ಹೊಟ್ಟೆ ಹೊರೆಯುವುದಕ್ಕೆ ಯಾವ ಕೆಲಸವಾದರೇನು?…ಬಡತನವಿದ್ದರೆ ಸಿರಿತನ ಎದ್ದು ಕಾಣುವುದು, ಸಿರಿತನವಿದ್ದರೆ ಬಡತನ ಕಾಣುವುದು ಹೀಗೆ ಒಂದಕ್ಕೊಂದು ಕೊಂಡಿ. ಆಪ್ತಸಮಾಲೋಚಕಿ ಚಂಪಾ ಚಿನಿವಾರ್ ಅವರ ಮಾನಸ….ಇದು ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ “ನೀ ಯಾರಿಗಾದೆಯೋ ಹುಲ ಮಾನವ” ತಪ್ಪದೆ ಓದಿ….
ಏಯ್ ಕಮಲೀ…..ಎಷ್ಟ್ ಹೊತ್ತೆ ಕಾಯೋದು, ಬೇಗ ಬರ್ಬಾರ್ದಾ?…..ಏಯ್ ನಾಗೀ ಕಮಿಷನರ್ ಮನೆ ಕೆಲಸ ಮಾಡ್ತಿದ್ದೆ ಗೊತ್ತಾ? ಬೇರೆ ಮನೆಗಳ ಮನೆ ಥರ ಅಲ್ಲ ಅವರ ಲೆವೆಲ್ಲೇ ಬೇರೆ……ಮತ್ತೊಬ್ಬಳು ಹೇಳಿದ್ದು… ಯಾರ ಮನೆಯಾದರೇನು ಅದೇ ಕಸ ಅದೇ ಮುಸುರೆ, ಅದೇ ಪಾತ್ರೆ ತೊಳೆಯೋದು, ಅದೇ ಪೊರಕೇಲಿ ಗುಡಿಸೋದು, ಯಾರ ಮನೆಯ ಕೆಲಸವಾದರೇನು?
ಈ ಸಂಭಾಷಣೆ ಗಮನಿಸಿ ಯಾರು ಎಂದು ನೋಡಿದಾಗ, ಇಬ್ಬರು ಮನೆ ಕೆಲಸ ಮಾಡುವವರ ಮಾತು ಹೀಗೆ ಇತ್ತು. ಇಲ್ಲಿ ಅವರಿಬ್ಬರೂ ಮುಖ್ಯವಾಗಿರಲಿಲ್ಲ ಅವರಾಡಿದ ಮಾತುಗಳು ಮನ ಮುಟ್ಟಿತು.
ಆ ಕ್ಷಣ ಅನಿಸಿದ್ದು, ಯಾರ ಮನೆ ಕೆಲಸವಾದರೇನು ಕೆಲಸ ಕೆಲಸವೇ ಎಂಬ ವೇದಾಂತದ ಮಾತು ಮನ ಮುಟ್ಟುವಂಥದ್ದು. ಶ್ರೀಮಂತರು, ಮಧ್ಯಮ ವರ್ಗದವರು, ಮೇಲುವರ್ಗದ ಜನರು, ಕೆಳವರ್ಗದ ಜನರು, ಬಡವರು ಹೀಗೆ ಜನರನ್ನು ನಾವು ಗುರುತಿಸುವುದು. ಅವರು ಹೀಗೇ ಅಂತ ಟ್ಯಾಗ್ ಮಾಡುವುದು. ತಿನ್ನುವುದು ಒಂದೇ ಅನ್ನವಾದರೂ, ಅಕ್ಕಿ ಬೇರೆ ಬೇರೆ ಬೆಲೆಯದು. ಎಷ್ಟು ದುಡ್ಡಿನ ಅಕ್ಕಿ ತಿನ್ನುತ್ತಾರೆ ಎನ್ನುವುದರ ಮೇಲೆ ಅವರು ಯಾವ ವರ್ಗದವರು ಎಂದು ನಿರ್ಧಾರಮಾಡುತ್ತಾರೆ. ಆ ಘನತೆಯ ಅಳತೆಗೆ ಮರ್ಯಾದೆ. ಎಲ್ಲಾ ಜನರೇ ರೂಢಿ ಮಾಡಿಕೊಂಡು ಬಂದಿರುವ ಪದ್ಧತಿಗಳು.
Society is the main cause for all. ಸಮಾಜಕ್ಕಾಗಿ, ಸಮಾಜಕ್ಕೋಸ್ಕರ, ಸಮಾಜದಿಂದಾಗಿ ಎಂದು ಮೊದಲು ನಮ್ಮ ತಲೆಗೆ ಬರುವುದೇ ಈ ಸಮಾಜ. ಜನರು ಅವರು ಹೀಗೆ ಇವರು ಹಾಗೆ ಅಂತ differentiate ಮಾಡಿಬಿಡುತ್ತಾರೆ. ಅರಿಯದ ಮಕ್ಕಳಿಗೂ ಸಹ ತಲೆ ತುಂಬಿ ಬಿಡುತ್ತಾರೆ. ಸಮಾಜಕ್ಕೆ ಹಣವಂತರು ಹಾಗು ಪ್ರಸಿದ್ಧ ವ್ಯಕ್ತಿಗಳು ಏನೇ ಹೇಳಿದರೂ, ಅವರ ಮಾತನ್ನು ಅನುಸರಿಸುತ್ತಾರೆ. ಮನೆಯಲ್ಲಿ ತಂದೆ ತಾಯಿ ಅದೇ ಮಾತನ್ನು ಹೇಳಿದರೆ ಅದಕ್ಕೆ ಬೆಲೆ ಇರುವುದಿಲ್ಲ.

ಫೋಟೋ ಕೃಪೆ : google
ಅವರವರ ಜೀವನ ಶೈಲಿ ಅವರ ಯೋಗ್ಯತೆ ಅಳೆಯುತ್ತದೆ. ಅತೀ ಶ್ರೀಮಂತರ ನಡೆ ನುಡಿ ಬೇರೆ ರೀತಿ ಇರುತ್ತದೆ, ಯಾವುದಕ್ಕೂ ಮಿತಿ ಇರುವುದಿಲ್ಲ. ಬಡವನಾದವ ತನ್ನ ಮಿತಿಯಲ್ಲಿ ತಾನಿರುತ್ತಾನೆ. ಆದರೂ ಮಾರಿ ಕಣ್ಣು ಹೋರಿ ಮೇಲೆ ಅನ್ನೋ ಹಾಗೆ ಬಡವನೇ ಎಲ್ಲದಕ್ಕೂ ಕಾರಣವಾಗುತ್ತಾನೆ. ಹಣ ಒಂದೇ ಅಲ್ಲ ಗುಣ ಬಹಳ ಮುಖ್ಯ. ಯಾರಿಗೂ ಒಳ್ಳೆಯ ಗುಣ ಬೇಡ ದೊಡ್ಡವರ ಹಿಂದೆ ಚೇಲವಾದರೂ ಚಿಂತೆಯಿಲ್ಲ, ಗುಣಕ್ಕಿಂತ ಶ್ರೀಮಂತಿಕೆಗೆ ಬೆಲೆ ಕೊಡುತ್ತಾರೆ ಹೊರತಾಗಿ ಸ್ವಾಭಿಮಾನದ ಬದುಕು ಯಾರಿಗೂ ಬೇಕಿಲ್ಲ. ಹಣ ಖಂಡಿತ ಬೇಕು ನಿಜ, ಜೀವನ ನಡೆಸಲು ಅದೇ ಆಧಾರ ಆದರೆ ಅದರಿಂದ ಮನುಷ್ಯನ ಗುಣ ಸ್ವಭಾವವನ್ನು ಅಳೆಯುವ ಪದ್ದತಿ ನಮ್ಮಲ್ಲಿ ಯಾಕಿದೆಯೋ ತಿಳಿಯದು.
ಶ್ರೀಮಂತ ಸ್ನೇಹಿತರಿದ್ದರೆ ಅವರ ಸಂಗ ಬಯಸಿ ಅವರೊಡನೆ ಸುತ್ತಾಡಿ ಅವರ ಜೊತೆ ಗುರಿತಿಸಿಕೊಂಡರೆ ಜೀವನ ಸಾರ್ಥಕ ಎಂದು ಕೆಲವರ ಅನಿಸಿಕೆ ಅಭಿಪ್ರಾಯಗಳು. ತಮ್ಮ ಯೋಗ್ಯತೆ ಬೇರೆಯವರಿಂದ ಗುರುತಿಸಿಕೊಳ್ಳುವ ಹಣೆ ಬರಹ ಯಾಕೋ ಗೊತ್ತಿಲ್ಲ. ನಮ್ಮತನ ಬಿಟ್ಟು ಏಕೆ ಬದುಕಬೇಕು. ನಮಗೆ ಯಾರೇ ಗಣ್ಯ ವ್ಯಕ್ತಿಗಳ ಪರಿಚಯವಿರಲಿ ಸಂತೋಷವೆ ಆದರೆ ಒಂದು ಮಿತಿಯಲ್ಲಿದ್ದರೆ ಬಹಳ ಒಳ್ಳೆಯದು. ಅವರವರ ಮನೆಯ ದುಡಿಮೆಯ ಅನ್ನ ಉಂಡು, ಬಟ್ಟೆ ತೊಡುವಾಗ ಬೇರೆ ಯಾಕೆ ಯಾರಿಂದಲೋ, ಎಲ್ಲೋ ಗುರುತಿಸಿಕೊಳ್ಳಬೇಕು? ಅಪ್ಪ ಅಮ್ಮ ನಮಗೂ ಸಹ ಹೆಸರಿಟ್ಟಿರುತ್ತಾರೆ ನಮ್ಮದೇ ಹೆಸರಿನಿಂದ ಗುರುತಿಸಿಕೊಳ್ಳುವ ಹಾಗಿದ್ದ ಮೇಲೆ name and fame ಇರುವವರೊಂದಿಗೆ ನಮ್ಮ identity ಬೇಕ ಅಂತ ತಿಳಿದುಕೊಳ್ಳಬೇಕು.
ಹಣವಂತರನ್ನು ಹಾಗು ಅಥವಾ ಅವರ ಉದ್ಯೋಗದಿಂದ ಅಳೆಯುವ ನಮ್ಮ ಪದ್ದತಿ ಯಾವಾಗ ಬದಲಾಗುವುದೋ ಕಾಣದಾಗಿದೆ. ಬಡವನಾದವನು ಮನುಷ್ಯನೇ ಅಲ್ಲ ಎಂಬ ಮನೋಭಾವ ತುಂಬಾ ಜನರಲ್ಲಿ ಇರುತ್ತದೆ. ಹೊಟ್ಟೆ ಹೊರೆಯುವುದಕ್ಕೆ ಯಾವ ಕೆಲಸವಾದರೇನು ಕಳ್ಳತನ, ಮೋಸ, ಕೊಲೆ ಮಾಡದೆ ನ್ಯಾಯವಾಗಿ ದುಡಿದು ತಿನ್ನುವವ ಯಾರೇ ಆಗಲಿ ಅವನು ಶ್ರೀಮಂತನೆ. ಬಡತನವಿದ್ದರೆ ಸಿರಿತನ ಎದ್ದು ಕಾಣುವುದು, ಸಿರಿತನವಿದ್ದರೆ ಬಡತನ ಕಾಣುವುದು ಹೀಗೆ ಒಂದಕ್ಕೊಂದು ಕೊಂಡಿ. ದಡ್ಡರ ಮುಂದೆ ತಾನೆ ಬುದ್ಧಿವಂತರು ಎದ್ದು ಕಾಣೋದು. So called ಬುದ್ದಿವಂತರ ಮುಂದೆ ಎಲ್ಲರೂ ದಡ್ಡರೆ. ಬುದ್ದಿವಂತರಿರಲಿ ನರಿ ಬುದ್ದಿ ಇರುವುದು ಒಳ್ಳೆಯದಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ಕಾಲ ನಮ್ಮ ಸಮಾಜದಲ್ಲಿ ಯಾವಾಗ ಕಾಣಬಹುದೋ ತಿಳಿಯದು.
ಏನೇ ಆದರೂ ಮನುಜ…..ನೀ ಯಾಕ್ಹೀಗಾದೆಯೋ?.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ, ಬೆಂಗಳೂರು.
