ಕದಂಬ (ಕಡವಾಲ) ಗಿಡದ ಮಹತ್ವ :  ಸುಮನಾ ಮಳಲಗದ್ದೆ

ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಕದಂಬ (ಕಡವಾಲ) ಗಿಡದ ಮಹತ್ವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಈ ಗಿಡ ಅನಾದಿಕಾಲದಿಂದಲೂ ಅಂದರೆ ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಭಗವಾನ್ ಶ್ರೀ ಕೃಷ್ಣ ಕದಂಬ ವನದಲ್ಲಿ ವಿಹರಿಸುತ್ತಿದ್ದ ಎನ್ನುವ ಉಲ್ಲೇಖ ಇದೆ. ಇದರ ಟೊಂಗೆಗಳು ಕದಂಬ ಬಾಹುವಿನಂತೆ ಇರುವುದರಿಂದ ಇದಕ್ಕೆ ಕದಂಬ ಎನ್ನುವ ಹೆಸರು ರೂಢಿಯಲ್ಲಿ ಬಂದಿದೆ. ಇದರ ಹೂವು ಬಿಟ್ಟಾಗ ನೋಡಲು ಎಷ್ಟು ಚೆಂದವೋ ಅಷ್ಟೇ ಪರಿಮಳಯುಕ್ತ ವಾಗಿರುತ್ತದೆ. ರಾತ್ರಿ ಹೆಚ್ಚು ಸುಹಾಸನೆ ಬೀರುವ ಹೂವು ಇದಾಗಿದೆ. ಇದರ ಹೂವು ಕಾಯಿ ಎಲೆ ಬೇರು ಎಲ್ಲವೂ ಔಷಧಿಯುಕ್ತವಾಗಿದೆ.

ಫೋಟೋ ಕೃಪೆ : google

1) ಇದರ ತೊಗಟೆಯ ಕಷಾಯ ಜ್ವರವನ್ನು ನಿವಾರಿಸುತ್ತದೆ.

2) ತೊಗಟೆಯರಸ ನಿಂಬೆರಸ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಗಸಗಸೆ ಮತ್ತು ಪಟಿಗಾರದ ಅರಳು ಸೇರಿಸಿ ಅರೆದು ಕಣ್ ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ಉರಿ ಶಮನವಾಗುತ್ತದೆ.

3) ಹಣ್ಣುಗಳು ಸ್ವಲ್ಪ ಹುಳಿಯಾಗಿದ್ದು ಶರಬತ್ ಮಾಡಿ ಕುಡಿದರೆ ಬಾಯಾರಿಕೆ ನಿವಾರಣೆ ಆಗುತ್ತದೆ.

4) ಹಣ್ಣಿನೊಂದಿಗೆ ಜೀರಿಗೆ ಮತ್ತು ಕೆಂಪು ಸಕ್ಕರೆ ಸೇರಿಸಿ ಕುಡಿಯುವುದರಿಂದ ಉದರ ಶೂಲೆ ವಾಸಿಯಾಗುತ್ತದೆ.

5) ಮರದ ಪಂಚಾಂಗ (ಬೇರು,ಕಾಂಡ,ಎಲೆ,ಹೂವು,ಹಣ್ಣು) ಕಷಾಯವನ್ನು ಮಾಡಿ ದಿನವೂ ಕುಡಿಯುವುದರಿಂದ ಕುಷ್ಟರೋಗ ನಿವಾರಣೆ ಆಗುತ್ತದೆ.

6) ಎಲೆಯ ಕಷಾಯವನ್ನು ಗೋಧಿ ಗಂಜಿಯೊಂದಿಗೆ ಸೇವಿಸುವುದರಿಂದ ವಾತರೋಗ ನಿವಾರಣೆಯಾಗುತ್ತದೆ.

7) ಮರದ ನೆರಳಿನಲ್ಲಿ ವಿಹರಿಸುವುದರಿಂದ ಮನಸ್ಸು ಶಾಂತ ಗೊಳ್ಳುತ್ತದೆ.


  •  ಸುಮನಾ ಮಳಲಗದ್ದೆ 9980182883.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading