‘ಕೃಷ್ಣ ಕನಕನ ಪ್ರೇಮ’ ಕವನ – ಕೊಟ್ರೇಶ್ ಅರಸೀಕೆರೆ

ಕನಕದಾಸ ಜಯಂತಿ ಪ್ರಯುಕ್ತ ಕವಿ ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ ಅವರು ಬರೆದಿರುವ ಕವನ ಅರ್ಥಪೂರ್ಣವಾಗಿದೆ, ತಪ್ಪದೆ ಓದಿ…

ಕನಕ ಕೃಷ್ಣನ ಮುಖ
ತಿರುಗಿಸಿದ
ಕೃಷ್ಣ ಕನಕನ ಪ್ರೇಮ
ದಲಿ ಮಾಗಿದ

ಕೃಷ್ಣ ನಿಜ ದೇವರೆನಿಸಿದ
ಕನಕ ಅಪ್ಪಟ ಭಕ್ತನೆನಿಸಿದ
ಕೃಷ್ಣ ಕನಕನ ಪ್ರೇಮ
ಕಥೆಯಾಯಿತು;

ಈ ಕಥೆ ಗೊತ್ತಿಲದ ಜನ
ಕೃಷ್ಣನಿಗೆ ಮಂದಿರ
ನಿರ್ಮಿಸಿದರು
ಕನಕನಿಗೆ ಪ್ರತಿಮೆ
ನಿಲ್ಲಿಸಿದರು

ಆಗಿನಿಂದ ಕೃಷ್ಣ
ಮರೆಯಾದ
ಕನಕನೂ ಇಲ್ಲಿ
ಇಲ್ಲವಾದ


  • ಕೊಟ್ರೇಶ್ ಅರಸೀಕೆರೆ – ಕವಿಗಳು, ಅರಸೀಕೆರೆ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading