ಇಬ್ಬರ ಹೆಂಡಿರ ಮುದ್ದಿನ ಗಣೇಶ – ಬಾಲಕೃಷ್ಣ.ಜೆ



ದಕ್ಷಿಣ ಭಾರತದಲ್ಲಿ ಗಣೇಶ ಬ್ರಹ್ಮಚಾರಿ ಎನ್ನಲಾಗುತ್ತದೆ, ಆದರೆ ಉತ್ತರ ಭಾರತದಲ್ಲಿ ಗಣೇಶನಿಗೆ ಇಬ್ಬರೂ ಹೆಂಡತಿಯರು ಈ ಕುರಿತು ಲೇಖಕರಾದ ಬಾಲಕೃಷ್ಣ.ಜೆ ಅವರ ಒಂದು ಪುಟ್ಟ ಲೇಖನ ಓದುಗರ ಮುಂದೆ…

ನನ್ನ ರಾಜಾಸ್ತಾನದ ಪ್ರವಾಸದ ಸಮಯದಲ್ಲಿ ಉದಯಪುರದಲ್ಲಿನ ಸರ್ಕಾರಿ ಪ್ರಾಖ್ತನನ ಮ್ಯೂಸಿಯಂನಲ್ಲಿ ನಾನು ತೆಗೆದ 16 ನೇ ಶತಮಾನದ ಗಣೇಶನ ವಿಗ್ರಹದ ಫೋಟೊ.

ಬಹಳಷ್ಟು ಉತ್ತರ ಭಾರತದ ಸಂಪ್ರದಾಯಗಳಲ್ಲಿ ಗಣೇಶನಿಗೆ ಇಬ್ಬರು ಪತ್ನಿಯರು- ರಿದ್ಧಿ ಮತ್ತು ಸಿದ್ಧಿ. ರಿದ್ಧಿ ಸಂಪತ್ತಿನ ಸಂಕೇತವಾದರೆ, ಸಿದ್ಧಿ ಬೌದ್ಧಿಕ ಅಥವಾ ಆಧ್ಯಾತ್ಮದ ಸಂಕೇತ, ಹಾಗಾಗಿ ಗಣೇಶ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳನ್ನು ಒಂದಾಗಿಸುತ್ತಾನೆ. ಅವರು ಆತನ ನಿಜವಾದ ಪತ್ನಿಯರಲ್ಲ ಅವರು ಕೇವಲ ಸಾಂಕೇತಿಕ ರೂಪಗಳೆನ್ನುತ್ತಾರೆ ಕೆಲವರು.

ಫೋಟೋ ಕೃಪೆ : New Track English

ದಕ್ಷಿಣ ಭಾರತದಲ್ಲಿ ಗಣೇಶ ವಿದ್ವತ್ತಿನ ದೇವರು ಹಾಗೂ ಆತ ಬ್ರಹ್ಮಚಾರಿ. ಇನ್ನು ಕೆಲವರ ಪ್ರಕಾರ ಗಣೇಶನನ್ನು ಆತನ ಆನೆ ತಲೆಯಿಂದಾಗಿ ಯಾರೂ ಮದುವೆಯಾಗಲು ಸಿದ್ಧರಿರಲಿಲ್ಲ. ಬಂಗಾಳದಲ್ಲಿ ಆತನ ತಾಯಿ ಶಕ್ತಿ ದೇವತೆ ಆತನಿಗೆ ಬಾಳೆಯ ಗಿಡದಿಂದ ಹೆಣ್ಣೊಂದನ್ನು ಸೃಷ್ಟಿಸಿ ಆಕೆಯನ್ನು ಕೋಲಾ-ಬಾವ್‌ ಎಂದು ಕರೆದು ಮದುವೆ ಮಾಡಿದಳು. ಇದು ಈಗಲೂ ದುರ್ಗಾ ಪೆಂಡಾಲ್‌ ಗಳಲ್ಲಿ ಕೆಂಪು ಅಂಚಿನ ಬಿಳಿ ಸೀರೆ ಉಡಿಸಿ ಗಣೇಶನ ಪಕ್ಕ ಕೂಡಿಸಿರುತ್ತಾರೆ.


  • ಬಾಲಕೃಷ್ಣ.ಜೆ ( ಖ್ಯಾತ ಬರಹಗಾರರು – ವ್ಯಂಗ್ಯಚಿತ್ರಕಾರರು – ಅನುವಾದಕರು – ಕನ್ನಡ ಪ್ರೊಫೆಸರ್)

One thought on “ಇಬ್ಬರ ಹೆಂಡಿರ ಮುದ್ದಿನ ಗಣೇಶ – ಬಾಲಕೃಷ್ಣ.ಜೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading