ಪ್ರಖ್ಯಾತ ಛಾಯಾಗ್ರಾಹಕ ನೇತ್ರರಾಜು ನಿಧನ



ಮೈಸೂರಿನ ಪ್ರಖ್ಯಾತ ಛಾಯಾಗ್ರಾಹಕ ನೇತ್ರರಾಜು (೬೨) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆಂದೋಲನ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ನೇತ್ರರಾಜು ಅವರು ಕೆಲಸ ಮಾಡಿದ್ದರು. ಅವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದವು. ೨೦೧೪ ರಲ್ಲಿ ಇವರು ಕರ್ನಾಟಕದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

೨೦೧೯ ರಲ್ಲಿ ತಾಯಿ ಮಗ ಮೈಸೂರು ದಸರಾ ದೀಪಾಲಂಕಾರ ನೋಡುವ ಚಿತ್ರವನ್ನು ತಮ್ಮ ಕ್ಯಾಮರ್ ಕಣ್ಣುಗಳಲ್ಲಿ ಸೆರೆ ಹಿಡಿದು ಎಲ್ಲರ ಗಮನ ಸೆಳೆದಿದ್ದಷ್ಟೇ ಅಲ್ಲ, ಅಂತರ್ಜಾಲದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.

ಅವರು ಸೆರೆ ಹಿಡಿದಿದ್ದ ಸಾಕಷ್ಟು ಚಿತ್ರಗಳು ನೂರು ಮಾತುಗಳನ್ನೂ ಹೇಳುತ್ತಿದ್ದವು. ಈಗ ಬಾರದಲೋಕದಕ್ಕೆ ನೇತ್ರರಾಜು ತೆರೆಳಿದ್ದರೂ, ತಮ್ಮ ಕ್ಯಾಮೆರಾ ಕಣ್ಣಿನಿಂದ ಅವರು ಎಂದೆಂದೂ ಅಮರರಾಗಿದ್ದಾರೆ.

ನೇತ್ರರಾಜು ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.


  • ಆಕೃತಿ ಕನ್ನಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading