‘ನಾನು ಕಲ್ಲಾಗಬೇಕಿತ್ತು’ ಕವನ – ಡಾ. ಸರಸ್ವತಿ ಚಿಮ್ಮಲಗಿ



ಕಲ್ಲಾಗಬೇಕಿತ್ತು…ಕಲ್ಲು ಗೊಂಬೆಯಾಗಬೇಕಿತ್ತು…ಏಕೆ?,  ಕವಿಯತ್ರಿ ಡಾ. ಸರಸ್ವತಿ ಚಿಮ್ಮಲಗಿ ಅವರ ಕವನದಲ್ಲಿ, ಮುಂದೆ ಓದಿ.. 

ನಾನು ಕಲ್ಲಾಗಬೇಕಿತ್ತು
ಕಲ್ಲು ಗೊಂಬೆಯಾಗಬೇಕಿತ್ತು
ಇಜಿಪ್ತ ಸುಮೇರಿಯನ್ ಪಳೆಯುವಿಕೆಯಲ್ಲಿ
ನಾನೊಂದು ಗೊಂಬೆಯಾಗಿದ್ದರೆ
ವಸ್ತು ಸಂಗ್ರಹಾಲಯದಲ್ಲಿದ್ದು
ಮೆರೆಯುತ್ತಿದ್ದೆ!
ಶಿಲ್ಪಿಯ ಉಳಿಯಲ್ಲಿ
ಬೇಲೂರ ಬಾಲೆಯಾಗಿ
ಬಂದವರ ಬೆರಗುಗೊಳಿಸಿ
ಮಂತ್ರ ಮುಗ್ಧರನ್ನಾಗಿ ಮಾಡುತ್ತಿದ್ದೆ
ಆದರೆ
ಮಾನವೀಯತೆ ಇಲ್ಲದವರ ಮಧ್ಯೆ
ನಾನು ನಾನಾಗಿರುವುದಕ್ಕಿಂತ
ಕಲ್ಲಾಗಬೇಕಿತ್ತು
ಕಲ್ಲು ಗೊಂಬೆಯಾಗಬೇಕಿತ್ತು


  • ಡಾ. ಸರಸ್ವತಿ ಚಿಮ್ಮಲಗಿ (ಖ್ಯಾತ ಕವಿಯತ್ರಿ, ಬರಹಗಾರ್ತಿ )ವಿಜಯಪುರ/ ಕಲಬುರಗಿ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW