ಬನ್ನಿ… ಇದೆ ಶನಿವಾರ ಸೆಪ್ಟೆಂಬರ್ ೮ ಮತ್ತು ೧೦ ರಂದು ನಡೆಯಲಿರುವ ಸರ್ಕಾರಿ ಕನ್ನಡ ಶಾಲೆ ಉಳಿಸೋಣ ಬೆಳೆಸೋಣ ಅಭಿಯಾನಕ್ಕೆ, ಕನ್ನಡ ಶಾಲೆ ನಮ್ಮ ಹೆಮ್ಮೆ…
ಚಿಗುರು ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಆಕೃತಿ ಕನ್ನಡ (ಜಗತ್ತಿನ ಕನ್ನಡಿಗರಿಗಾಗಿ) ಇವರಿಬ್ಬರ ಸಹಕಾರ ಮತ್ತು ಯುವ ಸಮಾಜ ಸೇವಾ ಎಂಬ ಹೊಸ ಹೆಸರಿನೊಂದಿಗೆ ಸರ್ಕಾರಿ ಕನ್ನಡ ಶಾಲೆ ಉಳಿಸೋಣ ಅಭಿಯಾನ ಮುಂದುವರೆದಿದೆ.
ಈ ಅಭಿಯಾನ ವಾರಾಂತ್ಯದಲ್ಲಿ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು, ಅಣಬೂರಿನ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆಯಲಿದೆ. ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದ ಹರೀಶ್ ಕಾನಹೊಸಹಳ್ಳಿ ಅವರ ಮುಂದಾಳತ್ವದಲ್ಲಿ ಅಭಿಯಾನಗಳ ರೂವಾರಿಯಾಗಿ ಕಾರ್ಯ ನಿರ್ವಹಿಸಲಿದೆ.
ಯುವ ಸಮಾಜ ಸೇವಾ ತಂಡದ ವಿಶೇಷತೆ ಎಂದರೆ ಅಭಿಯಾನ ಮಾಡುವ ಪ್ರತಿಯೊಂದು ಶಾಲೆಯಲ್ಲಿ ಎರಡು ಕಡು ಬಡ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಿದೆ. ಊರಿನ ಸುತ್ತ ಮುತ್ತಲಿನ ಸಮಸ್ತ ಜನತೆಗೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗುತ್ತದೆ.
ಸಾಧ್ಯವಾದರೆ ಬಣ್ಣ ಹಚ್ಚಲು ಅವಶ್ಯಕತೆ ಇರುವ ಸಾಮಗ್ರಿಗಳನ್ನು ನೀವು ನೀಡಿದರೆ ನಿಮ್ಮಿಂದ ಸುಂದರ ಶಾಲೆ ನಿರ್ಮಾಣವಾಗುವುದು. ಆಸಕ್ತರು ಈ ಕೆಳಗಿನ ವಸ್ತುಗಳನ್ನು ನೀಡಬಹುದು ಅಥವಾ ನಿಮಗೆ ತಿಳಿದಷ್ಟು ಹಣ ಅಕೌಂಟ್ ಗೆ ಕಳಿಸಬಹುದು.
- ಆಕೃತಿಕನ್ನಡ ನ್ಯೂಸ್