ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರ ಜನಪ್ರಿಯ ಕಾದಂಬರಿ ‘ಹಳ್ಳ ಬಂತು ಹಳ್ಳ’ಈ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ’ ಲಭಿಸಿದ್ದು, ಈ ಪುಸ್ತಕದ ಕುರಿತು ರಾಘವೇಂದ್ರ ಇನಾಮದಾರ ಅವರು ಪುಸ್ತಕ ಪರಿಚಯ ಬರೆದಿದ್ದಾರೆ ತಪ್ಪದೆ ಮುಂದೆ ಓದಿ…
ಪುಸ್ತಕ :ಹಳ್ಳ ಬಂತು ಹಳ್ಳ
ಲೇಖಕರು : ಶ್ರೀನಿವಾಸ ವೈದ್ಯ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ
ಪುಟ : 310
ಬೆಲೆ : 250.00
ಎಂದಿನಂತೆ ಪ್ರಾಣ ದೇವರ ಮುಂದೆ ಕುಳಿತು, ಪೂಜೆ ಮಾಡುತ್ತಿದ್ದ ವಾಸುದೇವಾಚಾರು ಮನೆಯಲ್ಲಿನ ಸಮಸ್ಯೆಗಳಿಂದ ತೃಸ್ತರಾಗಿದ್ದರು. ಚಿರಡಿಗೇಳಲಿಕ್ಕೆ ಹತ್ತಿದ್ದರು. ಅಂತಹದ್ರಲ್ಲಿಯೇ ದೇವರ ಪೂಜೆ ಸಾಗಿತ್ತು.
ಪೂಜಿಸಿದ ವಿಗ್ರಹಗಳನ್ನು ಮಂಟಪದಲ್ಲಿರಿಸುವಾಗ ತನ್ನ ಬಾಲದ ಸುರುಳಿಯ ಮೇಲೆ ಕೈಮುಗಿದು ಕುಳಿತ ಪ್ರಾಣದೇವರ ಮೂರ್ತಿ ಗುಡಕ್ಕಂತ ಉರುಳಿ ಕೆಳಗೆ ಬಿತ್ತು. ಅದನ್ನು ಎತ್ತಿ ಮತ್ತೆ ಇಡುವಾಗ ಪ್ರಾಣದೇವರ ಮೂರ್ತಿ ಮತ್ತೆ ಗುಡಕ್ ಅಂತ ಉರುಳಿ ಬಿತ್ತು. ವಾಸುದೇವಾಚಾರು ಎರಡೂ ಕೈಲೆ ಮೂರ್ತಿ ಎತ್ತಿ ಹಣಿಗೆ ಹಚ್ಚಿಕೊಂಡು, ಕಣ್ಣಿಗೆ ಒತ್ತಿಕೊಂಡು ಮತ್ತೆ ಸರಿಯಾಗಿ ಇಟ್ಟು ನಮಸ್ಕರಿಸಿದರು. ಅದು ಮತ್ತೆ ಬಿತ್ತು. ಈಗ ವಾಸುದೇವಾಚಾರರ ಸಹನೆಯ ಕಟ್ಟೆಯೊಡೆಯಿತು. ಅವರು ಕೋಪದಲ್ಲಿ “ಬೀಳತಿಯಾ ಬೀಳ ಮಗನ … ಹಣಿಮ್ಯಾ ನೀನೂ ನನ್ನ ಕಾಡಸ್ತಿಯೇನೋ… ಬೀಳ ಮಗನ…ಕುಂಡಿ ಗಟ್ಟಿ ಅದನೋ ಇಲ್ಲೋ ಮಂಗ್ಯಾನ ಮಗನ ಹಿಂಗ್ಯಾಕ ಕಿಟ್ಟದ ಗೊಂಬಿ ಹಂಗ ಬೀಳತಿದಿ.. ಎನ್ನುತ್ತ ಕಂಚಿನ ಮೂರ್ತಿಯನ್ನು ದೇವರ ಮಂಟಪದಲ್ಲಿ ಇಟ್ಟರು.
ಶ್ರೀನಿವಾಸ ವೈದ್ಯರ “ಹಳ್ಳ ಬಂತು ಹಳ್ಳ” ಎಂಬ ಕಾದಂಬರಿಯ ಈ ಸನ್ನಿವೇಶ ಓದುವಾಗ ನಗು ತಡಿಯೋಕೆ ಆಗದೇ ಕೋಳ್ಳೆಂದು ಜೋರು ಜೋರಾಗಿ ನಿನ್ನೆ ದಿನ ನಕ್ಕು ಬಿಟ್ಟೆ. ಅಮ್ಮ ಗಾಬರಿಯಿಂದ ಓಡಿ ಬಂದು “ರಾಘು… ಆರಾಮದಿಯಿಲ್ಲೋ” ಅಂತ ಕೇಳಿದಳು. ರಾತ್ರಿ ೧೨.೩೦ಕ್ಕೆ ಈ ರೀತಿ ಜೋರಾಗಿ ನಕ್ಕರೆ ಯಾರಿಗೆ ತಾನೇ ಗಾಬರಿಯಾಗೋಲ್ಲ. ಅಮ್ಮನಿಗೂ ಹಾಗೆ ಆಗಿತ್ತು. ಬೆಳೆಗ್ಗೆ ಅವಳಿಗೂ ಇದನ್ನು ಓದಿ ಹೇಳಿದೆ ಅವಳೂ ಸಿಕ್ಕಾಪಟ್ಟೆ ನಕ್ಕಳು…
ವೈದ್ಯರ ಬರವಣಿಗೆ ಅಂದ್ರೆ ಹಾಗೆ!
- ರಾಘವೇಂದ್ರ ಇನಾಮದಾರ, ಹುಬ್ಬಳ್ಳಿ.