‘ನನ್ನ ಅಪ್ಪ’ ಕವನ – ಪವಿತ್ರ .ಹೆಚ್.ಆರ್‘ಅಮ್ಮನ ಕೈಯಲ್ಲಿರುವ ಅನ್ನದ ಅಗುಳಿನಲಿ, ನಿನ್ನ ಶ್ರಮದ ಬೆವರ ಹನಿಯಿದೆ’…ಅಪ್ಪಂದಿರ ದಿನಕ್ಕೆ ಶುಭಾಶಯವನ್ನು ಕೋರುತ್ತಾ ಕವಿಯತ್ರಿ ಪವಿತ್ರ .ಹೆಚ್.ಆರ್ ಅವರು ತಮ್ಮ ತಂದೆಗೆ ಪ್ರೀತಿಯಿಂದ ಬರೆದ ಕವನ ಓದುಗರ ಮುಂದಿದೆ, ತಪ್ಪದೆ ಓದಿ…

ಈ ಜೀವಕ್ಕೆ ಆತನೇ ಎಲ್ಲ
ನಮಗಾಗಿ ಜೀವವನ್ನೇ ಮುಡಿಪಾಗಿಟ್ಟೆಯಲ್ಲಾ
ನಿನ್ನ ಪ್ರೀತಿಗೆ ಸರಿಸಾಟಿ ಯಾರಿಲ್ಲ
ನೀನಿಲ್ಲದೆ ನನ್ನ ಹೆಸರೆ ಇಲ್ಲ
ನಿನ್ನ ಬಣಿಸಲು ಪದಗಳೆ ಸಾಲಲ್ಲ…
ನೀನೆಂದು ಕೈಗೆ ನಿಲುಕದ ಅಂಭರ!!

ತುತ್ತು ತಿನ್ನಿಸುವ ಅಮ್ಮನ
ಕೈಯಲ್ಲಿರುವ ಅನ್ನದ ಅಗುಳಿನಲಿ
ನಿನ್ನ ಶ್ರಮದ ಬೆವರ ಹನಿ
ಹಗಲಿರುಳು ಸಂಸಾರದ ನೊಗಕ್ಕೆ
ಹೆಗಲ ಕೊಟ್ಟು ಜೀವದ ಜೀವಗಳಿಗಾಗಿ
ದುಡಿಯುವ ನೀನೊಂದು ಬಂಗಾರದ ಗಣಿ!!

ಕಣೀರು ಅಡಗಿಸಿಟ್ಟು
ನಮ್ಮನ್ನು ನಗಿಸಿ ತೋಳಲ್ಲಿ ಆಡಿಸಿ
ಜಗವ ಪರಿಚಿಸಿದ್ದು ನೀನು
ಕೈಗೆಟುಕುದ ಕನುಸುಗಳ ಬೇಸರವ
ಬದಿಗೊತ್ತಿ ತಾನು ಹರಕು ತೊಟ್ಟು
ಸಂಸಾರದ ಹುಳುಕ ಮುಚ್ಚಿ
ನಿನ್ನ ಅನುಭವಗಳನ್ನೆ..ವಿದ್ಯೆಯಾಗಿ ಧಾರೆ
ಎರೆದೆ ನಮ್ಮ ಬಂಗಾರದ ಭವಿಷ್ಯಕ್ಕೆ!!

ತನಗಾಗಿ ಏನೂ ಕೊಳ್ಳದ ಸ್ವಾರ್ಥವಿಲ್ಲದ
ನಿನ್ನ ಪ್ರೀತಿ ಮಮತೆಯ ಕಾಳಜಿಗೆ
ಹಿಮ ಬಂಡೆ ಕರಗಿ ನಿರಾಗುವುದು
ಬೆವರ ಸುರಿಸಿ ದಿನವೆಲ್ಲಾ
ದುಡಿದು ದಣಿದರೂ ಎಂದೂ
ಮುಖದ ನಗು ಮಾಸದ ದೈವ ನೀನು!!


  • ಪವಿತ್ರ .ಹೆಚ್.ಆರ್ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW