ಹಲಸಿನ ಎಲೆಯನ್ನು ಕಷಾಯ ಮಾಡಿ ಸೇವಿಸುವುದರಿಂದ ಪಾರ್ಶ್ವವಾಯು ಬೇಗನೆ ಗುಣವಾಗುತ್ತದೆ, ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಲಸಿನ ಹಣ್ಣಿನ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಹಲಸು ಎಂದಾಕ್ಷಣ ನೆನಪಿಗೆ ಬರುವುದು ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣು. ಇದರ ಕಾಯಿ ಹಣ್ಣು ಬೀಜಗಳಲ್ಲಿ ವಿವಿಧ ಖಾದ್ಯ ಮಾಡಿ ತಿನ್ನುತ್ತೇವೆ. ಪಲ್ಯ, ಗೊಜ್ಜು, ಸಾಂಬಾರು, ಕಾಯಿರಸ, ಮಜ್ಜಿಗೆ ಹುಳಿ, ಬೋಂಡಾ, ಗೋಬಿ, ಹೋಳಿಗೆ, ಜಾಮ್, ಸುಟ್ಟೆವು, ಕಡುಬು, ಹಪ್ಪಳ, ಚಕ್ಕುಲಿ ಒಂದೇ ಎರಡೇ.
ಸಾಮಾನ್ಯವಾಗಿ ಮೇ, ಜೂನ್, ಜುಲೈ ಹೆಚ್ಚಾಗಿ ಕಾಣ ಸಿಗುವ ಅಪರೂಪಕ್ಕೆ ಬೇರೆ ಸಮಯದಲ್ಲೂ ಸಿಗುವ ಹಣ್ಣು. ಇದರ ಹೊರತಾಗಿ ಹಲಸು ಔಷಧೀಯ ಗುಣವನ್ನು ಹೊಂದಿದೆ. ಇದರ ಎಲೆ, ಬೇರು, ಚಕ್ಕೆ ಬೀಜ, ಹಣ್ಣು ಇವುಗಳು ಔಷಧಿಯಾಗಿ ಬಳಕೆಯಾಗುತ್ತದೆ.
- ಬೆಲ್ಲದೊಂದಿಗೆ ಹಣ್ಣನ್ನು ಸೇವಿಸುವುದರಿಂದ ಅಲ್ಸರ್ ಗುಣವಾಗುತ್ತದೆ.
- ಆಗಾಗ ಬೆಲ್ಲದ ಪಾಕದಲ್ಲಿ ಹಾಕಿದ ಹಣ್ಣನ್ನು ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ.
- ಹಣ್ಣಿನ ಜಾಮ್ ಮಾಡಿ ಪ್ರತಿದಿನ ತಿನ್ನುವುದರಿಂದ ಕಣ್ಣಿನ ಶಕ್ತಿ ಹೆಚ್ಚಿಸುತ್ತದೆ ಇರುಳುಗಣ್ಣು ಗುಣವಾಗುತ್ತದೆ.
- ಬೇಸಿಗೆಯಲ್ಲಿ ಯಥೇಚ್ಛವಾಗಿ ಹಣ್ಣು ತಿನ್ನುವುದರಿಂದ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
- ಹಲಸಿನ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಮುಪ್ಪು ಮುಂದೂಡುತ್ತದೆ.
- ಎಲೆಯನ್ನು ಕಷಾಯ ಮಾಡಿ ಸೇವಿಸುವುದರಿಂದ ಪಾರ್ಶ್ವವಾಯು ಬೇಗನೆ ಗುಣವಾಗುತ್ತದೆ.
- ನೀಟಾಗಿ ಜೋಡಿಸಿಟ್ಟ ಎಲೆಯ ಕೊಟ್ಟೆಯಲ್ಲಿ ಕಡುಬು ಮಾಡಿ ವರ್ಷಕ್ಕೊಮ್ಮೆಯಾದರೂ ಸೇವಿಸಬೇಕು ಎಂದು ಹಿರಿಯರು ಹೇಳುತ್ತಾರೆ.
- ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಮತ್ತು ಭೇದಿ ಎರಡು ಗುಣವಾಗುತ್ತದೆ.
- ಎಲೆಯ ಕಷಾಯವನ್ನು ಗಂಡುಷ ಅಂದರೆ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಗುಣ ವಾಗುತ್ತದೆ.
- ಹಲಸಿನ ಬೀಜ ದಿನನಿತ್ಯ ಸೇವನೆಯಿಂದ ವೀರ್ಯ ವೃದ್ಧಿ ಆಗುತ್ತದೆ.
- ಹಲಸಿನ ಮರದಲ್ಲಿ ಇರುವ ಬಂಜಳಿಕೆ ಹೆಣ್ಣು ಮಕ್ಕಳ ಬಂಜೆತನವನ್ನು ನಿವಾರಿಸಲು ತುಂಬಾ ಉಪಯುಕ್ತ ಮೆಡಿಸಿನ್ ತಯಾರಿಸುವ ವಿಧಾನ ದಲ್ಲಿ ಒಂದು.
- ಹಲಸು ಒಂದು ಘನ ಆಹಾರ ತಿಂದಿದ್ದು ಹೆಚ್ಚಾದರೆ ಅಜೀರ್ಣ. ಹಣ್ಣು ತಿಂದು ಕೊನೆಯ ತೊಳೆಯಲಿ ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ತಿನ್ನುವುದರಿಂದ ಈ ಅಜೀರ್ಣ ನಿವಾರಣೆ ಆಗುತ್ತದೆ.
- ಹೊಟ್ಟೆ ಹಸಿದಾಗ ಹಲಸು ತಿನ್ನುವುದು ಒಳ್ಳೆಯದು.
- ಸುಮನಾ ಮಳಲಗದ್ದೆ