿಶಿಷ್ಟವಾಗಿ (ಗೆಳೆತನ) ಬೆಳೆಯುತ್ತದೆ.



ಆದರೆ ನಮ್ಮ ಕೆಲಸಗಳಿಗೆ ಪ್ರೋತ್ಸಾಹ ಕೊಡುವುದು ಬಿಡಿ , ನಮ್ಮನ್ನು ಪೂರ್ಣ ಅಲ್ಲಗೆಳೆಯುವಿಕೆ, ನಮ್ಮ ಪರಿಶ್ರಮಗಳನ್ನು ಕ್ಷುಲಕವಾಗಿಸುವಿಕೆ, ಆಪ್ತರಿಗೆ ಯಾವ ಸಮಯದಲ್ಲೂ ರಜೆ ಮಂಜೂರು, ನಮಗೆ ಅದಾವುದೂ ಅನ್ವಯಿಸದೆ ಇರುವುದು. ಏನೂ ಕೆಲಸಮಾಡದ ನೀಯತ್ತಿಲ್ಲದವನನ್ನು ನಮ್ಮ ಕಣ್ಣ ಮುಂದೆ ಪ್ರೋತ್ಸಾಹ, ಪುರಸ್ಕಾರ, ಕಳ್ಳನೇ ಯಜಮಾನ ಸುಳ್ಳನೇ ಮುಖಂಡ … ಮುಂತಾದ ಋಣಾತ್ಮಕ ಚಟುವಟಿಕೆಗಳ ಸಂಕೀರ್ಣ/ವಾತಾವರಣದೊಳಗಿನ ಸಂಸ್ಥೆ ನಮ್ಮನ್ನು ಕಳೆ ಕುಂದಿಸುತ್ತದೆ. ಅಲ್ಲಿರಲು ಮನಸ್ಸು ಇಷ್ಟಪಡದಿರುತ್ತದೆ.ಅಲ್ಲೇ ಇದ್ದರೆ ನಮ್ಮತನ ಕಳೆದುಕೊಳ್ಳುತ್ತೇವೆ. ಈ ಸಂಸ್ಥೆಯಂತೆಯೇ, ನಮ್ಮ ಪ್ರತಿಭೆ, ಶೃಮ,ನೀಯತ್ತಿಗೆ ಸಂಪೂರ್ಣ ಧನಾತ್ಮಕ ಪ್ರೋತ್ಸಾಹ ಕೊಡುವ ಒಬ್ಬನ/ಳನ್ನು ಮಿತ್ರನನ್ನಾಗಿ ಮಾಡಬೇಕು. ಜೀವನದಲ್ಲಿ ನಾವು ಮುಂದಕ್ಕೆ ಹೋಗುವಾಗ, ವೇಗಪಕರ್ಷದಿಂದ ಹಿಂದಕ್ಕೆ ಎಳೆಯುವ ಮಿತ್ರನಾಗಿದ್ದರೆ, ನಮ್ಮ ಜೀವನವೇ ಹಾಳಾಗುತ್ತದೆ.

ಮಹಾಭಾರತ ಕಥೆಯಲ್ಲಿ ಕರ್ಣ ಹಾಗೂ ಅರ್ಜುನನ ಮಧ್ಯೆ ಕುರುಕ್ಷೇತ್ರ ಯುದ್ದ. ಕರ್ಣನು ಅರ್ಜುನನಿಗಿಂತ ಪ್ರಯೋಗಾತ್ಮಕವಾಗಿ ಆಯೋಧನ ಕಲೆಯಲ್ಲಿ ಜಗಪ್ರಥಮ. ಕರ್ಣನು ಸೂರ್ಯನ ಮಗ ಹಾಗೂ ಅರ್ಜುನ ಇಂದ್ರನ ಮಗ. ಅಂದರೆ ಆಂತರಿಕವಾಗಿ ಸೂರ್ಯ ಹಾಗೂ ಇಂದ್ರನ ಮಧ್ಯೆ ಯುದ್ದ ನಡೆಯುತ್ತಿತ್ತು ಎನ್ನಬಹುದು.

ನಿಮಗೆಲ್ಲಾ ಗೊತ್ತು ಕೊನೆಗೆ ಜಯಿಸಿದ್ದು #ಅರ್ಜುನ!!!.

ಕಾರಣ ಅರ್ಜುನನ ಸಹ ಸಖ ಅಥವಾ ಸಾರಥಿ ಪ್ರೇರಣಾ ದರ್ಶಕ (ಧನಪ್ರಚೋದಕ -Motivator)) ಶ್ರೀಕೃಷ್ಣ ಪ್ರತೀ ಹೆಜ್ಜೆಯಲ್ಲೂ ಅರ್ಜುನನಿಗೆ ಧನಾತ್ಮಕ ಮಾರ್ಗದರ್ಶಕನಾಗಿದ್ದ. ಆದರೆ… ಕರ್ಣನ ಸಾರಥಿ ಶಲ್ಯ, ಶಲ್ಯ ಅಂದರೆ ಸಂಶಯೋತ್ತಮ, ಗೊಂದಲಕಾರಕ, ಯುದ್ದಕ್ಕೆ ಹೊರಡುವಾಗ ” ಈ ಯುದ್ದ ಗೆಲ್ಲುತ್ತೇವೋ, ಗೊತ್ತಿಲ್ಲ ಆಯ್ತಾ!!!” ಎಂದು ನುಡಿಯುವುದು .
ನಂತರ ಪ್ರತೀ ಸಮಯ…..



” ಈ ಬಾಣ ಹೂಡಬಾರದಾಗಿತ್ತು…ಆ ಬಾಣ ಹೂಡು ”

ಹೂಡಿದ ಬಾಣ ಬಿಟ್ಟ ನಂತರ “ಛೇ… ನಾನು ತಪ್ಪಿ ಹೇಳಿದೆ, ಆ ಬಾಣ ಬೇಡವಾಗಿತ್ತು”

” ವೇಗ ಕಮ್ಮಿಯಾಯಿತು…. ಘಾಂಢೀವ ಸಡಿಲವಾಗಿದೆ/ ಬಿಗಿಯಾಗಿದೆ”

ಈ ರೀತಿ ಜಯದ ಕಡೆಯ ದಿಕ್ಕನ್ನು ಏರು-ಪೇರು ಮಾಡುವವನಾಗಿದ್ದ.

ತಮಿಳಿನ ತಿರು ಕುರಲ್ ನಲ್ಲಿ ಒಂದು ವಾಕ್ಯವಿದೆ..

ಸತ್ಸಂಗೈಕ್ಕಾಳ್ ತುಣಯ್ಕುನ್ನದಿಲ್ಲೈ
ದುಸ್ಸಂಗತೈಕ್ಕಾಳ್ ಒರು ಅಳಲೂಂ

(ಸತ್ಸಂಗ(ಒಳ್ಳೆ ಮಿತ್ರತ್ವ)ದಂತಹಾ ಆಸರೆ ಇನ್ನೊಂದಿಲ್ಲ, ದುಷ್ಟ ಸಂಘದಂತಹಾ ಒಂದು ದುಃಖ ಬೇರೊಂದಿಲ್ಲ) ಅದರಂತೆಯೇ….

ಈ ಲೋಕದ ಮಾನವ ತುಂಬಾ ಕೆಟ್ಟದನ್ನು ತನ್ನದಾಗಿಸಿದವನು. ಇಲ್ಲಿ ಮಧ್ಯಪಾನಿಗಳು,ಕೆಲ ಅಹಂಕಾರಿಗಳು, ಕೆಟ್ಟದಾಗಿ ವರ್ತಿಸುವವರು, ನೀಚರು….. ನನ್ನಂತಹಾ ಸ್ವಾರ್ಥಿಗಳು, ಇದ್ದಾರೆ, ಇಂತಹರಿಂದ…

ಒಳ್ಳೆಯ ಚುರುಕು/ಕ್ರೀಯಶೀಲ/ಚೈತನ್ಯ( dynamic)
ಧನಾತ್ಮಕ ಮನೋಭಾವನೆಯ( positive attitude),
ಪ್ರೇರಕ(Motivator)

ಮಿತ್ರರನ್ನು ಆಯ್ಕೆ ಮಾಡುವುದು ಒಬ್ಬನ/ಳ ಸಾಮರ್ಥ್ಯಾತ್ಮಕ ಕ್ಷಮತೆ.
ಆ ಆಯ್ಕೆಯೇ ನಮ್ಮ ಜೀವನ ವಿಜಯದ ಅಡಿ ಪಾಯದ ಆಧಾರಸ್ತಂಭಗಳಲ್ಲೊಂದು. ಎನ್ನುತ್ತಾ…

ನಿಮ್ಮವ ನಲ್ಲ

ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW