ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ

ಸರಸ್ವತಿ ನದಿಯ ಬಗ್ಗೆ ಕೆಲಆಂಗ್ಲ ಇತಿಹಾಸಕಾರರು ಊಹಾಪೋಹಗಳನ್ನು ಹುಟ್ಟು ಹಾಕಿ ಈ ನದಿಯು ಇರಲೇ ಇಲ್ಲ ಎಂದು ವಾದ ಮಾಡಿದರು.ಆದರೆ ಇಂದಿಗೂ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇದರ ಸುತ್ತಲಿನ ಭೂಭಾಗಗಳು ಇಂದಿಗೂ ಕಾಣ ಸಿಗುವುದೇ ಸತ್ಯತೆಗೆ ನಿದರ್ಶನ ಎಂದು ಸಾರಿ ಹೇಳಿದಂತಿದೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಸರಸ್ವತಿ ನದಿ ಕುರಿತಾಗಿದೆ, ತಪ್ಪದೆ ಮುಂದೆ ಓದಿ…

ಜ್ಞಾನಧಾತೆಯ ಹೆಸರನು ತನ್ನ ನಾಮವನ್ನಾಗಿ ಇಟ್ಟುಕೊಂಡು ಜೀವಸಂಕುಲಕೆ ಉಸಿರಾಗುತ ಭಾರತದಲ್ಲಿ ವೇದಗಳ ಕಾಲದಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ವೈದಿಕ ಗ್ರಂಥಿಗಳಲ್ಲಿ ಉಲ್ಲೇಖ ಸಹಿತವಾಗಿರುವ ದೈವಿಕತೆಯ ಹಿನ್ನೆಲೆಗೆ ಹೆಸರಾಗಿ ಭೌತಿಕಕ ನದಿಯಾಗಿ ಋಗ್ವೇದದ ಹಳೆ ಗ್ರಂಥಗಳಲ್ಲಿ ಮನ್ನಣೆ ಪಡೆದು ವಾಯುವ್ಯ ಭಾರತದಲ್ಲಿ ಮಹಾನ್ ಅಥವಾ ಪವಿತ್ರ ನದಿ ಎಂದು ಕರೆಯಲ್ಪಟ್ಟಿರುವ ವಿದ್ಯಾಧಾತೆಯ ಹೆಸರಿನಿಂದ ಕರೆಯಲ್ಪಡುವ ನದಿಯೇ ಸರಸ್ವತಿ ನದಿ.

ಈ ನದಿಯು ಕೂಡ ಪೌರಾಣಿಕ ಮತ್ತು ಗ್ರಂಥಗಳಲ್ಲಿ ವಿವಿಧ ರೀತಿಯಲ್ಲಿ ಉಲ್ಲೇಖಿಸಲಾಗಿದ್ದು ಮಧ್ಯ ಮತ್ತು ಕೊನೆಯಲ್ಲಿ ಋಗ್ವೇದ ಪುಸ್ತಕಗಳಲ್ಲಿ ಕೊನೆಗೊಳ್ಳುವ ಅತ್ಯಂತ ಸಣ್ಣ ನದಿಯೆಂದು ಉಲ್ಲೇಖಿಸಲಾಗಿದೆ. ಆದರೆ ಈ ಗ್ರಂಥಗಳಲ್ಲಿಯೇ ಈ ನದಿಯ ವಿಸ್ತಾರತೆಯ ಗೊಂದಲವಿರುವುದರಿಂದ ಇದು ದೊಡ್ಡ ನದಿ ಸಣ್ಣ ನದಿಯೆಂದು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದು ವೇದ ಕಾಲದಲ್ಲಿ ಉಗಮಿಸಿದ್ದರಿಂದ ಇದಕ್ಕೆ ಪೂಜ್ಯನೀಯ ದೇವತೆ,ಜ್ಞಾನ ನೀಡುವ ಮಹಾಮಾತೆಯ ಹೆಸರನ್ನು ಇಡಲಾಗಿದೆ ಎಂಬುದು ಗ್ರಂಥದಲಿ ಹೇಳಲಾಗಿದೆ.ನಂತರದಲ್ಲಿ ಈ ನದಿಯು ಅತ್ಯಂತ ಪ್ರಬಲಯುತವಾಗಿ ಸ್ವತಂತ್ರವಾಗಿ ನದಿಯು ತನ್ನ ವಿಸ್ತಾರತೆಯು ದ್ವಿಗುಣಗೊಳುತ್ತಾ ಸಾಗಿತು ಏಕೆಂದರೆ ವೈದಿಕ ಕಾಲದಲ್ಲಿ ಪಂಚಭೂತಗಳನ್ನು ಪೂಜ್ಯನೀಯ ಭಾವದಿ ಪೂಜಿಸುತ್ತಿರುವುದರಿಂದ ಅಲ್ಲಿನ ಜನ ಈ ನದಿಗೆ ಅಧಿಕ ಪ್ರಮಾಣದ ಭೂಮಿಯನ್ನು ಸ್ವಯಂ ನಿರ್ಣಯದಿ ನೀಡಿದರು.ಎಂಬುದು ಕೆಲವರ ಅಭಿಪ್ರಾಯ.

ಇಂದು ಈ ಸರಸ್ವತಿ ನದಿಯು ಅಗಾಧವಾದ ವ್ಯಾಪ್ತಿಯನ್ನು ಹೊಂದಿ ತನ್ನದೆಯಾದ ಪೂಜ್ಯನೀಯ ಸ್ಥಾನಮಾನವನ್ನು ಹೊಂದಿ ನೂರಾರು ದೇವಾಲಯಗಳಿಗೆ ವರದಾನವಾಗಿ ಭಕ್ತರ ಪುಣ್ಯಸಂಗಮ ಪ್ರತೀಕವಾಗಿದೆ ಸರಸ್ವತಿ ನದಿ. ವೈದಿಕ ಗ್ರಂಥದಲ್ಲಿ ಇದನ್ನು ಶಕ್ತಿಯುತ ನದಿ, ಪ್ರಬಲವಾದ ಪ್ರವಾಹ ನದಿಯು ಎಂದು ಬಣ್ಣಿಸಲಾಗಿದೆ. ಅಲ್ಲದೆ ಈ ನದಿಯು ಸಂಗಮವನ್ನು ಹುಟ್ಟು ಹಾಕಿತು ನದಿಗಳಾದ ಗಂಗಾ, ಯಮುನಾ ಮತ್ತು ಮಕ್ಕಳ ತ್ರಿವೇಣಿ ಮೂರು ನದಿಗಳು ಕೂಡಿ ಸಂಗಮವಾಗಿ ಪುಣ್ಯ ಪಾವನ ಕ್ಷೇತ್ರವಾಗಿ ರೂಪಗೊಂಡಿತು.

ಇದು ಹಲವಾರು ಆಧ್ಯಾತ್ಮಿಕ ಗ್ರಂಥಗಳಲ್ಲಿ, ವೇದಿಕ ಗ್ರಂಥಗಳಲ್ಲಿ ವಿಭಿನ್ನ ರೀತಿಯ ಕುರುಹುಗಳು,ಉಲ್ಲೇಖಗಳನ್ನು ನೀಡಲಾಗಿದ್ದು ಹಾಗಾಗಿ ಈ ನದಿಯ ಬಗ್ಗೆ ವಿವಿಧ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಋಗ್ವೇದ್ ಮತ್ತು ವೈದಿಕದ ಕೆಲ ಪಠ್ಯಗಳನ್ನು ಇಂದಿನ ನದಿಗಳನ್ನು ಪ್ರಾಚೀನ ನದಿಗಳ ಪಾತ್ರಗಳೊಂದಿಗೆ ಗುರುತಿಸುವುದ್ದನ್ನು ಕೂಡ ಉಲ್ಲೇಖಿಸಲು ಬಳಸಿದ್ದಾರೆ. ಋಗ್ವೇದದಲ್ಲಿ ಕೂಡ ಪ್ರತಿ ನದಿಯನ್ನು ಬಣ್ಣಿಸಲು ವೈಶಿಷ್ಟ್ಯ ವ್ಯಕ್ತಪಡಿಸಲು ಸ್ತೋತ್ರಗಳನ್ನು ರಚಿಸಿ ಪೂಜ್ಯನೀಯ ರೂಪದಲ್ಲಿ ಅರ್ಥವತ್ತಾಗಿ ದೇವರ ಸ್ವರೂಪದಿ ಕಾಣುತ್ತ ನದಿಗಳನ್ನು ಆರಾಧಿಸುತ್ತಿದ್ದರು.ಹಾಗಾಗಿ ಹಿಂದಿನ ಕಾಲದಲ್ಲಿ ಕಂಡು ಬರುವ ನದಿಗಳಲ್ಲಿ ಅಗಾಧ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಜನಮನ್ನಣೆ ಗಳಿಸಿರುವ ನದಿಯೆಂದರೆ ಅದುವೇ ಸರಸ್ವತಿ ನದಿ

19 ನೆ ಶತಮಾನದಲ್ಲಿ ಈ ನದಿಯು ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು ಉತ್ತರಾರ್ಧದಿಂದ ಹಲವಾರು ಪಂಡಿತರು, ವಿದ್ವಾಂಸರು ಈ ನದಿಯನ್ನು ಘಗ್ಗರ್ -ಹಕ್ರಾ ನದಿಯೊಂದಿಗೆ ಗುರುತಿಸಲು ಪ್ರಸ್ತಾಪಿಸಲಾಗಿದ್ದು ಕಂಡು ಬಂದಿದೆ. ಇದು ಪ್ರಸ್ತುತ ವಾಯುವ್ಯ ಭಾರತ ಮತ್ತು ಪೂರ್ವ ಪಾಕಿಸ್ತಾನದ ಮೂಲಕ ಹರಿಯುತ್ತದೆ.ಹೀಗೆ ಹರಿಯುತ್ತಾ ಮುನ್ನಡೆಯುತ್ತ ಸಾಗುತ್ತದೆ.

ಸರಸ್ವತಿ ನದಿಯು ಉತ್ತರಾಖಂಡದ ಗಾರ್ಹುನಲ್ಲಿರುವ ದೇವರ ಕಣಿವೆ ಎಂದು ಕರೆಯಲ್ಪಡುವ( ಹರ್-ಕಿ-ದುನ್) ಹಿಮಕಣಿವೆಯಲ್ಲಿ ಉಗಮಿಸುತ್ತದೆ. ತಜ್ಞರ ಪ್ರಕಾರ ಯಾವಾಗ ಈ ನದಿಯು ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತದೆಯೋ ಆಗ 3 ರಿಂದ 15 ಮೀಟರ್ ಅಗಲ 5 ಮೀಟರ್ ಆಳ ಹೊಂದಿತ್ತು 1500 ಕಿಮೀ ವಿಸ್ತಾರತೆ ಹೊಂದಿದೆ ಎಂಬುದು ಕೆಲ ತಜ್ಞರ ಅಭಿಪ್ರಾಯ.ಈ ನದಿ ಸಟ್ಲೆಜ್ ,ಯಮುನಾದೊಂದಿಗೆ ಹರಿಯುತ್ತಾ ಥಾರ್ ಮರಭೂಮಿಯತ್ತ ಸಾಗುತ್ತ ಮುನ್ನಡೆ ಸಾಗಿ ಸಮುದ್ರವನ್ನು ಸೇರುತ್ತದೆ.

ಈ ನದಿಯು ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಳ್ಳುತ ವಿವಿಧ ದಿಕ್ಕುಗಳಲಿ ಹರಿಯುತ ಮುಂದೆ ಸಾಗುತ್ತದೆ.ಭೌಗೋಳಿಕ ಸಂಶೋಧನೆಗಳ ಮುಖಾಂತರ ಘಕ್ರಾ -ಹಕ್ರಾ ಚಾನಲ್ ಮೂಲಕ ಸರಸ್ವತಿ ನದಿಯು ಸಟ್ಲೆಜ್ ನದಿಯ ಡೆಲ್ವಾ ಚಾನಲ್ ಅನ್ನು ಸೇರುತ್ತದೆ.

ಫೋಟೋ ಕೃಪೆ : google

ನದಿಗಳು ಜನಿಸಿದ್ದರಿಂದಲೇ ನಾಗರಿಕತೆಗಳು ಹುಟ್ಟಿಕೊಂಡವು ಎಂಬುದಕ್ಕೆ ಪ್ರಮುಖ ಸಾಕ್ಷಿಯೇ ಸರಸ್ವತಿ ನದಿ. ಸುಮಾರು 5000 ವರ್ಷಗಳ ಹಿಂದೆ ನದಿಯನ್ನು ಪೋಷಿಸುವ ಮಾನ್ಸೂನ ಕಡಿಮೆಯಾಗಿ ಸಿಂಧು ನಾಗರಿಕತೆಯು ಅಭಿವೃದ್ಧಿ ಹೊಂದಿದ್ದು ಇತಿಹಾಸದಲ್ಲಿ ಹೆಸರಾಗಿದೆ. ಈ ನದಿಗೆ ಹಿಂದೂ ಧರ್ಮದಲ್ಲಿ ಅಗಾಧವಾದ ಪ್ರಾಮುಖ್ಯತೆ ನೀಡಲಾಗಿದ್ದು ಪೂಜ್ಯನೀಯ ಸ್ಥಾನದಿಂದ ಕಾಣುತ್ತಾರೆ.ಏಕೆಂದರೆ ಈ ನದಿಯ ತಟದಲ್ಲಿ ಇದರ ಉಪನದಿಯಾದ ದೃಷದೃತಿಯೊಂದಿಗೆ ಬ್ರಹ್ಮಾವರ್ತದ ವೈದಿಕ ರಾಜ್ಯದಲ್ಲಿ ವೈದಿಕ ಸಂಸ್ಕೃತಿಯು ಅದರ ಮೂಲವನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.

ಒಂದು ದೇಶದ ನಾಗರಿಕತೆ ಮತ್ತು ಸಂಸ್ಕೃತಿ ಬೆಳೆಯುವುದು ಅಲ್ಲಿಯ ಒಂದಲ್ಲಾ ಒಂದು ನದಿಗಳಿಂದ ಎಂಬುದು ಸತ್ಯ. ಸಿಂಧು ನದಿಗಿಂತ ಹತ್ತಾರು ಪಟ್ಟು ಹೆಚ್ವು ವಿಶಾಲ ಮತ್ತು ವಿಸ್ತಾರವಾದ ಮತ್ತು ವೈದಿಕ ನದಿಯೊಂದು ನಮ್ಮ ದೇಶದ ಮೂಲ ಸಂಸ್ಕೃತಿಯನ್ನು ಸಾರಿ ಹೇಳುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು.ಎಷ್ಟೇ ಆಶ್ಚರ್ಯವಾದರೂ ನಂಬಲೇಬೇಕಾದದ್ದು.ಈ ಎಲ್ಲ ಆಶ್ಚರ್ಯಗಳಿಗೆ ಹೆಸರಾದ ನದಿಯೇ ವೈದಿಕತೆಯ ನದಿಯೆಂದು ಇತಿಹಾಸ ಪ್ರಸಿದ್ಧವಾದ ಸರಸ್ವತಿ ನದಿ.

ಸಪ್ತನದಿಗಳ ಉಗಮ ಸ್ಥಾನವಾದ ಹಿಮಾಲಯದ ತಪ್ಪಲಿನಲ್ಲಿ ಹಿಮವು ಕರಗಿ ಹರಿಯುವುದರ ಮೂಲಕವೇ ನದಿಗಳು ಜನನ ತಾಳಿವೆ.75 ಮಿಲಿಯನ್ ವರ್ಷಗಳ ಹಿಂದೆ ಜಗತ್ತಿನ 7 ಖಂಡಗಳು ಅಂಟಾರ್ಟಿಕ್ ನ ಭಾಗವಾಗಿದ್ದು ಭೂಮಿ ನಿಧಾನವಾಗಿ ಚಲಿಸುತ್ತ ಪರಸ್ಪರ ಖಂಡಗಳು ಡಿಕ್ಕಿಯಾಗಿ ಭೂಮಿ ಉಬ್ಬಿಕೊಂಡು ಎತ್ತರದ ಹಿಮಾಲಯ ಉದ್ಭವವಾಗಿ ಭೂಮಿಯಿಂದ ಎತ್ತರಕ್ಕೆ ಹೋದಂತೆ ಉಷ್ಣಾಂಶ ಕಡಿಮೆಯಾಗುತ್ತ ಹೋಗುತ್ತದೆ.ಉಷ್ಣಾಂಶ -3ಕ್ಕಿಂತ ಕಡಿಮೆಯಾದಾಗ ನೀರು ಘನಿಕರಗೊಂಡು ಹಿಮವಾಗುತ್ತದೆ.ನಂತರ ಇದೆ ನೀರು ಕರಗುತ್ತಾ. ಹೋಗಿ ನದಿಗಳ ಉಗಮಕ್ಕೆ ಕಾರಣವಾಯಿತು. ಆ ನದಿಗಳು ಯಾವುಗಳೆಂದರೆ ಸಿಂಧೂ, ಸರಸ್ವತಿ,ಗಂಗಾ,ಯಮುನಾ,ಬ್ರಹ್ಮಪುತ್ರ, ಸಟ್ಲೆಜ್,ಬಿಯಾಸ್,ರಾವಿ,ಜಿಲಂ,ಎಂಬ ಅಷ್ಟ ನದಿಗಳ ಹುಟ್ಟಿದವು.

ನಮ್ಮದೇಶದ ಬಹುತೇಕ ನದಿಗಳು ಪೂರ್ವ ದಿಕ್ಕಿನತ್ತ ಹರಿದಿವೆ. ಆದರೆ ಸರಸ್ವತಿ ನದಿಯು ಪಶ್ಚಿಮ ದಿಕ್ಕಿನತ್ತ ಹರಿಯುತ್ತಾ ಕುರುಕ್ಷೇತ್ರ ಅಂದರೆ ಈಗಿನ ಹರಿಯಾಣ,ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳ ಮೂಲಕ ಹರಿದು ಗುಜರಾತ್ ಪ್ರವೇಶಿಸಿ ಸಮುದ್ರ ತಳದಲ್ಲಿ ಮುಳುಗಿ ಹೋಗಿಹ ದ್ವಾರಕೆ ಬಳಿ ಸಮುದ್ರ ಸೇರುತ್ತಿತ್ತು ಎಂಬುದನ್ನು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಋಗ್ವೇದದಲ್ಲಿ 64 ಬಾರಿ ಸರಸ್ವತಿ ನದಿ ಉಲ್ಲೇಖವಿದ್ದರೆ ಮಹಾಭಾರತದಲ್ಲಿ 235 ಬಾರಿ ಮತ್ತು ರಾಮಾಯಣದಲ್ಲಿ 7 ಬಾರಿ ಸರಸ್ವತಿ ನದಿಯ ಉಲ್ಲೇಖವಿರುವುದು ನದಿಯ ಮಹತ್ವ ಮತ್ತು ವೈಶಿಷ್ಟ್ಯತೆ, ಪೂಜ್ಯನೀಯತೆಯ ಬಗ್ಗೆ ಸ್ಪಷ್ಟ ಪಡಿಸುತ್ತದೆ.

ಫೋಟೋ ಕೃಪೆ : google

ಇತಿಹಾಸದಲ್ಲಿ ಈ ನದಿಯ ಉಲ್ಲೇಖಗಳು ಅಲ್ಲದೆ ಋಷಿಮುನಿಗಳು ಕೂಡ ಈ ನದಿಯ ತಟದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಕುರುಹು ಇದೆ. ಉದಾಹರಣೆ ಸ್ಕಂದ ಮತ್ತು ನಾರದ ಪುರಾಣಗಳಲ್ಲಿ ಕೂಡ ಉಲ್ಲೇಖಿಸಲಾಗಿದ್ದು. ಮಾರ್ಕಂಡೇಯ ಋಷಿಗಳು ಇದೆ ತಟದಲ್ಲಿಯೇ ವಾಸಿಸುತ್ತಿದ್ದರು.ಪ್ರಸ್ತುತ ಗಂಗಾ ನದಿಗಿಂತಲೂ 20 ಪಟ್ಟಗಳಷ್ಟು ದೊಡ್ಡದಾದ ನದಿಯಾಗಿದ್ದು ಅಂದಿನ ಕಾಲಕ್ಕೆ ಅತಿದೊಡ್ಡ ನದಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಸಹಾಯಕವಾಗಿದ್ದು ಅತ್ಯಂತ ಫಲವತ್ತತೆಯ ಭೂಮಿಯಾಗಿ ಕೃಷಿಗೆ ಯೋಗ್ಯವಾಗಿತ್ತು. ಇಂದಿನ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕೂಡ ಒಂದು ಕಾಲಕ್ಕೆ ಸರಸ್ವತಿಯು ಹರಿಯುತ್ತಿದ್ದಳು.

ಇಷ್ಟೆಲ್ಲಾ ಇತಿಹಾಸ ಪ್ರಸಿದ್ಧವಾದ ಸರಸ್ವತಿ ನದಿಯು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಲ್ಲದೆ ಈ ನದಿಯನ್ನು ಗುಪ್ತಗಾಮಿನಿ ನದಿ ಎಂದು ಕೂಡ ಕರೆಯುವರು ಏಕೆಂದರೆ ಇಲ್ಲಿ ಎರಡು ನದಿಗಳ ಸಮ್ಮಿಲನವಾಗುತ್ತೆ (ಗಂಗೆ ಮತ್ತು ಯಮುನೆ) ಹಾಗಾಗಿ ಈ ನದಿಗೆ ಗುಪ್ತಗಾಮಿನಿ ಎಂಬ ಹೆಸರು ಬಂದಿದೆ.

ಸರಸ್ವತಿ ನದಿಯ ಬಗ್ಗೆ ಕೆಲ ಆಂಗ್ಲ ಇತಿಹಾಸಕಾರರು ಊಹಾಪೋಹಗಳನ್ನು ಹುಟ್ಟು ಹಾಕಿ ಈ ನದಿಯು ಇರಲೇ ಇಲ್ಲ ಎಂದು ವಾದ ಮಾಡಿದರು.ಆದರೆ ಇಂದಿಗೂ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇದರ ಸುತ್ತಲಿನ ಭೂಭಾಗಗಳು ಇಂದಿಗೂ ಕಾಣ ಸಿಗುವುದೇ ಸತ್ಯತೆಗೆ ನಿದರ್ಶನ ಎಂದು ಸಾರಿ ಹೇಳಿದಂತಿದೆ.

ಹಿಮಾಲಯದ ತಪ್ಪಲಿನಲ್ಲಿ ಆಗಾಗ ಭೂಕಂಪಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತವೆ.ಇದೆ ರೀತಿಯಲ್ಲಿ ಸರಸ್ವತಿ ನದಿಯ ಪಾತ್ರದಲ್ಲಿಯ ಭೂಕಂಪದಿಂದಾಗಿ ಈ ನದಿ ಇಬ್ಭಾಗವಾಗಿ ತಮಸಾ ನದಿಯ ಮೂಲಕ ಈಗಿನ ಯಮುನಾ ನದಿಯನ್ನು ಸೇರಿಕೊಂಡಿತು.ಇನ್ನೊಂದು ಭಾಗ ಭೂಮಿಯ ಒಳಗೆ ಅಂತರ್ಮುಖಿ ಆಯ್ತು ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

ಸರಸ್ವತಿ ನದಿಯ ಉಪನದಿಯಾದ ಶತದೃ ಹರಿಯಾಣದ ರೋಪಾರ್ ಬಳಿ ತಿರುವು ಬದಲಿಸಿ ಸಟ್ಲೆಜ್ ನದಿಯ ಮುಖಾಂತರ ಬಿಯಾಸ್ ನದಿಯಲ್ಲಿ ಸಮ್ಮಿಲನವಾಗಿದ್ದರಿಂದಲೇ ಸರಸ್ವತಿ ನದಿಯ ಪಾತ್ರ ಬದಲಾಯಿತು.ಆದರೆ ಇಂದಿಗೂ ಕೂಡ ಸರಸ್ವತಿ ನದಿಯ ಉಪನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಾ ರೈತರ ಬಾಳಿಗೆ ಬೆಳಕಾಗಿವೆ.ಅಲ್ಲದೆ ಹಲವಾರು ಸರೋವರಗಳು ಇಂದಿಗೂ ಪ್ರಸ್ತುತವಾಗಿರುವುದು ಸರಸ್ವತಿ ನದಿಯ ಮಹತ್ವ ಸಾರುತ್ತದೆ.ರಾಜಸ್ತಾನದ ಮಣ್ಣನು ಪರೀಕ್ಷೆಗೆ ಒಳಪಡಿಸಿದಾಗ ಸಾವಿರಾರು ವರ್ಷಗಳ ಹಿಂದೆ ಕೃಷಿ ಮಾಡುತ್ತಿದ್ದರು ಎಂಬ ಕುರುಹು ದೊರಕಿದೆ.

ಫೋಟೋ ಕೃಪೆ : google

ಗುಜರಾತನ ದೋಲವಿರಾ ಬಳಿಯಲ್ಲಿ ಉತ್ಕನನ ಮಾಡಲಾಗಿದ್ದು .ಮಡಿಕೆಗಳು, ಕುಡಿಕೆಗಳು, ಹೂಜಿಗಳು, ಸುಟ್ಟ ಇಟ್ಟಿಗೆಗಳು, ಸುಸಜ್ಜಿತವಾದ ರಸ್ತೆಗಳು, ಪಾದಚಾರಿ ರಸ್ತೆಗಳು, ಕಂಡು ಬಂದಿದ್ದು ಸಾವಿರಾರು ವರ್ಷಗಳ ಹಿಂದೆ ನಾಗರಿಕತೆ ಇತ್ತೆಂದು ಇಡೀ ಜಗತ್ತಿಗೆ ಸಾರಿ ಹೇಳುತ್ತದೆ.ಅಲ್ಲದೆ ಈ ಭಾಗದ ಜನರು ಇಂದಿಗೂ ಸರಿ ಸುಮಾರು 16 ಸರೋವರಗಳ ನೀರನ್ನು ಕುಡಿಯಲಿಕ್ಕೆ ,ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ ಅಂದರೆ ಮೊದಲಿನ ಜನರಿಗೆ ನೀರಿನ ಮಹತ್ವ ತಿಳಿದಿತ್ತು. ಹಾಗಾಗಿಯೇ ಇವರು ಮಳೆ ನೀರಿನ ಕೊಯ್ಲು ಬಗ್ಗೆ ತಿಳಿದಿದ್ದರು ಎಂದು ಅರಿವಾಗುತ್ತದೆ. ಅಲ್ಲದೆ ಜಲ ಸಾರಿಗೆಯಾಗಿ ಈ ನದಿ ಬಳಸಿಕೊಂಡು ವ್ಯಾಪಾರ, ವ್ಯವಹಾರ, ವಹಿವಾಟುಗಳನ್ನು ನಡೆಸಿ ಜೀವನ ಸಾಗಿಸುತ್ತಿದ್ದರು ಎಂಬುದು ತಿಳಿದು ಬರುತ್ತದೆ.

ಇಷ್ಟು ಕುರುಹು ಸಹಿತ ಉಲ್ಲೇಖಗಳನ್ನು ಹೊಂದಿರುವ ಸರಸ್ವತಿ ನದಿಯು ಇತಿಹಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಹಲವಾರು ಮಹನೀಯರು ಈ ನದಿಯನ್ನು ಮತ್ತು ಪಾತ್ರವನ್ನು ತಿಳಿಯಲು ಸರಸ್ವತಿ ನದಿಯ ಪಾತ್ರದಿಂದ ಹಿಡಿದು ಅಡಿಯಿಂದ ಮುಡಿಗೆ ಸತತ ನಾಲ್ಕು ತಿಂಗಳ ಕಾಲ ಕಾಲ್ನಡಿಗೆಯ ಮೂಲಕ ಪ್ರಯಾಣಿಸಿ ಉತ್ಕನನ ಮಾಡಿ ಅಲ್ಲಿಯ ಸರಸ್ವತಿ ನದಿ ಮತ್ತು ನಾಗರಿಕತೆ ಕಂಡು ಬಂದಿದೆ ಎಂದು ಹೇಳಿದರು. ಅಲ್ಲದೆ ಯುದ್ಧಕ್ಕೆ ಬಳಸುತ್ತಿದ್ದ ಹಲವಾರು ಪರಿಕರಗಳು ದೊರೆತವು. ಇನ್ನೊಂದು ತಂಡವು ಉತ್ಕನನ ಮಾಡಿ ಮಹಾಭಾರತದಲ್ಲಿ ಮತ್ತು ಇಲ್ಲಿಯ ಪ್ರದೇಶಗಳಿಗೂ ಸಾಮ್ಯ ಇದೆ ಎಂದು ಸಾಬೀತುಪಡಿಸಿದರು. ಅಲ್ಲದೆ ಶ್ರೀಕೃಷ್ಣ ಪಾಂಡವರ ಪರವಾಗಿ ಧುರ್ಯೋದನನ ಬಳಿ ಸಂಧಾನಕ್ಕೆ ಬಂದಾಗ ಕೇಳಿದ 5 ಗ್ರಾಮಗಳಾದ ಪಾಣಿಪತ್, ಸೋನೆಪತ್, ಭಾಗ್, ಪತ್, ಇಂದ್ರಪ್ರಸ್ಥ, ತಿಲಪತ್ ಗ್ರಾಮಗಳು ಇಂದಿಗೂ ಸರಸ್ವತಿ ನದಿಯ ಪಾತ್ರದಲ್ಲಿರುವುದು ಸ್ಪಷ್ಟ ಉಲ್ಲೇಖವಾಗಿದೆ.

ಒಟ್ಟಿನಲ್ಲಿ ಸರಸ್ವತಿ ನದಿಯು ಮಹಾಭಾರತ, ರಾಮಾಯಣಗಳ ಕಾಲದಲ್ಲಿ ಕಂಡು ಬರುವುದಲ್ಲದೆ ಅನೇಕ ನಾಗರಿಕತೆಗಳ ಹುಟ್ಟಿಗೂ ಈ ನದಿ ಕಾರಣವಾಗಿದೆ. ಅಲ್ಲದೆ ವೈದಿಕ ಗ್ರಂಥದಲ್ಲಿ ಉಲ್ಲೇಖಿತವಾಗಿ ತನ್ನದೆಯಾದ ದೈವಿಕ ಹಿನ್ನೆಲೆಯನ್ನು ಹೊಂದಿ ಭಾರತದಲ್ಲಿ ಕಂಡು ಬರುವ ಪ್ರಮುಖ ಪೂಜ್ಯನೀಯ ಭಾವದ ಪ್ರತೀಕವಾಗಿದೆ. ಭವ್ಯ ಭಾರತದ ಸಕಲ ಸರ್ವಕೂ ಆಧಾರ ಭಾರತಾಂಬೆಯ ಮಡಿಲಿನ ಸಂಪನ್ಮೂಲಗಳ ಆಗರವೇ ಪುಣ್ಯನದಿ ಸರಸ್ವತಿ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW