‘ಭಾರತ್ ಸ್ಟೋರ್ಸ್’ ಸಿನಿಮಾ – ಡಾ. ಕೃಷ್ಣವೇಣಿ. ಆರ್. ಗೌಡ

ಪಿ ಶೇಷಾದ್ರಿ ಅವರ ನಿರ್ದೇಶನದ ‘ಭಾರತ್ ಸ್ಟೋರ್ಸ್’ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ದತ್ತಾತ್ರೇಯ, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ‘ಭಾರತ್ ಸ್ಟೋರ್ಸ್’ ಕುರಿತು ಡಾ. ಕೃಷ್ಣವೇಣಿ. ಆರ್. ಗೌಡ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ಕನಸ ಗಾಳಿಯಲಿ ಹಾರುತಿದೆ, ಕ್ರೆಡಿಟ್ ಕಾರ್ಡ್ ಎನ್ನುವ ಗಾಳೀಪಟ…ಹಿಂದೊಮ್ಮೆ ತಿರುಗಿ ನೋಡಿದಾಗ 1980 ರ ದಶಕದಲ್ಲಿ ಒಬ್ಬರು ದುಡಿಯುವುದು 6 ಜನ ಕೂತು ಉಣ್ಣುವುದು. ಹಬ್ಬ ಬಂದರೆ ಬಟ್ಟೆ ಬರೇ, ಕಿರಾಣಿ ತರುವುದು ಮನೆಯವರೆಲ್ಲ ಒಮ್ಮತವಾಗಿ ಆಚರಿಸುವ ಒಂದು ಕಾಲ, ಕಿರಾಣಿ ಅಂಗಡಿ, ಎಲೆ ಅಡಿಕೆಗೆ ಸುಣ್ಣ ಹಚ್ಚಿ ಪಾನ್ ಮತ್ತು ಬೀಡಿ ಮಾರುವ ಡಬ್ಬಿ ಅಂಗಡಿ, ಕಾಕಾನ ಹೋಟೆಲ್ಲಿನ ಟೀ ಈ ಜಮಾನ ವೊಂದಿತ್ತು. ಪ್ರತಿ ಮನೆಯಲ್ಲಿ ರೇಡಿಯೋದಲ್ಲಿ ಬರುವ 15 ನಿಮಿಷದ ವಾರ್ತೆ, ಅನಾಸಿನ, ಲೈಫ್ ಬಾಯ್ ಜಾಹಿರಾತು ಹಾಡು ಕೇಳುವ ಸಡಗರದ ಜಾತ್ರೆಯ ಪುಟ ಇಂದಿಲ್ಲ.

24 ಗಂಟೆಯ ರೇಡಿಯೋ ಜಾಕಿ ಶಾಪಿಂಗ್ ಮಾಲ್ ಗಳಲ್ಲೇ ಸೀಟಿ ಕೂಡಾ ಹಾಕದ ಐನೊಕ್ಸ್ ಎನ್ನುವ ಚಿತ್ರ ನೋಡುವ ಕೋಣೆಗಳು, ಇವುಗಳ ಪಥ ದತ್ತ ಜನ ಮರುಳೋ ಜಾತ್ರೆ ಮರುಳೋ ಎನ್ನುವ ಹಾಗೇ ಒಂದು ಕೊತ್ತಂಬರಿ ಚೂಡಿನಿಂದ ಹಿಡಿದು ವಿವಿಧ ತರಹದ ಮನುಷ್ಯನ ಕೈಗೆ ಎಟುಕುವ ಸರಕು ಮಾನವ ತೇಲಾಡುವ ಆಕರ್ಷಣೆಯ ಕೇಂದ್ರಗಳಾಗಿವೆ. ಕಾರಣ ಆಫೀಸ್ ನಲ್ಲಿ ಕೊಡುವ ಕ್ರೆಡಿಟ್ ಕಾರ್ಡ್ ಎನ್ನುವ ಜಾಗತೀಕರಣ ಆ ಕಡೆ ತಿರುಗುವ ಹಾಗೇ ಮಾಡಿದೆ. ಅಲ್ಲದೆ ದಸರಾ, ದೀಪಾವಳಿ, ಯುಗಾದಿ ಇಂತಹ ಹಬ್ಬಗಳಲ್ಲಿ ಬೈ ಒನ್ ಗೆಟ್ ಒನ್ ಜಾಹೀರಾತು ಜನರ ಮನವನ್ನು ಕೇಂದ್ರೀಕರಿಸಿದೆ. ಮಾರುಕಟ್ಟೆಗಳ ಮೋಡಿ ಈ ಗಾಡಿಯತ್ತ ತಿರುಗಿಸಿದೆ. ಗಿರಿಯಾಸ್, ಸ್ಮಾರ್ಟ್ ಬಜಾರ್ ಶಾಪಿಂಗ್ ಮಾಲ್ ನಲ್ಲಿ ಟ್ರ್ಯಾಲಿಯಲ್ಲಿ ಮಗುವನ್ನು ಕೂರಿಸಿ ಜೊತೆಗೆ ಒಂದೊಂದೇ ತಮಗೆ ಬೇಕಾದ ಸಾಮಾನುಗಳನ್ನು ಹಾಕಿಕೊಂಡು ಬಿಲ್ ನತ್ತ ಪಯಣಿಸಿ ಕಾರ್ಡ್ ಸ್ವೀಪ್ ಮಾಡಿ ಪಾಯಿಂಟ್ಸ್ ಗ್ರೇಡ್ ಗಳ ನಡುವೆ ಸಾಗುವ ಇಂದಿನ ಭಾರತದಲ್ಲಿ ಹೊಸ ಲೋಕವನ್ನೇ ಕಲ್ಪಿಸಿ 5 ಪೈಸೆಗೆ 25 ಪೈಸೆ ಲಾಭ ಮಾಡಿಕೊಳ್ಳುವ ಷೇರು ಲಾಭದೊಳು ಹಗಲಿನಲ್ಲಿ ಕಣ್ಪಟ್ಟಿಯ ಕುರುಡು ಕಾಂಚನ ದೊಳು ನವ ಮಾರುಕಟ್ಟೆಯ ರಾಕೆಟ್ ತೇಲುತಿದೆ. ಎಲ್ಲಿ ತೊಗೊಂಡ್ರು ಮೆರಿಟ್ ಅಂಡ್ demerit ಇಲ್ಲದೆ ಆರ್ಥಿಕ ಚಲನೆ ಸಾಗೋಲ್ಲ. ಆದ್ರೂ ಜಗತ್ತು ಮತ್ತು ಜನ ಒಪ್ಪಿಕೊಂಡಿದೆ.


ಯಾಕೆ ನಾ ಇಲ್ಲಿಯವರೆಗೆ ಎಳೆದೆ ಎಂದರೆ ಮೊನ್ನೆ ನ್ಯಾಷನಲ್ ಅವಾರ್ಡ್ ಹೊಡೆದ 2013 ರಲ್ಲಿ ತೆರೆಗೆ ಕಂಡ ದತ್ತಾತ್ರೇಯ ಅಭಿನಯದ ‘ಭಾರತ್ ಸ್ಟೋರ್ಸ್’ ಎನ್ನುವ ಚಿತ್ರ ದೊಳು ಇದು ಬರೀ ಕಿರಾಣಿ ಅಂಗಡಿಯಾಗಿರದೆ ಒಂದು ಬಸ್ ಸ್ಟಾಪ್ ಕೂಡಾ ಆಗಿರುತ್ತೆ. ಗೋವಿಂದ ಶೆಟ್ಟಿ ಪಾತ್ರದಲ್ಲಿ ಒಳ್ಳೆ ಗುಣ ಮಟ್ಟದ ದಿನಸಿ ಸಾಮಾನುಗಳನ್ನು ಮನೆಗೆ ಕಳಿಸಿ ಕೊಡುವ ಶೆಟ್ಟರ ವ್ಯಾಪಾರ ಜನ ಸ್ಪಂದನೆಯೊಳು ಬೆರೆತು ಕಷ್ಟ ಸುಖಕ್ಕೂ ನೆರವಾಗಿರುತ್ತೆ. ಅಂತ ಸ್ಟೋರ್ ಜಾಗತಿಕ ಚಕ್ರದಿ ಕ್ರೆಡಿಟ್ ಕಾರ್ಡ್ ನ ಚಕ್ರಕ್ಕೆ ಸಿಲುಕಿ ದೀಪಾವಳಿಯ ಬೆಳಕಿನ ಪಟಾಕಿ ಸದ್ದಿನಲಿ ಕರೆಂಟ್ ಇಲ್ಲದೆ ಮೊoಬತ್ತಿ ಹಚ್ಚಿ ದೇವರ ಹುಂಡಿ ಹೊಡೆದು ಕೆಲಸ ಮಾಡುವ ಆಳಿಗೆ ಸಂಬಳ ಕೊಡಬೇಕಾದ ಪರಿಸ್ಥಿತಿ ಒದಗುತ್ತೆ.

ತಂದೆ ಸಾಲಕ್ಕೆ ನೆರವಾಗಿದ್ದ ಭಾರತ್ ಸ್ಟೋರ್ ನ ಹುಡುಕಿ ಸುಧಾರಾಣಿ ಬರುವ ಹೊತ್ತಿಗೆ ಶೆಟ್ಟರು ವೃದ್ದಾಶ್ರಮಕ್ಕೆ ಹೋಗಿ ಹಣ ತಲುಪಿಸಲು ಆಗದೆ ಕೊನೆಗೆ ಶೆಟ್ಟರು ತೀರಿ ಹೋಗುವ ಪರಿಸ್ಥಿತಿ ಒದಗುತ್ತದೆ. ನಿಜಕ್ಕೂ ಈ ಭಾರತ್ ಸ್ಟೋರ್ ಚಿತ್ರ ಕಂಡಾಗ ಹಳೆಯ ದಿನದತ್ತ ನಮ್ಮ ಅಜ್ಜಿಯೊಂದಿಗೆ ಕಿರಾಣಿ ಅಂಗಡಿಗೆ ಹೋಗಿ ಸಾಲದ ರೂಪದಲ್ಲಿ ದಿನಸಿ ಸಾಮಾನು ತರುತ್ತಿರುವ ಆ ಕಷ್ಟದ ಬುತ್ತಿ ನೆನಪಾಯಿತು. ದತ್ತಾತ್ರೇಯ ಅವರ ಅಭಿನಯ ಅಲ್ಲ ಜನಗಳಿಗೆ ತಿಳುವಳಿಕೆ ತಿಳಿಸುವ ಮರು ಚರಿತ್ರೆಯಾಗಿದೆ.


  • ಡಾ. ಕೃಷ್ಣವೇಣಿ. ಆರ್. ಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW