‘ತಲೆಯ ಟೊಪ್ಪಿಗೆಯ ವಾಗ್ವಾದ… ಪುತ್ತಳಿಯ ಕೈಯ್ಯಲಿ ಭಾವುಟದ ಹಾರಾಟ…ಬಗ್ಗು ಬಡಿಯುತಿದೆ ಕುಲುಮೆಯ ಧ್ವನಿಗೆ’…ಡಾ. ಕೃಷ್ಣವೇಣಿ.ಆರ್.ಗೌಡ ಅವರು ಇಂದಿನ ವಾಸ್ತವ ಚಿತ್ರಣವನ್ನು ತಮ್ಮ ಕವನದ ಮೂಲಕ ಕಟ್ಟಿಕೊಟ್ಟಿದ್ದಾರೆ ತಪ್ಪದೆ ಮುಂದೆ ಓದಿ…
ಬಗ್ಗು ಬಡಿಯುತಿದೆ
ಕುಲುಮೆಯ ಧ್ವನಿಗೆ ಇದಕೆ
ಕಾವು ಏರಿ ಕಾದಿದೆ
ಮುಗಿಲ ತವಕ….
ಸುಡುವ ಡಾಂಬಾರು ವೃತ್ತಕೆ
ಅತ್ತಿತ್ತ ಕೈಗಳು ಎಳೆದು ಎಳೆದು
ಎದೆ ನೋಯುತಿದೆ….
ಭಾದೆಯ ಬಾದಕ್ಕೆ
ಭಾಧ್ಯತೆಯ ಕರೆಯೋಲೆ,
ಎಮ್ಮೆ ಕೋಣಗಳ ಮೇಲೆ
ವ್ಯಂಗ್ಯ ನಗೆ..
ಸಮಾಜದ ಹಾದಿಯುದ್ದಕ್ಕೂ
ಚರಗದ ಚೆಲ್ಲಾಟ,
ಪುತ್ತಳಿಯ ಕೈಯ್ಯಲಿ
ಭಾವುಟದ ಹಾರಾಟ,
ಇದಕೆ ಹಳದಿ ಕುಂಕುಮ ಭೀಗದೆ ಮಂಕಾಗಿದೆ….
ತಲೆಯ ಟೊಪ್ಪಿಗೆಯ ವಾಗ್ವಾದ,
ನೆಲದ ಉರುಳು ಸೇವೆಯ
ವೈಚಿತ್ರ್ಯದಿ ಊರುಗೋಲು
ನೆಲವ ಬಡಿಯುತಿದೆ….
ಧರ್ಮದ ಹೋರಾಟಕೆ
ಆಡಂಬರದ ಬಸಿರು
ಹೊರಬಿದ್ದು ಸಾವಿನ ನೆರಳು
ಸೂಚಿಸಿದೆ…..
ಹೊಗೆಯ ಕಾರ್ಮೊಡಕೆ
ಮಾಲಿನ್ನ್ಯ ಎರಕವಿಲ್ಲದ
ಸುರುಳಿಯಲಿ ಸಾಗುತಿದೆ….
ಬದ್ಧತೆಯಿಲ್ಲದ ಪ್ರಭುತ್ವಕೆ
ಬುದ್ಧ ಕಣ್ ಮುಚ್ಚಿ
ಮೌನವಾಗಿದ್ದಾನೆ
ಯಾವುದನ್ನು ಬಗೆಹರಿಸಲೆಂದು?….
- ಡಾ. ಕೃಷ್ಣವೇಣಿ.ಆರ್.ಗೌಡ, ವಿಜಯನಗರ ಜಿಲ್ಲೆ, ಹೊಸಪೇಟೆ.