‘ಎವಿಡೆನ್ಸ್ ನಂಬರ್ 5/A’ ಕೃತಿ ಪರಿಚಯ

ಸೂರ್ಯ ಶೋಭಿತೆ ಅವರು ಹೆಚ್ ವಿ ಮೀನಾ ಅವರ ಪತ್ತೇದಾರಿ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಎವಿಡೆನ್ಸ್ ನಂಬರ್ 5/A
ಲೇಖಕರು : ಹೆಚ್ ವಿ ಮೀನಾ
ಪ್ರಕಾರ : ಪತ್ತೇದಾರಿ

ಬೆಲೆ : ೨೦೦.೦೦
ಪ್ರಕಾಶಕರು : ಸೆಂಚುರಿ ಪ್ರಕಾಶನ
ಖರೀದಿಗಾಗಿ : 97311 11234

ಹೊಸ ಓದುಗರನ್ನು ತನ್ನತ್ತ ಸೆಳೆಯುವ ಶಕ್ತಿ ಇರುವ ಕಾದಂಬರಿ ಪ್ರಕಾರವೆಂದರೆ ಅದು ಪತ್ತೇದಾರಿ ಕಾದಂಬರಿ. ಕನ್ನಡದಲ್ಲಿ ಮೊದಲಿಗೆ ಎನ್. ನರಸಿಂಹಯ್ಯನವರು, ಓದುಗರಿಗೆ ಪತ್ತೇದಾರಿ ಕಾದಂಬರಿಗಳ ರುಚಿ ಹತ್ತಿಸಿದರು. ಎಚ್.ಕೆ. ಅನಂತರಾವ್ ಕಾದಂಬರಿಗಳು ಸಿನಿಮಾ ಆದವು. ಬಿ ವಿ ಅನಂತರಾಮ್ ನನ್ನ All time favorite. ಸುದರ್ಶನ ದೇಸಾಯಿ ನಮ್ಮ ಕಡೆಯವರೇ. ಹೀಗೆ ಕೆಲವು ಲೇಖಕರು ಪತ್ತೇದಾರಿ ಕಾದಂಬರಿಗಳ ಹುಚ್ಚು ಹತ್ತಿಸಿದವರು. ಒಂದಂತೂ ಸ್ಪಷ್ಟ ..ಪತ್ತೇದಾರಿ ಕಾದಂಬರಿ ಬರೆಯಲು ಹತ್ತು ಹಲವು ಮಾಹಿತಿ , ಜ್ಞಾನದ ಅರಿವಿರಬೇಕು. ಕಲ್ಪನಾ ಸಾಮರ್ಥ್ಯವು ಸಮೃದ್ಧವಾಗಿರಬೇಕು. ಮುಂದೆ ಏನಾಗುತ್ತದೋ…ಎಂಬ ಕುತೂಹಲ ಓದುಗನನ್ನು ಟೆನ್ಸ್ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಪತ್ತೇದಾರಿ ಕಾದಂಬರಿಗಳಿಗೆ ವಿಶೇಷ ಸ್ಥಾನ ಮತ್ತು ವಿಶೇಷ ಓದುಗರಿರುವುದಂತೂ ಖರೇ. ಆ ನಿಟ್ಟಿನಲ್ಲಿ ನಾನು ಇತ್ತೀಚೆಗೆ ಓದಿದ ಹೆಚ್.ವಿ.ಮೀನ ಅವರು ಬರೆದ ಪತ್ತೇದಾರಿ ಕಾದಂಬರಿ ಪುಸ್ತಕ *ಎವಿಡೆನ್ಸ್ ನಂ – 5/A . ನಿಗೂಢತೆಯನ್ನು ಕಾಯ್ದುಕೊಳ್ಳುತ್ತಲೇ, ಬರಹದ ಕೊನೆಯವರೆಗೂ ಓದಿಸಿಕೊಳ್ಳುವ ಅನಿವಾರ್ಯತೆ ಇರುವ ಚಂದದ ಪತ್ತೇದಾರಿ ಕಾದಂಬರಿ.

 

ಈ ಕಾದಂಬರಿ ಚೆನ್ನಾಗಿದೆ ಎಂಬುದಕ್ಕೆ ನನ್ನ ಬಳಿಯೂ 5 ಎವಿಡೆನ್ಸ್ ಇವೆ.

೧. ಕಾದಂಬರಿಯ ನಿರೂಪಣೆ ಸರಳವಾಗಿದ್ದು ಓದಿಸಿಕೊಂಡು ಹೋಗುವ ಗುಣ ಹೊಂದಿರುವುದು.

2. ಕೊಲೆಗಳು ಮತ್ತು ಅದರ ರಹಸ್ಯಗಳನ್ನು ಪುಸ್ತಕದ ಕೊನೆಯವರೆಗೂ ನಿಗೂಢವಾಗಿ ಲೇಖಕಿ ಉಳಿಸಿಕೊಂಡು ಬಂದಿರುವುದು.

3. ಮಲೆನಾಡ ಪರಿಸರಗಳು, ಅಲ್ಲಿನ ಊರುಗಳ ಪರಿಚಯ , ಕಾಡು ಜಲಪಾತಗಳ ವರ್ಣನೆ ನಮ್ಮನ್ನು ತೀರ್ಥಹಳ್ಳಿಯ ಸುತ್ತಮುತ್ತ ಪ್ರವಾಸಕ್ಕೆ ಓಯ್ದಂತೆ ಭಾಸವಾಗಿಸುವುದು.

4. ಅನೇಕ ವಿಷಯಗಳ ಅಧ್ಯಯನ ಮತ್ತು ಮಾಹಿತಿಗಳನ್ನು , ನಮಗರಿವಿಲ್ಲದ ಎಷ್ಟೋ ಕಾನೂನಿನ ವಿಚಾರಗಳನ್ನು ಅರಿತುಕೊಂಡು ಬಳಸಿಕೊಂಡು ನಮಗೊಂದು ಜ್ಞಾನ ನೀಡುವಲ್ಲಿ ಕೃತಿ ಯಶಸ್ವಿಯಾಗಿರೋದು ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆ ನೀಡಿ ಪ್ರಸ್ತುತಕ್ಕೆ ಕೃತಿ ಕನ್ನಡಿ ಹಿಡಿದಿರುವುದು.

5. ಮುಖ್ಯವಾಗಿ ಈ ಕೃತಿ ಚೆನ್ನಾಗಿದೆ ಮತ್ತು ಓದಿಸಿಕೊಳ್ಳುವ ಜೊತೆಗೆ ಒಂದಷ್ಟು ಜ್ಞಾನವನ್ನೂ ಹಂಚುತ್ತದೆಂಬುದಕ್ಕೆ ಪಕ್ಕಾ ಎವಿಡೆನ್ಸ್ ಎಂದರೆ ಈಗಾಗಲೇ ಜಾಲತಾಣದಲ್ಲಿ ಹರಿದಾಡುತ್ತಿರುವ ಅನೇಕ ರಿವ್ಯೂಗಳು.

ನಾನು ಒಂದೇ ಒಂದು ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿದ ಪುಸ್ತಕ ಇದು. SI .ಸುರೇಶ್, ಕಾನಸ್ಟೇಬಲ್ ವೆಂಕಟಪ್ಪ, ಸುಧಾ, ಮಧುರ, ಬೂದು ಬಣ್ಣದ ಜಾಕೇಟ್ ತೊಟ್ಟ ವ್ಯಕ್ತಿ, ಫಾರೆಸ್ಟ್ ರೇಂಜರ್ ಆನಂದ್ ಮುಂತಾದ ಪಾತ್ರಗಳೆಲ್ಲ ನಮ್ಮ ಪರಿಚಿತ ವಲಯದ ವ್ಯಕ್ತಿಗಳಂತಾಗುವುದು ಲೇಖಕಿ ಸಾಧಿಸಿದ ಗೆಲುವು.

Totally It’s different and suspence thriller novel.

ನೀವು ಒಮ್ಮೆ ಓದಿ… ಇಲ್ಲವಾದರೆ ಒಂದು ರೋಚಕ ಕಥಾನಕದ ಮಜಾ ಕಳೆದುಕೊಳ್ಳುವಿರಿ….

ಕೃತಿ ಪರಿಚಯ :


  •  ಶೋಭಿತ. ಜಿ. ಎ.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW