‘ಗಾಂಧೀಜಿಯ ಪಗಡಿ’ – ಪ್ರೊ. ರೂಪೇಶ್ ಪುತ್ತೂರು



ಪಗಡಿ ತಗೆದು ನೀವು ನ್ಯಾಯಾಲಯದಲ್ಲಿ ವಾದ ಮಂಡಿಸಿ ಎಂದು ಜಡ್ಜ್ ಹೇಳಿದಾಗ ನಾನು ನನ್ನ ಪಗಡಿ ತಗೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು ಗಾಂಧೀಜಿ. ಅಂದು ಗಾಂಧೀಜಿಗೆ ರಾಜಿ ಮಾಡುವುದು ಸುಲಭವಾಗಿತ್ತು.ಆದರೆ ಹಠಕ್ಕೆ ಕಾರಣವಿತ್ತು, ಪ್ರೊ. ರೂಪೇಶ್ ಪುತ್ತೂರು ಅವರ ಲೇಖನಿಯಲ್ಲಿ ಮೂಡಿ ಬಂದ ಕುತೂಹಲ ವಿಷಯ. ಮುಂದೆ ಓದಿ…

1885 ರಲ್ಲಿ ತಂದೆ ಕರಮಚಂದ್ ಉತ್ತಮಚಂದ್ ರವರ ಮರಣಾನಂತರ, ಗಾಂಧೀಜಿಯು, ತಾಯಿ ಪುತಲೀಬಾಯಿಯನ್ನು ತುಂಬಾ ಅವಲಂಬಿತರಾಗಿದ್ದರು. ತಾಯಿಯು ತನ್ನ ಕಣ್ಣ ಮುಂದೆ ನಡೆದಾಡುವ ಏಕೈಕ ದೇವರೆಂದು ಅವರಿಗೆ ಭ್ರಾಂತು ಹಿಡಿದಿತ್ತು. ಇದರಿಂದ ಮಗನ ಈ ಸೂಕ್ಷ್ಮ ಮನ ಬದಲಾಯಿಸಲು, ಗಾಂಧೀಜಿಯನ್ನು ಉನ್ನತ ವಿದ್ಯಾಭ್ಯಾಸಕ್ಕೆ ಇಂಗ್ಲೇಂಡ್ ಹೋಗಲು ಬಲವಂತ ಮಾಡಿದರು. ಗಾಂಧೀಜಿ 1888ರಲ್ಲಿ ಇಂಗ್ಲೇಂಡ್ ಹೋದರು, 1891ರಲ್ಲಿ ಕಾನೂನು ಪದವಿ ಪಡೆದರು. ಜೂನ್ 10, 1891 ರಲ್ಲಿ ಹೈ ಕೋರ್ಟ್ ಆಫ್ ಲಂಡನ್ ನಲ್ಲಿ ದಾಖಲಿಸಿ (enroll) ದ ಪ್ರಥಮನಾಗಿ ಭಾರತಕ್ಕೆ ಮರಳಿದರು. ಜಗತ್ತಿನ ಯಾವುದೇ ಕೋರ್ಟಿನಲ್ಲಿ ವಾದ ಮಾಡುವ ಆದೇಶವಾಗಿತ್ತು ಅದು.

ಆದರೆ, ತಾನು ಭಾರತಕ್ಕೆ ಮರಳುವ ಮೊದಲೇ ತಾಯಿ ಪುತಲೀಭಾಯಿ ನಿಧನರಾಗಿದ್ದರು. ತಾಯಿಯ ಮರಣದ ಸಂದರ್ಭದಲ್ಲಿ ತಾನು ಅವಳ ಬಳಿ ಇಲ್ಲದಿದ್ದ ವೇದನೆ, ಅವರ ಮನಸ್ಸನ್ನು ತಳಮಳ ಮಾಡಿತು. ಎರಡು ವರುಷಗಳ ಕಾಲ ತನ್ನ ವಕೀಲ ವೃತ್ತಿಯನ್ನು ಮಾಡಲು , ತಾಯಿಯಿಂದ ಅಗಲಿದ ನೋವು ಅವರನ್ನು ಕಾಡ ತೊಡಗಿತು. ಯಾವುದೇ ಕೆಲಸದಲ್ಲೂ ಅವರಿಗೆ ಆಸಕ್ತಿ ಇಲ್ಲದಾಯಿತು. ಮಗ್ನತೆ ಏಕಾಗೃತೆ ಇಲ್ಲದಾಯಿತು. ಇದರಿಂದ ಅವರ ವೃತ್ತಿಗೆ ನ್ಯಾಯ ಒದಗಿಸಲು ಅಸಾಧ್ಯವಾಗಿ, 1893 ರ ವರೆಗೆ ವಕೀಲ ವೃತ್ತಿಯಲ್ಲಿ ತನ್ನನ್ನು ತಾನು ಸರಿಯಾಗಿ ತೊಡಗಿಸಲು ಆಗುತ್ತಿರಲಿಲ್ಲ.

ಅದೇ ವರುಷ ದಕ್ಷಿಣ ಆಫ್ರೀಕಾದ ಮಿತ್ರನ ಪತ್ರ ಗಾಂಧೀಜಿಗೆ ಬಂದಿತ್ತು. ಅಲ್ಲಿ Transwalನ (Gauteng) Kwazulu Natal-South Africaದಲ್ಲಿ IBF( Indian Business Firm) ನಲ್ಲಿ J-LCR(Junior Legal Councilor Representative) ಹುದ್ದೆಗೆ ಆಹ್ವಾನ ಬಂದಿತ್ತು. ಮಿತ್ರರು ಹಾಗೂ ಕಸ್ತೂರ್ ಬಾ ರವರು ಗಾಂಧೀಜಿಯನ್ನು ಹೋಗಿ ಬರಲು ದಿನಂಪ್ರತಿ ಬಲವಂತ ಮಾಡಿದರು. ವಾತಾವರಣ ಬದಲಾದರೆ ಗಾಂಧೀಜಿಯ ಮನದ ದುಃಖ ಕಡಿಮೆಯಾಗಬಹುದು ಎಂದು ಮನಗಂಡರು. ಅದು ಒಂದು ವರುಷದ, ತಿಂಗಳು £105 ವೇತನದ ಕೆಲಸವಾಗಿತ್ತು.

 

ಫೋಟೋ ಕೃಪೆ : Mkgandhi

ಮೊದಲ ದಿನ ಗಾಂಧಿ ತನ್ನ ಕಾತ್ಯವಾಡಿ ಗುಜರಾತಿ ಪಗಡಿ ಧರಿಸಿ, ಕಂಪನಿಯ ಹಳೆಯ ವಕೀಲನಿಂದ ಕೇಸಿನ ಬಗ್ಗೆ ಚರ್ಚಿಸಿ, ದಾಖಲೆ ಪಡೆದು ನ್ಯಾಯಾಲಯಕ್ಕೆ ಹೊರಟರು. ಹೊಸಾ ದೇಶ ಹೊಸಾ ವಾತಾವರಣ, ಗಾಂಧೀಜಿಗೆ ಏನೋ ಉತ್ಸಾಹ,, ಮನದಲ್ಲಿ “ಅಮ್ಮ ಊರಲ್ಲಿ ಇದ್ದಾಳೆ” ಎಂಬ ಊಹಾಭರಿತ ಸಮಾಧಾನ.

ಗಾಂಧೀಜಿ ನ್ಯಾಯಾಲಯದ ಒಳಹೊಕ್ಕರು. ಅಲ್ಲಿದ್ದ ಆಸನದಲ್ಲಿ ಕುಳಿತರು. ಜಡ್ಜ್ ಗಾಂಧೀಜಿಯ ಕಡೆ ಕೈ ತೋರಿಸಿ ” ಈ ನ್ಯಾಯಾಲಯದ ನಿಯಮದ ಪ್ರಕಾರ, ತಲೆಯ ಮೇಲೆ ಇಂತಹುದ(ಪಗಡಿ)ನ್ನು ಧರಿಸಿ ಬರುವುದು ನಿಷೇಧ. ಹೀಗೆ ತಲೆಗೆ ಏನಾದರೂ ಹಾಕಿಕೊಂಡು ಇದರೊಳಗೆ ಬರುವಂತೆಯೂ ಇಲ್ಲ” ಎಂದು ಗಂಭೀರವಾಗಿ ಉಚ್ಛ ಧ್ವನಿಯಲ್ಲಿ ಹೇಳುತ್ತಿದ್ದಂತೆಯೇ….

” ಬಂದರೇ? ” – ಎಂದು ಅದೇ ಧ್ವನಿಯಲ್ಲಿ ನುಡಿದರು ಗಾಂಧೀಜಿ.

” ನೀವು ಪಗಡಿ ತೆಗೆಯಲೇ ಬೇಕು ,ತೆಗೆದೇ ಇಲ್ಲಿ ಕೂರಬೇಕು, ಪಗಡಿ ತೆಗೆದೇ ಇಲ್ಲಿ ವಕಾಲತ್ತು ಮಾಡಬೇಕು, ಪಗಡಿ ತೆಗೆದೇ ವಾದ ಮಾಡಬೇಕು ” ಎಂದು ಆಕ್ರೋಷಿಸಿದರು.

” ಸ್ವಾಮೀ ನಿಮಗೆ ಗೊತ್ತಿಲ್ಲವೆಂದು ಕಾಣುತ್ತದೆ. ಈ ಪಗಡಿ ನನ್ನ ರಾಜ್ಯದ ಹೆಮ್ಮೆಯ (शान) ಹಾಗೂ ಗೌರವದ ಪ್ರತೀಕ, ಅಲ್ಲಿ ಈ ಪಗಡಿಯನ್ನು ಸುಮ್ಮನೆ ಕೆಳಗಿಳಿಸಲಾಗುವುದಿಲ್ಲ. ಆ ರೀತಿ ಕೆಳಗಿಳಿಸಿದರೆ ಅದು ಅತ್ಯಂತ ದೊಡ್ಡ ಅಪಮಾನ ಎಂದು ಪರಿಗಣಿಸಲಾಗುವುದು. ನಾವು ಯಾರ ಗುಲಾಮರೋ ಅವರ ಮುಂದೆ ನಾವು ಪಗಡಿ ಇಳಿಸುತ್ತೇವೆ. ನಾನಿನ್ನೂ, ಇಲ್ಲಿಯ‌ ತನಕ , ನಿಮ್ಮ ಗುಲಾಮನಾಗಲಿಲ್ಲ. ಆದ್ದರಿಂದ ಪಗಡಿಯನ್ನು ಕೆಳಗಿಡಲು ಸಾಧ್ಯವಿಲ್ಲ” ಎಂದರು.

ಗಾಂಧೀಜಿಯ ಉತ್ತರದಿಂದ ಜಡ್ಜ್ ಸ್ಥಂಭೀಭೂತರಾದರು. ಇಷ್ಟು ಧೈರ್ಯದಿಂದ ಅವರಲ್ಲಿ ಅಲ್ಲಿಯತನಕ ಯಾರೂ ಹೀಗೆ ಉತ್ತರಿಸಿದ್ದಾಗಲೀ ಮಾತನಾಡಿದ್ದಾಗಲೀ ಇಲ್ಲವೇ ಇಲ್ಲ.

” ಇವನು ಯಾರು?” ಎಂದು ಅಲ್ಲಿದ್ದ ವಕೀಲರು ಹಾಗೂ ರಿಪೋರ್ಟ್ ಮಾಡಲು ಬಂದ ಪತ್ರಕರ್ತರ ಕಡೆ ಜಡ್ಜ್ ಪ್ರಶ್ನಿಸಿದರು.

 

ಫೋಟೋ ಕೃಪೆ : google

” ಇವರು ಭಾರತದಿಂದ….. ಕಂಪನಿಯ ಕೇಸು ವಹಿಸಲು ಪ್ರಪ್ರಥಮವಾಗಿ ಇಲ್ಲಿ ಬಂದಿದ್ದಾರೆ. ಹೆಸರು M.K.Gandhi” ಎಂದರು.

” ಸರಿ, ಇವನಿಗೆ , ನೀವೆಲ್ಲಾ ಇಲ್ಲಿನ ಸಭ್ಯತೆಯನ್ನು ಕಲಿಸಬೇಕು …”

ಕೂಡಲೇ ಜೊತೆಯಲ್ಲಿ ಬಂದಿದ್ದ ವಕೀಲ, ಗಾಂಧೀಜಿಯ ಕಿವಿಯಲ್ಲಿ ಗೊಣಗಿದರು

” ಪಗಡಿಯನ್ನು ತೆಗೆಯದಿದ್ದಲ್ಲಿ ಈ ಪರಮಾಧಿಕಾರಿಗಳಾದ ಜಡ್ಜ್ ನಿಮಗೇನಾದರೂ ಶಿಕ್ಷೆ ವಿಧಿಸಬಹುದು”

“ಏನೇ ಆಗಲೀ ನಾನು ಪಗಡಿ ತೆಗೆಯುವುದಿಲ್ಲ. ಅದನ್ನು ಕೆಳಗಿಳಿಸಿದರೆ, ಭಾರತದ ತಲೆ ಕೆಳಗಿಟ್ಟಂತೆ ನನಗನಿಸುತ್ತದೆ.ಹಾಗೇನಾದರೂ ಕೆಳಗಿಳಿಸಿದರೆ ಇಂತಹಾ ಸಂದೇಶ ನಾನೇ ಅರ್ಪಿಸಿದಂತಾಗುತ್ತದೆ. ನಾನು ಆ ಕೆಲಸ ಮಾಡಲ್ಲ. ಎಂದೆಂದೂ ಮಾಡಿಲ್ಲ(हरगिज़ नहीं करूंगा)”

ಮಿತ್ರ ” contempt of court ಆಗಿ ಜೈಲು ಸೇರಬೇಕಾಗುತ್ತೆ”

ಗಾಂಧೀ ” ನಾನು ಜೈಲಿಗೆ ಹೋಗುತ್ತೇನೆ ಆದರೆ ಪಗಡಿ ಮಾತ್ರ ಇಳಿಸಲ್ಲ. ನೀವೇ ಅವರಿಗೆ ನನ್ನ ಜೈಲಿಗೆ ಕಳುಹಿಸುವ ಆರ್ಡರ್ ಮಾಡಕ್ಕೆ ಹೇಳಿ. ನಾನು ಜೈಲಿಗೆ ಹೋಗಲು ಸಿದ್ಧ” ಅಂದರು ಗಾಂಧಿ.

ಗಾಂಧೀಜಿ ಹೋಗಿದ್ದು ಇನ್ನೊಬ್ಬರ ಕೇಸು ವಾದಿಸಲು, ಆದರೆ ಅಂದು , ಅವರದೇ ಸ್ವಂತ ಕೇಸು ನಿಭಾಯಿಸುವ ಸ್ಥಿತಿಗೆ ತಲುಪಿದ್ದರು.

ಈ ಮಧ್ಯೆ, ಅವರನ್ನು ಸಮಾಧಾನ ಪಡಿಸಲು ಅಲ್ಲಿದ್ದ, ವಕೀಲರು, ಪತ್ರಕರ್ತರು, ಗಾಂಧೀಜಿಯ ಮುಂದೆ ಸೇರಿದರು.

ಕೋರ್ಟಿನಲ್ಲಿ ಜಡ್ಜ್ ನ ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದೆ ಏಕಾಂಗಿಯಾದರು. ತನ್ನ ಆಸನದಲ್ಲಿ ಕುಳಿತ, ತನ್ನ ಕಡೆ ಬಾರದೆ, ಎಲ್ಲಾ ಜನರು, ಗಾಂಧೀಜಿಯ ಕಡೆ ಅವರನ್ನು ಸಮಾಧಾನ ಪಡಿಸಲು ಮುಗಿಬಿದ್ದಿದನ್ನು , ಎತ್ತರದ ತನ್ನ ಆಸನದಿಂದ ವೀಕ್ಷಿಸುತ್ತಾ ಮನದಲ್ಲಿ ” ನಾನು ನನ್ನ ಅನುಭವದಲ್ಲಿ , ಇಷ್ಟೊಂದು ಕೇಸಿಗೆ ವಿಧಿ ಹೇಳಿದಾಗಲೂ ಯಾರೂ ನನ್ನ ಕಡೆ ಇಷ್ಟೊಂದು ಮುಖ ಮಾಡಲಿಲ್ಲ. ಆದರೆ, ಈ ಮನುಷ್ಯ ಜಡ್ಜ್ ನ ಎದುರು, ಜಡ್ಜ್ ನ ಆಸನದ ಕೆಳಗಿನ ಮೂಲೆಯ ಕುರ್ಚಿಯಲ್ಲಿ ಕೂತು, ಎಲ್ಲರೂ ಅವನ ಕಡೆ ಬರುವಂಗೆ ಒಂದೇ ದಿನದಲ್ಲಿ, ಒಂದೇ ಕ್ಷಣದಲ್ಲಿ ಮಾಡಿದ್ದನಲ್ಲಾ!!!! ಇವನು ಸಾಧಾರಣದವನಲ್ಲ…. ಇವನನ್ನು ಹೀಗೆ ಬೆಳೆಯಲು ಬಿಡಬಾರದು” ಎಂದು .

ಫೋಟೋ ಕೃಪೆ : JSTOR Daily

” ‌ಆರ್ಡರ್ …ಆರ್ಡರ್…ನಿಮಗೆ ಪಗಡಿ ಹಾಕಿಯೇ ಇರಬೇಕೆಂದರೆ, ನ್ಯಾಯಾಲಯ ಬಿಟ್ಟು ಹೊರಗೆ ಹೋಗಬಹುದು. ಆದರೆ ಪಗಡಿ ಹಾಕಿ ಇದರ ಒಳಗೆ ಕುಳಿತುಕೊಳ್ಳುವಂತಿಲ್ಲ….. ಕೊರ್ಟಿನ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ.”. ಎಂದು ನುಡಿದರು.

ನನ್ನಿಂದಾಗಿ ಕೋರ್ಟಿನ ಸಮಯ ವ್ಯರ್ಥವಾಗಬಾರದು ಎಂದು ಧೃತಿಗೆಡದೆ ” ನಾನು ಇನ್ನೊಮ್ಮೆ ಇದರೊಳಗೆ ವಾದ ಮಾಡುವುದಾದರೆ ಅದು ಪಗಡಿ ಹಾಕಿಯೇ. ಮುಂದೆ ಕಂಪನಿ ಕೇಸು ವಾದಮಾಡುವುದರೊಳಗೆ ಈ ಕಾನೂನು ಬದಲಾಗಬೇಕು. ಪಗಡಿ ಹಾಕಿಕೊಂಡೇ ವಾದ ಮಾಡುವಂತಾಗಬೇಕು.ನಾನು ಪಗಡಿ ಹಾಕೀನೇ ವಾದ ಮಾಡೋದು. ಭಾರತಕ್ಕೆ ಮರಳುವ ಮೊದಲು ಈ ಕಾನೂನು ಬದಲಾಯಿಸಿ, ಪಗಡಿ ಹಾಕಿ ವಾದ ಮಾಡಿ ಜಯಿಸಿಯೇ ಹೋಗುತ್ತೇನೆ” ಎಂದು ಹೇಳುತ್ತಾ ಹೋದರು ಗಾಂಧೀಜಿ.

ಅಂದು ಅಲ್ಲಿ ಸಿಖ್ಖರು, ಅರಬರು ,… ವಕೀಲ ವೃತ್ತಿ ಕಲಿತರೂ , ತಮ್ಮ ಸಾಂಸ್ಕೃತಿಕ ಪೋಷಕು ತೆಗೆಯಲಾರದೆ, ಹೊರಗೆ ಕುಳಿತು ಬೇರೊಬ್ಬ ವಕೀಲರಿಂದ ವಾದ ಮಂಡಿಸುವುದು ಮಾಮೂಲಾಗಿತ್ತು. ಅವರೂ ಗಾಂಧೀಜಿಯಲ್ಲಿ ತಮ್ಮ ಹಠ ಕೈ ಬಿಡಲು ಕೇಳಿಕೊಳ್ಳುತ್ತಾ ” ನೀವು ಇದರ ವಿರುದ್ಧ ಹೋದರೆ ,ನಾಳೆ ನಮಗೆ ಕೋರ್ಟಿನ ಕಾಂಪೌಂಡಿನಿಂದ ಬಲು ದೂರ ಇರುವ ಕಾನೂನು ಹೇರಬಹುದು. ದಯವಿಟ್ಟು ಬಿಟ್ಟು ಬಿಡಿ…” ಕೋರಿದರು.

ಗಾಂಧೀಜಿ ಕಂಪನಿಯ ಕೇಸು ಬಿಟ್ಟು , ತನ್ನ ಪಗಡಿಯ ವಾದ, ಜಡ್ಜ್ ನ ಅನುಮತಿ ಪಡೆದು, , ಕೋರ್ಟಿನಲ್ಲಿ ವಾದ ಮಾಡ ತೊಡಗಿದರು. ಪ್ರತೀ ದಿನ ಜಡ್ಜ್ ವಾದ ಮಾಡಲು ಅವಕಾಶವನ್ನು ಕೊಟ್ಟರು. ಎರಡು ವಾರಗಳ ಕಾಲ, ಅದೇ ಕೊರ್ಟಿನಲ್ಲಿ , ಪಗಡಿಯ ಹೆಸರಲ್ಲಿ ನಿರಂತರ ವಾದ ಮಾಡಲಾಯಿತು. ಕೊನೆಯ ದಿನ ” ಇಷ್ಟು ದಿನ ನಾನು ಪಗಡಿ ಧರಿಸಲು ವಾದ ಮಾಡಿದ್ದು,

ಪಗಡಿ ಹಾಕಿ ತಾನೇ?

ಇದೇ ಕೊರ್ಟಿನಲ್ಲಿ ತಾನೇ?

ನಿಮ್ಮ ಮುಂದೆಯೇ ತಾನೇ?

ಹಾಗಾದರೆ ಪಗಡಿ ಹಾಕಿ ವಾದ ಮಾಡಬಹುದೆಂದಾಯಿತಲ್ಲವೇ?” ಎಂದಾಗ ಜಡ್ಜ್ ತಬ್ಬಿಬ್ಬಾದರು. ಗಾಂಧೀಜಿಯ ಈ ಮಾತಿನಿಂದ ಜಡ್ಜ್ ಗೆ ಕಾನೂನು ಬದಲಾಯಿಸುವ ಸ್ಥಿತಿಯ ಗತ್ಯಂತರ ಬಂದೊದಗಿತು.



ಬ್ರಿಟಿಷರ ಆ ಕಾನೂನು ಮೊತ್ತ ಮೊದಲು ಗಾಂಧೀಜಿ ಬದಲಾಯಿಸಿಯೇ ಬಿಟ್ಟರು.

ತದನಂತರದ ದಿನಗಳಲ್ಲಿ ಅಲ್ಲಿ ಜೀವನ ಮಾಡುವ ತನಕ, ಗಾಂಧೀಜಿ ಪಗಡಿ ಧರಿಸಿಯೇ ವಾದ ಮಾಡಿದರು. ಇಂದೂ ಸಿಖ್ಖರು, ಮುಸಲ್ಮಾನರು,… ಮುಂತಾದವರು ತಲೆಗೆ ಸಂಸ್ಕೃತಿಯ ಫೋಷಾಕು ಧರಿಸಿ ವಾದ ಮಾಡುವುದನ್ನು ನಾವು ಕಾಣಬಹುದು.

ಫೋಟೋ ಕೃಪೆ : Scroll.in

ಮಿತ್ರರೇ,

ಗಾಂಧೀಜಿಗೆ ಅಂದು ರಾಜಿಮಾಡುವುದು ಸುಲಭವಾಗಿತ್ತು. ಒಂದು ಸಲ ರಾಜಿ ಮಾಡಿದರೆ, ಜೀವನದಲ್ಲಿ ಆಗಾಗ ರಾಜಿ ಮಾಡುತ್ತಲೇ ಇರಬೇಕಾಗುತ್ತದೆ.

ಆದರೆ ಸಮಸ್ಯೆಯ ಪ್ರತಿಷೋಧ ಯಾರಿಗೂ ಹಿಂಸೆಯಾಗದಂತೆ, ಅದರ ಫಲ ಮುಂದೆ ಹಲವರಿಗೆ ಅನುಕೂಲವಾಗಿ ಇರುವಂತೆ ಆಗಬೇಕು. ಫಲ ಸುಂದರ ಸಮಾಜ.

ಯಾರದೋ ಭಯದಿಂದ ಸೃಷ್ಟಿಸಿದ, ಸಮಾಜಕ್ಕೆ ಅನಾನುಕೂಲ ವಾದ ಸಮಸ್ಯೆಯನ್ನು ನಾವು ಚೆನ್ನಾಗಿ ಪರಾಂಬರಿಸಿ, ಪರಿಹಾರ ಕೃಮ ಕೈಗೊಳ್ಳುವುದರಿಂದ, ಶಾಂತಿಯ ವಾತಾವರಣ ಮರಳಿ ಪಡೆದು, ಸ್ವಸ್ಥಸಮಾಜ ನಿರ್ಮಿಸಬಹುದು ಅಂದು ಗಾಂಧೀಜಿಯವರು compromise ಮಾಡಿ, ರಾಜಿ ಮಾಡುತ್ತಿದ್ದರೆ?, ಇಂದು ನಮಗೆ ಅಹಿಂಸೆಯೆಂಬ ಅಸ್ತ್ರದಿಂದ ಲಭಿಸಿದ ಈ ಸ್ವಾತಂತ್ರ್ಯ ,
ನಮ್ಮ ಹಲವು ಹಿರಿಯರನ್ನು ಕಣಕ್ಕಿಳಿಸಲು ಪ್ರೇರಿಪಿಸಿದ ಈ ಸ್ವಾತಂತ್ರ್ಯ ಸಿಗುತ್ತಿತ್ತೋ ಎನ್ನುವುದು ನಿಮಗೆ ಬಿಟ್ಟ ಪ್ರಶ್ನೆ ಎನ್ನುತ್ತಾ…

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು  (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು), ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW