‘ಹೇಗೆಲ್ಲ ಆಗುತ್ತದೆ’ ಕೃತಿ ಪರಿಚಯ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿಗಳಾದ ತಮ್ಮಣ್ಣ ಬೀಗಾರ ಅವರ ‘ಹೇಗೆಲ್ಲ ಆಗುತ್ತದೆ’ ಕೃತಿ ಪರಿಚಯ, ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಹೇಗೆಲ್ಲ ಆಗುತ್ತದೆ…
ಲೇಖಕರು: ತಮ್ಮಣ್ಣ ಬೀಗಾರ 
ಅಭಿನವ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨೦೨೫
ಪುಟಗಳು: ೨೪
ಬೆಲೆ: ರೂ. ೪೦

ಶಿಶುಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿಗಳಾದ ಶ್ರೀಯುತ ತಮ್ಮಣ್ಣ ಬೀಗಾರ ಅವರ ಈ ಪುಸ್ತಕವು ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದೆ. ಮಕ್ಕಳ ದಿನಾಚರಣೆಯ ಈ ದಿನದಂದು ನನ್ನ ಓದಿಗೆ ಸಿಕ್ಕ ಈ ಪುಟ್ಟ ಪುಸ್ತಕವನ್ನು ಪರಿಚಯಿಸ ಬೇಕೆನಿಸಿತು.

ರವಿ ಆರನೇ ತರಗತಿಯಲ್ಲಿ ಓದುವ ಪುಟ್ಟ ಹುಡುಗ. ಒಮ್ಮೊಮ್ಮೆ ಅವನು ಏನೋ ಮಾಡಲು ಹೋಗಿ ಏನೇನೋ ಆಗಿ ಬಿಡುತ್ತಿತ್ತು. ಹಾಗಾಗಿ ಎಲ್ಲರಿಂದಲೂ ಬೈಸಿ ಕೊಳ್ಳುವ ಪರಿಸ್ಥಿತಿ.ಕೆಲಸಕ್ಕೆ ಹೋಗುವ ಅಮ್ಮ, ಸಿಡುಕುವ ಅಪ್ಪ , ಶಾಲೆಯಲ್ಲಿ ಮಾಸ್ತರು ಹೇಳಿದ ಪಾಠವೂ ಅವನ ತಲೆಗೆ ಹೋಗುತ್ತಿರಲಿಲ್ಲ. ತರಗತಿಯಲ್ಲಿ ಕಲಾಕೃತಿಯೊಂದನ್ನು ಮಾಡಿತರಲು ಹೇಳಿದಾಗ ಅವನು ರಟ್ಟಿನ ಮೇಲೆ ಒಣ ಎಲೆಯ ಬದಲಿಗೆ ಹಸಿಎಲೆಯನ್ನು ಅಂಟಿಸಿ, ಅದು ಮುರುಟಿ ಹೋಗಿತ್ತು.

ಏನೂ ಮಾಡಲು ತೋಚದೇ ಶಾಲೆಯಲ್ಲಿ ಸಹಪಾಠಿಗಳು ಮಾಡಿದ ಕಲಾಕೃತಿಯನ್ನು ನೋಡಿ ಪರೀಕ್ಷಿಸುತ್ತಾ, ಗೊತ್ತಿಲ್ಲದೇ ಅದನ್ನು ಹಾಳು ಮಾಡಿ ಕೊನೆಗೆ ಮತ್ತೆ ಬೈಸಿಕೊಂಡು ಅವಮಾನಿತನಾಗಿದ್ದ. ಹೀಗೇ ಕೆಟ್ಟದ್ದು ಮಾಡುವ ಯಾವ ಆಲೋಚನೆ ಅವನಿಗಿಲ್ಲದೇ ಇದ್ದರೂ…. ಏನೇನೋ ಆಗಿ ಬಿಡುತ್ತಿತ್ತು.

ಅಜ್ಜನ ಮನೆಯಲ್ಲಿ ಮಾವನ ಮದುವೆಗೆಂದು ಹೋಗಿದ್ದ ಅವನು ನಾಲ್ಕುದಿನ ಶಾಲೆಗೆ ಗೈರಾಗಿದ್ದ.ಪಾಠಗಳು ತಪ್ಪಿ ನೋಟ್ಸ್ ಬರೆದು ಕೊಳ್ಳಲು ಕೇಳಿದಾಗ ಯಾರೂ ಅವನಿಗೆ ಕೊಡಲೊಪ್ಪಲಿಲ್ಲ. ಕಾರಣ ಗೊತ್ತಲ್ಲ?. ಆಗ ರವಿ ಮಾಡಿದ್ದೇನು?.

ಪರಿಸರದ ಪಾಠ ಮಾಡುವಾಗ ಮಾಸ್ತರು ಪ್ರಾಣಿಗಳ ಬಗ್ಗೆ ಹೇಳಿದ್ದರು. ಮರುದಿನ ರವಿ ತನ್ನ ಮನೆಯಲ್ಲಿದ್ದ ಬೆಣ್ಣೆ ಮುದ್ದೆಯಂತ ಬಿಳಿಯ ನಾಯಿಮರಿಯನ್ನು ತಂದು ಶಾಲೆಯ ಹಿಂದೆ ನಿಲ್ಲಿಸಿದ ಸರ್ ಕಾರಿನಲ್ಲಿ ಕೂಡ್ರಿಸಿ ಬಂದಿದ್ದ. ಅದು ಅಲ್ಲಿ ಹೊಲಸು ಮಾಡಿತ್ತು. ಅದನ್ನು ನೋಡಿ ಮುಖಕಿವುಚಿದರೂ…. ಸರ್ ಅವನಿಗೆ ‘ಗುಡ್ ಗುಡ್ ಎಂದಿದ್ದು ಯಾಕೆ?.

ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾದದ್ದು. ಅದನ್ನು ಅರಿಯದೇ ನಾವು ಸುಮ್ಮನೇ ಕೋಪ, ಅಪಹಾಸ್ಯ ಮಾಡಿ ಆ ಮಗುವಿನ ಮನಸ್ಸನ್ನು ಗಾಯ ಮಾಡಬಾರದು. ಎನ್ನುವ ನೀತಿಯನ್ನು ಸಾರುವ ಈ ಕಥೆಯನ್ನು ಸರಳವಾದ ಭಾಷೆಯಲ್ಲಿ ಲೇಖಕರು ಬಹಳ ಚೆನ್ನಾಗಿ ರಚಿಸಿದ್ದಾರೆ.

ಶ್ರೀ ಸಂತೋಷ್ ಸಸಿಹಿತ್ಲು ಅವರು ಚಿತ್ರಿಸಿದ ಮುಖಪುಟದ ಬಣ್ಣದ ಚಿತ್ರ ಹಾಗೂ ಒಳಪುಟದ ಕಣ್ಸೆಳೆವ ಇನ್ನಷ್ಟು ಚಿತ್ರಗಳು ಚಿಣ್ಣರಿಗೆ ಇಷ್ಟವಾಗುವಂತಿದೆ ಮತ್ತು ಪುಸ್ತಕದ ಮೆರಗನ್ನು ಹೆಚ್ಚಿಸಿದೆ. ನಿಮ್ಮ ಮನೆಯ ಪುಟಾಣಿ ಮಕ್ಕಳಿಗೆ ಕಥೆ ಹೇಳಲು ಖಂಡಿತಾ ಇದನ್ನೊಮ್ಮೆ ಓದಿ ನೋಡಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW