‘ಕವಿತೆ ಬರೆಯುವುದೇಕೆ ನಿಲ್ಲಿಸಿದೆ’ ಕವನ

ನೈರಾಶ್ಯದ ಕಾರ್ಮೋಡಗಳ ನಡುವೆಯೇ ಭರವಸೆಯ ಸೂರ್ಯೋದಯವಾಗಬೇಕು ಅದಕಾದರು ಕಾವ್ಯ ಬರೆಯಬೇಕು. ಬರೆಯುತ್ತಲೇ ಬದುಕಬೇಕು. ಬದುಕುತ್ತಲೇ ಬರೆಯಬೇಕು. ಹೀಗೆ ಬದುಕಿ ಬರೆವ, ಬರೆಯುತ್ತ ಬದುಕುವ ಛಲವ ಬಲವ ಸದಾ ಒಲವಿಂದ ನನ್ನ ಈ ಜೋಗಿ ಜಂಗಮನ ಜೋಳಿಗೆ ತುಂಬುವವಳಿಗಾಗಿಯಾದರೂ..!!!

(ಮತ್ತೆ ಮತ್ತೆ ನನ್ನ ಬರಹಕ್ಕೆಳೆಸುವ ಅಕ್ಷರಗಳಕ್ಕರೆಯ ಎಲ್ಲ ಸಕ್ಕರೆಯ ಮನಸುಗಳಿಗೆ)

ಕವಿತೆ ಬರೆಯುವುದೇಕೆ
ನಿಲ್ಲಿಸಿದೆ ಎಂದೇಕೆ ಕೇಳಿದೆ?
ಎದೆಯ ಗೂಡ ನಿಗೂಢ
ದುಗುಡ ನಿನಗಿಂದು ಕೇಳದೆ?

***

ಖಾಲಿ ಹಾಳೆಗಳ ತುಂಬೆಲ್ಲ
ಮತ್ತದೇ ನಿಶ್ಯಬ್ಧ ಪದಗಳು
ತನಿಯೊಡೆಯದ ಭಾವಗಳಲಿ
ನಿಷ್ಪ್ರಂಪಚದ ಪಲುಕುಗಳು

***

ಉಡುಗಿಹೋದ ದನಿಯ ಜಾಡಲಿ
ನಿನಗೊಂದು ಮರೆಯದಾ ಹಾಡು
ಹೇಳು ಎಲ್ಲಿಂದ ಎರವಲು ತರಲಿ
ಚೈತ್ರ ಚಿಗುರದ ಕನಸಿನ ಪಾಡು

***

ಪರಾಗವಿರದ ಹೂವಿನೆದೆಯ ಬಗೆದು
ಒಲವ ರಾಗ ಸುಧೆಯ ಕಾಣಲಹುದೆ
ಮಾನುಷತೆಯೇ ಮರಣಿಸಿದ ಕಾಲಕೆ
ಕವಿತೆ ಜೀವಂತಿಕೆಯ ಸಾರಬಲ್ಲದೆ

***

ಕವಿಗಣ್ಣಿನ ಸೌಂದರ್ಯ ನೋಟಕೆ
ನೈರಾಶ್ಯದ ಕಡುಗತ್ತಲು ಕವಿದಂತಿದೆ
ಬರಿದೆ ಬರೆಯದೆ ನನಗೇ ನಾನೇ
ಹೇಳದೆ-ಕೇಳದೆ ಹೀಗೆಯೇ ಸುಮ್ಮನಾದೆ


  • ರಾಜ್ ಆಚಾರ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW