ಎಚ್ ಎಸ್ ವಿಯವರಿಗೆ ಕಾವ್ಯ ನಮನಗಳು…

‘ಗರ್ವವಿಲ್ಲದೆ ಸರ್ವರೆದೆಯೊಳು ನಿಂತ ನಮ್ಮಯ ಗುರುವಿಗೆ ಗರ್ವದಿಂದಲಿ ನಮಿಸುತಿರುವೆವು ಸೇರಿ ಸರಸತಿ ಮಡಿಲಿಗೆ’ … ಖ್ಯಾತ ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿಯವರಿಗೆ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರಿಂದ ಗೌರವ ಕಾವ್ಯ ನಮನಗಳು…

ಬುವಿಯ ಪಯಣವ ಮುಗಿಸಿ ಹೋದರು
ಜ್ಞಾನವೆರಯುತ ನಾಡಿಗೆ
ಕವಿಯ ಭಾವದೊಳೆಲ್ಲ ಬರೆಯುತ
ನೀಡಿ ಪದಗಳ ಗೀತೆಗೆ

ಕಾವ್ಯದಂಗಳದಲ್ಲಿ ನೆಟ್ಟರು
ಕಂಪು ಸ್ಫುರಿಸುವ ಮಲ್ಲಿಗೆ
ನವ್ಯ ನವೋದಯ ಭಾವಗೀತೆಯ
ಬರೆದು ತೋರುತ ಮೆಲ್ಲಗೆ

ಬರೆದ ಕಾವ್ಯಗಳೆಲ್ಲಿ ಸತ್ವವು
ಮೇರು ಗಿರಿಗೂ ಎತ್ತರ
ಬರಹದಿಂದಲೆ ಕನ್ನಡಾಂಬೆಯ
ಪಾದ ಪದ್ಮಕೆ ನೂಪುರ

ಗರ್ವವಿಲ್ಲದೆ ಸರ್ವರೆದೆಯೊಳು
ನಿಂತ ನಮ್ಮಯ ಗುರುವಿಗೆ
ಗರ್ವದಿಂದಲಿ ನಮಿಸುತಿರುವೆವು
ಸೇರಿ ಸರಸತಿ ಮಡಿಲಿಗೆ.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading