‘ಕನ್ನಡಮ್ಮನ ತೇರು’ ಮನದಾಳದ ಮಾತುಗಳು – (ಭಾಗ೩)

ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ ಕಲಿತು ಸ್ವತಂತ್ರ ಕವಿತೆಗಳನ್ನು ಬರೆಯುತ್ತಿರುವ ಕವಿಗಳು ಹಾಗು ಕವಿಯತ್ರಿಯರ ಮನದ ಮಾತನ್ನು (ಭಾಗ ೩) ತಪ್ಪದೆ ಮುಂದೆ ಓದಿ…

ಕನ್ನಡಮ್ಮನ ತೇರು ಬಳಗದ ಕಿರುಪರಿಚಯ :

(ಕನ್ನಡಮ್ಮನ ತೇರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಹಲವು ಪ್ರಕಾರಗಳಿದ್ದು ಹಳೆಗನ್ನಡ ಹಾಗು ನಡುಗನ್ನಡ ಕಾಲಘಟ್ಟದಲ್ಲಿ ಛಂದೋಬದ್ಧ ಕಾವ್ಯ ರಚನೆಗಳು ಉತ್ತುಂಗದ ಸ್ಥಿತಿಯಲ್ಲಿದ್ದವು. ಕಾಲ ಕಳೆದಂತೆ ಪರಕೀಯರ ಆಕ್ರಮಣ ಹಾಗು ನವ್ಯ ನವೋದಯ ಸಾಹಿತ್ಯದ ಬಳಕೆಯಿಂದ ಹಲವು ಕನ್ನಡ ಸಾಹಿತ್ಯ ಪ್ರಕಾರಗಳ ಬಳಕೆ ಕಡಿಮೆಯಾದವು.

ಕನ್ನಡ ಸಾಹಿತ್ಯದಲ್ಲಿ ಮಾತ್ರಗಣ, ಅಕ್ಷರಗಣ ಹಾಗು ಅಂಶಗಣ ಆಧಾರಿತ ಪದ್ಯಗಳನ್ನು ಕಾಣಬಹುದು. ಇವುಗಳಲ್ಲಿ ಸಾಕಷ್ಟು ಮಾದರಿಯಲ್ಲಿ ಪದ್ಯಗಳನ್ನು ರಚಿಸಿಬಹುದು. ಛಂದೋಬದ್ಧ ರಚನೆಗಳನ್ನು ಕಲಿಸುವ ದೃಷ್ಟಿಯಿಂದಲೇ ಕನ್ನಡಮ್ಮನ ತೇರು ಬಳಗವನ್ನು ಪ್ರಾರಂಭಿಸಿದ್ದು ಈಗಾಗಲೇ ಸಾವಿರಾರು ಕವಿಮನಗಳು ಛಂದಸ್ಸು ಕಲಿತು ಬರೆಯಲು ಪ್ರಾರಂಭಿಸಿದ್ದಾರೆ.)

ಕನ್ನಡಮ್ಮನ ತೇರು ಬಳಗವನ್ನು ನವೆಂಬರ್ ೧, ೨೦೨೨ ರಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಹಾಗು ಶಕುಂತಲಾ ಪಿ ಆಚಾರ್ ರವರು ಸ್ಥಾಪಿಸುರುತ್ತಾರೆ.
ಶ್ರೀಮತಿ ವಿಜಯಲಕ್ಷ್ಮಿ ಎಸ್
ಶ್ರೀಮತಿ ಸಹನಾ ಎಲ್.ಪಿ,
ಶ್ರೀಮತಿ ಮಂಗಳಗೌರಿ ಭಟ್
ಶ್ರೀಮತಿ ಸುಜಾತಾ ರವೀಶ್
ಶ್ರೀಯುತ ಜಗದೀಶ್ ನಾಗರಾಜು
ಶ್ರೀಯುತ ಅಮೃತಗೌಡ ಪಾಟೀಲ್
ಶ್ರೀಮತಿಭುವನೇಶ್ವರಿ ಪ್ರೇಮರವರು ಹಲವು ಆಯೋಜನೆಗಳನ್ನು ಹಮ್ಮಿಕೊಂಡ ನಿರ್ವಾಹಕರ ಸ್ಥಾನ ನಿರ್ವಹಿಸುತಿದ್ದಾರೆ.


ಮನದಾಳದ ಮಾತುಗಳು ಕನ್ನಡಮ್ಮನ ತೇರು ಬಳಗಕ್ಕೆ ಪ್ರಥಮ ವರ್ಷದ ಹುಟ್ಟು ಹಬ್ಬದ ಸಡಗರ.ನಮಗೆ ಬಳಗ ತವರು ಮನೆ.ಮಮತೆಯಿಂದ ಸದಸ್ಯರನ್ನು ಓದುವ, ಬರೆಯುವ ಹವ್ಯಾಸಕ್ಕೆ ಅಣಿಗೊಳಿಸಿ, ವಾರ ಪೂರ್ತಿ ಚಿಂತನೆಗೆ ಹಚ್ಚುವ, ಹೊಸ ಹೊಸ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಿ, ಬರೆಯುವಂತೆ ಪ್ರೇರೆಪಿಸಿ, ತಪ್ಪುಗಳನ್ನು ತಿದ್ದಿ ತೀಡಿ ಬರವಣಿಗೆಯನ್ನು ಸುಧಾರಿಸುವ ಹಿರಿ ಕಿರಿಯ ನಿರ್ವಾಹಕ ಗಣಕ್ಕೆ ನನ್ನ ಧನ್ಯವಾದಗಳು  ಹಾಗೂ ಅಭಿನಂದನೆಗಳು.

ನನಗೆ ಕವನಗಳನ್ನು ಬರೆಯಬೇಕೆಂಬ ತುಡಿತ ತುಂಬಾ ಇತ್ತು.ಆ ನನ್ನ ಕನಸಿಗೆ ನೀರೆರೆದು ಪೋಷಿಸಿ , ನನಸಾಗಲು ಕಾರಣ ಈ ಬಳಗದ ನಿರ್ವಾಹಕರು. ಭಾವನೆಗಳ ಎರ್ರಾಬಿರ್ರಿ ಓಟವನ್ನು ಸಂಭಾಳಿಸಿ, ಕವಿತೆಯನ್ನು ಹೆಣೆದು ಕನ್ನಡಮ್ಮನ ಕೊರಳಿಗೆ ಅರ್ಪಿಸುವ ಸುಯೋಗಕ್ಕೆ ನಮ್ಮ ಹೆಮ್ಮೆಯ ತೇರು ಬಳಗವೇ ಕಾರಣ.ಹೀಗೆಯೇ ದಿನದಿನವೂ, ವರುಷ ವರುಷವೂ ಹೊಸತನ್ನು ಕಲಿಸುತ್ತ,ಕನ್ನಡದ ಉಳಿವಿಗೆ ಬೆಳವಣಿಗೆಗೆ ಕಟಿಬದ್ದವಾಗಿ ನಿಂತು ಬಳಗ ಆಚಂದ್ರಾರ್ಕವಾಗಿ ಶೋಭಿಸಲಿ ಎಂದು ಎಲ್ಲ ಕನ್ನಡಿಗರ ಹಾಗೂ ಭಾರತೀಯರ ಸುಮನಸುದ ಹಾರೈಕೆ.

“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”

  • ಸುನಂದಾ ತುಪ್ಪದ


ಎಲ್ಲರಿಗೂ ನಮಸ್ಕಾರ. ನನ್ನ ಮನದಾಳದಮಾತು ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡಮ್ಮನ ತೇರು ಬಳಗದ ವಾರ್ಷಿಕೋತ್ಸವದ ಸಮಯದಲ್ಲಿ ಹೇಳುವ ಮಾತು ನನ್ನ ದು.ಒಂದು ವರ್ಷ ತುಂಬಲು ಇನ್ನೊಂದು ತಿಂಗಳೂ ಇಲ್ಲ. ಹೆಜ್ಜೆಇಡಲು ಪ್ರಾರಂಭಿಸಬೇಕಾದಕೂಸು ಬೇಗಬೇಗನೆ ನಡೆಯಲು ಪ್ರಾರಂಭಿಸಿದಾಗ ತಾಯಿಗೆ ಆಗುವ ಆನಂದವೇ ಅಪಾರ.ಅದರಂತೆಯೇ ನಾನು ಈಮನೆಗೆ ಹೊಕ್ಕು ಕೇವಲ ಎಂಟು ತಿಂಗಳಾದುದಷ್ಟೆ ಆದರೂ ಮನೆ ಮಂದಿಯನ್ನು ಪರಿಚಯವಾಗಿ ಅವರು ಉಣಬಡಿಸಿದ ಅಂದರೆಕಲಿಸಿದ ಛಂದಸ್ಸು ಕಲಿಯೋಣ ಮೊದಲು ಅಲ್ಪ ಸ್ವಲ್ಪ ಕಲಿತುದನ್ನೂ ಮರೆತು ಮನೆಮಂದಿಯೊಂದಿಗೆ ಬೆರೆತು ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿ ಇಂದು ಏನೂ ಅರಿಯದ ನನಗೆ ಮೊಬಾಯಿಲ್ ಒಂದು ಕೈಗೆ ಸಿಕ್ಕಿದ್ದು ಇಂತಹ ಬಳಗದ ಒಳಗೆ ನುಗ್ಗಲು ಸಹಕಾರವಾಯಿತು.ಬೇರೆ ಗ್ರೂಪಿನಲ್ಲಿ ಹೊಂದಿಕೊಂಡಿದ್ದಾಗ ಕನ್ನಡಮ್ಮನ ತೇರು ಎನ್ನುವ ಬಳಗಕಣ್ಣಿಗೆಬಿದ್ದು ತೆರೆದು ನೋಡಿದಾಗ ಅದರಲ್ಲಿ ಕಂಡ ಸತ್ಯವು ನನ್ನ ಮನಸೆಳೆಯಿತು. ಒಂದೊಂದೇ ಬರೆಯಲು ಪ್ರಾರಂಭಿಸಿದೆ.ಇಷ್ಟ ವಾಯಿತು.ಕಲಿಯಲು ದಾರಿ ತುಂಬಾ ಇದೆ ಅನಿಸಿತು.ಕಲಿಯುವಿಕೆಗೆ ಪ್ರಾಯ ಅಡ್ಡಿ ಬಾರದು ಅಂದುಕೊಂಡು ವರ್ಷ ಎಪ್ಪತ್ತು ಕಳೆದರೂ ಬನ್ನಿ ಛಂದಸ್ಸು ಕಲಿಯೋಣ ಎಂಬುದನ್ನುಒಮ್ಮೆ ಓದಿದ್ದು ಐದು ನಿಮಿಷದಲ್ಲಿ ಮರೆತರೂ ಉದಾಹರಣೆಯ ನ್ನು ನೋಡಿಕೊಂಡು ಬರೆದುತಪ್ಪಿದಲ್ಲಿ ಅಲ್ಲಿ ತಪ್ಪಿದೆ ಇಲ್ಲಿ ತಪ್ಪಿದೆ ಎಂದು ಹೇಳಿಅಕ್ಷರ ರೂಪದಲ್ಲಿ ಬೆನ್ನುತಟ್ಟಿ ಕಲಿಸಿದ ಗುರು ಚೆನ್ನಕೇಶವ ಜಿ ಲಾಳಕಟ್ಟೆಯವರನ್ನೂ, ನಿರ್ವಾಹಕರನ್ನೂ ನಾನು ಎಂದೂ ಮರೆಯಲಾರೆನು .

ಚಿಕ್ಕಂದಿನಲ್ಲಿ ಇದ್ದ ಸಣ್ಣಪುಟ್ಟ ಕವಿತೆ, ಕವನ ಬರೆಯುವ ಹವ್ಯಾಸ ಸಾಯಲು ಬಿದ್ದ ಗಿಡಕ್ಕೆ ನೀರು ಹಾಕಿ ಚಿಗುರುಬರುವಂತೆಮಾಡಿ ಬದುಕಿಸಿದ ಹಾಗಾಯಿತು ಬಳಗ. ಕವಿತೆ, ಕಥೆ, ಚುಟುಕು, ಹಾಸ್ಯ, ಛಂದಸ್ಸು, ಮುಕ್ತಕ, ಹಾಗೂ ನವೋದಯ ಸಾಹಿತ್ಯಕ್ಕೆ ಒತ್ತುಕೊಟ್ಟು ನನಗೆ ಬರೆಯಲು ಪ್ರೇರೇಪಿಸಿದ ಈಬಳಗವನ್ನು ನಾನಂತು ಹೇಗೆ ಮರೆಯಲು ಸಾಧ್ಯ ವೇ?

  • ಸುಶೀಲಾ ಯಸ್ ಯನ್ ಭಟ್


ಕನ್ನಡಮ್ಮ ತೇರು ಬಳಗದ ಹಾಗೂ ಮುಖಪುಟದ ಆತ್ಮೀಯ ಗೆಳೆಯ ಗೆಳತಿಯರಿಗೆ ನನ್ನ ಮನಃಪೂರ್ವಕ ವಂದನೆಗಳು

ಕನ್ನಡಮ್ಮನ ತೇರು ಬಳಗ ಸೆಪ್ಟೆಂಬರ್ ಕೊನೆಯಲ್ಲಿ ತನ್ನ ಒಂದು ವರ್ಷದ ಪ್ರಯಾಣ ಪೂರೈಸುತ್ತಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಾನು ಈ ಬಳಗಕ್ಕೆ ಸೇರಿದ್ದು ಡಿಸೆಂಬರ್, 28, 2022 ರಲ್ಲಿ ಅಲ್ಲಿಂದ ಇಲ್ಲಿಯವರೆಗೆ ಹೆಚ್ಚೂಕಡಿಮೆ ಐವತ್ತು ಪೋಸ್ಟ್ ಮಾಡಿರುತ್ತೇನೆ.

ವಿಶಿಷ್ಟ ರೀತಿಯಲ್ಲಿ ಮುಂದುವರೆಯುತ್ತಿರುವ ಈ ಬಳಗದ ಮೇಲೆ ನನಗೆ ತುಂಬಾ ಹೆಮ್ಮೆ ಇದೆ. ಪೇಸ್ಬುಕ್ ನಲ್ಲಿ ಬೇಕಾದಷ್ಟು ಸಾಹಿತ್ಯ ಬಳಗಗಳು ಇವೆ. ನಾನೂ ಕೆಲವೊಂದು ಬಳಗದಲ್ಲಿ ಇದ್ದೇನೆ. ಆದರೆ ಈ ಬಳಗದ ಮುನ್ನೆಡೆಯು ಬೇರೆ ಎಲ್ಲಾ ಬಳಗಕ್ಕಿಂತ ವಿಭಿನ್ನವಾಗಿದ್ದು ವಿಶಿಷ್ಟವಾಗಿದೆ. ಅದು ನನಗೆ ಹೆಮ್ಮೆ ಎನಿಸುತ್ತದೆ. ಚನ್ನಕೇಶವ ಜಿ ಲಾಳನಕಟ್ಟೆ ಯವರ ನೇತೃತ್ವದಲ್ಲಿ ನಡೆಯುವ ಈ ಬಳಗವು ಅತೀ ಕಡಮೆ ಸಮಯದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದಿದೆ. ಅದಕ್ಕೆ ಉಳಿದ ಇತರ ನಿರ್ವಾಹಕರ ಸಹಕಾರವೂ ಉತ್ತಮ ರೀತಿಯಲ್ಲಿ ಇದೆ.

ಮುಖ್ಯವಾಗಿ ಇಲ್ಲಿ ಹೇಳಿಕೊಡುವ ಛಂದಸ್ಸಿನ ಪಾಠಗಳು. ಇದು ಯಾವ ಶಾಲೆಗಳೂ ಇಷ್ಟು ಸುಲಭವಾಗಿ ಮನನ ಆಗುವಂತೆ ಹೇಳಿಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ ಈ ಬಳಗವು ಕನ್ನಡ ಛಂದಸ್ಸು ಕಲಿಯುವವರಿಗೆ ಆನ್ಲೈನ್ ಪಾಠ ಶಾಲೆ ಇದ್ದಂತೆ ಇದೆ.

ಇನ್ನು ವಾರದ ಪ್ರತೀ ದಿನವೂ ಸ್ಪರ್ಧೆಗಳು ಇದ್ದು ಬಳಗದವರೂ ದಿನನಿತ್ಯವೂ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳುತ್ತಿರುವ ಚನ್ನಕೇಶವ ಜಿ ಲಾಳನಕಟ್ಟೆ ಹಾಗೂ ಇತರ ಅಡ್ಮಿನ್ ಬಳಗದವರನ್ನು ಅಭಿನಂದಿಸುತ್ತಾ ನನ್ನ ಲೇಖನ ಮುಗಿಸುತ್ತೇನೆ.

  • ಲೋಲಾಕ್ಷಿ ಹುಲ್ಕುಳಿ

 


ಕನ್ನಡಮ್ಮನ ತೇರು ಬಳಗ ಕನ್ನಡ ಸಾಮಾಜಿಕ ಜಾಲತಾಣಗಳಲ್ಲೆ ಅತ್ಯಂತ ಶ್ರೇಷ್ಠವಾಗಿದ್ದು. ಕಲಿಕಾರ್ಥಿಗಳಿಗೆ ತಕ್ಕುದಾದ ವೇದಿಕೆಯಾಗಿದೆ. ಸಹೃದಯಿ ಕವಿಮನೆಗಳೆ ಧನ್ಯ ಮಾನ್ಯ ದಿವ್ಯ ಭವ್ಯ. ಕನ್ನಡ ತಾಯಿಯ ಸೇವೆಗೆ ಅಮೂಲ್ಯ ವಾದ ತಾಣವಾಗಿದ್ದು ಕಲಿಕೆಗೆ ಪೂರ್ಣ ಅವಕಾಶ ನೀಡುವ ಸ್ಫೂರ್ತಿ ವೇದಿಕೆಯೆಂದೆ ಮನಃಪೂರ್ವಕ ಪರಿಗಣಿಸಬಹುದು.

ತೋಚಿದ್ದು ಗೀಚುತ್ತ ಹರುಷಗೊಳ್ಳುತಿದ್ದ ನನಗೆ ಸತ್ವ ಭರಿತ ಸಾಮರ್ಥ್ಯ ತುಂಬಿದ ನಿರ್ವಾಹಕರ ಬಳಗದ ಉತ್ಸಾಹ ಹಾಗೂಕವಿಮನಗಳಿಗೆ ನೀಡುವ ಪ್ರೋತ್ಸಾಹಕ್ಕೆ ನಾನು ಚಿರಋಣಿ.
ಈ , ಬಳಗದಲ್ಲಿ ಹಮ್ಮಿಕೊಂಡಿರುವ ವಿವಿಧ ಬಗೆಯ ಸಾಹಿತ್ಯ ಪ್ರಕಾರಗಳಾದ ಛಂದಸ್ಸು, ಚುಟುಕು, ಮುಕ್ತಕ ನವ್ಯ ಸಾಹಿತ್ಯ, ಹಾಸ್ಯಲೇಖನ, ಚಿತ್ರಕ್ಕೊಂದು ಕಥೆ, ಚಿತ್ರಕ್ಕೊಂದು ಕವಿತೆ. ಮುಂತಾವುಗಳು ನಿಜಕ್ಕೂ ಪ್ರೇರಣಾಪೂರಿತ.ಬರೆದ ಕವನಗಳ ವಿಮರ್ಶೆ, ಪ್ರತಿಕ್ರಿಯೆ, ಹೊಸರಚನೆಗೆ ಹೊಸಹೊಸದಾಗಿ ಸೇರುವ ಸಾಹಿತ್ಯಭಿಮಾನಿಗಳಿಗೆ ನೀಡುವ ಪ್ರೋತ್ಸಾಹ
ದಿಟವಾಗಿ ಶ್ಲಾಘನೀಯ.

ಪ್ರೋತ್ಸಾಹದ ಜೊತೆಗೆ ಸುಂದರ, ಅತಿ ಸುಂದರ, ಅಪೂರ್ವ ಸುಂದರ, ವಿನ್ಯಾಸಗಳೊoದಿಗೆ ತಯಾರಿಸಲ್ಪಟ್ಟ ಪ್ರಶಸ್ತಿ ಪತ್ರ ಉತ್ತಮ ರಚನೆಗೆ ಸಾಕ್ಷಿಯಿದ್ದಂತೆ.ಈ, ಪ್ರೋತ್ಸಾಹ ಹಾಗೂ ಕನ್ನಡಮ್ಮನ ಸೇವೆ ಸದಾ ನಡೆಯುತ್ತಿರಲೆಂದು ಹಾರೈಸುತ್ತ, ನನ್ನ ಹೃದಯ ತುಂಬಿಬಂದ ಮಾತುಗಳಿಗೆ ಅವಕಾಶ ಕೊಟ್ಟಂತಹ ಎಲ್ಲಾ ಸಹೃದಯಿ ನಿರ್ವಾಹಕ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು.

  • ಮಂಜುಳಾ ಮೂರ್ತಿ


ಎಷ್ಟು ಬೇಗ ಒಂದು ವರ್ಷ ಪೂರೈಸಿತು ಎನಿಸುತ್ತಿದೆ , ಒಂದು ವರ್ಷದ ಹಿಂದೆ ಕನ್ನಡಮ್ಮನ ತೇರು ಎನ್ನುವ ಹೆಸರಿನಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಿಂಗಳು ಪೂರ್ತಿ ನಾಡು ನುಡಿಯ ಬಗ್ಗೆ ಸ್ವರಚಿತ ಕವಿತೆಗಳ ವಾಚನ ಅಭಿಯಾನ ಹಮ್ಮಿಕೊಂಡಿದ್ದು ದಿಗ್ಗಜ ಕವಿಮನಸ್ಸುಗಳೆ ಭಾಗವಹಿಸಿದ್ದರು ಯಶಸ್ಸು ಕಂಡಿತು ಕೂಡ… ಇದರ ರುವಾರಿಗಳು , ಶಕುಂತಲ .ಪಿ. ಆಚಾರ್ ಹಾಗು ಚನ್ನ ಕೇಶವ ಲಾಳನ ಕಟ್ಟೆಯವರು ಅದೇ ಹೆಸರಿನಿಂದ ಗುಂಪು ಪ್ರಾರಂಭವಾಯಿತು.

ಒಂದು ಮಾತನ್ನು ಹೇಳಬೇಕೆಂದರೆ ಕಲಿಯಬೇಕೆನ್ನವ ಮನಸ್ಸುಗಳಿಗೆ ಒಂದು ಒಳ್ಳೆಯ ವೇದಿಕೆ ಎಂದು ಹೆಮ್ಮೆಯಿಂದ ಹೇಳ ಬಹುದು , ಕಲಿಸುವ , ಕಲಿಯಲಿ ಎನ್ನುವ ನಿಶ್ಕಲ್ಮಷ ಮನೋಭಾವದ ಮನಸ್ಸು , ಚನ್ನಕೇಶವ ಅವರದು ಪ್ರತಿಯೊಂದು ಪ್ರಕಾರದಲ್ಲೂ ಭಾಗವಹಿಸಲು ಪ್ರೋತ್ಸಾಹ , ತಿದ್ದಿ ,, ತೀಡುವ ಗುಣ ಮುಖ್ಯವಾಗಿ ಛಂದಸ್ಸಿನ ಎಲ್ಲಾ ಪ್ರಕಾರ ಕಲಿಕೆ ಇದರಿಂದ ಎಷ್ಟೋ ಕಲಿಕಾರ್ತಿಗಳಿಗೆ ಅನುಕೂಲವಾಗಿರುವುದು ಸತ್ಯ .

ಅಷ್ಟೇ ಅಲ್ಲದೆ ಚುಟುಕು , ಶೀರ್ಷಿಕೆಗೊಂದು ಕಥೆ , ಮನದಾಳದ ಮಾತು ಮುಕ್ತಕ ಬರೆಯುವ ಅಭಿಯಾನ , ಚಿತ್ರಕ್ಕೊಂದು ಕವಿತೆ ಎಲ್ಲವು ಭಿನ್ನ ವಿಭಿನ್ನ , ನನ್ನ ಬಗ್ಗೆ ಹೇಳ ಬೇಕೆಂದರೆ ನಾನೊಬ್ಬ ಸಾಮಾನ್ಯ ಗೃಹಿಣಿ ಚಿಕ್ಕಂದಿನಿಂದಲೂ ಚಿಕ್ಕದಾಗಿ ಬರೆಯುವ ಹವ್ಯಾಸ, ಅದಕ್ಕೆ ನೀರೆರೆದು ಪೋಷಿಸಿದ್ದು ಹೆಸರಾಂತ ಸಾಹಿತ್ಯಿಕ ಗುಂಪುಗಳು ಎಂದು ಹೃದಯ ತುಂಬಿ ಹೇಳುತ್ತೇನೆ ಕಲಿಯಲು ಸಾಕಷ್ಟು ಅವಕಾಶವಿದ್ದರು ಗೃಹ ಕೆಲಸದ ಒತ್ತಡದ ನಡುವೆ ಕಲಿತದ್ದು ತುಂಬಾ ಕಡಿಮೆಯೆ , ಕನ್ನಡಮ್ಮನ ಸಾಹಿತ್ಯದ ತೇರು ಒಂದು ವರ್ಷ ಪೂರೈಸಿ ಎರಡನೆ ವರ್ಷಕ್ಕೆ ಕಾಲಿಡುತ್ತಿದೆ ಇಂತಹ ಸಂಧರ್ಭದಲ್ಲಿ ಒಂದು , ನೂರಾಗಲಿ ಹೃದಯ ತುಂಬಿ ಹಾರೈಸುತ್ತೇನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಇದಕ್ಕಾಗಿ ಸಾಕಷ್ಟು ಕವಿಮನಸ್ಸುಗಳು ಶ್ರಮಿಸುತ್ತಿದ್ದಾರೆ ಎಲ್ಲರಿಗೂ ಧನ್ಯವಾದಗಳು ಹಾಗು ಅಭಿನಂದನೆಗಳು.

  •  ಅನಿತಾ ಮಮತೇಶ್


  • ಆಕೃತಿ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW