ತಲೆತಲೆಮಾರಿನವರೆಗೂ ಕಾಡಿದ ಹಿರೋಶಿಮಾ ನಾಗಸಾಕಿಯ ಭೀಕರ ದಾಳಿ, ಇದೊಂದು ಮನುಕುಲಕ್ಕೆ ಅಂಟಿದ ಕಳಂಕದ ರಕ್ತದೋಕುಳಿ. ಆದಿತ್ಯ .ಜಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಾನವನು ಏಕಚಕ್ರಾಧಿಪತ್ಯವನ್ನು ಸ್ಥಾಪಿಸಲು ಅನೇಕ ಕಸರತ್ತುಗಳನ್ನು ಮಾಡಿದ್ದಾನೆ, ವಿಕಸನವಾದ ತರುವಾಯ ಒಮ್ಮಿಂದೊಮ್ಮೆಲೆ ತನ್ನ ಅಧಿಕಾರಶಾಹಿತನವನ್ನು ಬಿತ್ತಲು ಸಾಮ್ರಾಜ್ಯವನ್ನೇ ಸ್ಥಾಪಿಸಿರುವ ಇತಿಹಾಸ ನಮ್ಮೆಲ್ಲರಿಗೂ ಸಹ ತಿಳಿದಿರುವ ಸಂಗತಿ.ವಿಶ್ವಯುದ್ಧದ ಕಲೆಗಳು ಇನ್ನೂ ಆರಿಲ್ಲ. ಇದರೊಟ್ಟಿಗೆ ಪ್ರಕೃತಿಯು ಕುಪಿತಗೊಂಡು ಆರ್ಭಟಿಸಿದ ನಿದರ್ಶನಗಳಿಂದ ಅದೆಷ್ಟೋ ನಾಗರೀಕತೆಯ ಕುರುಹುಗಳೇ ಹಿಂದೆ ಇತ್ತು ಎನ್ನುವುದು ಮರೆತಂತಾಗಿತ್ತು ಮೆಸೋಪೊಟೋಮಿಯಾ, ಹರಪ್ಪಾ ಮೊಹೆಂಜೋದಾರೋವಿನ ಭವ್ಯ ಇತಿಹಾಸ ಹಾಗೂ ಪರಂಪರೆಗಳು ಭೂಗರ್ಭದಲ್ಲಿ ಅಡಗಿ ಕುಳಿತಿತ್ತು . ಅಷ್ಟೇ ಅಲ್ಲದೇ ದ್ವಾರಕಾ ನಗರದ ಕುರುಹುಗಳು ಸಮುದ್ರದಡಿಯಲ್ಲಿ ಪತ್ತೆಯಾಗಿತ್ತು.

ಇವೆಲ್ಲವೂ ಪ್ರಕೃತಿ ಸಮತೋಲನವನ್ನು ಕಾಪಾಡಿಕೊಳ್ಳಲು ಮಾಡಿರಬಹುದೇನೋ ಎಂದು ಸಮಾಧಾನ ಪಡೆಸಿಕೊಳ್ಳಬಹುದು ಆದರೂ. ಹಿರೋಶಿಮಾ ನಾಗಸಾಕಿಯ ದಾಳಿಗಳು ಮನವಕುಲಕ್ಕೆ ಕಂಟಕ ಪ್ರಾಯವಾಗಿ ಕಂಡಿದ್ದು ಲಿಟ್ಲ್ ಬಾಯ್ ಎಂಬ ಬಾಂಬಿನ ಭೀಕರ ದಾಳಿಯಿಂದ ಮೊದಲಿಗೆ ಹಿರೋಶಿಮಾ ನಗರದಲ್ಲಿ ಸರಿಸುಮಾರು 80,000 ಜನರು ಭೀಕರವಾಗಿ ಮೃತಪಟ್ಟರು ಈ ಬಾಂಬಿನ ದಾಳಿಯನ್ನು ನಡೆಸಿದ ಪಡೆಯ ಹೆಸರು B-29 .
ಇದಾದ ಮೂರೇ ದಿವಸಕ್ಕೆ ಇದೇ ಮಾದರಿಯ ದಾಳಿಯನ್ನು ನಡೆಸಿದ ಪಡೆಯು ನಾಗಸಾಕಿಗೂ ಇಂತಹ ಕ್ಷುದ್ರ ಪ್ರಯೋಗವನ್ನು ನಡೆಸಿ 40,000 ಜನರನ್ನು ಬಾಂಬಿಗೆ ಆಹುತಿಯನ್ನು ನೀಡಿ ಬಿಟ್ಟರು. ಈ ದಾಳಿಯು ದಾಳಿಗೊಳಪಟ್ಟ ತಲೆಮಾರನ್ನು ಹಿಡಿದು ಮುಂದಿನ ತಲೆಮಾರಿಗೂ ಆ ಪರಮಾಣುವಿನಿಂದ ಸ್ಫೋಟಕ್ಕೊಳಪಟ್ಟು ಉಂಟಾದ ತರಂಗಗಳಿಂದ ವಂಶವಾಹಿನಿಗಳಿಗೂ ಕುಬ್ಜತೆಯನ್ನು ತರಿಸಿ ಬಿಟ್ಟಿತು. ಅಂಗವಿಕಲತೆಯನ್ನು ಕಾಡತೊಡಗಿಬಿಟ್ಟಿತು.

ಪರಮಾಣು ಬಾಂಬ್ , ಶಕ್ತಿಯ ಹಠಾತ್ ಬಿಡುಗಡೆಯಿಂದ ಉಂಟಾಗುವ ದೊಡ್ಡ ಸ್ಫೋಟಕ ಶಕ್ತಿಯನ್ನು ಹೊಂದಿರುವ ಆಯುಧಒಂದು ಭಾರವಾದ ಅಂಶದ ನ್ಯೂಕ್ಲಿಯಸ್‌ಗಳ ವಿಭಜನೆ , ಅಥವಾ ವಿದಳನಪ್ಲುಟೋನಿಯಂ ಅಥವಾಯುರೇನಿಯಂ .
ನ್ಯೂಟ್ರಾನ್ ಐಸೊಟೋಪ್ಗಳ ಪರಮಾಣುವಿನ ನ್ಯೂಕ್ಲಿಯಸ್ ಅನ್ನು ಹೊಡೆದಾಗ ಯುರೇನಿಯಂ-235 ಅಥವಾ ಪ್ಲುಟೋನಿಯಮ್-239 , ಇದು ನ್ಯೂಕ್ಲಿಯಸ್ ಅನ್ನು ಎರಡು ತುಣುಕುಗಳಾಗಿ ವಿಭಜಿಸಲು ಕಾರಣವಾಗುತ್ತದೆ, ಪ್ರತಿಯೊಂದೂ ಮೂಲ ನ್ಯೂಕ್ಲಿಯಸ್‌ನ ಅರ್ಧದಷ್ಟು ಪ್ರೋಟಾನ್‌ಗಳು ಮತ್ತು ನ್ಯೂಟ್ರಾನ್‌ಗಳನ್ನು ಹೊಂದಿರುವ ನ್ಯೂಕ್ಲಿಯಸ್ ಆಗಿದೆ. ವಿಭಜನೆಯ ಪ್ರಕ್ರಿಯೆಯಲ್ಲಿ, ಒಂದು ದೊಡ್ಡ ಮೊತ್ತಉಷ್ಣ ಶಕ್ತಿ , ಹಾಗೆಯೇಗಾಮಾ ಕಿರಣಗಳು ಮತ್ತು ಎರಡು ಅಥವಾ ಹೆಚ್ಚಿನ ನ್ಯೂಟ್ರಾನ್‌ಗಳು ಬಿಡುಗಡೆಯಾಗುತ್ತವೆ. ಕೆಲವು ಪರಿಸ್ಥಿತಿಗಳಲ್ಲಿ, ತಪ್ಪಿಸಿಕೊಳ್ಳುವ ನ್ಯೂಟ್ರಾನ್‌ಗಳು ಮುಷ್ಕರ ಮಾಡುತ್ತವೆ ಮತ್ತು ಆದ್ದರಿಂದ ಸುತ್ತಮುತ್ತಲಿನ ಯುರೇನಿಯಂ ನ್ಯೂಕ್ಲಿಯಸ್‌ಗಳನ್ನು ವಿದಳನಗೊಳಿಸುತ್ತವೆ, ನಂತರ ಅದು ಹೆಚ್ಚು ನ್ಯೂಟ್ರಾನ್‌ಗಳನ್ನು ಹೊರಸೂಸುತ್ತದೆ , ಅದು ಇನ್ನೂ ಹೆಚ್ಚಿನ ನ್ಯೂಕ್ಲಿಯಸ್‌ಗಳನ್ನು ವಿಭಜಿಸುತ್ತದೆ. ವೇಗವಾಗಿ ಗುಣಿಸುವ ವಿದಳನಗಳ ಸರಣಿಯು ಸರಪಳಿ ಕ್ರಿಯೆಯಲ್ಲಿ ಅಂತ್ಯಗೊಳ್ಳುತ್ತದೆ , ಇದರಲ್ಲಿ ಬಹುತೇಕ ಎಲ್ಲಾ ವಿದಳನ ವಸ್ತುಗಳನ್ನು ಸೇವಿಸಲಾಗುತ್ತದೆ, ಈ ಪ್ರಕ್ರಿಯೆಯಲ್ಲಿ ಪರಮಾಣು ಬಾಂಬ್ ಎಂದು ಕರೆಯಲ್ಪಡುವ ಸ್ಫೋಟವನ್ನು ಉತ್ಪಾದಿಸುತ್ತದೆ.

ಅಂದಾಜಿನ ಪ್ರಕಾರ ಆರಂಭಿಕ ಸ್ಫೋಟ, ಶಾಖ ಮತ್ತು ವಿಕಿರಣ ಪರಿಣಾಮಗಳ ಪರಿಣಾಮವಾಗಿ ಸುಮಾರು 70 ಸಾವಿರ ಜನ ಮರಣ ಹೊಂದಿದರು. 1945ರ ಅಂತ್ಯದ ವೇಳೆಗೆ ವಿಕಿರಣಗಳು ಮತ್ತು ಇತರ ದೀರ್ಘಕಾಲದ ಪರಿಣಾಮಗಳಿಂದಾಗಿ, ಹಿರೋಶಿಮಾ ಸಾವಿನ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚಿತ್ತು. ಐದು ವರ್ಷಗಳ ಸಾವಿನ ಒಟ್ಟು ಮೊತ್ತ 2 ಲಕ್ಷ ಮೀರಿರಬಹುದು ಎಂದು ಅಂದಾಜಿಸಲಾಗಿದೆ. ಕ್ಯಾನ್ಸರ್ ಮತ್ತು ಇತರ ವಿಕಿರಣಶೀಲ ರೋಗಗಳ ದೀರ್ಘಾವಧಿಯ ಪರಿಣಾಮಗಳು ಕೂಡಾ ಇದುವರೆಗೂ ಮುಂದುವರಿಯುತ್ತಿದೆ.
ಚಕ್ರವರ್ತಿ ಹಿರೋಹಿಟೊ ಮಿತ್ರರಾಷ್ಟ್ರಗಳಿಗೆ ಶರಣಾಗುವ ಮೂಲಕ ಆಗಸ್ಟ್ 15, 1945 ರಂದು ಎರಡನೇ ಮಹಾಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಿದರು.
ಇಂತಹ ಘನಘೋರ ರಕ್ಕಸ ದಾಳಿಯು ನಿಲ್ಲಬೇಕಿತ್ತು ಅಲ್ಲಿನ ಅದೆಷ್ಟೋ ಜೀವರಾಶಿಗಳಿಗೆ ಈ ಹಾನಿಯಿಂದ ಚೇತರಿಸಿಕೊಳ್ಳುವುದಕ್ಕೆ ಅದೆಷ್ಟೋ ವರ್ಷಗಳೇ ..
- ಆದಿತ್ಯ .ಜಿ.ಮೈಸೂರು
