ಕೋಳಿಗಳಲ್ಲಿ ಹಾರ್ಮೋನು : ಮನುಷ್ಯರ ಆರೋಗ್ಯಕ್ಕೆ ಹಾನಿಕರಕೋಳಿಗಳಲ್ಲಿ ಹಾರ್ಮೋನು ಬಳಕೆಯಿಂದ ಮನುಷ್ಯರ ಆರೋಗ್ಯಕ್ಕೆ ಹಾನಿಕರ ಎಂಬ ಮಿಥ್ಯದ ಕುರಿತು ಖ್ಯಾತ ಪಶುವೈದ್ಯರಾದ ಡಾ.ಎನ್.ಬಿ. ಶ್ರೀಧರ ಅವರು ಮಾಹಿತಿಯೊಂದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಕೋಳಿಗಳಿಗೆ ಹಾರ್ಮೋನು ಚುಚ್ಚಿ ಅವುಗಳನ್ನು 4-6 ವಾರಕ್ಕೆ ವೇಗವಾಗಿ ಬೆಳೆಯುವಂತೆ ಮಾಡ್ತಾರೆ.. ಜಾಸ್ತಿ ತತ್ತಿ ಪಡೆಯಲು ಔಷಧ ಚುಚ್ಚಿ ಅದರ ಅಂಶವೆಲ್ಲಾ ತತ್ತಿಯಲ್ಲಿ ಬಂದು ತತ್ತಿ ತಿಂದಲ್ಲಿ ಅದರ ವಿಷವೆಲ್ಲಾ ಮನುಷ್ಯನ ದೇಹ ಸೇರುತ್ತದಂತೆ.. ಅದರಲ್ಲಿಯೂ ಸಹ ದೇಹದ ಬೆಳವಣಿಗೆ ಹೆಚ್ಚಿಸಲು “ಗ್ರೋಥ್ ಹಾರ್ಮೋನು” ಚುಚ್ಚಿ ಮನುಷ್ಯರಿಗೆ ಅಪಾಯವಾಗುವ ಹಾಗೇ ಮಾಡುತ್ತಾರೆ. ಹಾರ್ಮೋನು ಕೊಟ್ಟಾಗ ಪಕ್ಷಿ ವೇಗವಾಗಿ ಬೆಳೆಯುತ್ತದೆ. ಅದಕ್ಕೆ ಆಗ ಭಾರಿ ಕಾಯಿಲೆಗಳು ಬರುತ್ತವೆ. ಅವುಗಳನ್ನು ನಿಯಂತ್ರಿಸಲು ಜೀವನಿರೋಧಕ ಕೊಡುತ್ತಾರೆ. ಈ ಎರಡೂ ಮಾರಕ ಅಂಶಗಳು ಮನುಷ್ಯನ ದೇಹ ಸೇರಿ ಅವನ ಆರೋಗ್ಯವನ್ನೇ ಕೆಡಿಸುತ್ತವೆ. ಇದರಿಂದ ಬಹು ಜೀವನಿರೋಧಕಗಳಿಗೆ ನಿರೋಧಕತೆ ಬರುತ್ತದೆ. ಜಾಸ್ತಿ ದುಡ್ಡು ಮಾಡಲು ಕೋಳಿ ಸಾಕಣೆಗಾರರು ಮಾಡುವ ಷಡ್ಯಂತ್ರದ ಒಂದು ಭಾಗ ಎನ್ನುತ್ತಾರೆ ಅವರು. ವಿದ್ಯಾವಂತರೆನಿಸಿದ, ದೊಡ್ಡ ದೊಡ್ಡ ಬಿರುದು ಬಾವಲಿಗಳನ್ನು ಗಳಿಸಿದಂತ ಡಾ. ಬಿ.ಎಂ.ಹೆಗಡೆಯರ0ತ ಮೇಧಾವಿಗಳೆಲ್ಲ ಸೇರಿ ಸಾಮಾನ್ಯ ಜನರ ತಲೆಯಲ್ಲಿ ತುಂಬಿದ ಮಿಥ್ಯಗಳು.

ಹಾಗಿದ್ದರೆ ಏನು ಸತ್ಯ?

ನಿಜ. ವ್ಯಾಪಾರವೆಂದರೆ ದುಡ್ಡು ಮಾಡುವುದಕ್ಕೆ. ದುಡ್ಡು ಮನುಷ್ಯನ ಜೀವನಕ್ಕೆ ಬೇಕು. ವಿಜ್ಞಾನದ ಯಾವುದೇ ಆವಿಷ್ಕಾರಗಳು ಮನುಷ್ಯನ ಉದ್ಧಾರಕ್ಕೆ ಹೊರತು ಅವು ಪರಿಸ್ನೇಹಿಯಾಗಿದ್ದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲರೂ ಮೋಸವನ್ನೇ ಮಾಡುತ್ತಾರೆ ಎಂಬ ನಂಬಿಕೆ ತಪುö್ಪ ಮತ್ತು ಅಪಾಯಕಾರಿ. ಕೋಳಿಗಳಿಗೆ ಅನೇಕ ಔಷಧಿಗಳನ್ನು ಅವುಗಳ ಬೆಳವಣಿಗೆ ಹಂತದಿ0ದ ಹಿಡಿದು ಮಾಂಸ ಅಥವಾ ಮೊಟ್ಟೆ ನೀಡುವುದನ್ನು ನಿಲ್ಲಿಸುವವರೆಗೂ ನೀಡುವುದು ಈ ಉಧ್ಯಮದಲ್ಲಿ ಬಹಳ ಸಾಮಾನ್ಯ. ಹಾಗೆಂದ ಮಾತ್ರ ಅವುಗಳಿಗೆ ನೀಡಿದ ಔಷಧಿಗಳೆಲ್ಲಾ ಮೊಟ್ಟೆಯಲ್ಲಿ ಮತ್ತು ಮಾಂಸದಲ್ಲಿ ಬಂದು ಬಿಡುತ್ತವೆ ಎಂಬುದೂ ಸಹ ಅಷ್ಟೇ ಮಿಥ್ಯ.

ಫೋಟೋ ಕೃಪೆ : google

ಕೋಳಿಗಳಲ್ಲಿ ಎರಡು ವಿಧ. ಮಾಂಸದ ಕೋಳಿ (ಬ್ರಾಯ್ಲರ್) ಮತ್ತು ಮೊಟ್ಟೆ ಕೋಳಿ (ಲೇಯರ್). ಮಾಂಸದ ಕೋಳಿಯನ್ನು 5-7 ವಾರ ಬೆಳೆಸಿ ಸುಮಾರು 1.8-2.2 ಕಿಲೊ ತೂಕ ಬಂದೊಡನೆ ಮಾರಿ ಬಿಡಲಾಗುತ್ತದೆ. ಮೊಟ್ಟೆ ನೀಡುವ ಕೋಳಿಗಳು 17-18 ನೇ ವಾರದಲ್ಲಿ ಮೊಟ್ಟೆ ಇಡಲು ಪ್ರಾರಂಭಿಸಿ ಸುಮಾರು 72-78 ವಾರದ ವರೆಗೂ ಸಾಕಲ್ಪಟ್ಟು ನಂತರ ಮಾಂಸಕ್ಕಾಗಿ ಉಪಯೋಗಿಸಲ್ಪಡುತ್ತವೆ.

ಮಿಥ್ಯ 1 : ಕೋಳಿಗೆ ಬೆಳವಣಿಗೆ ವೇಗವಾಗಿ ಬರಲು ಬೆಳವಣಿಗೆಯ ಹಾರ್ಮೋನು (“ಗ್ರೋತ್ ಹಾರ್ಮೋನ್”) ನೀಡುತ್ತಾರೆ.

ಇದು ಶುದ್ಧ ಅಸತ್ಯ. ಮಾಂಸದ ಕೋಳಿಗಳು ವೇಗವಾಗಿ ಬೆಳೆಯಲು ಉತ್ತಮ ಪೌಷ್ಟಿಕ ಆಹಾರ, ಪ್ರೊಬಯೋಟಿಕ್ಸ್ ಮತ್ತು ಕೆಲವೊಮ್ಮೆ ಜೀವನಿರೋಧಕಗಳನ್ನು ನೀಡುತ್ತಾರೆ. ಬೆಳವಣಿಗೆಯ ಹಾರ್ಮೋನು ನೀಡುವುದರಿಂದ ಬೆಳವಣಿಗೆ ಬರುವುದಿಲ್ಲ. ಹಾರ್ಮೋನು ನೀಡುವುದು ಅತ್ಯಂತ ದುಬಾರಿ. ಬೆಳವಣಿಗೆಯ ಹಾರ್ಮೋನನ್ನು ಸಹಸ್ರಾರು ಕೋಳಿಗಳಿಗೆ ನೀಡುವುದು ಕುಕ್ಕುಟ ಉಧ್ಯಮದಲ್ಲಿ ಕಷ್ಟಸಾಧ್ಯ ವಿಚಾರ. ಬೆಳವಣಿಗೆಯ ಹಾರ್ಮೋನು ಬಾಯಿಯ ಮೂಲಕ ನೀಡಿದಾಗ ಯಾವುದೇ ಕಾರಣಕ್ಕೂ ದೇಹಕ್ಕೆ ಸೇರುವುದಿಲ್ಲ. ದೇಹಕ್ಕೇ ಸೇರದ ಮೇಲೆ ಮಾಂಸದಲ್ಲಾಗಲಿ ಅಥವಾ ಮೊಟ್ಟೆಯಲ್ಲಾಗಲಿ ಬರುವ ಸಾಧ್ಯತೆಯೇ ಇಲ್ಲ. ಕಾರಣ ಇವುಗಳಿಂದ ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೇ ಇಲ್ಲ.

ಫೋಟೋ ಕೃಪೆ : indiamart

ಮಿಥ್ಯ 2 : ಔಷಧಿಗಳ ಪಳಿಯುಳಿಕೆಗಳು ಮೊಟ್ಟೆ/ಮಾಂಸದಲ್ಲಿ ಉಳಿದು ಮನುಷ್ಯರಲ್ಲಿ ತೊಂದರೆಯನ್ನುಂಟು ಮಾಡುತ್ತವೆ.

ಇದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಸತ್ಯವಲ್ಲ. ಮೊಟ್ಟೆ ಕೋಳಿಗಳಿಗೆ ವೇಗದ ಬೆಳವಣಿಗೆ ಅವಶ್ಯಕತೆ ಇಲ್ಲ. ಅವು ಮೊಟ್ಟೆ ಇಡಲು ಅವಶ್ಯಕತೆ ಇದ್ದಷ್ಟು ಆಹಾರ ನೀಡಲಾಗುತ್ತದೆ. ಅವು ಯಾವುದೇ ಆಹಾರ, ಔಷಧಿ ನೀಡಿದರೂ ಒಮ್ಮೆಯೇ ಎರಡು ಮೊಟ್ಟೆ ನೀಡುವುದಿಲ್ಲ ಅಥವಾ ಜಾಸ್ತಿ ಮೊಟ್ಟೆ ಇಡುವುದಿಲ್ಲ. ಮೊಟ್ಟೆಗಳಲ್ಲಿ ಒಂದೊಮ್ಮೆ ಔಷಧ ಇದ್ದರೂ ಸಹ ಅದರ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ವಿಶ್ವಮಟ್ಟದಲ್ಲಿ ನಿಗದಿಪಡಿಸಿದ ಪ್ರತಿ ದಿನ ಸೇವನೆಯ ಮಿತಿಯಲ್ಲಿಯೇ ಇರುತ್ತದೆ. ಮೊಟ್ಟೆಯನ್ನು ಬೇಯಿಸಿದಲ್ಲಿ ಅದು ಹೊರಟು ಹೋಗುತ್ತದೆ ಇಲ್ಲವೇ ಜಠರದ ಆಮ್ಲತೆಯಲ್ಲಿ ನಿಷ್ಕಿçಯಗೊಳ್ಳುತ್ತದೆ. ಕಾರಣ ಇದು ಮನುಷ್ಯರಿಗೆ ಅಪಾಯ ತಂದ ಯಾವ ನಿದರ್ಶನಗಳೂ ಇಲ್ಲ.

ಕಾರಣ ಈ ರೀತಿಯ ಸುದ್ಧಿಗಳನ್ನು ನಂಬದೇ ವೈಜ್ಞಾನಿಕ ಆಧಾರದಲ್ಲಿ ಎಲ್ಲವನ್ನು ಪರಾಂಭರಿಸಿ ನೋಡುವುದು ಒಳ್ಳೆಯದು.


  • ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ ಮತ್ತು ವಿಷಶಾಸ್ತ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW