ಹೃದಯದ ಬಡಿತ ಜೀವಂತಿಕೆಯ ಸಾಕ್ಷಿ – ಡಾ. ಪ್ರಕಾಶ ಬಾರ್ಕಿ

2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಲೇಖನ ತಡವಾದರೂ ಅರ್ಥಪೂರ್ಣ ಲೇಖನವಾಗಿದೆ, ಹೃದಯದ ಕುರಿತು ಆರೋಗ್ಯ ತಜ್ಞ ಡಾ. ಪ್ರಕಾಶ ಬಾರ್ಕಿ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ಹೃದಯದ ನಿರಂತರ ಬಡಿತ ಜೀವಂತಿಕೆಯ ಸಾಕ್ಷಿ. ಪ್ರೀತಿ, ಪ್ರೇಮ, ಗಾಢ ಸಂಬಂಧಗಳ ಜೀವಸೆಲೆ ಹೃದಯವಾಗಿದೆ. ಇಂತಹ ಅಮೂಲ್ಯ ಅಂಗಕ್ಕೂ ಒಂದು ದಿನ ಮೀಸಲಿದೆ ಎಂಬುದು ನಿಮಗೆ ಗೊತ್ತೆ?.

2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಜಿನೇವಾದ ವಿಶ್ವ ಹೃದಯ ಒಕ್ಕೂಟ (world heart foundation) , ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಹೃದಯದ ಆರೋಗ್ಯ, ಕಾಯಿಲೆಯ ಗಂಭೀರತೆಯನ್ನು ಜನತೆಗೆ ತಿಳಿಸಲು ಆಚರಿಸಲಾಗುತ್ತಿದೆ.

ಈ ಮೊದಲು 1999 ರಿಂದ ಸೆಪ್ಟೆಂಬರ್ ಕೊನೆಯ ರವಿವಾರದಂದು “ವಿಶ್ವ ಹೃದಯ ದಿನ” ಆಚರಿಸಲಾಗುತ್ತಿತ್ತು. ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜಿನ ಪ್ರಕಾರ ಪ್ರತಿವರ್ಷ 17.9 ದಶಲಕ್ಷಕ್ಕೂ ಹೆಚ್ಚು ಜನರು ಹೃಯದ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಇದು ಜಾಗತಿಕ ಸಾವಿನಲ್ಲಿ ಶೇ.31ಕ್ಕಿಂತ ಹೆಚ್ಚು ಇದೆ. ಸುಮಾರು 80 ಪ್ರತಿಶತದಷ್ಟು ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾಯುತ್ತಿದ್ದಾರೆ. ಶೇ. 75ರಷ್ಟು ಪ್ರಕರಣಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಂದ ವರದಿಯಾಗಿವೆ.

ಹೃದಯದ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು :

  • ಮಾನವನ ಹೃದಯವು ಅವರವರ ಮುಷ್ಟಿ ಗಾತ್ರದ್ದಿರುತ್ತೆ.
  • ಹೃದಯ 9 ರಿಂದ 12 ಔನ್ಸ್ ತೂಗುತ್ತೆ. (250 ಮತ್ತು 350 ಗ್ರಾಂ).
  • ಹೃದಯವು ದಿನಕ್ಕೆ ಸುಮಾರು 100,000 ಬಾರಿ ಬಡಿಯುತ್ತದೆ (ಜೀವಿತಾವಧಿಯಲ್ಲಿ ಸುಮಾರು ಮೂರು ಬಿಲಿಯನ್ ಬಡಿತಗಳು).
  • ವಯಸ್ಕರ ಹೃದಯ ನಿಮಿಷಕ್ಕೆ 60 ರಿಂದ 80 ಬಾರಿ ಮಿಡಿಯುವುದು.
  • ನವಜಾತ ಶಿಶುಗಳ ಹೃದಯವು ವಯಸ್ಕರ ಹೃದಯಕ್ಕಿಂತ ವೇಗವಾಗಿ ಬಡಿಯುತ್ತದೆ, ನಿಮಿಷಕ್ಕೆ 70-190 ಬಡಿತಗಳು.
  • ಹೃದಯವು ಸುಮಾರು 6 ಕ್ವಾರ್ಟರ್ಸ್ (5.7 ಲೀಟರ್) ರಕ್ತವನ್ನು ಪಂಪ್ ಮಾಡುತ್ತದೆ.
  • ಹೃದಯವು ಎದೆಯ ಮಧ್ಯದಲ್ಲಿದೆ, ಸಾಮಾನ್ಯವಾಗಿ ಸ್ವಲ್ಪ ಎದೆಯ ಎಡಭಾಗಕ್ಕಿರುತ್ತೆ.
  • ಹೃದಯ ಪಕ್ಕೆಲುಬುಗಳ ರಕ್ಷಣೆಯಲ್ಲಿದೆ.
  • ಹೃದಯವು ತನ್ನದೇ ಆದ ವಿದ್ಯುತ್ ಪ್ರಚೋದನೆಯನ್ನು ಹೊಂದಿರುವುದರಿಂದ, ದೇಹದಿಂದ ಬೇರ್ಪಟ್ಟಾಗಲೂ ಅದಕ್ಕೆ ಸಾಕಷ್ಟು ಆಮ್ಲಜನಕವನ್ನು ಪೂರೈಸುವವರೆಗೂ ಬಡಿಯುವುದನ್ನು ಮುಂದುವರಿಸುತ್ತೆ.
  • ಹೃದಯದ “ಲಬ್- ಡಬ್” ಶಬ್ಧ, ಅದರ ನಾಲ್ಕು ಕವಾಟಗಳು ಮುಚ್ಚುವ ಶಬ್ದವಾಗಿದೆ.
  • ಗರ್ಭಧಾರಣೆಯ ನಂತರ ನಾಲ್ಕು ವಾರಗಳಲ್ಲಿ ಭ್ರೂಣದ ಹೃದಯ ಬಡಿತ ಆರಂಭವಾಗುತ್ತದೆ.
  • ಮಹಿಳೆಯ ಹೃದಯವು ಸಾಮಾನ್ಯವಾಗಿ ಪುರುಷರಿಗಿಂತ ವೇಗವಾಗಿ ಬಡಿಯುತ್ತದೆ. ಸರಾಸರಿ ಪುರುಷನ ಹೃದಯ ನಿಮಿಷಕ್ಕೆ 70 ಬಾರಿ ಬಡಿದರೆ, ಮಹಿಳೆಯ ಹೃದಯ ನಿಮಿಷಕ್ಕೆ 78 ಬಡಿತಗಳ ಹೃದಯ ಬಡಿಯುತ್ತದೆ.
  • ಸರಾಸರಿ ಜೀವಿತಾವಧಿಯಲ್ಲಿ, ಹೃದಯವು ಸುಮಾರು 1.5 ಮಿಲಿಯನ್ ಬ್ಯಾರೆಲ್ ರಕ್ತವನ್ನು ಪಂಪ್ ಮಾಡುತ್ತದೆ.
  • ಫ್ರೆಂಚ್ ವೈದ್ಯ ರೆನೆ ಲಾನೆಕ್ (1781-1826) ಸ್ಟೆತೊಸ್ಕೋಪ್ ಅನ್ನು ಕಂಡುಹಿಡಿದನು. ಮಹಿಳಾ ರೋಗಿಗಳ ಎದೆಯ ಮೇಲೆ ತನ್ನ ಕಿವಿಯನ್ನು ಇಡುವುದು ಸೂಕ್ತವಲ್ಲ ಎಂದು ಭಾವಿಸಿ, ಪರ್ಯಾಯವಾಗಿ ಆಲೋಚಿಸಿ ಸ್ಟೆತೊಸ್ಕೋಪ್ ಕಂಡುಹಿಡಿದನು.
  • 1903 ರಲ್ಲಿ, ಶರೀರಶಾಸ್ತ್ರಜ್ಞ ವಿಲ್ಲೆಮ್ ಐಂಥೋವೆನ್ (1860-1927) ಎಲೆಕ್ಟ್ರೋಕಾರ್ಡಿಯೋಗ್ರಾಫ್(ECG) ಅನ್ನು ಕಂಡುಹಿಡಿದನು. ಇದು ಹೃದಯದಲ್ಲಿನ ವಿದ್ಯುತ್ ಪ್ರವಾಹದಲ್ಲಿನ ಏರಿಳಿತ ತಿಳಿಸುತ್ತದೆ.
  • 1929 ರಲ್ಲಿ, ಜರ್ಮನ್ ಶಸ್ತ್ರಚಿಕಿತ್ಸಕ ವರ್ನರ್ ಫೋರ್ಸಮನ್ (1904-1979) ಕ್ಯಾಥೆಟರ್ ಅನ್ನು ತನ್ನ ತೋಳಿನ ರಕ್ತನಾಳದ ಮೂಲಕ 20 ಇಂಚು ಒಳ ಹಾಕಿ ಹೃದಯಕ್ಕೆ ತಳ್ಳುವ ಮೂಲಕ ಹೃದಯವನ್ನು ಪರೀಕ್ಷಿಸಿಕೊಂಡು, ಕ್ಯಾತಿಟೆರೈಸೇಶನ್ ಅನ್ನು (cardiac catherization) ಕಂಡುಹಿಡಿದನು. ಈಗ ಇದು ಸಾಮಾನ್ಯ ವಿಧಾನವಾಗಿದೆ.
  • ಡಿಸೆಂಬರ್ 3, 1967 ರಂದು, ದಕ್ಷಿಣ ಆಫ್ರಿಕಾದ ಡಾ.ಕ್ರಿಸ್ಟಿಯಾನ್ ಬರ್ನಾರ್ಡ್ (1922-2001) ಮಾನವ ಹೃದಯವನ್ನು ಲೂಯಿಸ್ ವಾಶನ್ಸ್ಕಿಯ ಎಂಬ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದರು. ಆತ ಕೇವಲ 18 ದಿನ ಬದುಕಿದ್ದ‌. ಇದನ್ನು ಮೊದಲ ಯಶಸ್ವಿ ಹೃದಯ ಕಸಿ ಎಂದು ಪರಿಗಣಿಸಲಾಗಿದೆ.

  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW