‘ನಿಮ್ಮ ಸಿಮ್ಮ’ ಕೃತಿ ಪರಿಚಯ

ಚಲನಚಿತ್ರ ನಟರೂ ಬರಹಗಾರರೂ ಆದ ಶ್ರೀ ಸಿ.ಆರ್. ಸಿಂಹ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಹೊತ್ತಿಗೆ. ಇದಕ್ಕೆ ಸಾಹಿತಿ ಜಯಂತ ಕಾಯ್ಕಿಣಿಯವರು ‘ಸಿಮ್ ಕಾರ್ಡ್’ ಎನ್ನುವ ಚೆಂದದ ಮುನ್ನುಡಿಯನ್ನು ಬರೆದಿದ್ದಾರೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ನಿಮ್ಮ ಸಿಮ್ಮ
ಲೇಖಕರು: ಸಿ.ಆರ್. ಸಿಂಹ
ಅಭಿನವ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೫.
ಪುಟಗಳು: ೨೭೨.
ಬೆಲೆ: ರೂ. ೧೨೫.

ಅದಮ್ಯ ಜೀವನ ಪ್ರೀತಿ ಹಾಗೂ ಜೀವನಾನುಭವದಿಂದ ಸಿಂಹರವರು ಮಿತ್ರರೊಂದಿಗೆ ಆಪ್ತವಾಗಿ ಮಾತಾಡಿದಂತೆ ಬರೆದಿರುವ ಪತ್ರಗಳು ಇವು. ಪ್ರಾರಂಭದಲ್ಲಿ ‘ಪ್ರಿಯ ಓದುಗ ಮಿತ್ರರೇ, ಕೊನೆಯಲ್ಲಿ ಇಂತಿ ನಿಮ್ಮ ಸಿಮ್ಮ. ಎಂದು ಸಂಭೋದಿಸುತ್ತಾ ಎಷ್ಟೆಲ್ಲಾ ವಿಚಾರಗಳನ್ನು ಹೇಳುತ್ತಾ ಹೋಗುತ್ತಾರೆ. ಕೆಲವನ್ನು ಇಲ್ಲಿ ತಿಳಿಸುವೆ.

  • ಆಸ್ಕರ್ ಪ್ರಶಸ್ತಿ ಗೆದ್ದ ಲಗಾನ್ ಚಲನ ಚಿತ್ರ ಕುರಿತು…
    ಇಲ್ಲಿ ಎರಡು ಪ್ರಧಾನ ಅಂಶಗಳಿವೆ. ಒಂದು ದೇಶ ಭಕ್ತಿ. ಎರಡು ಕ್ರಿಕೆಟ್. ಅಪೂರ್ವ ಜೋಡಿ ಒಂದರೊಡನೊಂದು ಬೆಸೆದು ಅವು ಹಾಕುವ ಮೋಡಿ ರಸಿಕರನ್ನು ಸಂಮೋಹ ಗೊಳಿಸುತ್ತದೆ. ಕ್ರಿಕೇಟ್ ಆಟವನ್ನೇ ಅರಿಯದ ಹಳ್ಳಿ ಮುಕ್ಕರು ಕ್ರಿಕೆಟ್ ಜನಕರೂ ಪಳಗಿದ ಪಟುಗಳೂ ಆದ ಪರಂಗಿ ಯವರನ್ನು ಸೋಲಿಸುವುದು… ಇಂಗ್ಲಿಷ್ ಸಾಮ್ರಾಜ್ಯ ಶಾಹಿಯೊಡನೆ ಹೋರಾಟಕ್ಕೆ ಸಹಭಾಗಿ ಯಾಗುವಂತಿದೆ.
  • ಹೀಗಿದ್ದರು ನಮ್ಮ ಕೈಲಾಸಂ ಎನ್ನುತ್ತಾ ಕನ್ನಡ ಸಾಹಿತ್ಯದ ಆ ಕಾಲದಲ್ಲಿ ಕೈಲಾಸಂ ಬಂದಿದ್ದು ಕಾಡಾನೆಯಂತೆ. ಅದು ನಡೆದದ್ದೇ ಹಾದಿ. ಅಲ್ಲಿದ್ದವರು ಈ ಆನೆಗೆ ಜಾಗ ಬಿಟ್ಟು ಪಕ್ಕಕ್ಕೆ ಸರಿದರು. ಅವರ ಮಾತಿನ, ಬರಹದ ರೀತಿಯೇ ಮಾಂತ್ರಿಕತೆ. ಚಿನಕುರುಳಿ. ನಿತ್ಯ ದೀಪಾವಳಿ. ಇಂಗ್ಲೆಂಡ್ ನಲ್ಲಿ ಓದಿ ಸರ್ವೇ ಡಿಪಾರ್ಟ್ಮೆಂಟ್ ನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ ವಿಲಕ್ಷಣ ವ್ಯಕ್ತಿ. ಹೆಂಡತಿ ಮಕ್ಕಳನ್ನು ಬಿಟ್ಟು ಅವಧೂತರಂತೆ ತಿರುಗಾಡುವ ಅವರೇ ಆರಿಸಿ ಕೊಂಡ ಜೀವನ. ಆದರೆ ಅವರ ಅಸಂಖ್ಯ ಕೃತಿಗಳ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ.
  • ಕನ್ನಡದ ರಸ ಋಷಿ ಕುವೆಂಪುರವರು ಮೊಟ್ಟ ಮೊದಲು ಬರೆದಿದ್ದು ಇಂಗ್ಲಿಷ್ನಲ್ಲಿ. ಒಮ್ಮೆ ಐರಿಶ್ ವಿದ್ವಾಂಸರೊಬ್ಬರು ಕುವೆಂಪುರವರ ದೇಶೀಯ ದಿರಿಸನ್ನು ನೋಡಿ ಏನಿದು ತಲೆಯಿಂದ ಕಾಲವರೆಗೂ ಸ್ವದೇಶಿ. ಆದರೆ ಕವನಗಳು ಮಾತ್ರ ವಿದೇಶಿ. ಕನ್ನಡದಲ್ಲಿ ಏನೂ ಬರೆದಿಲ್ಲವೇ? ಎಂದು ಅಚ್ಚರಿ ಪಟ್ಟಿದ್ದರು. ಇದು ಮಹತ್ತರ ತಿರುವನ್ನು ಕೊಟ್ಟಿತು. ಕುವೆಂಪು ಪೂರ್ಣವಾಗಿ ಕನ್ನಡಕ್ಕೆ ತಿರುಗಿದರು. ಇದನ್ನು ಅವರ ಆತ್ಮ ಚರಿತ್ರೆ ನೆನಪಿನ ದೋಣಿಯಲ್ಲಿ ವಿವರಿಸಿದ್ದಾರೆ. ಅವರ ಕಾವ್ಯನಾಟಕವೊಂದನ್ನು ಸಿದ್ಧಗೊಳಿಸುವಾಗ ತಮಗೆ ಇದು ಬೆರಗನ್ನುಂಟು ಮಾಡಿತು ಎಂದಿದ್ದಾರೆ.
  • ಸುಮತೀಂದ್ರ ನಾಡಿಗರ ಪಂಚ ಭೂತಗಳು ಕೃತಿಯ ಬಗ್ಗೆ ಬಹಳಷ್ಟು ರಸವತ್ತಾದ ಪ್ರಸಂಗ ಹೇಳುತ್ತಾ ತಮ್ಮ ಉತ್ಸಾಹವನ್ನು ಹಂಚಿ ಕೊಳ್ಳಲು ಈ ಪತ್ರವೇ ಹೊರತೂ ಇದು ವಿಮರ್ಶಾ ಲೇಖನವಲ್ಲ. ಇದನ್ನು ಓದಿ ನಿಮಗೂ ಉತ್ಸಾಹ ಉಂಟಾದರೆ ನೀವು ಕಾವ್ಯವನ್ನೇ ಪ್ರವೇಶ ಮಾಡ ಬೇಕು. ಹಾಗೆ ಉತ್ಸಾಹ ತುಂಬುವುದಷ್ಟೇ ತಮ್ಮ ಪಾತ್ರ ಎನ್ನುತ್ತಾರೆ.
  • ಭೂಲೋಕಕ್ಕೆ ಗಾಂಧಿ ಜಯಂತಿಯಂದು ಬಂದ ಗಾಂಧೀಜಿ ಕಂಡಿದ್ದು, ಕಾಣದ್ದು ಎನ್ನುವ ಒಂದು ಕಾಲ್ಪನಿಕ ಲೇಖನವಂತೂ ಮಜವಾಗಿದೆ.

ಬೆಂಗಳೂರು ಬಹುರೂಪಿ ನಗರವಾಗಿ ಬೆಳೆದು ನಿಂತ ಕಥೆ, ಮೈಸೂರು ಮಲ್ಲಿಗೆಯ ಕವಿ ಕೆ.ಎಸ್ ನರಸಿಂಹಸ್ವಾಮಿ ಯವರು ಚಿತ್ರಿಸಿದ ಗಂಧರ್ವ ರಂತಹ ದಂಪತಿಗಳ ಒಲುಮೆಯ ಕುರಿತು, ರಂಗ ಗಾರುಡಿಗ ಬಿ. ವಿ. ಕಾರಂತರು, ಅನಂತ ಮೂರ್ತಿಯವರ ಸಾರಥ್ಯದಲ್ಲಿ ಕನ್ನಡ ಕಲರವ….

ಸಿನೇಮಾ ತಮ್ಮ ವೃತ್ತಿಯಾದರೆ…ನಾಟಕ ತಮ್ಮ ಆತ್ಮ ಎಂದು ಅಂದಿನ ಕಂಪನಿ ನಾಟಕದ ಕಲೆ- ಕಲಾವಿದರ ಕುರಿತು ಅಪರೂಪದ ರಂಗಭೂಮಿಯ ನಂಟನ್ನು ಜಗತ್ತಿನ ಮಹಾಕವಿ ಲೇಖಕ ಷೇಕ್ಸ್ ಪಿಯರ್ ಅವರ ನಾಟಕ ಕೊಡುಗೆಗಳ ಬಣ್ಣಿಸಿದ್ದಾರೆ.

*ಸುಗಮ ಸಂಗೀತದ ಬಗ್ಗೆ ಬರೆಯುತ್ತಾ ಮುಂಚೆ ಇದನ್ನು ಭಾವಗೀತೆ ಎನ್ನುತ್ತಿದ್ದರು. ಅದೇ ಹೆಸರು ತಮಗಿಷ್ಟ ಎಂದು ಗಾಯಕರಾದ ಕಾಳಿಂಗ ರಾಯರು, ಹುಕ್ಕೇರಿ ಬಾಳಪ್ಪ, ಅನಂತ ಸ್ವಾಮಿಯವರು ಕನ್ನಡ ಜನ ಮಾನಸದಲ್ಲಿ ಇಂದೂ ಅಮರರಾಗಿರುವ ಬಗ್ಗೆ ವಿವರಿಸಿದ್ದಾರೆ.

ಚಿತ್ರರಂಗದ ಗಾರುಡಿಗ ಸತ್ಯಜಿತ್ ರಾಯ್, ಪ್ರತಿಭಾ ಸಂಪನ್ನ, ಸ್ಥಿತಪ್ರಜ್ಞ ಗಿರೀಶ್ ಕಾರ್ನಾಡ್, ಶಿವರಾಮ ಕಾರಂತರ ಅಳಿಯದ ಹೆಜ್ಜೆ ಗುರುತು, ಅಂದಿನ ದಸರೆಯ ಸಡಗರದ ದಿನಗಳು, ನೃತ್ಯ- ನಾಟಕ- ಸಿನೇಮಾ ಸಂಗೀತ ಹೀಗೆ ಎಲ್ಲಾ ವಿಷಯದ ಬಗ್ಗೆ ಬರೆದಿದ್ದಾರೆ.

  •  ಕಾಂಕ್ರೀಟ್ ಕಾಡಿನ ಗುಹೆಯಲ್ಲಿ ನಿಮ್ಮ ಸಿಮ್ಮನ ವಾಸ ಎಂದು ತಮಾಷೆಯಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಕೊಂಚ ಹೇಳಿದ್ದಾರೆ. ತಮ್ಮ ಮನೆಗೆ ಗುಹೆ ಎಂದು ಹೆಸರಿಡಲು ಕಾರಣವನ್ನು ಹೇಳಿದ್ದಾರೆ.! ಈ ಅಂಕಣದಲ್ಲಿ ಏನುಂಟು ಏನಿಲ್ಲ? ನಿಜಕ್ಕೂಓದಲು ಉತ್ಸಾಹವೆನಿಸುತ್ತದೆ. ಇವರು ನಟರಷ್ಟೇ ಅಲ್ಲ ಉತ್ತಮ ಬರಹಗಾರರೂ ಹೌದು ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಕೆಲವು ಬರಹಗಳ ಒಳನೋಟಗಳಂತೂ ತಿಳಿವನ್ನು ಹಿಗ್ಗಿಸುವಂತಿದೆ. ನವಿರಾದ ವಿನೋದ, ಪಕ್ವವಾದ ಸಂವೇದನೆ ಅವರ ನಿರೂಪಣೆಯನ್ನು ಹದಗೊಳಿಸಿದೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW