ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರಿಂದ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಅಕ್ಷರ ನಮನಗಳು, ಮುಂದೆ ಓದಿ…
ಗಾನ ಕೋಗಿಲೆ ಮೌನವಾಯಿತು
ಉಳಿಸಿ ಹೋಯಿತು ನೆನಪನು
ಯಾನ ಮುಗಿಸುತ ಮೂಕವಾಯಿತು
ಹೊಳೆದು ಬೆಳಗುತ ಅನುದಿನ
ನಾದ ಧಾರೆಯ ದಿನವು ಹರಿಸಿತು
ಕಂಠ ಗಂಟೆಯ ಮೊಳಗಿಸಿ
ಸುಮವು ಅರಳಿತು ಗಮವ ಸೂಸಿತು
ಹೃದಯ ರಾಜ್ಯವ ಬೆಳಗಿಸಿ
ರವಿಯ ಬೆಳಕಲಿ ಶಶಿಯ ಹೊಳಪಲಿ
ದಿನವು ನಿತ್ಯವು ಮಿನುಗಿತು
ಭುವಿಯ ಸುಂದರ ಕವಿಯ ಮಂದಿರ
ನಿನ್ನ ಕಾಣದೆ ಮುದುಡಿತು
ನೀವೆ ಸತ್ಯವು ಹಾಡು ನಿತ್ಯವು
ಕೇಳಿ ನಲಿದೆವು ಅನುದಿನ
ನೀವೆ ಸ್ಪೂರ್ತಿಯು ನಿಮ್ಮ ಶಕ್ತಿಯು
ಗಾಯಕರೆದೆಯಲಿ ನೂತನ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು.

ಕುಸುಮದಂತೆ ಗಮವನ್ನು ಹರಿಸಿ ತಾನು ಮರೆಯಾದರು ಸಾವಿರಾರು ಅಭಿಮಾನಿಗಳ ಕಂಠದಲ್ಲಿ ಶಾಶ್ವತವಾಗಿ ಉಳಿದ ಲತಾ ಮಂಗೇಶ್ಕರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಹಾಗು ನನ್ನ ಸಾಹಿತ್ಯವನ್ನು ಪ್ರಕಟಿಸಿದ ನಮ್ಮ ಆಕೃತಿ ತಂಡಕ್ಕೂ ಧನ್ಯವಾದಗಳು.