ಯಾರಿಗೂ ಒಬ್ಬರ ಬಗ್ಗೆ ಮಾತನಾಡುವ ಹಕ್ಕು ಯಾರೂ ಕೊಟ್ಟಿರುವುದಿಲ್ಲ. ಗತಿಸಿಹೋದ ಕಾಲದ ಅನುಭವ ಕೇಳಿ ಅದನ್ನೇ ಮನಸಿನಲ್ಲಿ ಇಟ್ಟುಕೊಂಡು ಒಬ್ಬರನ್ನು ಹೀಯಾಳಿಸುವುದಯ ತಪ್ಪು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಮನಸಿನ ಗೊಂದಲಗಳು ಹೊರಗಿನದು, ಅದನ್ನು ಪೋಷಿಸಬೇಕೋ ಬಗೆಹರಿಸಬೇಕೋ ಎಂಬುದು ನಮಗೆ ಬಿಟ್ಟಿದ್ದು. ಯಾವುದಕ್ಕೂ ತೊಂದರೆ ಮಾಡಿಕೊಳ್ಳದೆ, ಮನಸಿಗೆ ಹಾನಿ ಮಾಡಿಕೊಳ್ಳದೆ ಸಮ ಚಿತ್ತದಿಂದ ಎದುರಿಸಬೇಕು. ನಮ್ಮ ಮನಸಿಗೆ ಯಾವುದರಿಂದ ತೊಂದರೆಯಾಗುತ್ತಿದೆ ಎಂದು ಗೊತ್ತಾದರೆ ಅದರಿಂದ ದೂರವಿರಬಹುದು ಅಥವಾ ಪರಿಹರಿಸಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು.
ಬೇಡದ ಮಾತುಗಳಿಗೆ ಬೆಲೆ ಕೊಡದೆ ಬೇಕಾದ ಮಾತುಗಳನ್ನು ತೆಗೆದುಕೊಳ್ಳುವ ಜಾಣ್ಮೆ ನಮ್ಮದಾಗಬೇಕು. ಅವರು ಹೀಗೆಂದರು, ಇವರು ಹಾಗೆಂದರು ಅನ್ನುವ ಬದಲು ಯಾರೇನೆ ಅಂದರೂ ತಮ್ಮ ನಿಲುವು ಬದಲಾಗದಂತೆ ಇರಬೇಕು. ಯಾರೇ ತಮ್ಮ ಮೇಲೆ ಅಪಪ್ರಚಾರ ಮಾಡಿದಾಗ, ಅವಮಾನ ಮಾಡಿದಾಗ ಬೇಕಂತಲೇ ತಮ್ಮ ತೇಜೋವಧೆ ಮಾಡುವಾಗ ಅವರು ಒಂದು ಅರ್ಥ ಮಾಡಿಕೊಳ್ಳಬೇಕು. ಯಾರು ಹಾಗೆ ಮಾಡುತ್ತಿದ್ದಾರೋ ಅವರ ಅಭಿಪ್ರಾಯವಷ್ಟೇ. ಯಾರಿಂದಲೂ ಯಾರ ಜೀವನವಾಗಲಿ, ಮತ್ತೊಬ್ಬರು ನಿಲುವಾಗಲಿ ಬದಲಾಗಲು ಸಾಧ್ಯವಿಲ್ಲ.
ಯಾವ ಕಾರ್ಯಕ್ರಮವಾಗಲಿ, ಯಾರನ್ನಾದರೂ ಭೇಟಿಮಾಡಿದಾಗಲಿ ಮೊದಲಿಗೆ ಕೇಳುವುದು ಹೇಗಿದೀರ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿ ಇದ್ದಾರಾ ಎಂದು. ಇದು ಒಂದು ರೀತಿಯಲ್ಲಿ ಸರಿ, ಆದರೆ ಒಬ್ಬ ವ್ಯಕ್ತಿ ಹತ್ತು ವರ್ಷಗಳ ಹಿಂದೆ ಹೇಗಿದ್ದರು ಎಂದು ನೋಡಿದ ಜನರು ಆ ವ್ಯಕ್ತಿಯನ್ನು ಈಗಲೂ ಹೀಗೆ ಇದ್ದಾರೆ ಎಂಬ ಊಹೆಯಲ್ಲಿರುತ್ತಾರೆ. ನಿಮಗೆ ಈಗ ಹಣಕಾಸಿನ ಸಮಸ್ಯೆ ಇಲ್ಲವಾ? ಸರಿಯಾಗಿ ಸಂಬಳ ಬರುತ್ತಿದೆಯಾ? ಈಗ ನೆಮ್ಮದಿಯಾಗಿ ಇರುವಿರಾ ಎಂದು ಕೇಳುತ್ತಿದ್ದರೆ ಸಹಜವಾಗಿ ಕೋಪ ಬರುವುದುಂಟು. ಅಷ್ಟು ವರ್ಷಗಳ ಅಂತರದಲ್ಲಿ ಅನೇಕ ಬದಲಾವಣೆಗಳು ಆಗಿರುತ್ತದೆ. ಯಾರಿಗೂ ಒಬ್ಬರ ಬಗ್ಗೆ ಮಾತನಾಡುವ ಹಕ್ಕು ಯಾರೂ ಕೊಟ್ಟಿರುವುದಿಲ್ಲ.

ಫೋಟೋ ಕೃಪೆ : GOOGLE
ಗತಿಸಿಹೋದ ಕಾಲದ ಅನುಭವ ಕೇಳಿ ಅದನ್ನೇ ಮನಸಿನಲ್ಲಿ ಇಟ್ಟುಕೊಂಡು ಒಬ್ಬರನ್ನು ಹೀಯಾಳಿಸುವುದಯ ತಪ್ಪು. ಅಂದಿನ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದಾರೆಂದು ನೋಡಿ ಸುಮ್ಮನಿರಬೇಕು. ಯಾರ ಕೈಯಲ್ಲೂ ಯಾರ ಭವಿಷ್ಯ, ಗತಕಾಲ ಇರುವುದಿಲ್ಲ. ಅವರ ಜೀವನ ಅವರಿಗೆ. ಇದನ್ನು ಮನಸಿನಲ್ಲಿ ಇಟ್ಟುಕೊಂಡು ಒಬ್ಬರ ಜೊತೆ ವ್ಯವಹರಿಸಿದರೆ ಎಲ್ಲರಿಗೂ ಕ್ಷೇಮ.
ಯಾವತ್ತೋ ಎಷ್ಟೋ ವರ್ಷಗಳ ಹಿಂದೆ ಹೇಳಿದ ಮಾತನ್ನು ಈಗ ಆಡುತಿದ್ದಾರಲ್ಲ ಎಂದು ಆ ವ್ಯಕ್ತಿಗೆ ಬೇಸರವಾಗುವುದು. ಕಾಲ ಬದಲಾದಂತೆ ಜೀವನವೂ ಬದಲಾಗುತ್ತದೆ. ಜನರು ತಿಳಿದುಕೊಳ್ಳಲು ಪ್ರಯತ್ನ ಪಡಬೇಕು. ಹಂಗಿಸಿ ಮಾತನಾಡುವುದಾಗಲಿ, ಅವಮಾನವಾಗುವಂತೆ ಮಾತಾಡುವುದಾಗಲಿ ಮಾಡಬಾರದು. ಎಲ್ಲರಿಗೂ ಅವರವರದೇ ಸಮಸ್ಯೆ ಇರುತ್ತದೆ ಆದರೆ ಬದಲಾವಣೆ ಜಗದ ನಿಯಮ. ಬದಲಾವಣೆ ಖಂಡಿತಾ ಆಗುತ್ತದೆ.
ಏನೋ ಒಂದು ಗಳಿಗೆಯಲ್ಲಿ ಒಬ್ಬರ ಮೇಲೆ ಮಾತನ್ನು ಆಡಿರುತ್ತಾರೆ ಅವರ ಮೇಲಿನ ನಂಬಿಕೆಯಿಂದ ಒಬ್ಬರಲ್ಲಿ ಹಂಚಿಕೊಂಡಿರುತ್ತಾರೆ ಅದನ್ನು ಕಂಡಕಂಡವರಿಗೆ ಅವರು ಹೀಗೆ ಹಾಗೆ ಎಂದು ಹೇಳಿಕೊಂಡು ಬರುತಿದ್ದರೆ ಜನರಲ್ಲಿ ನಂಬಿಕೆ ಅನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ಯಾರೇ ಆದರೂ ಬೇಡವಾದಾಗ, ಅವರಿಂದ ಉಪಯೋಗವಿಲ್ಲ ಎಂದು ತಿಳಿದುಕೊಂಡು ಅನುಚಿತ ವರ್ತನೆ ಹಾಗು ಅಸಭ್ಯ ನಡತೆ ಒಳ್ಳೆಯದಲ್ಲ.

ಇಂತಹ ಜನರ ನಡಾವಳಿಕೆ ಅವರ ಮಾನಸಿಕ ಸ್ಥಿರತೆಯನ್ನು ತೋರಿಸಿಕೊಡುತ್ತದೆ. ಇಂತಹ ಜನರು ಬಹಳವಾಗಿ ಮಾನಸಿಕ ತೊಂದರೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ದ್ವೇಷ ಸಾಧನೆಯೇ ಮುಖ್ಯವಾಗಿ ಕಂಡು ಆತ್ಮೀಯರಿರಲಿ, ತಂದೆತಾಯಿ, ಬಂಧುಬಳಗ, ಸ್ನೇಹಿತರು ಯಾರೇ ಇರಲಿ ತಮ್ಮ ಅಸಹನೆ ವ್ಯಕ್ತಪಡಿಸಿಕೊಳ್ಳುತ್ತಾರೆ. ಅಂತಹ ಜನರಿಗೆ ಸೇಡು ತೀರಿಸಿಕೊಳ್ಳುವುದು ಬಹಳವಾಗಿರುತ್ತದೆ. ಇದು ಅವರಿಗೆ ತಾನೇ ಸರಿ ಅನಿಸಬಹುದು ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ ಎಂದು ಅರಿತು ಸುಮ್ಮನಾಗಿ ಬಿಡಬೇಕು. ಈ ರೀತಿಯ ವ್ಯಕ್ತಿಗಳಿಗೆ ಯಾವ ಆಪ್ತಸಮಾಲೋಚನೆ ಕೆಲಸ ಮಾಡುವುದಿಲ್ಲ. ಮನೋವೈದ್ಯರೇ ನೆರವಾಗಬೇಕು. ಔಷಧಿ ಸೇವನೆಯಿಂದ ಅವರ ಮಾನಸಿಕ ರೋಗ ಸ್ಥಿಮಿತಕ್ಕೆ ಬರಬಹುದು.
ಈ ರೀತಿ ಜನರಿಂದ ದೂರವಿದ್ದರೆ ಕ್ಷೇಮ. ಇಲ್ಲದಿದ್ದರೆ ಮನಸಿನ ನೆಮ್ಮದಿ ಹಾಳಾಗುತ್ತದೆ. ಬೇರೆಯವರಿಗಾಗಿ ಬದುಕಬೇಕಾಗುತ್ತದೆ. ಇಂತಹ ಮಾನಸಿಕ ಅಸ್ವಸ್ಥರನ್ನು ಕೇವಲ ರೋಗಿಗಳನ್ನಾಗಿ ನೋಡಬೇಕು. ಈ ವರ್ತನೆ ವಿಪರೀತವಾದಲ್ಲಿ ಅವರ ಅಧಪತನಕ್ಕೆ ಅವರೇ ಕಾರಣರಾಗುತ್ತಾರೆ. ಅವರು ಮಾನಸಿಕ ರೋಗಿಗಳಾಗಿ ಪರಿಗಣಿಸಲ್ಪಟ್ಟು ವೈದ್ಯರೇ ಉಪಚರಿಸಬೇಕು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ
