ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)

ಬದುಕಿನಲ್ಲಿ ಸಾಧಿಸುವ ಮನೋಭಾವ ಇರುವವನಿಗೆ ಸವಾಲುಗಳೇ ಪ್ರೇರಣೆ. ‘ಜೀವನ ಧನ್ಯ’ ಎನಿಸುವುದು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ, ಜೀವನದ ತಮ್ಮ ಅನುಭವ ಪುಟಗಳನ್ನು ಓದುಗರ ಮುಂದೆ ಸುಂದರವಾಗಿ ತೆರೆದಿಡುತ್ತಿರುವ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ …

‘ಏ ನಮಗೂ ಒಂದಿಷ್ಟು ಕೊಡೋ..ಬಾಯಲ್ಲಿ ನೀರು ಬರ್ತಾ ಇದೆ. ಅಷ್ಟೊಂದು ತುಂಬಿಸ್ಕೊಂಡಿದ್ದೀಯಾ ಅಂಗಿ ಜೇಬಲ್ಲಿ.. ಚೆಡ್ಡಿ ಜೇಬಲ್ಲಿ…ಮತ್ತೂ ಸಾಲದೆ‌ ಅಲ್ಲೇ‌ ಮುಕ್ತಾ ಇದೀಯ..ಹೀಗೇನೋ ಹೊಟ್ಟೆ ಉರ್ಸೋದು….ಇಲ್ಲೇ ಲಂಗ ಹರಡ್ತೀವಿ. ನಾಲ್ಕಾರು ಹಣ್ಣು ಹಾಕೋ…ಅಂತಾ ಗೋಗರೀತಾ ಇದ್ರೂ ಒಳ್ಳೇ ತ್ರಿವಿಕ್ರಮನಂತೆ ಕೊಂಬೆಯ ತುದಿಗೇರಿ ಮಂಗನ ಮೂತಿ ಮಾಡಿ ಅಣಕಿಸುತ್ತಾ ಕುಳಿತ. ಒಂದೇ ಒಂದು ಹಣ್ಣನ್ನು ಎಸೆಯಲೂ ಇಲ್ಲ. ದಾಮಿನಿಯ ಈ ದೀನ ಬೇಡಿಕೆಯನ್ನು ಕೇಳಿಯೂ ಕರಗದ ತಿಮ್ಮನಿಗೆ ತಕ್ಕ ಶಾಸ್ತಿ ಮಾಡಬೇಕೆಂದು, ‘ಇರೇ ಸ್ವಲ್ಪ ಹೊತ್ತು’, ಎಂದು ಸಮಾಧಾನ ಹೇಳಿ, ಪಾಟೀ ಚೀಲದಲ್ಲಿದ್ದ ಪುಸ್ತಕಗಳನ್ನು ಖಾಲಿ ಮಾಡಿ ಹೆಗಲಿಗೇರಿಸಿ ಸರಸರನೆ ಮರವೇರಿದಳು ಶ್ರಾವಣಿ…!
ಹುಡುಗಿಯರೆಲ್ಲ ಬಿಟ್ಟು ಕಣ್ಣು ಬಿಟ್ಟಂತೆ ನೋಡುತ್ತಾ ಕುಳಿತರು.

‘ಏ..ಶ್ರಾವಣಿ…ಹಣ್ಣಿಲ್ಲದಿದ್ರೆ ಅಷ್ಟೇ ಹೋಯ್ತು ಬಿಡು. ಅಪ್ಪನಿಗೋ ಅಣ್ಣಂಗೋ ಹೇಳಿದ್ರೆ ಕೊಯ್ದು ತರ್ತಾರೆ ಬಿಡೇ….ಅವನೊಬ್ಬನೇ ಮುಕ್ಲಿ… ತಾನೊಬ್ಬನೇ ಹುಡುಗ ಅನ್ನುವ ಜಂಭ ಅವನಿಗೆ.. ನೀನೇನಾದ್ರೂ ಎಡವಟ್ಟು ಮಾಡ್ಕೊಳ್ಬೇಡ. ಆಮೇಲೆ ನಿಮ್ಮಪ್ಪ ನಮ್ಮನ್ನ ಬಿಟ್ಟಾರ..?’

ಇವರ ಮಾತು ಮುಗಿಯುವಷ್ಟರಲ್ಲಿ ಶ್ರಾವಣಿ, ತುಂಬಾ ನೇರಳೆ ಹಣ್ಣುಗಳು ಬಿಟ್ಟಿದ್ದ ಕೊಂಬೆಯೊಂದನ್ನೇರಿ, ಹರಿದ ಹಣ್ಣುಗಳ ಗೊಂಚಲುಗಳನ್ನು ಮೊದಲು ಅವರ ಮಡಿಲಿಗೆ ಹಾಕಿ ತಾನು ಹಣ್ಣು ಕೀಳುವುದರಲ್ಲಿ ತಲ್ಲೀನಳಾದಳು.ಅಷ್ಟಕ್ಕೂ ಬಿಡದೆ ಸೋಲೊಪ್ಪಿಕೊಳ್ಳಲು ಸಿದ್ಧನಿಲ್ಲದ ತಿಮ್ಮ ಸರಸರನೆ ಮರದಿಂದ ಇಳಿದು, ‘ಇರು, ನಿಂಗೆ ಕಲಿಸ್ತೀನಿ ಬುದ್ಧಿ! ಈಗಲೇ ನಿಮ್ಮಪ್ಪನ ಹತ್ರ ಹೋಗಿ,ಚಾಡಿ ಹೇಳ್ತೀನಿ..ಗೊತ್ತಲ್ಲಾ ನಿಮ್ಮಪ್ಪ ಮೊದಲೇ ಮುಂಗೋಪಿ.. ಸಿಗುತ್ತೆ ಸರಿಯಾಗಿ ಕಜ್ಜಾಯ…ಎಂದು ತೋರ್ಬೆಳನ್ನು ಎತ್ತಿ ಆಡಿಸುತ್ತಾ ಮನೆ ಕಡೆ ಓಡತೊಡಗಿದ. ಅಪ್ಪನಿಗೆ ಸಾಕ್ಷಿ ಸಿಗದಂತೆ ಮಾಡಲು ಶ್ರಾವಣಿಗೆ ಮರದ ಮೇಲಿನಿಂದ ಇಳಿಯುವುದು ಅನಿವಾರ್ಯ ವಾಗಿತ್ತು..!

‘ಮಾಮಾ, ನನ್ನನ್ನೂ ಹೊಳೆಲಿರುವ ಆ ಆಳದ ಗುಂಡಿಗೆ ಕರ್ಕೊಂಡು ಹೋಗೋ…ನಂಗೂ ಈಜು ಕಲ್ಸೋ… ನೀನು ಮೀನಿನ ಥರಾ ಸಲೀಸಾಗಿ ಈಜೋದು ಕಂಡ್ರೆ ನಂಗೂ ನೀರಲ್ಲಿ ಈಜ್ತಾ ಆಡ್ಬೇಕು ಅನ್ಸುತ್ತೆ.’ಶ್ರಾವಣಿಯ ಮನವಿ.ತನ್ನ ಈಜಿನಲ್ಲಿ ಜಿಲ್ಲಾಮಟ್ಟದ ಚಾಂಪಿಯನ್ ಆಗಿದ್ದ ತನ್ನ ಸೋದರ ಮಾವನೊಂದಿಗೆ. ‘ಆಯ್ತು ಬಾ..ಕಲಿಸ್ತೀನಿ ‘ ಎಂದವನೇ ಅವಳನ್ನು ಬೆನ್ನ ಮೇಲಿರಿಸಿ,ಆ ಆಳವಾದ ಮಡುವಿನಲ್ಲಿ ಕೆಡವಿ,ದಿಗ್ವಿಜಯದ ನಗೆ ನಗುತ್ತಿದ್ದ ಅವನ ವರ್ತನೆ ತನ್ನಲ್ಲಿ ಗೊತ್ತಿಲ್ಲದ ವಿದ್ಯೆಯ ಬಗ್ಗೆ ಇರುವ ಅಜ್ಞಾನವೇ ಇವನು ಹೀಗೆ ಹಂಗಿಸಲು ಕಾರಣವಾಯಿತಲ್ಲ.ಖಂಡಿತವಾಗಿ ತಾನು ಇದನ್ನು ಕಲಿತೇ ತೀರಬೇಕು ಎಂಬ ನಿರ್ಧಾರಕ್ಕೆ ಬರುವಷ್ಟರಲ್ಲಿ ಉಸಿರು ಕಟ್ಟಿದಾಗ ಅಚಾನಕ್ಕಾಗಿ ಅವನು ತನ್ನನ್ನು ಆ ಮಡುವಿನಿಂದ ಎತ್ತಿ ತಂದಿದ್ದ!

ಆಗಲೇ ನಿರ್ಧರಿಸಿದ್ದಳು ಅವಳು ತಾನು ಆದಷ್ಟು ಬೇಗ ಈಜು ಕಲಿಯಬೇಕೆಂದು…!

*

ಶ್ರಾವಣಿಯ ಬಾಲ್ಯದಲ್ಲಿ ಪ್ರಭಾವ ಬೀರಿದ ಸಾಧಕರು ಸವಾಲನ್ನು ಎದುರಿಸಿದವರೇ ಆಗಿದ್ದರು. ಬದುಕಿನ ಕಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ,ಇಡೀ ವಿಶ್ವಮಾನವನಾದ ವಿವೇಕಾನಂದರ ಬಾಲ್ಯದ ಘಟನೆ ಅದರಲ್ಲಿ ಅ ಒಂದು.

ಕಾಶಿಯ ಒಂದು ಬೀದಿಯಲ್ಲಿ ನಡೆದು ಹೋಗುತ್ತಿದ್ದ ಬಾಲಕ ನರೇಂದ್ರ..ಇದ್ದಕ್ಕಿದ್ದಂತೆ ಕೋತಿಯೊಂದು ಅಟ್ಟಿಸಿಕೊಂಡು ಬಂದಾಗ ಹೆದರಿ ಓಡತೊಡಗಿದ.ಅಲ್ಲಿಯೇ ಇದ್ದ ಹಿರಿಯರೊಬ್ಬರು’, ಓಡಬೇಡ ತಿರುಗಿನಿಲ್ಲು’ ಎಂದರು. ನರೇಂದ್ರ ಹಾಗೆಯೇ ಮಾಡಿದ.ಕೋತಿ, ಅವನು ತಿರುಗಿ ನಿಂತಿದ್ದನ್ನು ಕಂಡು ತಾನಾಗಿಯೇ ಹೆದರಿ ಓಡತೊಡಗಿತು.

ಅಂದೇ ನರೇಂದ್ರ ತನ್ನ ಬದುಕಿನಲ್ಲಿ ಅದ್ಭುತ ಪಾಠವೊಂದನ್ನು ಕಲಿತ…’ಏನೇ ಸವಾಲುಗಳು ಎದುರಾದರೂ ಬೆನ್ನು ಹಾಕಿ ಓಡದೇ ಅದನ್ನು ಎದುರಿಸಿ ನಿಲ್ಲಬೇಕೆಂದು’.ಈ ನಿರ್ಧಾರ ಅವನ ಬಾಳನ್ನು ವಿವೇಕಾನಂದರಂತಹ ಮಹಾವ್ಯಕ್ತಿಯನ್ನಾಗಿ ಪರಿವರ್ತಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿತು.

ಜನವರಿ ಹತ್ತು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪುಣ್ಯ ಸ್ಮರಣೆಯ ದಿನ! ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಸ್ವಾತಂತ್ರ್ಯಾನಂತರ ಹದಿನೆಂಟು ವರುಷ ಭಾರತದ ಪ್ರಧಾನಿಯಾಗಿ ಅಧಿಕಾರ ದಲ್ಲಿದ್ದರು. ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಾಗ,’ನೆಹರೂ ನಂತರ ಮುಂದೇನು’ ಎನ್ನುವಂತಹ ನಾಯಕತ್ವದ ಭೀತಿ ಭಾರತೀಯರಲ್ಲಿತ್ತು.ಆದರೆ ಗಾತ್ರದಲ್ಲಿ ವಾಮನ ಮೂರ್ತಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರಲ್ಲಿದ್ದ ದೇಶಪ್ರೇಮ ಹಾಗೂ ಆತ್ಮಶಕ್ತಿ ಸಾಮಾನ್ಯವಾದುದಲ್ಲ. ಆ ಸಂಧಿಕಾಲದಲ್ಲಿ ಅಂತಹ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ ಆಡಳಿತದಲ್ಲಿ ಎಂತಹ ಅದ್ಭುತ ಸಾಮರ್ಥ್ಯ ಮೆರೆದರೆಂದರೆ ಭಾರತದ ಘನತೆ ಅವರ ಕಾಲದಲ್ಲಿ ಮತ್ತಷ್ಟು ಹೆಚ್ಚಿತು.’ಜೈ ಜವಾನ್ ಜೈ ಕಿಸಾನ್ ‘ ಘೋಷಣೆ ಜಾರಿಗೆ ಬಂದಿದ್ದು ಇವರ ಕಾಲದಲ್ಲಿಯೇ. ನಾವು ಶಾಂತಿ ಪ್ರಿಯರು;ಆದೆ ಹೇಡಿಗಳಲ್ಲ.ಶಸ್ತ್ರಕ್ಕೆ ಶಸ್ತ್ರಗಳಿಂದಲೇ ಉತ್ತರಿಸುತ್ತೇವೆ ಎಂದು ಘೋಷಿಸಿ ಶತ್ರು ರಾಷ್ಟ್ರಗಳಿಗೆ ದಿಟ್ಟ ಉತ್ತರ ನೀಡಿ ಯುದ್ಧದಲ್ಲಿ ವಿಜಯಧ್ವಜ ಹಾರಿಸಿದ ದಿಟ್ಟ ನೇತಾರ ಅವರು. ಆಡಳಿತ ನಡೆಸಲು ಅವರಿಗೆ ಅವಕಾಶ ಸಿಕ್ಕಿದ್ದು ಕೇವಲ ಹದಿನೆಂಟು ತಿಂಗಳು ಮಾತ್ರ.ಇಂತಹ ಒಂದು ಅದ್ಭುತ ಸಾಮರ್ಥ್ಯ, ದೃಢ ನಿಲುವು ಅವರಲ್ಲಿ ಮೂಡಲು ಕಾರಣ ಬಾಲ್ಯದಲ್ಲಿ ಅವರು ಎದುರಿಸಿದ ಕಠಿಣ ಸವಾಲುಗಳೇ…!

ಲಾಲ್ ಬಹಾದ್ದೂರ್ ಅವರು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು . ಹಾಗಾಗಿ ಅಜ್ಜಿಯ ಮನೆಯಲ್ಲಿ ಬೆಳೆಯಬೇಕಾಗಿತ್ತು.ಕಿತ್ತು ತಿನ್ನುವ ಬಡತನ .ಆದರೆ ಅಪಾರ ಸ್ವಾಭಿಮಾನ. ಒಮ್ಮೆ ಸ್ನೇಹಿತರ ಮಾತು ಕೇಳಿ. ಅವರ ಜೊತೆ ಸೇರಿ ಹೂ ಕೀಳಲೆಂದು,ಸಮೀಪದ ತೋಟಕ್ಕೆ ಹೋಗಿದ್ದರು.

ತೋಟದ ಮಾಲಿ, ಮಕ್ಕಳನ್ನು ಕಂಡು ಕೈಯಲ್ಲಿ ಬಡಿಗೆ ಹಿಡಿದು ಧಾವಿಸಿ ಬಂದ. ಅವನನ್ನು ಕಂಡು ಉಳಿದ ಮಕ್ಕಳೆಲ್ಲಾ ಬೇಗಬೇಗನೆ ಇಳಿದು ಓಡಿಹೋದರು..ಆದರೆ ಮರದ ಮೇಲಿದ್ದ ಈ ಪುಟ್ಟ ಬಾಲಕನಿಗೆ ಬೇಗ ಇಳಿದು ತಪ್ಪಿಸಿಕೊಳ್ಳಲು ಆಗಲಿಲ್ಲ.ಅವನು ಮಾಲಿಯ ಕೈಗೆ ಸಿಕ್ಕಿಕೊಂಡಾಗ,ಎಲ್ಲರ ಮೇಲಿನ ಸಿಟ್ಟನ್ನು ಒಟ್ಟುಗೂಡಿಸಿ ಅವನು ಇವರನ್ನು ಚೆನ್ನಾಗಿ ಹೊಡೆಯಲು ಆರಂಭಿಸಿದ.ನೋವು ತಡೆಯಲಾರದೆ ,ಈ ಪುಟ್ಟ ಬಾಲಕ ಅಳುತ್ತಾ ,’ನಂಗೆ ಅಪ್ಪ ಇಲ್ಲಾಂತ ನೀನು ಇಷ್ಟು ಜೋರು ಹೊಡೆಯುತ್ತಿದ್ದೀಯಲ್ಲಾ ‘ ಎಂದಾಗ,ಅವನು ಕೊಟ್ಟ ಉತ್ತರ ಲಾಲಬಹಾದೂರರಿಗೆ ತಮ್ಮ, ಮುಂದಿನ ಬದುಕನ್ನು ಜವಾಬ್ದಾರಿಯುತವಾಗಿ ನಡೆಸಬೇಕೆಂಬ ಪಾಠವನ್ನು ಕಲಿಸಿತು. ಅಷ್ಟಕ್ಕೂ ಅವನು ಹೇಳಿದ ಮಾತೇನು ಗೊತ್ತಾ,’ಅಪ್ಪ ಇಲ್ಲದೆ ಇರುವುದರಿಂದ ನಿನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ,ಮಗೂ…’ ಸವಾಲಿನ ಸ್ವೀಕಾರ ಅವರ ಬದುಕನ್ನು ಪರಿವರ್ತಿಸಿದ ಮಹತ್ವದ ಕ್ಷಣವಾಗಿತ್ತು.

ಕುವೆಂಪುರವರು, ಯುವಕರಿಗೆ, ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ಎಂದು ಕರೆಕೊಟ್ಟರು.’ಆತ್ಮಶ್ರೀ’ ಎಂದರೇನೆಂದು ಅವರ ಮಾತುಗಳಲ್ಲಿಯೇ ಕೇಳೋಣ, ‘ಮತಿ ಮಾನವನ ಸರ್ವೋತ್ಕೃಷ್ಟ ವಾದ ಆಯುಧ.ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ಮಾತ್ರದಿಂದಲೇ ಪ್ರಾಣಿಮಾತ್ರನಾಗುತ್ತಿದ್ದ ನರಜೀವಿ ಔನ್ನತ್ಯಕ್ಕೆ ಏರಿದ್ದಾನೆ.ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೈವತ್ವಕ್ಕೆ ಏರಬೇಕಾಗಿದೆ.ಮತಿ ಮನುಷ್ಯತ್ವದ ಹಕ್ಕು.ಸರ್ವ ಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಸರ್ವೋತ್ಕೃಷ್ಟವಾದುದು, ಮಹೋನ್ನತವಾದುದು. ಆ ಗುರು,ಈ ಆಚಾರ್ಯ,ಆ ಧರ್ಮಶಾಸ್ತ್ರ, ಮನುಸ್ಮೃತಿ ಮೊದಲಾದವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ,
ಪರೀಕ್ಷಿಸುವ,ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.

ಈಶ್ವರನು ನಮ್ಮಲ್ಲಿಯೂ ಇದ್ದಾನೆ.ಆತನ ಮಹಾಜ್ಯೋತಿಯ ಕಿರಣಗಳು ನಮ್ಮಲ್ಲಿಯೂ ಪ್ರಕಾಶಿಸುತ್ತವೆ .ಆ ಪ್ರಕಾಶವೇ ಮತಿ. ವ್ಯಕ್ತಿಗಳಿಗೆ ಸ್ವಂತಿಕೆ ನೀಡುವ,ಅವರ ಅಸ್ಮಿತೆಯನ್ನು ಕಾಪಾಡುವ, ವಿವೇಕಪೂರ್ಣವಾಗಿ ಬದುಕಿನ ಸಂದರ್ಭಗಳನ್ನು ನಿಭಾಯಿಸುವ ಶಕ್ತಿಯನ್ನು ದಯಪಾಲಿಸುವ ಇಂತಹ ಪ್ರಕಾಶಮತಿಗೆ ಬದುಕಿನ ಎಂತಹ ಸಂದರ್ಭವನ್ನೂ ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಇರುತ್ತದೆ.

*
‘I have learned that success is to be measured not so much by the position that one has reached in life as by the obstacles which he has to overcome while trying to succeed.’
*
Booker T. Washington

ಶಿಕ್ಷಣಕ್ಕೂ ಅಭಿವೃದ್ಧಿಗೂ ಅವಕಾಶವೇ ಇಲ್ಲದಿದ್ದ ಕಾಲದಲ್ಲಿಯೇ ಗುಲಾಮಗಿರಿಯ ಪರಿಸರದಲ್ಲಿ ಜನಿಸಿದ ‘ಬೂಕರ್ ಟಿ.ವಾಷಿಂಗ್ಟನ್,’ ಬಿಳಿಯರ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿದ್ದುದನ್ನು ಕಂಡು ತನ್ನ ಕಲಿಕೆಯ ದಾಹವನ್ನು ತಡೆಯದಾದನಂತೆ.ಯಾವ ಗುರುವಿನ ಬಳಿಯೂ ಹೋಗಲಾರದೆ ತನ್ನ ತಾಯಿ ತಂದು ಕೊಟ್ಟ ಅಕ್ಷರಮಾಲೆಯ ಪುಟ್ಟ ಪುಸ್ತಕವನ್ನೇ ನೋಡಿ ನೋಡಿ ಅಭ್ಯಾಸಮಾಡಿ ಕೆಲವೇ ವಾರಗಳಲ್ಲಿ ಅದನ್ನು ಕರಗತ ಮಾಡಿಕೊಂಡನಂತೆ.

ಶಿಕ್ಷಣಕ್ಕೂ ಅಭಿವೃದ್ಧಿಗೂ ಅವಕಾಶವೇ ಇಲ್ಲದಿದ್ದ ಕಾಲದಲ್ಲಿಯೇ ಗುಲಾಮಗಿರಿಯ ಪರಿಸರದಲ್ಲಿ ಜನಿಸಿದ ‘ಬೂಕರ್ ಟಿ.ವಾಷಿಂಗ್ಟನ್,’ ಬಿಳಿಯರ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿದ್ದುದನ್ನು ಕಂಡು ತನ್ನ ಕಲಿಕೆಯ ದಾಹವನ್ನು ತಡೆಯದಾದನಂತೆ.ಯಾವ ಗುರುವಿನ ಬಳಿಯೂ ಹೋಗಲಾರದೆ ತನ್ನ ತಾಯಿ ತಂದು ಕೊಟ್ಟ ಅಕ್ಷರಮಾಲೆಯ ಪುಟ್ಟ ಪುಸ್ತಕವನ್ನೇ ನೋಡಿ ನೋಡಿ ಅಭ್ಯಾಸಮಾಡಿ ಕೆಲವೇ ವಾರಗಳಲ್ಲಿ ಅದನ್ನು ಕರಗತ ಮಾಡಿಕೊಂಡನಂತೆ.

ಕಲಿಯುವ ಬಯಕೆ ಅವನಲ್ಲಿ ಎಷ್ಟು ತೀವ್ರವಾಗಿತ್ತೆಂದರೆ ಬೆನ್ನು ಮೂಳೆ ಮುರಿಯುವ ದುಡಿತದ ನಡುವೆಯೇ ಆತನ ದೃಢನಿರ್ಧಾರ ಅವನನ್ನು ಅಷ್ಟು ಉತ್ತುಂಗ ಪದವಿಗೆ ಏರಿಸೀತೆಂದು ಯಾರು ಭಾವಿಸಿದ್ದರು? ಬದುಕಿನಲ್ಲಿ ಎದುರಿಸಿದ ಅವಹೇಳನ,ತಿರಸ್ಕಾರ,ದಬ್ಬಾಳಿಕೆ, ಹಸಿವು,ಈ ಸವಾಲುಗಳೇ ಆತ ತನ್ನವರ ಶಿಕ್ಷಣಕ್ಕಾಗಿ ಅಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸಜ್ಜನಿಕೆ, ಸಚ್ಚಾರಿತ್ರ್ಯ,ದುಡಿಮೆಯ ಮೇಲೆ ಪ್ರೀತಿಯುಳ್ಳ ಶಿಕ್ಷಣವನ್ನು ನೀಡಿ,ಇತರರೂ ಅನುಸರಿಸಬಲ್ಲ ಆದರ್ಶ ವ್ಯಕ್ತಿಯನ್ನಾಗಿ ರೂಪಿಸಿತಲ್ಲವೇ..? ಗುಲಾಮಗಿರಿಯ ವಿರುದ್ಧ ಹೋರಾಡುವ ಸವಾಲನ್ನು ಅವನಿಗೆ ನೀಡಿತಲ್ಲವೇ…?
*
ತನ್ನ ದೇಶದಲ್ಲಿದ್ದ ನೀಗ್ರೋ ಗುಲಾಮಗಿರಿಯ ದೌರ್ಜನ್ಯದ ವಿರುದ್ಧ ಹೋರಾಡಲು ಇನ್ನೊಬ್ಬ ಮಹಾನ್ ವ್ಯಕ್ತಿ,ಕಪ್ಪು ಜನಾಂಗಗದವರ ಧೀರೋದಾತ್ತ ನಾಯಕ ಆಫ್ರಿಕಾದ ನೆಲ್ಸನ್ ಮಂಡೇಲಾರನ್ನು ಇಲ್ಲಿ ಮರೆಯಲಾದೀತೇ? ಅದಕ್ಕಾಗೇ ತಮ್ಮ ಬದುಕಿನ ಬಹುಪಾಲನ್ನು ಸೆರೆಮನೆಯಲ್ಲಿ ಕಳೆಯುವ ದುರ್ಗತಿ ಅವರಿಗೆ ಪ್ರಾಪ್ತವಾಯಿತಲ್ಲವೇ?
‘ಆಫ್ರಿಕಾದ ಗಾಂಧಿ’ಎಂಬ ಹೆಸರು ಅದಕ್ಕಾಗೇ ಜಗದ್ವೀಖ್ಯಾತವಾಯಿತು.
*
ಬದುಕಿನಲ್ಲಿ ಸಾಧಿಸುವ ಮನೋಭಾವ ಇರುವವನಿಗೆ ಸವಾಲುಗಳೇ ಪ್ರೇರಣೆ.ಸವಾಲುಗಳಿಗೆ ಹೆದರುವ ನಾವು ಬದುಕಿನಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.
‘ಜೀವನ ಧನ್ಯ’ ಎನಿಸುವುದು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಒಂದು ದೀರ್ಘವಾದ ನಿಟ್ಟುಸಿರಿಟ್ಟಳು ಶ್ರಾವಣಿ ತಮ್ಮ ಬಾಲ್ಯವನ್ನು ರೋಚಕಗೊಳಿಸುತ್ತಿದ್ದ ,
ಏಕಲವ್ಯ, ವಿಶ್ವಾಮಿತ್ರ, ಚಂದ್ರಗುಪ್ತ, ಸಾಮ್ರಾಟ್ ಅಶೋಕ ,ಸತ್ಯ ಹರಿಶ್ಚಂದ್ರ,ಅಕ್ಕಮಹಾದೇವಿ,ಚಾಣಕ್ಯ……ಮುಂತಾದವರ ಮೌಲ್ಯಗಳ ಬಗೆಗೆ ಚಿಂತಿಸುತ್ತಾ…..ಅವರು ಚಿರಸ್ಥಾಯಿಯಾಗಲು ಎದುರಿಸಿದ ಕಠಿಣ ತರ ಸವಾಲುಗಳನ್ನು ನೆನಪಿಸುತ್ತಾ. ಈಗಿನ ಮಕ್ಕಳಿಗೆ ಇಂತಹ ಶಿಕ್ಷಣ ರುಚಿಸುವುದೇ….? ಇಂತಹ ವಿಶಿಷ್ಟ ಬಾಲ್ಯ ದಕ್ಕುವುದೆ ?

ಕಲಿಯುವ ಬಯಕೆ ಅವನಲ್ಲಿ ಎಷ್ಟು ತೀವ್ರವಾಗಿತ್ತೆಂದರೆ ಬೆನ್ನು ಮೂಳೆ ಮುರಿಯುವ ದುಡಿತದ ನಡುವೆಯೇ ಆತನ ದೃಢನಿರ್ಧಾರ ಅವನನ್ನು ಅಷ್ಟು ಉತ್ತುಂಗ ಪದವಿಗೆ ಏರಿಸೀತೆಂದು ಯಾರು ಭಾವಿಸಿದ್ದರು? ಬದುಕಿನಲ್ಲಿ ಎದುರಿಸಿದ ಅವಹೇಳನ, ತಿರಸ್ಕಾರ, ದಬ್ಬಾಳಿಕೆ, ಹಸಿವು ಈ ಸವಾಲುಗಳೇ ಆತ ತನ್ನವರ ಶಿಕ್ಷಣಕ್ಕಾಗಿ ಅಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸಜ್ಜನಿಕೆ, ಸಚ್ಚಾರಿತ್ರ್ಯ, ದುಡಿಮೆಯ ಮೇಲೆ ಪ್ರೀತಿಯುಳ್ಳ ಶಿಕ್ಷಣವನ್ನು ನೀಡಿ,ಇತರರೂ ಅನುಸರಿಸಬಲ್ಲ ಆದರ್ಶ ವ್ಯಕ್ತಿಯನ್ನಾಗಿ ರೂಪಿಸಿತಲ್ಲವೇ..? ಗುಲಾಮಗಿರಿಯ ವಿರುದ್ಧ ಹೋರಾಡುವ ಸವಾಲನ್ನು ಅವನಿಗೆ ನೀಡಿತಲ್ಲವೇ…?

*
ಬದುಕಿನಲ್ಲಿ ಸಾಧಿಸುವ ಮನೋಭಾವ ಇರುವವನಿಗೆ ಸವಾಲುಗಳೇ ಪ್ರೇರಣೆ. ಸವಾಲುಗಳಿಗೆ ಹೆದರುವ ನಾವು ಬದುಕಿನಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.
‘ಜೀವನ ಧನ್ಯ’ ಎನಿಸುವುದು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ, ಒಂದು ದೀರ್ಘವಾದ ನಿಟ್ಟುಸಿರಿಟ್ಟಳು ಶ್ರಾವಣಿ ತಮ್ಮ ಬಾಲ್ಯವನ್ನು ರೋಚಕಗೊಳಿಸುತ್ತಿದ್ದ, ಏಕಲವ್ಯ, ವಿಶ್ವಾಮಿತ್ರ, ಚಂದ್ರಗುಪ್ತ, ಸಾಮ್ರಾಟ್ ಅಶೋಕ, ಸತ್ಯ ಹರಿಶ್ಚಂದ್ರ, ಅಕ್ಕಮಹಾದೇವಿ, ಚಾಣಕ್ಯ ಮುಂತಾದವರ ಮೌಲ್ಯಗಳ ಬಗೆಗೆ ಚಿಂತಿಸುತ್ತಾ…..ಅವರು ಚಿರಸ್ಥಾಯಿಯಾಗಲು ಎದುರಿಸಿದ ಕಠಿಣ ತರ ಸವಾಲುಗಳನ್ನು ನೆನಪಿಸುತ್ತಾ….ಈಗಿನ ಮಕ್ಕಳಿಗೆ ಇಂತಹ ಶಿಕ್ಷಣ ರುಚಿಸುವುದೇ….?

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW