‘ಲೀಕ್ ಔಟ್’ ಅಕ್ಷತಾ ಪಾಂಡವಪುರ ಮತ್ತು ಮಲ್ನಾಡ್ ರಂಗಪ್ರಿಯರು

ಖ್ಯಾತ ನಟಿ ಅಕ್ಷತಾ ಪಾಂಡವಪುರ ಅವರ “ಲೀಕ್ ಔಟ್ ” ಕಥಾ ಸಂಕಲನ ರಂಗ ಪ್ರಯೋಗವಾದಾಗ ಅದನ್ನು ನೋಡಿದ ವೀಕ್ಷಕರು ಹೇಗೆ ಸ್ವೀಕರಿಸಿದರು, ಅದರ ಅನುಭವ ಹೇಗಿತ್ತು ಎನ್ನುವುದನ್ನು ಪದ್ಮಜಾ ಜೋಯ್ಸ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಈ ಹೆಸರು ಕೇಳಿದೊಡನೆ ಯಾರಿಗಾದರೂ ಅಚ್ಚರಿಯ ಜೊತೆಗೆ ವಿಚಿತ್ರ ಅನ್ನಿಸಬಹುದೇನೋ?!. ಬರಹಗಾರರಿಗೆ ಲೀಕ್ ಔಟ್  ಹೆಸರು ಬೇಗನೇ ತಲೆಗೆ ಹೋಗೋದು ಕಷ್ಟ.

ಇದು ನಿಜಕ್ಕೂ ಅರ್ಥವಾಗಬೇಕೆಂದರೆ ನೀವು ಬರೀ ಅಕ್ಷತಾ ಪಾಂಡವಪುರ ಅವರ “ಲೀಕ್ ಔಟ್ ” ಕಥಾ ಸಂಕಲನವನ್ನು ಓದಿದ್ರೆ ಸಾಲದು, ಅವರ ವಿಭಿನ್ನ ಸಂಯೋಜನೆಯ ಲೀಕ್ ಔಟ್ ಕಥನ ಪಯಣವನ್ನು ಒಮ್ಮೆ ನೋಡಬೇಕು. ವಿಶಿಷ್ಟ ರಂಗ ಪ್ರಯೋಗ ಇದಾಗಿದ್ದು , ಇದರ ರಚನೆ, ಸಂಯೋಜನೆ ಏಕವ್ಯಕ್ತಿ ಅಕ್ಷತಾ ಪಾಂಡವಪುರರಾಗಿದ್ದಾರೆ. ಇದೊಂದು ಏಕವ್ಯಕ್ತಿ ನಾಟಕ ಪ್ರದರ್ಶನ. ಈ ನಾಟಕದ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿ ಪ್ರೇಕ್ಷಕನೇ ಪಾತ್ರಧಾರಿ  ಆಗೋದ್ರಿಂದ ಇದು ರಂಗಭೂಮಿಯ ವಿಶಿಷ್ಟ ಕಲ್ಪನೆ ಅಂತಲೇ ಹೇಳಬಹುದು. ಸಮಾಜದ ಎಂತವರಿಗೂ ಸುಲಭವಾಗಿ ಅರ್ಥವಾಗುವ ಒಂದು ಪ್ರಯೋಗವು ಇದಾಗಿದೆ.

ನಮ್ಮಿಂದಲೇ ನಮಗಾಗಿಯೇ ತೆರೆದುಕೊಳ್ಳುವ, ಭಾವನೆಗಳು ಹೊರಹೊಮ್ಮವ ಈ ಪ್ರಯೋಗಕ್ಕೆ ಲೀಕ್ ಔಟ್ ಸಮಂಜಸ ಹೆಸರು. ಅಕ್ಷತಾ ನಂಗೆ ಬಹಳ ಹಿಂದಿನಿಂದಲೂ ಪರಿಚಯ. ಅವಳ ವಿಭಿನ್ನ ಆಲೋಚನೆಗಳು, ಚಟುವಟಿಕೆಗಳು, ಭಿನ್ನವಾದ ಪ್ರಯತ್ನ, ಜೇನುಹುಳುವಿನಂತ ಕ್ರಿಯಾಶೀಲತೆ ನೋಡಿದಾಗೆಲ್ಲ ಛೇ… ಅವಳ ಜೊತೆಗೆ ಯಾವಾಗಲು ಇರಬೇಕು ಎನ್ನಿಸಿದ್ದು ನಿಜ. ನೀನಾಸಂ ಮತ್ತು ಏನ್ ಎಸ್ ಡಿ ಪದವೀಧರೆ, ಎರಡು ಬಾರಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ಪ್ರತಿಭಾನ್ವಿತ ನಟಿ.

‘ಜನಮನ ಅಂಗಡಿ’ ಹೊಸ ಉದ್ಯಮವನ್ನು ಆರಂಭ ಮಾಡಿ , ಹೊಸಬಗೆಯ ವಸ್ತ್ರವಿನ್ಯಾಸ, ವಿಶಿಷ್ಟ ಆಭರಣಗಳು ಹೀಗೇ ಎಲ್ಲಾದರಲ್ಲೂ ತನ್ನದೇ ಛಾಪು ಮೂಡಿಸಿ,  ಅಡಿಗೆ ಚಾನಲ್ ಮಾಡಿ ಅದರಲ್ಲೂ ವಿಶೇಷತೆ ಮೆರೆದವಳು ಅಕ್ಷತಾ. ಇಂತಹ ಅಕ್ಷತಾ ಕಥಾ ಸಂಕಲನ ಒಂದನ್ನು ಬರೆದು ಬಿಡುಗಡೆ ಮಾಡಿದಾಗ ಅದೂ ವಿಶೇಷವಾಗೆ ಇರತ್ತೆ ಅಂದ್ಕೊಂಡೆ, ಅಷ್ಟರಲ್ಲೇ ಅವಳು ಅದನ್ನು ವಿಶೇಷ ರೀತಿಯಲ್ಲಿ ರಂಗ ಪ್ರಯೋಗ ಮಾಡಿ ಯಶಸ್ವಿಯಾದಳು. ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸ ಮಾಡಿದಾಗ ಛೇ…ನನಗೆ ನೋಡಲಾಗುತ್ತಿಲ್ಲ ಎಂದು ಬೇಸರವಾಗಿತ್ತು. ಆದರೆ ಅಕ್ಷತಾ ಅದೇ ನಾಟಕವನ್ನು ಶಿವಮೊಗ್ಗದಲ್ಲಿ ಪ್ರದರ್ಶಿಸಲು ಯೋಚಿಸಿದಾಗ ನನಗೆ ಎಲ್ಲಿಲ್ಲದ ಆನಂದವಾಯಿತು. ತಮ್ಮ ಮ್ಯಾಥ್ಯೂ ಜೊತೆಗೆ ಸೇರಿ ನಾಟಕ ಆಯೋಜಿಸಿದಾಗ ಈ ಲೀಕ್ ಔಟ್ ಪ್ರದರ್ಶನ ನಿರೀಕ್ಷೆ ಮೀರಿ ಜನ ಸೇರಿದ್ದರು. ಅಷ್ಟೊಂದು ಜನ ನಮ್ಮ ‘ನೆಸ್ಟ್ ಹೋಮ್ ಸ್ಟೇ’ ನಲ್ಲಿ ಸೇರಿದ್ದು ನೋಡಿ ನಿಜಕ್ಕೂ ಖುಷಿಯಾಯಿತು.

This slideshow requires JavaScript.

 

ಈ ನಾಟಕದಲ್ಲಿ ಅಕ್ಷತಾ ಪ್ರೇಕ್ಷಕರನ್ನು ಆತ್ಮೀಯವಾಗಿ ಒಳಪಡಿಸಿಕೊಳ್ಳುವ ವಿಶಿಷ್ಟ ಪ್ರಯೋಗಕ್ಕೆ ಮತ್ತು ಪ್ರತಿಯೊಬ್ಬರೂ ಸ್ಪಂದಿಸಿದ ರೀತಿ ನಿಜಕ್ಕೂ ಹೊಸ ಅನುಭವನ್ನು ಕೊಟ್ಟಿತು. ರಂಗಭೂಮಿಯ ಸ್ಪರ್ಶವೆ ಇಲ್ಲದವರೂ ಕೂಡಾ ಪಾತ್ರವಾಗಿ ಬಿಟ್ಟಾಗ ಆ ಪ್ರಕ್ರಿಯೆ ನಿಜಕ್ಕೂ ರೋಮಾಂಚನವೆನಿಸಿತು. ಯಾವುದೇ ಪೂರ್ವಾಗ್ರಹ ಇಲ್ಲದೇ ಸಾಮಾಜಿಕ ಸಮಸ್ಯೆಗಳನ್ನು ವಿವಿಧ ವಿಷಯ ನೈಜ ಘಟನೆಗಳನ್ನು ಕಥೆಯಾಗಿಸಿ ಅದನ್ನು ಅಭಿವ್ಯಕ್ತಗೊಳಿಸುವ ನಮ್ಮನ್ನು ಅದರಲ್ಲಿ  ಒಳಪಡಿಸಿಕೊಳ್ಳುವ ರೀತಿ ಮತ್ತು ನಮ್ಮಿಂದಲೇ ಸಮಸ್ಯೆಯ ಪರಿಹಾರದ ಹಾದಿ ತೆರೆದುಕೊಳ್ಳುವಂತಾಗಿಸುವ ಪರಿ, ಎಲ್ಲರಿಗೂ ಮನ ಮುಟ್ಟುವಂತಾಗಿದ್ದು ಮತ್ತೆ ಪ್ರದರ್ಶನ ಏರ್ಪಡಿಸುವ ಹಾಗಾಯಿತು.

ಅದರ ಮುಂದುವರಿದ ಭಾಗವೇ ಹೊಸನಗರದ ಕೋಣಂದೂರಿ, ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ನ ಲೀಕ್ ಔಟ್ ಪ್ರದರ್ಶನ ಮತ್ತೂ ಇನ್ನೂ ಕೆಲವು ಕಡೆ ನಮ್ಮಲ್ಲೂ ಪ್ರದರ್ಶನ ಬೇಕು ಅಂತ ಕೇಳುಗರು ನೋಡುಗರು ಬೇಡಿಕೆಯನ್ನಿಟ್ಟಿದ್ದಾರೆ. ವಾವ್, ಒಂದೊಳ್ಳೆ ಕೆಲಸಕ್ಕೆ ದೇವರ ಸಾಥ್ ಇರತ್ತೆ ಅಂತಾರೆ, ಹೊಸನಗರದವರು ಆಸೆ ಪಟ್ಟು ಕಾದು ಕರೆಸಿಕೊಂಡು ಪ್ರದರ್ಶನ ಏರ್ಪಡಿಸಿದರೆ ಕೋಣಂದೂರ್ ಮುರುಗರಾಜ್ ದಂಪತಿಗಳು ನಮ್ಮಲ್ಲಿ ನೋಡಿ ಆಸೆಪಟ್ಟು ಕೋಣಂದೂರ್ ಅಲ್ಲಿ ಪ್ರದರ್ಶನ ಏರ್ಪಡಿಸಿದರು. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ತೀರ್ಥಹಳ್ಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ರು, ತೀರ್ಥಹಳ್ಳಿ ಪತ್ರಕರ್ತ ಸಂಘದ ಡಾನ್ ರಾಮಣ್ಣ , ಲಯನ್ಸ್ ಪಾಂಡಣ್ಣ ಮಲ್ನಾಡ್ ಕ್ಲಬ್ ದಯಾನಂದ್ ಸರ್ ಮತ್ತಿತರರು. ಗಣ್ಯರು ಸಮುಖದಲ್ಲಿ ಈ ನಾಟಕವನ್ನು ನೋಡಿ ನಮ್ಮ ಒಂದು ಪ್ರಯತ್ನ ಇಷ್ಟರ ಮಟ್ಟಿಗೆ ಸಾರ್ಥಕವಾಯಿತು ಅನ್ನುವ ಖುಷಿ, ದಕ್ಕೂ ಮುಖ್ಯ ಕಾರಣವಾಗಿದ್ದು ಅಕ್ಷತಾಳ ಅಪೂರ್ವ ಪ್ರತಿಭೆ, ಶ್ರಮ, ಶ್ರದ್ದೆ  ಜೊತೆಗೆ ಅವಳ ರಂಗ ಪ್ರಯೋಗ.

ಲೀಕ್ ಔಟ್ ಕಥೆಗಳ ಸಮಸ್ಯೆಗಳಿಗೆ ನಮ್ಮನ್ನು ನಾವೇ ತೆರೆದುಕೊಳ್ಳುತ್ತೇವೆ, ಘಟನೆಗಳಲ್ಲಿನ ನಾಯಕ ನಾಯಕಿಯರು ನಾವೇ ಆಗುತ್ತೇವೆ, ಕಥೆಗಳ ಪಾತ್ರಗಳು ನಾವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುತ್ತೇವೆ, ಒಂದು ರಂಗ ಪ್ರಯೋಗ, ನಾಟಕ ಹೀಗೂ ಇರತ್ತಾ ಯಾಕಿರಬಾರದು ಅನ್ನಿಸತ್ತೆ. ಯಾವುದೇ ಒಂದು ವಿಷಯ ಸಮಾಜದ ಎಲ್ಲಾ ಸ್ತರಗಳ ಜನಗಳನ್ನು ಮುಟ್ಟುತ್ತದೆ. ನಮ್ಮ ಸಮಸ್ಯೆಗಳಿಗೆ ನಮ್ಮಿಂದಲೇ ಉತ್ತರ ಹೇಳಿಸುತ್ತದೆ ಅಂದ್ರೆ ಅದು ಎಲ್ಲಾ ವರ್ಗದ ಜನಗಳಿಗೂ ಖಂಡಿತಕ್ಕೂ ಹಿತವಾಗುತ್ತದೆ, ಆಪ್ತವಾಗುತ್ತದೆ. ಅಲ್ಲದೆ ಈ ಸೂತ್ರಧಾರಿ ಅಕ್ಷತಾ ಅನ್ನುವ ಹೆಣ್ಣುಮಗಳ ಆಡಂಬರ ಅಬ್ಬರ ಇಲ್ಲದ ಸರಳ ವ್ಯಕ್ತಿತ್ವ, ಎಲ್ಲರಲ್ಲೂ ಸ್ನೇಹ ಆತ್ಮೀಯತೆ ಹುಟ್ಟುಹಾಕುತ್ತದೆ. ಹೀಗೇ ಬರೆಯುತ್ತ ಹೋದರೆ ಮುಗಿಯದ ಕಥನ ಪಯಣ.

ಅದ್ರಿಂದ ನಿಮ್ಮಲ್ಲೂ ಈ ಪ್ರದರ್ಶನ ಏರ್ಪಡಿಸಿ ನೀವೂ ನೋಡಿ ಇತರರಿಗೂ ನೋಡಿಸಿ ರಂಗಭೂಮಿಯೂ ಬಣ್ಣ ತುಂಬಲಿ ಬಗೆಬಗೆಯ ಜನ ಮುಟ್ಟುವ ವಿವಿಧ ಪ್ರಯೋಗಗಳಿಂದ ವೇದಿಕೆ ಹತ್ತಿರವಾಗಲಿ…

ಅಭಿನಂದನೆಗಳು ಪುಟ್ಟ ಗೆಳತಿ ಅಕ್ಷತಾಗೆ, ನಿನ್ನಿಂದ ಇಂತಹ ಮತ್ತಷ್ಟು ಹೊಸ ಪ್ರಯತ್ನಗಳು ಆಗಲಿ ನಾವೂ ಜೊತೆಗಿರುತ್ತೇವೆ.  ಅಕ್ಷತಾಗೆ ಸ್ಪಂದಿಸಿದ ತೀರ್ಥಹಳ್ಳಿಯ ಸಮಸ್ತ ಕಲಾಸಕ್ತರಿಗೂ, ಪ್ರೋತ್ಸಾಹಿಸಿದ ಗಣ್ಯರಿಗೆ ಧನ್ಯವಾದಗಳು. . ತೀರ್ಥಹಳ್ಳಿಯಲ್ಲಿ ಲೀಕ್ ಔಟ್ ಇಷ್ಟು ಜನಪ್ರಿಯತೆ ಹೊಂದಲು ಮೂಲ ಕಾರಣರಾದ ನಾಗೇಂದ್ರ ಜೋಯ್ಸ್ ಮ್ಯಾಥ್ಯೂ ಸುರಾನಿ, ಮತ್ತು ನೆಸ್ಟ್ ಹೋಮ್ ಸ್ಟೇ ಮಾಲೀಕರಾದ ಶ್ರೀನಾಥ್ ಜೋಯ್ಸ್, ಮುರುಗರಾಜ್ T K ರಮೇಶ್ ಶೆಟ್ರು, ದಯಾನಂದ್ ಜಿ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಮತ್ತಿತರರು ಎಲ್ಲರಿಗೂ ಧನ್ಯವಾದಗಳು, ಈ ಅಭಿಮಾನ ಹೀಗೇ ನಿರಂತರವಾಗಿರಲಿ ಎಂದು ಶುಭ ಹಾರೈಸುತ್ತೇನೆ .


  • ಪದ್ಮಜಾ ಜೋಯ್ಸ್, ತೀರ್ಥಹಳ್ಳಿ
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW