ಕಾರವಾರ ಜಿಲ್ಲೆ ಶಿರಸಿಯ ಗಣೇಶ ನಗರದ ಗೌರಿ ಸಿ. ನಾಯ್ಕ್ ಎಂಬ ಮಹಿಳೆ ತಾನೋಬ್ಬಳೆ 60 ಅಡಿ ಬಾವಿಯನ್ನು ತೊಡಿ ಅಚ್ಚರಿಯನ್ನು ಮೂಡಿಸಿದ್ದಾರೆ.ಅವರ ಸಾಧನೆಯ ಕುರಿತು ಟಿ.ಶಿವಕುಮಾರ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಬಾವಿ ಎಂದ ತಕ್ಷಣ ನೆನಪಿಗೆ ಬರುವುದು ನೀರು, ನೀರಿಗಾಗಿ ಹಿಂದೆ ಜನರು ಬಾವಿಗಳನ್ನು ಆಶ್ರಯಿಸಿದ್ದರು. ಈಗ ಬೋರ್‍ವೆಲ್, ನಳ ಇತ್ಯಾದಿ ಬಂದ ಮೇಲೆ ಬಾವಿ ಕಾಣೆಯಾಗಿದೆ. ಹಿಂದೆ ಈಗಿನಂತೆ ಮನೆಗೊಂದು ಬೋರ್‍ನಂತೆ ಮನೆಗೊಂದು ಬಾವಿ ಇರಲೇಬೇಕು ಎನ್ನುವ ಸಂಪ್ರದಾಯವು ಇತ್ತು. ಇನ್ನು ಕೆಲ ವರ್ಷಗಳು ಕಳೆದರೆ ಮಕ್ಕಳಿಗೆ ನೀರಿಗಾಗಿ ಬಾವಿಗಳಿದ್ದವು ಎನ್ನುವಂತಹ ಚಿತ್ರಗಳನ್ನು ತೋರಿಸಬೇಕಾದೀತು.
ಯಾಕೇ ಈ ಬಾವಿ ವಿಷಯ ಅಂತೀರಾ ಕಾರವಾರ ಜಿಲ್ಲೆ ಶಿರಸಿಯ ಗಣೇಶ ನಗರದ ಗೌರಿ ಸಿ. ನಾಯ್ಕ್ ಎಂಬ ಮಹಿಳೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವ ಹಾಗೆ ತಾನೋಬ್ಬಳೆ 60 ಅಡಿ ಬಾವಿಯನ್ನು ತೊಡಿ ಅಚ್ಚರಿಯನ್ನು ಮೂಡಿಸಿದ್ದಾರೆ. ಗೌರಿ ನಾಯ್ಕ್ ರವರಿಗೆ ಬಾವಿ ತೆಗೆಯಬೇಕೆಂಬ ಮನಸ್ಸು ಬಂದದ್ದು ಯಾಕೆ ಎಂದರೆ ಈ ಸಾರಿ ಮಳೆಯ ಪ್ರಮಾಣ ಕಡಿಮೆ ಮನೆಯ ಪಕ್ಕದ ಜಮೀನಿನಲ್ಲಿ 150 ಅಡಿಕೆ, 20 ತೆಂಗು, ಹಾಗೂ ಬಾಳೆಗಿಡಗಳು ನೀರಿಲ್ಲದೆ ಒಣಗಿ ಇನ್ನು ಕಥೆ ಮುಗಿಯಿತು ಎಂದು ತಿಳಿದ ಗೌರಿ ರಾತ್ರಿ ನಿದ್ದೆಯಿಲ್ಲದೆ ಯೋಚಿಸಿ ಏನಾದರೂ ಮಾಡಿ ಜಮೀನಿನಲ್ಲಿರುವ ಅಡಿಕೆ, ತೆಂಗು ಬಾಳೆಗಿಡಗಳನ್ನು ರಕ್ಷಣೆ ಮಾಡಬೇಕು ಎಂದು ಮೊದಲೇ ಇದ್ದ ಮನೆಯ ನಿತ್ಯ ಬಳಕೆಗೆ ಬಾವಿ ಇದ್ದರು ಪಕ್ಕದ ಜಮೀನಿನಲ್ಲಿ ಬಾವಿಯನ್ನು ತೋಡುವ ನಿರ್ಧಾರಕ್ಕೆ ಬಂದರು ಅದರೆ ಬಾವಿ ತೋಡಲು ಕೂಲಿಯಾಳುಗಳ ಸಮಸ್ಯೆ ಎದುರಾಯಿತು ಕೊನೆಗೆ ಏಕಾಂಗಿಯಾಗಿ ಬಾವಿ ತೋಡುವ ಕೆಲಸಕ್ಕೆ ಕೈ ಹಾಕಿ ಬಿಟ್ಟರು ಗೌರಿ.
ಇಪ್ಪತ್ತು ಆಡಿ ಆಳದ ಬಾವಿಯನ್ನು ಯಾರ ಸಹಾಯವನ್ನು ಬಯಸದೇ ಓಂಟಿಯಾಗಿ ತೋಡಿದ್ದನ್ನು ಮನೆಯವರು ಇನ್ನು ಸಾಕು ಬಾವಿಯನ್ನು ತೋಡಬಾರದು ಎಂದು ಒತ್ತಾಯಿಸಿದಾಗ ಆ ಪ್ರಯತ್ನಕ್ಕೆ ವಿರಾಮವನ್ನು ನೀಡಿ ಮತ್ತೇ ಅದೇ ಬಾವಿಯನ್ನು ನಾಲ್ಕೈದು ಜನ ಸೇರಿಕೊಂಡು 42 ಅಡಿ ತೋಡಿದಾಗ ಸ್ವಲ್ಪ ನೀರು ಸಿಕ್ಕಿದೆ. ಅಷ್ಟಕ್ಕೆ 1600 ರಿಂದ 17000 ರೂ ಖರ್ಚಾಗಿದೆ ಒಂದು ಬಾವಿಯನ್ನು ತೆಗೆಯಬೇಕಾದರೆ ಸುಮಾರು ಐವತ್ತರಿಂದ ಆರವತ್ತು ಸಾವಿರ ಹಣ ಬೇಕು
ಯಾಕೆ ಸುಮ್ಮನೆ ಹಣವನ್ನು ವ್ಯಯಿಸಬೇಕು ಎಂದು ನಿತ್ಯ ಅಡಿಕೆಯನ್ನು ಸುಲಿಯುವ ಕೆಲಸಕ್ಕೆ ಹೋಗುವ ಮಗ ಮತ್ತು ಮಗಳನ್ನು ಬಿಡುವಿನ ವೇಳೆಯಲ್ಲಿ ಮಾತ್ರ ಬಾವಿಯನ್ನು ತೆಗೆಯೋಣ ಎಂದು ಒಪ್ಪಿಸಿ ಗುದ್ದಲಿ ಪಿಕಾಸು ಹಾರೆ ಹಿಡಿದು ಸತತ ಪ್ರಯತ್ನದಿಂದ ದಿನಕ್ಕೆ ಮೂರರಿಂದ ನಾಲ್ಕು ತಾಸು ಬಾವಿಯನ್ನು ತೆಗೆಯಲು ಆರಂಭಿಸಿದರು ಸುಮಾರು ಎರಡು ಮೂರು ತಿಂಗಳು ಬಾವಿಯನ್ನು ತೋಡುವ ಕಾಯಕದಲ್ಲಿ ನಿರತರಾದರು ಬಾವಿ ಆಳವಾದಂತೆ ಹತ್ತಿ ಇಳಿಯಲು ಸುಲಭವಾಗುವ ಹಾಗೆ ಬಾವಿಯ ಒಳಭಾಗದ ಸುತ್ತ ಮಣ್ಣಿನಿಂದ ಮೆಟ್ಟಿಲುಗಳನ್ನು ನಿರ್ಮಿಸಿ ಮೇಲಿನಿಂದ ಹಗ್ಗವೊಂದನ್ನು ಇಳಿಯಬಿಟ್ಟು ಸುಮಾರು ನಲವತ್ತು ಅಡಿಗಳಷ್ಟು ತೋಡುವಾಗ ಮಣ್ಣನ್ನು ಮೇಲಕ್ಕೆತ್ತಲು ಯಾರ ಸಹಾಯವನ್ನು ಪಡೆಯಲಿಲ್ಲ ಮಣ್ಣನ್ನು ಬಕೆಟ್ಟಲ್ಲಿ ತುಂಬಿ ಬಾವಿಯಿಂದ ಮೇಲಕ್ಕೆ ಎತ್ತಿ ಮಣ್ಣನ್ನು ಅಡಿಕೆ ಗಿಡದ ಬುಡಕ್ಕೆ ಮತ್ತು ತಗ್ಗು ಪ್ರದೇಶಕ್ಕೆ ರಾಟೆಯ ಮೂಲಕ ಎತ್ತಿ ಸಾಗಿಸಿ ಅದೇಷ್ಟು ಬಾರಿ ಮೇಲೆ ಕೆಳಗೆ ಹತ್ತಿ ಪ್ರಾರಂಭದಲ್ಲಿ ಈ ಕೆಲಸ ಕಷ್ಟವೆನಿಸಿದರೂ ದಿನಕಳೆದಂತೆ ಅದೂ ಮಾಮೂಲಿಯಾಗಿಬಿಟ್ಟಿತ್ತು 40 ಅಡಿ ತೋಡಿದಾಕ್ಷಣ ಜಿನಗು ನೀರು ಬರಲು ಪ್ರಾರಂಭವಾಯಿತು ಮತ್ತೇ 60 ಅಡಿಯವರೆಗೂ ತೋಡಿದಾಗ ನೀರು ಸಹ ಜಾಸ್ತಿಯಾಗ ತೋಡಗಿತ್ತು
ಇವರ ಏಕಾಂಗಿ ಪ್ರಯತ್ನದ ಫಲವಾಗಿ ಈಗ ಎಂಟರಿಂದ ಹತ್ತು ಅಡಿ ನೀರು ಬಾವಿಯಲ್ಲಿ ಇದೆ ಇದೇ ರೀತಿ ಸುಮಾರು 500-600 ಕೊಳವೆ ಬಾವಿ ತೊಡಿಸುವ ಬದಲು ಮನೆಯ ಹಿತ್ತಲಲ್ಲಿ ಯಾಕೆ 50-60 ಅಡಿ ಬಾವಿಯನ್ನು ತೋಡಿ ನೀರಿನ ಉಪಯೋಗವನ್ನು ಮಾಡಿಕೊಳ್ಳಬಹುದಲ್ಲ.
ಗೌರಿ ನಾಯ್ಕ ಅವರಿಗೊಂದು ಹ್ಯಾಟ್ಸ ಆಫ್ ಇರಲಿ!
*****
ಧಾರವಾಹಿ ಇನ್ನಿತರೆ ಬೇಡವಾದ ಕೆಲಸಗಳಿಗೆ ತಲೆಕೆಡಿಸಿಕೊಳ್ಳುವ ನಾವುಗಳು ಈ ಗೌರಿ ನಾಯ್ಕರವರಿಂದ ಒಂದು ಪಾಠವನ್ನು ಕಲಿಯಬೇಕಾಗಿತ್ತದೆ. ವಯಸ್ಸಾದರೂ ಸಾಧನೆಗೆ ಅಸಾಧ್ಯವಾದದು ಯಾವುದು ಅಲ್ಲ ಎನ್ನುವುದಕ್ಕೆ ಗೌರಿ ಉದಾಹರಣೆಯಾಗುತ್ತಾರೆ. ವಿನೋದ ಸಮನ್ವಯಾಧಿಕಾರಿ ಶಿರಸಿ
- ಚಿತ್ರ ಲೇಖನ: ಟಿ.ಶಿವಕುಮಾರ್, ಸ.ಹಿ.ಪ್ರಾಥಮಿಕ ಶಾಲೆ ,ಅರಳೇಶ್ವರ (ತಾ) ಹಾನಗಲ್ಲ ,(ಜಿ)ಹಾವೇರಿ.