ಮಾನಸ….ಇದು ಮನಸಿನ ಮಾತು (ಭಾಗ-೪೨)

ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್ಗಳಿಗೆ ಸಂಬಂಧಿಸಿದ ಅನಾಹುತಗಳು ಮತ್ತು ಖಿನ್ನತೆಗಳು ಹೆಚ್ಚಾಗಿವೆ. ಈ ವಿಷಯದ ಕುರಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ತಪ್ಪದೆ ಮುಂದೆ ಓದಿ…

ರಿ ರೀ ಎದ್ದೇಳಿ ರೀಲ್ಸ್ ಮಾಡಬೇಕು ಏಳಿ ಬೇಗ…

ಮಲಗಕ್ಕು ಬಿಡಲ್ವಲ್ಲಮ್ಮ ಬೆಳಗ್ಗಿಂದ ಕೆಲಸ ಮಾಡಿ ಸಾಕಾಗಿದೆ ನೆಮ್ಮದಿಯಾಗಿ ಮಲ್ಕೊಳಕ್ಕೆ ಬಿಡು…

ರೆಡಿಯಾಗ್ಬಿಟ್ಟಿದ್ದೀನಿ ಪ್ಲೀಸ್ ಬನ್ನಿ ಟು ಮಿನಿಟ್ಸ್ ಅಷ್ಟೇ ರೀಲ್ಸ್ ಮಾಡ್ಬಿಟ್ಟು ಮಲ್ಕೊಂಬಿಡಿ…

ಅಯ್ಯೋ ಕರ್ಮವೇ ನಡಿ ಅದೇನು ಮಾಡಬೇಕು ಹೇಳು ಮಾಡ್ತೀನಿ…

ಹೀಗೆ ನಡೆಯುತ್ತಿತ್ತು ದಿವಸವು ಈ ದಂಪತಿಗಳ ನಡುವೆ. ಒಂದು ದಿನ ಗಂಡ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗುತ್ತಿದ್ದಂತೆ ಹೆಂಡತಿ ರಿಲ್ಸ್ ಮಾಡಲು ಎಬ್ಬಿಸಿದಳು. ಅವನು ಬೇಡ ಎಂದರು ಕೇಳದೆ ಬಲವಂತವಾಗಿ ಅವನಿಗೆ ಹೊಸ ಬಟ್ಟೆ ಧರಿಸು ಎಂದು ಹೇಳಿ ರೀಲ್ಸ್ ಮಾಡಲು ಹೊರಟಳು. ಅವನು ಬೇಡ ಎಂದರು ಕೇಳದೆ ಅವಳ ಹಠಕ್ಕೆ ರೋಸಿ ಹೋಗಿ ಅವನು ಅವಳ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದನು, ಹೊಡೆದರಭಸಕ್ಕೆ ಅವಳು ಸತ್ತೇ ಹೋದಳು. ಅವನು ತಾನೆ ಹೋಗಿ ಪೊಲೀಸ್ ಸ್ಟೇಷನ್ ಗೆ ಸರೆಂಡರ್ ಆಗಿ ಹೆಂಡತಿಯ ಕೊಲೆ ಮಾಡಿದೆನೆಂದು ಹೇಳಿ ಜೈಲು ಪಾಲಾದನು.

ರೀಲ್ಸ್ ಏನಿದು ? ಇಂದಿನ ಪೀಳಿಗೆಯ ಯುವಕ ಯುವತಿಯರಲ್ಲಿ ಅದು ಏಕಿಷ್ಟು ಆಕರ್ಷಣೆಯಾಗಿದೆಯೋ ತಿಳಿಯದು . ರಿಯಲ್ ಗಿಂತ ರೀಲ್ ಜೀವನ ಹೆಚ್ಚು ಪ್ರಚಾರದಲ್ಲಿದೆ, ಪ್ರಭಾವ ಬೀರಿದೆ, ಮಹತ್ವವಾಗಿದೆ. ಶಾಲಾ ಮಕ್ಕಳಿಂದ ಹಿಡಿದು ಮಧ್ಯ ವಯಸ್ಸಿನ ನವರೆಗು ಇದು ಬಿಡಿಸಲಾಗದ ಸಮಸ್ಯೆಯಾಗಿದೆ.

ಯಾವುದೇ ಆಗಲಿ ಒಂದು ಇತಿಮಿತಿಯಲ್ಲಿ ಇರಬೇಕು ವಿಪರೀತವಾದರೆ ಅಮೃತವು ವಿಷವಾದಂತೆ ಎಲ್ಲರೂ ಖಿನ್ನತೆಗೆ ಒಳಪಡುತ್ತಾರೆ. ಕೆಲವರು ಅದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಜನರಿದ್ದರೆ, ಕೆಲವರು ಅದರಿಂದ ಹಣ ಗಳಿಸುತ್ತಿದ್ದಾರೆ. ಆದರೆ ಕೆಲವರು ಇದರಿಂದ ಬಹಳ ಪ್ರಭಾವಗೊಂಡು ತಾವು ಶ್ರೀಮಂತರಂತೆ ತೋರಿಸಿಕೊಳ್ಳುವ ಹುನ್ನಾರದಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೇರೆಯವರ ಅನುಕರಣೆ ಸಮಸ್ಯೆಗೆ ಕಾರಣವಾಗುತ್ತಿದೆ.

ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ಗಳಿಗೆ ಸಂಬಂಧಿಸಿದ ಅನಾಹುತಗಳು ಮತ್ತು ಖಿನ್ನತೆಗಳು ಹೆಚ್ಚಾಗಿವೆ. ಇವುಗಳಲ್ಲಿ ಕೆಲವು ಮುಖ್ಯ ಅಂಶಗಳು ಹೀಗಿವೆ:

ಅನೇಕ ಬಾರಿ, ವ್ಯಕ್ತಿಗಳು ತಮ್ಮ ಸ್ವಯಂ ಚಿತ್ರಣವನ್ನು ಇನ್ನೊಬ್ಬರ ಜೊತೆ ಹೋಲಿಕೆ ಮಾಡಿ ತಾವು ಅಗತ್ಯವಿದ್ದಂತೆ ಸ್ವೀಕರಿಸದೆ, ಕೀಳರಿಮೆಯನ್ನು ಅನುಭವಿಸಬಹುದು. ಇದು ಅವರ ಮಾನಸಿಕ ಆರೋಗ್ಯವನ್ನು ಹಾನಿ ಮಾಡಬಹುದು. ಇದರಿಂದ ಆತ್ಮವಿಶ್ವಾಸ ಕುಂಠಿತಗೊಳ್ಳಬಹುದು ಹಾಗು ಒತ್ತಡ, ಖಿನ್ನತೆ ಮತ್ತು ಮಾನಸಿಕವಾಗಿ ಕುಗ್ಗಿಹೋಗಬಹುದು.

ಬಹುತೇಕ ರಿಲ್ಸ್‌ಗಳು ಪರಿಪೂರ್ಣತೆ ಮತ್ತು ಸೊಗಸಾದ ಜೀವನವನ್ನು ಪ್ರದರ್ಶಿಸುತ್ತವೆ ಆದರೆ ಅದು ನೈಜತೆಯಲ್ಲ. ಕೆಲವೊಮ್ಮೆ ಅದರಿಂದ ಏನನ್ನೋ ಸಾಧಿಸಲು ಮುನ್ನಡೆಸಬಹುದು ಮತ್ತು ತಮ್ಮ ನಿರಂತರ ಜೀವನದಲ್ಲಿ ಅದೇ ರೀತಿಯ ಅವಲಂಬನೆಯಿಂದ ಒತ್ತಡದ ಭಾವನೆಗಳನ್ನು ಅನುಭವಿಸಬಹುದು. ಇದು ಎಷ್ಟರಮಟ್ಟಿಗೆ ಆರ್ಥಿಕವಾಗಿ ಅವರಿಗೆ ಸಹಾಯವಾಗುತ್ತಿದೆ ಹಾಗು ಅದರಿಂದ ಸೋಲಾದಾಗ ಸವಾಲಾಗಿ ಸ್ವೀಕರಿಸುವ ಮನೋಭಾವ ಇಟ್ಟುಕೊಂಡರೆ ಜೀವನದ ಏರಿಳಿತಗಳನ್ನು ಸಮನಾಗಿ ಕಾಣಬಹುದು.

ಇನ್ಸ್ಟಾಗ್ರಾಮ್‌ನಲ್ಲಿ ಬಹುತೇಕವಲ್ಲದೆ ಜನಪ್ರಿಯತೆಗಾಗಿ ಹಣ ಗಳಿಸಲು ತಾತ್ಕಾಲಿಕವಾಗಿದ್ದ ದೃಷ್ಟಿಕೋನಗಳು ವ್ಯಕ್ತಿಯೊಳಗಿನ ಆತ್ಮೀಯತೆಯ ಅನೇಕ ಆಯಾಮಗಳನ್ನು ಕಳೆದುಕೊಳ್ಳುವಂತೆ ಮಾಡಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಜೀವನವನ್ನು ಹೆಚ್ಚು ಫಿಲ್ಟರ್ ಮಾಡಲೂ, ಸುಂದರವಾಗಿ ಪ್ರದರ್ಶಿಸಲು ನಿರೀಕ್ಷೆಗಳು ಹೆಚ್ಚಾಗಿವೆ. ಇದು ಅನೇಕರಿಗೆ ಒತ್ತಡದ ಕಾರಣವಾಗಬಹುದು, ಏಕೆಂದರೆ ಅವರು ತಮ್ಮ ಜೀವನವನ್ನು ಸದಾ ಸಮರ್ಥವಾಗಿ ಅಥವಾ ಅದ್ಭುತವಾಗಿ ತೋರಿಸಲು ಪ್ರಯತ್ನಪಡುತ್ತಾರೆ.

ಇದು ಸಾಮಾಜಿಕ ಮಾಧ್ಯಮಗಳ ಅಧ್ಯಯನ ಹಾಗೂ ಪರಿಣಾಮಗಳನ್ನು ಸಮರ್ಥವಾಗಿ ಅರಿತು, ಹೆಚ್ಚು ಸಾಮಾನ್ಯ ಜೀವನದ ನಿಟ್ಟಿನಲ್ಲಿ ಸಮತೋಲನವಾಗಿ ಸಾಧಿಸುವುದು ಮುಖ್ಯ. ಇನ್ಸ್ಟಾಗ್ರಾಮ್ ರಿಲ್ಸ್ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಣಾಮವಾಗಿ ಉಂಟಾಗುವ ಖಿನ್ನತೆ ಹಾಗೂ ಅನಾಹುತಗಳನ್ನು ಸರಿಯಾಗಿ ನಿರ್ವಹಿಸಲು ಕೆಲವು ಸೂಕ್ತ ಪರಿಹಾರಗಳನ್ನು ಅನುಸರಿಸಬಹುದು.

ತಮ್ಮ ಜೀವನವನ್ನು ಇತರರೊಂದಿಗೆ ಹೋಲಿಸುವ ಬದಲು, ಸ್ವಂತ ಸಾಧನೆಗಳನ್ನು ಗುರುತಿಸಿ ಅದರೊಂದಿಗೆ ಸಂತೋಷ ಕಾಣಬಹುದು. ಪ್ರತಿ ಕ್ಷಣವೂ ಸ್ವಯಂ ತಮ್ಮ ಬಗ್ಗೆ ಯೋಚಿಸಿ ಮತ್ತು ಸ್ವಂತಿಕೆಯನ್ನು ಬೆಳೆಸುವ ಪ್ರಯತ್ನ ಮಾಡಿ ದಿನನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಮಯವನ್ನು ನಿಗದಿಪಡಿಸಿ. ಇದರಿಂದ ಅನೇಕ ಸಮಯ ವ್ಯಯವನ್ನು ತಡೆಹಿಡಿದು, ಅದರ ಬದಲು ವ್ಯಾಯಾಮ, ಹವ್ಯಾಸಗಳು, ಪುಸ್ತಕ ಓದುವುದು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು.

ಇತರರು ಹಂಚಿದ ಪರಿಪೂರ್ಣ ಚಿತ್ರಣಗಳು ನಿಜವಾದ ಬದುಕಿನ ಪ್ರತಿಬಿಂಬವಲ್ಲ ಎಂದು ಅರಿತುಕೊಂಡು, ಇವು ಬಹುತೇಕ ನೈಜವಲ್ಲದ ದೃಷ್ಠಿಕೋನಗಳಿಂದ ಮಾತ್ರ ತೋರಿಸಲಾಗುತ್ತದೆ. ಇದನ್ನು ಅರಿತು ತಮ್ಮ ವೈಯಕ್ತಿಕ ಜೀವನಕ್ಕೆ ತಕ್ಕಂತೆ ಉತ್ತಮ ಜೀವನ ಪಡೆಯಲು ಪರಿಶ್ರಮಿಸಬೇಕಾಗುತ್ತದೆ. ಆದರೆ ಅನಾವಶ್ಯಕ ಒತ್ತಡವನ್ನು ತಪ್ಪಿಸುವುದು ಬಹಳ ಮುಖ್ಯ.

ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಧ್ಯಾನ, ಯೋಗ, ವ್ಯಾಯಾಮ ಅಥವಾ ಇತರ ಯಾವುದೇ ಹವ್ಯಾಸಗಳನ್ನು ಅಭ್ಯಾಸಕ್ಕೆ ತರಲು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ. ಬಿಡುವಿನ ಸಮಯವನ್ನು ಬೇರೆ ಹವ್ಯಾಸಗಳಿಗೆ ಮೀಸಲಿಡುವುದು ಸೂಕ್ತ., ಉದಾಹರಣೆಗೆ, ಸೃಜನಾತ್ಮಕ ಚಟುವಟಿಕೆಗಳು, ಪುಸ್ತಕ ಓದುವುದು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಸ್ವಲ್ಪ ಮಟ್ಟಿಗೆ ಒತ್ತಡ ಹಾಗು ಖಿನ್ನತೆಯಿಂದ ಹೊರ ಬರಲು ಸೂಕ್ತ ಮಾರ್ಗವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ ಅಂಶಗಳಿಗೆ ಗಮನವಿಟ್ಟು, ಯಾವ ವಿವರಣೆಯನ್ನೂ ಸಹ ತಮ್ಮ ಖಾಸಗಿ ವಿಚಾರಗಳನ್ನು ಶೇರ್ ಮಾಡುವ ಮೊದಲು ಅರ್ಥಮಾಡಿಕೊಳ್ಳಬೇಕು. ಇದರಿಂದ ನೋಡುವ ಜನರ ಪ್ರತಿಕ್ರಿಯೆ ಏನು? ಇದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡುತಿದ್ದೇವೆ? ಅದರಿಂದ ಕಲಿಯಬಹುದಾದ ಅಂಶಗಳು ನಮ್ಮ ಜೀವನಕ್ಕೆ ಬಹಳ ಉಪಯುಕ್ತವಾಗಿದೆಯಾ ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅದು ಉಪಯುಕ್ತವೋ ಅನುಪಯುಕ್ತವೋ ಎಂದು ತೀರ್ಮಾನಿಸಿ ಮುನ್ನಡೆಯಬೇಕಾಗುತ್ತದೆ.
ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಅಥವಾ ಹಾನಿಕರ ವಿಷಯಗಳನ್ನು ಮೊದಲು ಪತ್ತೆಹಚ್ಚಿ, ಬಳಿಕ ಅವುಗಳನ್ನು ತಪ್ಪಿಸಲು ದೂರ ಇರಬಹುದು.

ಖಿನ್ನತೆ ಅಥವಾ ಯಾವುದೇ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರೆ, ಆಪ್ತ ಸಮಾಲೋಚಕರ ಬಳಿ ಸಿಗುವ ಸಹಾಯದಿಂದ ಅಥವಾ ಸಮಸ್ಯೆ ಇನ್ನು ಹೆಚ್ಚಿದ್ದರೆ ನುರಿತ ತಜ್ಞರಿಂದ ಗುಣಮಟ್ಟದ ಸಲಹೆ ಅಥವಾ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ನೈಸರ್ಗಿಕ ಚಿಕಿತ್ಸೆಗಳು ಅಥವಾ ಗುಂಪು ಚರ್ಚೆಗಳು ಸಹ ಹೆಚ್ಚಾಗಿ ಸಹಾಯ ಮಾಡಬಹುದು.

ಹೆಚ್ಚು ಹೊತ್ತಿನಲ್ಲಿ, ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಯಾವುದೇ ಮಾಧ್ಯಮಗಳ ಪ್ರಾಮುಖ್ಯತೆಯನ್ನು ಎಷ್ಟು ಪಡೆಯಬೇಕು ಎಂಬುದನ್ನು ನಿರ್ಧರಿಸಿ ಅದನ್ನು ಸಮತೋಲನದಿಂದ ಬಳಸಲು ಸಹಾಯ ಪಡೆಯಬಹುದು.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :

 


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW