ಯಾವ ದೇಶ ಹೆಚ್ಚು ಖುಷಿಯಾಗಿದೆ?

2022 ರ ಸಮೀಕ್ಷೆಯ ಪ್ರಕಾರ ಫಿನ್‌ಲ್ಯಾಂಡ್ 7.821 ಸಂಖ್ಯೆ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ ಅಪಘಾನಿಸ್ಥಾನ ಕೇವಲ 2.404 ಸಂಖ್ಯೆ ಪಡೆದು ಕೊನೆಯ ಅಥವಾ 146 ನೇ ಸ್ಥಾನದಲ್ಲಿದೆ.ಹಾಗಿದ್ದರೆ ಭಾರತ ಎಲ್ಲಿದೆ? ತಪ್ಪದೆ ಮುಂದೆ ಓದಿ ಡಾ. ಎನ್.ಬಿ.ಶ್ರೀಧರ ಅವರ ಈ ಒಂದು ಲೇಖನ…

ಯಾವ ದೇಶ ಹೆಚ್ಚು ಖುಷಿಯಾಗಿದೆ?, ಈ ಪ್ರಶ್ನೆ ಸಹಜವಾಗಿಯೇ ಹುಟ್ಟುವುದು. ಸಂತೋಷ ನಮಗೆ ಬರುವುದು ಹೇಗೆ ಎಂದು ವಿಚಾರ ಮಾಡಿದಾಗ ಹಲವಾರು ಆಯಾಮಗಳು, ವಿವಿಧ ತರ್ಕಗಳ ದೊಡ್ಡ ಸಂಖ್ಯೆಯೇ ಇದೆ. ಸಂತೋಷ ಯಾವಾಗ ಬರುವುದು ಎನ್ನುವುವು ಬಹುತೇಕ ಜನರಿಗೆಲ್ಲಾ ಅನಿಶ್ಚಿತತೆ. ಇದು ಬಂದಾಗ ಸಂತಸವಾಗುತ್ತದೆ ಎನ್ನುತ್ತಾ ಒಂದಾದ ಮೇಲೆ ಮತ್ತೊಂದು ಬಯಕೆಗಳನ್ನು ಹೊಂದುತ್ತಾ ಈ ಕ್ಷಣದ ಸಂತಸವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದು ಸಾಮಾನ್ಯ ಮನುಷ್ಯನ ಲಕ್ಷಣ. ಯಾವ ದೇಶದ ಜನರು ಜಾಸ್ತಿ ಖುಷಿಯಾಗಿದ್ದಾರೆ ಎಂಬ ಬಗ್ಗೆ ಸಮೀಕ್ಷೆಯನ್ನು ವಿಶ್ವಸಂಸ್ಥೆ ಪ್ರತಿವರ್ಷ ಪ್ರಕಟಿಸುತ್ತದೆ. ನ್ಯೂಯಾರ್ಕಿನ ಜಾಹ್ನ್ ಹೆಲಿವೆಲ್ ಮತ್ತಿತರು ಈ ಕುರಿತು ಸತತ ಅಧ್ಯಯನ ನಡೆಸಿ ಪ್ರತಿ ವರ್ಷ “ಪ್ರಪಂಚದ ಸಂತಸದ ವರದಿಯನ್ನು ಪ್ರಕಟಿಸುತ್ತಾರೆ. ಇದಲ್ಲದೇ ವಿವಿಧ ಸಂಶೋಧನಾ ಸಂಸ್ಥೆಗಳೂ ಸಹ ಈ ಕುರಿತು ಅಂಕಿ ಅಂಶಗಳನ್ನು ಪ್ರಕಟಿಸುತ್ತವೆ. ಅದರ ಪ್ರಕಾರ ಪ್ರಪಂಚದಲ್ಲಿರುವ 195 ದೇಶಗಳಲ್ಲಿ ಈ ಸಮೀಕ್ಷೆ ನಡೆಯುತ್ತದೆ. ಇದು ನಮ್ಮಲ್ಲಿ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆ ನಡೆಸುವ ತರಹ. ಇದರ 2022 ರ ಸಮೀಕ್ಷೆಯ ಪ್ರಕಾರ ಫಿನ್‌ಲ್ಯಾಂಡ್ 7.821 ಸಂಖ್ಯೆ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ ಅಪಘಾನಿಸ್ಥಾನ ಕೇವಲ 2.404 ಸಂಖ್ಯೆ ಪಡೆದು ಕೊನೆಯ ಅಥವಾ 146 ನೇ ಸ್ಥಾನದಲ್ಲಿದೆ.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)

ಹಾಗಿದ್ದರೆ ಭಾರತ ಎಲ್ಲಿದೆ ಎಂಬುದು ಎಲ್ಲರ ಕುತೂಹಲವಲ್ಲವೇ? ಭಾರತ 3.777 ಅಂಕ ಪಡೆದು 136 ನೇ ಸ್ಥಾನದಲ್ಲಿದೆ. ಅಂದರೆ ಅಪಘಾನಿಸ್ಥಾನಕ್ಕಿಂದ ಕೇವಲ 10 ಅಂಕೆ ಮಾತ್ರ ಜಾಸ್ತಿ. ಹಾಗಿದ್ದರೆ ಸಂತಸವನ್ನು ಅಳೆಯಲು ಬಳಸುವ ವಿಧಾನಗಳೇನು ? ಎಂಬುದು ಪ್ರಶ್ನೆ. ಇದಕ್ಕೆ ಸಾಮಾಜಿಕ ತಜ್ಞರು ವಿಸ್ತಾರವಾದ ಪ್ರಶ್ನೆಗಳನ್ನು ಹೊಂದಿದ ದೊಡ್ಡ ಪ್ರಶ್ನಾವಳಿಗಳನ್ನು ತಯಾರಿಸಿ ಮಾದರಿ ಸಮೀಕ್ಷೆ ಮಾಡುತ್ತಾರೆ. ವಿವಿಧ ಭೌಗೋಳಿಕ ವಲಯಗಳು, ವಿವಿಧ ಜನಾಂಗಗಳು, ವಿವಿಧ ಜಾತಿಗಳು, ಅವರ ಸಾಮಾಜಿಕ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಮಾನಸಿಕ ದೃಢತೆ, ಸಮಸ್ಯೆಗಳನ್ನು ಎದುರಿಸಲು ಇರುವ ಧೈರ್ಯ, ಸರ್ಕಾರದ ಬದ್ಧತೆ, ತಲಾ ಆದಾಯ, ಆರೋಗ್ಯ, ಬದುಕಲು ಇರುವ ವಿವಿಧ ಸ್ವಾತಂತ್ರ÷್ಯಗಳ ಬಳಕೆಗೆ ಅವಕಾಶ, ಸಮಾಜದಲ್ಲಿರುವ ಲಂಚ, ನಿರುದ್ಯೋಗ, ಹಸಿವು, ಅಸಹಿಷ್ಣುತೆ, ಧಾರ್ಮಿಕ ನಡುವಳಿಕೆ, ಬಡತನ, ಸಿರಿತನ, ಮಧ್ಯಮತನ, ಹವಾಮಾನ, ದೈಹಿಕ ಕಾರ್ಯಕ್ಷಮತೆ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಹೀಗೆ ಅನೇಕ ವಿಧದ ಮಾಪಕಗಳನ್ನು ಬಳಸಲಾಗುತ್ತದೆ. ಇದಲ್ಲದೇ ವೈಜ್ಞಾನಿಕವಾಗಿ ಮೆದುಳಿನ ಸೆರಟೋನಿನ್, ಡೋಪಮಿನ್, ಅಡ್ರಿನಾಲಿನ್ ಇತ್ಯಾದಿಗಳನ್ನು ರಕ್ತದಲ್ಲಿ ಅಳತೆ ಮಾಡುವುದರ ಮೂಲಕ ಮತ್ತು ಮೆದುಳಿನ ವಿದ್ಯುತ್ ತರಂಗಗಳನ್ನು ಅಳೆಯುವುದರ ಮೂಲಕ ಸಹ ಆಧಾರ ಪಡೆಯಬಹುದು. ಆದರೆ ಪ್ರಸಕ್ತ ಬಳಕೆಯಲ್ಲಿರುವುದು ವಿವಿಧ ಪ್ರಶ್ನಾವಳಿಗಳ ಮೂಲಕ ಮಾಡುವ ಸರ್ವೇ ಕಾರ್ಯ.

ಈ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಫಿನ್‌ಲ್ಯಾಂಡ್ ಮೊದಲುಗೊಂಡು ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವಿಟ್ರ‍್ಲಲ್ಯಾಂಡ್, ನೆದರ್ ಲ್ಯಾಂಡ್, ಸ್ವೀಡನ್, ನಾರ್ವೇ, ಇಸ್ರೇಲ್, ನ್ಯುಜಿಲ್ಯಾಂಡ್, ಆಸ್ಟ್ರೇಲಿಯಾ ಹೀಗೆ ಸಾಗುತ್ತದೆ. ಅತ್ಯಂತ ಮುಂದುವರೆದ ದೇಶಗಳಾದ ಅಮೇರಿಕಾ ಮತ್ತು ಇಂಗ್ಲೆಂಡ್ ಗಳು 16 ಮತ್ತು 17 ನೇ ಸ್ಥಾನದಲ್ಲಿವೆ.

ಆಶ್ಚರ್ಯಕರ ವಿಷಯವೆಂದರೆ ದಿವಾಳಿ ಎದ್ದ ದೇಶವೆಂದು ನಾವು ಕರೆಯುವ ಪಾಕಿಸ್ಥಾನವು ನಮಗಿಂತ ಎಷ್ಟೋ ಮೇಲೆ ಅಂದರೆ 121 ನೇ ಸ್ಥಾನದಲ್ಲಿದೆ !. ನಮ್ಮ ಸುತ್ತಲಿನ ಬಾಂಗ್ಲಾದೇಶ 94 ನೇ ಸ್ಥಾನ, ಶ್ರೀಲಂಕಾ 121 ನೇ ಸ್ಥಾನದಲ್ಲಿದ್ದರೆ ನೇಪಾಳ 84 ನೇ ಸ್ಥಾನದಲ್ಲಿವೆ. ಅಂದರೆ ಭಾರತ ಅತ್ಯಂತ ದುಖಿ ದೇಶಗಳಲ್ಲಿ ಒಂದು. ಪ್ರಾಥಮಿಕ ಶಿಕ್ಷಣ ಮಕ್ಕಳಲ್ಲಿ ದುಖವನ್ನು ಹೆಚ್ಚಿಸಿದರೆ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಅವರ ಸಂತೋಷದ ಮಟ್ಟವನ್ನು ಹೆಚ್ಚಿಸುತ್ತದೆ.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)

ಆಶ್ಚರ್ಯಕರ ವಿಷಯಗಳು ಮುಂದುವರೆಯುತ್ತವೆ. ಹಣಕಾಸಿನ ವಿಷಯಕ್ಕೂ ಸಂತೋಷಕ್ಕೂ ನೇರವಾಗಿ ಸಂಬAಧವಿಲ್ಲ ಎನ್ನುತ್ತದೆ ಸಮೀಕ್ಷೆ. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದ ಅಂಕದಲ್ಲಿ 20.89 ಟ್ರಿಲಿಯನ್ ಡಾಲರ್ ಅಮೇರಿಕಾ ಪ್ರಥಮ ಸ್ಥಾನದಲ್ಲಿದ್ದರೆ ಎರಡನೆಯ ಸ್ಥಾನದಲ್ಲಿ 14.72 ಟ್ರಿಲಿಯನ್ ಡಾಲರ್ ಹೊಂದಿದ ಚೀನಾ ಇದೆ. ಭಾರತ 2.66 ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ಹೊಂದಿದ್ದು 6 ನೇ ಸ್ಥಾನ ಹೊಂದಿದೆ ಮತ್ತು ಇನ್ನೆರಡು ವರ್ಷಗಳಲ್ಲಿ 3 ನೇ ಸ್ಥಾನದಲ್ಲಿರುವ ಜಪಾನ್ ದೇಶವನ್ನು ಹಿಂದಕ್ಕಿಕ್ಕಿ 3 ನೇ ಸ್ಥಾನವನ್ನು ಹೊಂದುವ ಆಶಯ ಹೊಂದಲಾಗಿದೆ. ಅಂದರೆ ದೇಶದ ಪ್ರಗತಿಗೂ ಮತ್ತು ಸಂತೋಷಕ್ಕೂ ಯಾವುದೇ ಸಂಬಂಧವಿರದೇ ಅದೊಂದು ಮಾಪಕವಾಗಿ ಮಾತ್ರ ಉಳಿಯುತ್ತದೆ. ಹಣ ಜಾಸ್ತಿ ಇದ್ದರೆ ಸಂತಸವಿರದು ಮತ್ತು ಸಂತಸವಿರಲು ಹಣವೂ ಒಂದು ಕಾರಣ ಎನ್ನಬಹುದು. ಹಾಗೆಂದ ಮಾತ್ರಕ್ಕೆ ಸಂತಸದ ಮಟ್ಟದಲ್ಲಿ ಪ್ರಥಮ ಸ್ಥಾನ ಹೊಂದಿದ ಫಿನ್‌ಲ್ಯಾಂಡ್ ಜಿಡಿಪಿಯಲ್ಲಿಯೂ ಸಹ 15 ನೇ ಸ್ಥಾನದಲ್ಲಿದೆ.

ಲಂಚವು ಬಹಳ ಜನರನ್ನು ಸದಾ ದುಖಿತರನ್ನಾಗಿ ಮಾಡಿದ್ದು ಇದರಲ್ಲಿ ಲಂಚರಹಿತದಲ್ಲಿ ಭಾರತದ ಸ್ಥಾನ 85 ಆಗಿದ್ದು ಡೆನ್ಮಾರ್ಕ್ ಪ್ರಥಮ ಸ್ಥಾನ ಹೊಂದಿದ್ದರೆ ಫಿûನ್‌ಲ್ಯಾಂಡ್ 2ನೆಯ ಸ್ಥಾನದಲ್ಲಿದೆ. ಶಾಂತತೆ, ಸಮಚಿತ್ತತೆ ಇವೆರಡರಲ್ಲಿ ಮಾತ್ರ ಭಾರತ ಮೊದಲ ಹತ್ತು ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳುತ್ತದೆ. 2008-2012 ರಿಂದ 2020-21 ನೇ ಸಾಲಿನಲ್ಲಿ ಸಂತೋಷದ ಪ್ರಮಾಣ ಗರೀಷ್ಟವಾಗಿ ಇಳಿದ 10 ದೇಶಗಳಲ್ಲಿ ಲೆಬನಾನ್, ವೆನಿಝುಯೆಲಾ, ಅಪಘಾನಿಸ್ಥಾನಗಳ ಜೊತೆ ಭಾರತವೂ ಇರುವುದು ಖೇದಕರ ಸಂಗತಿ. ಪ್ರಪಂಚದ ದೊಡ್ಡ ಜನಸಂಖ್ಯೆಯ ದೇಶಗಳಾದ ಚೀನಾ, ಭಾರತ, ಅಮೇರಿಕಾ, ಇಂಡೋನೇಸಿಯಾ ಮತ್ತು ಪಾಕಿಸ್ಥಾನಗಳಲ್ಲಿ ಸಂತಸದ ಮಟ್ಟದಲ್ಲಿ ಭಾರತ 136 ನೇ ಸ್ಥಾನ ಪಡೆದು ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಸಮೀಕ್ಷೆ ಹೇಳುತ್ತದೆ.

ಹಾಗಿದ್ದರೆ ನಮ್ಮಲ್ಲಿರುವ ಪುರಾತನ ಪರಂಪರೆ, ಹಳೆಯ ಚಿಕಿತ್ಸಾ ಪದ್ಧತಿ, ಧಾರ್ಮಿಕ ನಂಬಿಕೆಗಳು ಇವೆಲ್ಲಾ ಜನರನ್ನು ಸಂತಸದಲ್ಲಿರಿಸಲು ಸಫಲವಾಗಿಲ್ಲವೇ? ಸಂತಸದ ಮಟ್ಟದಲ್ಲಿ 136 ನೇ ಸ್ಥಾನದಲ್ಲಿರುವ ನಮ್ಮ ದೇಶ ಮೊದಲ 10 ಸ್ಥಾನಕ್ಕೆ ಬರಲು ಅಥವಾ ವಿಶ್ವಗುರುವಾಗಲು ಇನ್ನೆಷ್ಟು ವರ್ಷಗಳು ಬೇಕಾಗಬಹುದು? ಗೊತ್ತಿಲ್ಲ.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW