ಜ್ಞಾನದ ಅರಿವು ಗುರು

ಜ್ಞಾನದ ಅರಿವನ್ನು ಬೆಳೆಸುವ
ಉತ್ತಮ ನುಡಿಯನ್ನು ಕಲಿಸುವ
ಒಳ್ಳೆಯ ವಿಚಾರಗಳನ್ನು ತಿಳಿಸುವ

ನನ್ನ ಗುರುವೃಂದದವರಿಗೆ ನಮನಗಳು. ಅವರ ಮೇಲಿದೆ ಅಭಿಮಾನ. ಹಾಗೂ ಸಮಾಜದಲ್ಲಿ ಗುರು ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಸಕಲ ಗುರುವಿಗೂ ನಮನಗಳು.

“ಗುರು” ಎನ್ನುವ ಪದವೇ ಮಹತ್ತರವಾದದ್ದು ಗುರುವಿನ ಆಶೀವಾ೯ದ ಒಂದಿದ್ದರೆ ಎಲ್ಲವನ್ನೂ ಗುರಿ ಮುಟ್ಟವ ತವಕ. ಅದಕ್ಕಾಗಿಯೇ  “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಸ್ಪಷ್ಟವಾಗಿ ಹೇಳಿರುವರು.

ಇವರು ನನ್ನ ಗುರು ನಾರಾಯಣ ಗಣಪತಿ ಪಂಡಿತ್. ಸಕಾ೯ರಿ ಕನ್ನಡ  ಪ್ರಾಥಮಿಕ ಶಾಲೆಯ ಶಿಕ್ಷಕರು. ‘ಪಂಡಿತ್ ಮಾಸ್ತರು’ ಎಂದೇ ಹೆಸರುವಾಸಿಯಾಗಿದ್ದರು. ನನ್ನ ಮತ್ತು ನನ್ನ ಸಹಪಾಠಿಗಳ  ಪ್ರೀತಿಯ ಮಾಸ್ತರು. ಶಿಕ್ಷಣ ನೀಡಿದ ಶಿಕ್ಷಕರು ಇದಕ್ಕಿಂತ ಹೆಚ್ಚಿನದು ಮೌಲ್ಯವನ್ನು ಕಲಿಸಿದ ಅಚ್ಚು ಮೆಚ್ಚಿನ ಗುರುಗಳು.

arunima

ಶ್ರೀ ಶಂಕರಾಚಾರ್ಯರು : “ವಿವೇಕ ಚೂಡಾಮಣಿ” ಯಲ್ಲಿ ವಿವರಿಸುವರು:-  ಸದ್ಗುರುವು ಸ್ವಯಂ ಜ್ನಾನ ನಿಷ್ಠ ನೂ, ಪಾಪಗಳಿಂದ ದೂರನೂ, ಸವ೯ದಾ ಬ್ರಹ್ಮದಲ್ಲಿಯೇ ನಿರತನೂ, ಶಾಂತನೂ ಆಗಿರುತ್ತಾನೆ” ಎಂದು. ಇವುಗಳನ್ನೆಲ್ಲ ಮೈಗೂಡಿಸಿಕೊಂಡಿರುವರು ನಮ್ಮ ಗುರುಗಳು.

ಎಲ್ಲಾ ಮಕ್ಕಳೂ ಒಂದೇ ಎಂದು ಸಲಹುವ ಸಹನಾಮೂತಿ೯, ಸಜ್ಜನಿಕೆಯ ಸಾಗರ, ಪ್ರೀತಿಯ ಒಡಲು, ಜ್ಞಾನದ ಖನಿ….ಇವುಗಳನ್ನು ಪಾಲಿಸಿ ಆದಶ೯ ಗುರುಗಳೆಂದೆನಿಸಿದರು. ನೂರಾರು ಶಿಷ್ಯ ರಿಗೆ ಜ್ನಾನಾಜ೯ನೆ ಮಾಡಿದರು. ಭದ್ರ ಅಡಿಪಾಯ ಹಾಕಿ ಅನುಗ್ರಹಿಸಿದರು. ಆದರೆಲ್ಲರೂ ಪ್ರಜ್ಞಾವಂತ ಶಿಷ್ಯರು.

ನ್ಯಾಯ- ನೀತಿ- ಧರ್ಮ ಇದುವೇ ಅವರ ಧ್ಯೇಯ ವಾಕ್ಯವಾಗಿತ್ತು. ಮತ್ತು ನಮಗೆ ಅದು ವೇದ ವಾಕ್ಯವಾಗಿತ್ತು. ಆ ಮಾತುಗಳು ಈಗಲೂ ನೆನಪಿಗೆ ಬರುವುದು.

ಜ್ಞಾನ- ಹಣ ಅಧಿಕಾರ ತಂದುಕೊಡುತ್ತದೆ. ನಮ್ಮ ಸಂಸ್ಕೃತಿ- ಒಳ್ಳೆಯ ನಡತೆ, ಗೌರವ ತಂದುಕೊಡುತ್ತದೆ ಇದು ಅವರ ಬಾಯಿಯಿಂದ ಯಾವಾಗಲೂ ಬರುತ್ತಿದ್ದ ನುಡಿಮುತ್ತುಗಳು.

ಎಪ್ಪತ್ತರ ವಯಸ್ಸಲ್ಲೂ ಯಾವ ಆಡಂಬರ ಇಲ್ಲದೇ, ಪ್ರಚಾರ ಇಲ್ಲದೇ, ಸಮಾಜ ಸೇವೆಮಾಡುತ್ತಿದ್ದಾರೆ. ಸರಳಾತಿ ಸರಳ ಬದುಕನ್ನು ತಾವು ಪಾಲಿಸಿವುದರ ಮೂಲಕ ಬೇರೆಯವರಿಗೂ ಮಾದರಿಯಾಗಿದ್ದಾರೆ.

ನಮ್ಮ ಇತಿಹಾಸದಿಂದ ಬಂದ ಗುರು ಪರಂಪರೆ ಎಂದರೆ ಇದೇ ಅಲ್ಲವೇ. ಇಂದಿಗೂ ಗುರುಪೂಣಿ೯ಮೆ ಯನ್ನು ಆಚರಿಸುವ  ಶಿಷ್ಯರೆಲ್ಲರೂ ಧನ್ಯರಲ್ಲವೇ?. ಅವರನ್ನು ಪಡೆದ ನಾವು ಧನ್ಯಾತಿಧನ್ಯರು.

ಅಂಥ ಮಹನೀಯ ಗುರುಗಳ ಚರಣಾರವಿಂದಕ್ಕೆ ನೂರಾರು ಪ್ರಣಾಮಗಳು.

  • ವಾಣಿ ಜೋಶಿ

bf2fb3_e02a5ccbb5544d25b2c05244de75c38a~mv2.jpg

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW