ಮನಸ್ಸಿನ ಪಿಸುಮಾತು – (ಭಾಗ-೧೨)

ನೋವಿನ ಹೊರೆ ಕಡಿಮೆಯಾಗಬೇಕೆಂದರೆ ಆ ನೋವಿನ ಹೊರೆಯನ್ನು ಮನಸ್ಸಿನಿಂದ ಕೆಳಗೆ ಇಳಿಸಲೇಬೇಕಾಗುತ್ತದೆ. ಹೊರೆಯನ್ನು ಹೊತ್ತುಕೊಂಡಿದ್ದಷ್ಟು ಸಮಯ ಅದು ಹೊರೆಯಾಗಿಯೇ ಇರುತ್ತೆ. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…

ಸದಾ ಕಣ್ಣೀರಲೇ ಕೊಳೆತು ಹೋಗುವ, ಹೋಗುತ್ತಿರುವ ಮನಸ್ಸಿನ ನೋವುಗಳ ಹೊತ್ತು, ಆ ನೋವುಗಳಲ್ಲೇ ದಿನಗಳ ಕಳೆಯುವ ಬದುಕು ಕೆಲವರದು. ಮನಸ್ಸಿನಲ್ಲಿ ಬೆಟ್ಟದಷ್ಟು ನೋವು ಬೆಂಬಿಡದೆ ಕಾಡುತ್ತಿದ್ದರೂ ಯಾರೊಂದಿಗೂ ಹಂಚಿಕೊಳ್ಳಲಾರದ ಮನಸ್ಥಿತಿಯಲ್ಲಿ ಕಳೆಯುವ ಜೀವನ ವಿವರಿಸಲು ಅಸಾಧ್ಯ.

ನೋವು ಅನ್ನೋದು ಪ್ರಕೃತಿಯಲ್ಲಿ ಪ್ರತಿಯೊಂದು ಜೀವರಾಶಿಗೂ ತಪ್ಪಿದ್ದಲ್ಲ. ಹಾಗಂತ ನೋವಲ್ಲೇ ಬದುಕಬೇಕು ಅಂತಲೂ ಇಲ್ಲ. ಹಾಗಂತ ಪ್ರತಿಯೊಂದು ನೋವಿಗೂ ಪರಿಹಾರ ಇರುತ್ತೆ ಅಂತಲೂ ಹೇಳಲು ಆಗಲ್ಲ. ಹೌದು ಇದು ಅರ್ಥವಾಗದ ಗೊಂದಲಮಯ ಬದುಕು.

ದೈಹಿಕವಾಗಿ ನಮಗಾಗುವ ನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸಬಹುದು. ಅದು ಯಾವುದೋ ಒಂದು ರೀತಿಯಲ್ಲಿ ಇಂದಲ್ಲಾ ನಾಳೆ ಹೇಗೋ ಕಲೆಯನ್ನು ಉಳಿಸಿಹೋದರೂ ವಾಸಿಯಾಗುತ್ತೆ ಅಂದುಕೊಳ್ಳಬಹುದು. ಆದರೆ ಮನಸ್ಸಿಗೆ ಆಗುವ ನೋವು ಅಷ್ಟು ಸುಲಭವಾಗಿ ದೈಹಿಕವಾಗಿ ಆದ ಗಾಯದಂತೆ ಬೇಗ ವಾಸಿಯಾಗಲಾರದು.

ಫೋಟೋ ಕೃಪೆ : google 

ದೈಹಿಕವಾಗಿ ಆಗುವ ನೋವಿಗೆ ವೈದ್ಯರ ಬಳಿಯೋ ಅಥವಾ ನಮ್ಮ ಕುಟುಂಬದವರ, ಹಿರಿಯರ, ಸ್ನೇಹಿತರ ಅಥವಾ ಆಪ್ತರ ಬಳಿ ಸಲಹೆ – ಸೂಚನೆಗಳನ್ನು ಪಡೆದು ನಿವಾರಿಸಿಕೊಳ್ಳಬಹುದು. ಆದರೆ ಮನಸ್ಸಿಗೆ ಆದ ಗಾಯ ಅಥವಾ ಮನಸ್ಸಿನಲ್ಲಿ ಮೂಡುವ ನೋವುನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ.

ಎಷ್ಟೇ ಆತ್ಮೀಯತೆಯಿದ್ದರೂ ಸರಿ ಮನಸ್ಸಿನಲ್ಲಿ ಇರುವ ಕೆಲವೊಂದು ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಮನಸ್ಸು ಒಪ್ಪಲ್ಲ. ಎಲ್ಲೋ, ಏನೋ ಭಯ ಅದನ್ನು ಹಂಚಿಕೊಳ್ಳಲು ಒಪ್ಪಲ್ಲ ಅನ್ನಿಸುತ್ತೆ. ಅದೇ ರೀತಿ ಹಂಚಿಕೊಂಡರೆ ಅವರ ದೃಷ್ಟಿಯಲ್ಲಿ ಎಲ್ಲಿ ಕೇವಲವಾಗಿ ಬಿಡುತ್ತೀವೋ ಅನ್ನುವ ಗೊಂದಲಮಯ ಪರಿಸ್ಥಿತಿ ಮನಸ್ಸಿನಲ್ಲಿ ನೂರಾರು ಗೊಂದಲಗಳನ್ನು ಸೃಷ್ಟಿಸಿಬಿಡುತ್ತದೆ.

ಮನಸ್ಸು ಹಗುರವಾಗಬೇಕು, ನಮ್ಮ ಮನಸ್ಸಿನಲ್ಲಿ ಇರುವ ಗೊಂದಲಗಳಿಗೆ ಪರಿಹಾರ ಸಿಗಬೇಕು, ನಮ್ಮ ಮನಸ್ಸಿನಲ್ಲಿ ಇರುವ ನೋವು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬೇಕು ಅಂದರೆ ಅದು ಇನ್ನೊಬ್ಬರಿಗೆ ಹಂಚಿಕೊಳ್ಳಲೇಬೇಕು. ಅದು ಯಾರೊಂದಿಗೆ ಹಂಚಿಕೊಳ್ಳಬೇಕು? ಹಂಚಿಕೊಳ್ಳಲು ಯಾರು ಯೋಗ್ಯ ವ್ಯಕ್ತಿ ಅನ್ನೋದು ನಮ್ಮ ಮನಸ್ಸಿಗೆ ತಿಳಿದಿರುತ್ತೆ.

ನೋವಿನ ಹೊರೆ ಕಡಿಮೆಯಾಗಬೇಕೆಂದರೆ ಆ ನೋವಿನ ಹೊರೆಯನ್ನು ಮನಸ್ಸಿನಿಂದ ಕೆಳಗೆ ಇಳಿಸಲೇಬೇಕಾಗುತ್ತದೆ. ಹೊರೆಯನ್ನು ಹೊತ್ತುಕೊಂಡಿದ್ದಷ್ಟು ಸಮಯ ಅದು ಹೊರೆಯಾಗಿಯೇ ಇರುತ್ತೆ. ತಾನಾಗಿಯೇ ಅದು ಕಡಿಮೆಯಾಗುತ್ತೆ ಅಂತ ಕಾಯುವುದು ಸೂಕ್ತವಲ್ಲ. ಆ ನಮ್ಮ ಮನಸ್ಸಿನಲ್ಲಿರುವ ನೋವುಗಳ ಹೊರೆಯನ್ನು ಇಳಿಸಿಕೊಳ್ಳಲು ಸಹಕರಿಸುವ, ಅದನ್ನು ಅರ್ಥ ಮಾಡಿಕೊಳ್ಳುವ ಸೂಕ್ತ ವ್ಯಕ್ತಿಯೊಂದಿಗೆ ನಮ್ಮ ಮನಸ್ಸಿನ ನೋವುಗಳಿಗೆ ಶಾಶ್ವತವಾದ ಪರಿಹಾರ ಸಿಗದಿದ್ದರೂ ಸ್ವಲ್ಪಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

ಹಿಂದಿನ ಸಂಚಿಕೆಗಳು :


  • ಚಂದನ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW