“ಮನಲೋಕ” ಕೃತಿ ಬಿಡುಗಡೆ ಸಮಾರಂಭ



ಮುಸ್ತಾಕ್ ಹೆನ್ನಾಬೈಲ್ ಅವರ ಎರಡನೇಯ ಕೃತಿ “ಮನಲೋಕ” ಡಿಸೆಂಬರ್ 5 ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಸರ್ವ ಸಾಹಿತ್ಯಾಸಕ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ …

ಸಂಶೋಧಕಿ ಹಾಗೂ ಲೇಖಕಿಯಾದ ಶ್ರೀಮತಿ ಬಿ ಎಮ್ ರೋಹಿಣಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕ ಸೋಮಪ್ರಕಾಶ್ ಆರ್ಯರವರ ಕೃತಿ ಮಂಟೆಸ್ವಾಮಿ ಮಹಾಕಾವ್ಯದ ಬಿಡುಗಡೆ ಮತ್ತು ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕದ ಉದ್ಘಾಟನೆಯೂ ಅದೇ ವೇದಿಕೆಯಲ್ಲಿ ನಡೆಯಲಿದೆ.

ವೇದಿಕೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಮತ್ತು ಲೇಖಕರಾದ ಶ್ರೀ ಅರವಿಂದ ಚೊಕ್ಕಾಡಿ ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಶ್ರೀ ಉಪೇಂದ್ರ ಸೋಮಯಾಜಿಯವರು ಉಪಸ್ಥಿತರಿರುತ್ತಾರೆ. ಬ್ರಹ್ಮಾವರ ಗಾಂಧಿ ವಿಚಾರ ವೇದಿಕೆಯ ನೂತನ ಘಟಕವನ್ನು ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀಧರ ಭಿಡೆಯವರು ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ವಹಿಸಲಿರುವರು.


  • ಆಕೃತಿನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading