‘ಅಂತರಂಗದ ಧ್ಯಾನ’ ಗಜಲ್ ಸಂಕಲನ ಪರಿಚಯ -ನಾರಾಯಣ ಸ್ವಾಮಿ

‘ನಾನಿ’ ಎನ್ನುವ ಕಾವ್ಯನಾಮದ ಮೂಲಕ ಗಜಲ್ ಕಾರನಾಗಿ ಚಿರಪರಿಚಿತರಾದ ನಾರಾಯಣ ಸ್ವಾಮಿ ಅವರ ‘ಅಂತರಂಗದ ಧ್ಯಾನ’ ಗಜಲ್ ಸಂಕಲನದ ಕುರಿತು ಮಮತಾ ಕೆ ಎಸ್ ಅವರು ಬರೆದಿರುವ ಕೃತಿ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಅಂತರಂಗದ ಧ್ಯಾನ
ಲೇಖಕರು :ನಾರಾಯಣ ಸ್ವಾಮಿ
ಪ್ರಕಾರ : ಗಜಲ್
ಪ್ರಕಾಶನ : ಆಶಾ ಪ್ರಕಾಶನ
ಬೆಲೆ : ೧೨೦ /

‘ನಾನಿ’ ಎನ್ನುವ ಕಾವ್ಯನಾಮದಿಂದ ಗಜಲ್ ರಚನೆ ಮಾಡಿರುವ ನಾರಾಯಣ ಸ್ವಾಮಿಯವರ ಸರಳತೆ, ಮುಗ್ಧತೆ ಎಷ್ಟರ ಮಟ್ಟಿಗೆ ಸ್ನೇಹ ಜೀವಿಗಳ ಹೃದಯಕ್ಕೆ ಹತ್ತಿರವಾಗುತ್ತದೆಯೋ ಅವರ ಅಂತರಂಗದ ಧ್ಯಾನ ಎಂಬ ಹೆಸರಿನಿಂದ ಮೂಡಿರುವ ಕೃತಿಯಲ್ಲಿನ ಗಜಲ್ ಗಳು ಅದಕ್ಕಿಂತಲೂ ಮಿಗಿಲು ಎಂದರೆ ತಪ್ಪಾಗಲಾರದು. ಒಂದೊಂದು ಗಜಲ್ ಗಳು ನಮ್ಮನ್ನೇ ಪಾತ್ರಧಾರಿಯಾಗಿ ಸೃಷ್ಟಿಸಿ ಕಾಣದ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತವೆ.

ನಾನಿ ಎನ್ನುವ ಕಾವ್ಯ ನಾಮವಂತೂ ಜೋಡಿ ಕೈಯನ ಚಪ್ಪಾಳೆಯಂತೆ ( ನಾನು ನೀನು) ಅನಿಸಿತು. ಅವರು ಬರೆದ ಒಂದೊಂದು ಗಜಲ್ ಮತ್ತು ಆದರ ಭಾವ ಅವಿಭಕ್ತ ಕುಟುಂಬದ ಆಹ್ಲಾದಕರ ತೋಷವನ್ನು ನೀಡುತ್ತದೆ. ಭಾವನೆಗಳು ಹುಟ್ಟುವುದು ಸಹಜ ಆದರೆ ಭಾವನೆಗಳ ಕಟ್ಟಿ ಜನರೆದೆಯನು ತಟ್ಟಿ ಎಬ್ಬಿಸುವ ಮಹಾನ್ ಕಲೆಗಾರನೆಂದರೆ ಕವಿ. ತನ್ನ ಬರವಣಿಗೆಯಲ್ಲಿ ಎಲ್ಲರ ಹೃನ್ಮನ ಗೆದ್ದು ಅವರಲೊಬ್ಬನಾಗಿ ಆತ್ಮೀಯತೆ ಗಳಿಸಿಕೊಳ್ಳುತ್ತಾನೆ.

ನಾನು ಇದುವರೆಗೂ ಯಾವುದೇ ಪುಸ್ತಕದ ಬಗ್ಗೆ ವಿಮರ್ಶೆ ಬರೆದವಳಲ್ಲ ಆದರೆ ಏಕೋ ಗೊತ್ತಿಲ್ಲ ನಾನಿಯವರ ಗಜಲ್ ನನ್ನ ಮನಕ್ಕೆ ಅಂದರೆ ಕಡಿಮೆ ಆತ್ಮಕ್ಕೆ ಹತ್ತಿರವಾಗಿದೆ.
ಹರಿದ್ಹೋದ ಸೀರೆಯ ಸೇರಗಲ್ಲಿ ಅದೆಷ್ಟು ಸಿಂಬಳ ಮೆತ್ತಿ ಕೊಂಡಿದೆ ಎಷ್ಟು ಸರಳ ನೈಜ ಘಟನೆ ಅಲ್ಲವೇ.

ನಾನಿಯವರ ಗಜಲ್ ನಲ್ಲಿ ಕೇವಲ ತಾಯಿ ನೋವು ಅಷ್ಟೇ ಅಲ್ಲ ಪ್ರೀತಿ, ಪ್ರೇಮ, ಸಾಮಾಜಿಕ ವ್ಯವಸ್ಥೆಯ ಕಳಕಳಿ. ಸವಿಯಾದ ನೆನಪುಗಳು, ಬೇವಿನೊಲು ಕಹಿ ಘಟನೆಗಳು ಎಲ್ಲರ ರೀತಿಯ ಚಿಂತನೆಗಳ ಹೊಂದಿರುವ ಅತ್ಯಾದ್ಭುತ ಸರಳ ಸುಂದರ ಸಾಲಿನ ಗಜಲ್ ಕೃತಿ ಇದಾಗಿದೆ.

ಬಹುಕಾಲದಿಂದ ನೋವ ಬೇನೆ ಹೊತ್ತಿ ತಿರುಗುತ್ತೀರುವೆ ಅದು ಜನ ಸಮೂಹದಲ್ಲಿ ಸ್ಪೋಟವಾಗುವ ಮುನ್ನ ಮಾರಿ ಬಿಡುವೆ ನಾನಿಯವರ ಅದ್ಭುತ ಆತ್ಮ ಚಿಂತನೆ ನೋಡಿ ನೋವು ಸಿಡಿದು, ಯಾರಿಗೂ ತೊಂದರೆ ಆಗಬಾರದು. ಅದಕ್ಕಾಗಿ ದೂರ ನೋವನ್ನು ಮಾರಿ ಎಲ್ಲರಿಗೂ ಖುಷಿಯನ್ನು ನೀಡುವೆ ಅಬ್ಬಬ್ಬಾ ಅದ್ಭುತ ಚಿಂತನೆ. ಬರಿ ರಾತ್ರಿಯ ಕತ್ತಲನ್ನು ಮಾತ್ರ ನೀನು ಸರಿಸಲಿಲ್ಲ, ಮೋಹವನ್ನು ಮಾತ್ರ ನೀನು ಬಯಸಲಿಲ್ಲ, ನನ್ನೆಲ್ಲ ನೋವು ನಲಿವುಗಳ ಸರಿ ಸಮನಾಗಿ ತೂಗಿಸ ಬಂದವಳು… ಎಂದು ಬಾಳ ಸಂಗಾತಿಗೆ ಹೇಳುವ ಪರಿ ಅತ್ಯದ್ಭುತವಾಗಿದೆ ಏಳನೇ ಗಜಲ್ ನಲ್ಲಿ.

‘ಅಂತರಂಗದ ಧ್ಯಾನ’ ಗಜಲ್ ಸಂಕಲನ ಕವಿ ನಾರಾಯಣ ಸ್ವಾಮಿ

ನಮ್ಮ ದೇಶದ ದುರ್ವಿಧಿಯನ್ನು ಬಾಪೂಜಿಯವರಿಗೆ ಬಿಡಿಸಿ ಹೇಳುತ್ತಿದ್ದಾರೆ, ಅಷ್ಟೇ ಸರಿ ಪಡಿಸಲು ಅಗದಿರುವಷ್ಟು ವ್ಯವಸ್ಥೆ ಹದಗೆಟ್ಟಿದೇ. ಇಲ್ಲಿ ಮತ್ತೆ ಹುಟ್ಟಬೇಕು ಎನ್ನುವ ಆಸೆ ಬಿಟ್ಟು ಬಿಡು ಎಂದು ಕಿವಿ ಮಾತನ್ನು ಹೇಳುತ್ತಿದ್ದಾರೆ. ವಿರಹ ವೇದನೆಗಳು ಪ್ರೇಮ ಸಲ್ಲಾಪಗಳು, ಪ್ರೀತಿಯ ಹುಡುಕಾಟ, ಚಿಗುರಿದ ಕನಸುಗಳು, ಮುದುಡಿದ ಬಯಕೆಗಳು ಹೀಗೆ ಒಂದಕ್ಕಿಂತ ಒಂದು ಹೆಚ್ಚು ಚೆಲುವಾಗಿ ಮೂಡಿಹ ಗಜಲ್ ಗಳು ಆಕರ್ಷಿತವಾಗಿವೆ.

ಕರಿಯನೆಂದು ಜರಿಯಬೇಡ ಬಿರುಬಿಸಿಲಿನಲಿ ಬೆಂದು ಕರಕ ಲಾಗಿದ್ದೇನಷ್ಟೇ ಅಂದ್ರೆ ಕವಿಯು ತನ್ನನ್ನು ಹೊಗಳಿಕೊಂಡ ಹಾಗೆಯೂ ಇದೇ ಬಣ್ಣವನ್ನು ನೋಡಿ ಅಳೆಯಬೇಡಿ ಒಳ ಮನಸಿನ ಗುಣದಾಳಕ್ಕೆ ಇಳಿದು ನೋಡಿ ಎಂಬ ನೀತಿಯು ಇದೇ ಎಷ್ಟು ಬಣ್ಣಿಸಿದರೂ ಕಡಿಮೆ ಎನಿಸುವ ನಿಮ್ಮ ಎರಡನೇ ಕೃತಿಯಾದ ಅಂತರಂಗದ ಧ್ಯಾನ ದಂತೆಯೇ ಮತ್ತಷ್ಟು ಉತ್ತಮ ಕೃತಿಗಳು ಬಿಡುಗಡೆ ಹೊಂದಿ ಲೋಕ ಕಲ್ಯಾಣವಾಗಲಿ ಸರ್ ಹೆಮ್ಮೆ ಎನಿಸಿತು ನಿಮ್ಮ ಸ್ನೇಹ ನನಗೆ ಸಿಕ್ಕದ್ದು.

ಇಂತೀ ನಿಮ್ಮ ಪುಸ್ತಕ ಹಾಗೂ ನಿಮ್ಮ ಅಭಿಮಾನಿ


  • ಮಮತ ಕೆ ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW