‘ಅಮ್ಮ-ಅಪ್ಪ ವೃದ್ಧರಾಗಿ ಬಿಟ್ಟರು’ ಕವನ – ಮಂಜುಳಾ ಅಮರನಾಥ್



ಅಮ್ಮ ಅಪ್ಪನ ಮುಪ್ಪಿನ ಬಗ್ಗೆ ಭಾವನಾತ್ಮಕವಾಗಿ ಕವಿಯತ್ರಿ ಮಂಜುಳಾ ಅಮರನಾಥ್ ಅವರು ಕವಿತೆಯ ರೂಪದಲ್ಲಿ ಬರೆದಿದ್ದಾರೆ. ಓದಿ ಸುಂದರ ಕವಿತೆ ನಿಮಗಾಗಿ…

ನೋಡ ನೋಡುತ್ತಲೇ ಹರೆಯದ
ಅಮ್ಮ-ಅಪ್ಪ ವೃದ್ಧರಾಗಿ ಬಿಡುತ್ತಾರೆ…
ಬೆಳಗಿನ ವಾಕಿಂಗ್ ನಲ್ಲಿ
ಒಮ್ಮೊಮ್ಮೆ ತಲೆ ಸುತ್ತು ಬರುತ್ತದೆ,
ಓಣಿಯ ಎಲ್ಲರಿಗೂ ಗೊತ್ತಿರುತ್ತದೆ,
ಆದರೆ ನಮ್ಮಿಂದ ಮುಚ್ಚಿಡುತ್ತಾರೆ…

ದಿನ ಪ್ರತಿದಿನ ತಮ್ಮ,
ಔಷಧಿ ಕಡಿಮೆ ಮಾಡಿಕೊಳ್ಳುತ್ತಾರೆ,
ಮತ್ತೆ ಆರೋಗ್ಯ ಸರಿಯಾಗಿರುವ
ವಿಚಾರ ಫೋನಿನಲ್ಲಿ ಹೇಳುತ್ತಾರೆ…
ಬಟ್ಟೆಗಳು ಸಡಿಲವಾಗಿವೆ, ಅವನ್ನು
ಬಿಗಿ ಮಾಡಿಸಿ ಹಾಕಿಕೊಳ್ಳುತ್ತಾರೆ,
ನೋಡು-ನೋಡುತ್ತಲೇ
ಅಮ್ಮ-ಅಪ್ಪ ವೃದ್ಧರಾಗಿ ಬಿಡುತ್ತಾರೆ…

ಯಾರದ್ದಾದರೂ ಮರಣದ
ಸುದ್ಧಿ ಕೇಳಿ ಗಾಬರಿಯಾಗುತ್ತಾರೆ,
ಮತ್ತು ತಮ್ಮ ವ್ಯಾಯಾಮದ
ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾರೆ.

ನಮ್ಮಗಳ ಬೊಜ್ಜಿನ ಬಗ್ಗೆ,
ಉಪದೇಶಗಳ ರಾಶಿ ಹಾಕುತ್ತಾರೆ,
‘ಪ್ರತಿ ದಿನದ ವ್ಯಾಯಾಮ’ ಗಳ ಬಗ್ಗೆ,
ಲಾಭಗಳನ್ನು ಎಣಿಸುತ್ತಾರೆ.

‘ಆರೋಗ್ಯ ಸಾವಿರಾರು ನಿಧಿಗೆ ಸಮಾನ,’
ಪ್ರತಿ ಸಲ ಹೇಳುತ್ತಾ ಇರುತ್ತಾರೆ,
ನೋಡು-ನೋಡುತ್ತಿದ್ದಂತೆ
ಅಮ್ಮ-ಅಪ್ಪ ವೃದ್ಧರಾಗಿ ಬಿಡುತ್ತಾರೆ…

ಪ್ರತಿ ವರ್ಷ ಬಹಳ ಉತ್ಸಾಹದಿಂದ,
ತಮ್ಮ ಬ್ಯಾಂಕಿಗೆ ಹೋಗುತ್ತಾರೆ,
ತಾವು ಜೀವಂತ ಇರುವ ಬಗ್ಗೆ
ಸಾಕ್ಷಿ ಕೊಟ್ಪು ಹರ್ಷಪಡುತ್ತಾರೆ…

ಸ್ವಲ್ಪ ಪೆನ್ಷನ್ ಹೆಚ್ಚಾದರೂ
ಸಾಕು,ಹಿಗ್ಗುತ್ತಾರೆ,
ಮತ್ತು FIXED DEPOSIT,
ರಿನ್ಯೂ ಮಾಡಿಸುತ್ತಾರೆ…
ಸ್ವಂತಕ್ಕಾಗಿ ಅಲ್ಲ,
ನಮಗಾಗಿ ಉಳಿಸುತ್ತಾರೆ,
ನೋಡು-ನೋಡುತ್ತಲೇ
ಅಮ್ಮ-ಅಪ್ಪ ಹರೆಯದವರು,
ವೃದ್ಧರಾಗಿ ಬಿಡುತ್ತಾರೆ…

ಈಗೀಗ ವಸ್ತುಗಳನ್ನು ಇಟ್ಟು
ಪದೆ ಪದೇ ಮರೆತು ಬಿಡುತ್ತಾರೆ,
ಮತ್ತದನ್ನು ಹುಡುಕುವುದಕ್ಕೆ
ಮನೆಯಿಡೀ ತಲೆಯ ಮೇಲೆ
ಹೊತ್ತಂತೆ ಆಡುತ್ತಾರೆ..

ಪರಸ್ಪರ, ಮಾತು –
ಮಾತಿಗೂ ಸಿಡುಕುತ್ತಾರೆ
ಆದರೆ ಒಬ್ಬರನ್ನು ಬಿಟ್ಟು
ಒಬ್ಬರು ಬೇರೆ ಸಹ
ಇರಲಾರರು…

ಹೇಳಿದ ಕತೆಯನ್ನೇ,ಮತ್ತೆ
ಮತ್ತೆ ಪುನರಾವರ್ತಿಸುತ್ತಾರೆ,
ನೋಡು-ನೋಡುತ್ತಲೇ
ಹರೆಯದ ಅಮ್ಮ-ಅಪ್ಪ
ವೃದ್ಧರಾಗ ತೊಡಗುತ್ತಾರೆ…

ಕನ್ನಡಕದಲ್ಲೂ ಕೂಡ ಈಗ
ಸರಿಯಾಗಿ ಕಾಣಿಸುವುದಿಲ್ಲ,
ಖಾಯಿಲೆಯಲ್ಲೂ ಔಷಧ
ತೆಗೆದುಕೊಳ್ಳಲು ನಖರೆ
ಮಾಡುತ್ತಾರೆ..

ಆಲೋಪತಿ ಔಷಧಿಯ ಬಹಳಷ್ಟು
ಸೈಡ್ ಎಫೆಕ್ಟ್ ಹೇಳುತ್ತಾರೆ,
ಹೋಮಿಯೋಪತಿ/ಆಯರ್ವೇದ ದ
ಜಪ ಮಾಡುತ್ತಾರೆ…

ಅವಶ್ಯವಾದ ಆಪರೇಶನ್ ಸಹ
ಮತ್ತಷ್ಟು ಮುಂದೆ ಹಾಕುತ್ತಾರೆ,
ನೋಡು-ನೋಡುತ್ತಲೇ
ಹರೆಯದ ಅಮ್ಮ-ಅಪ್ಪ
ವೃದ್ಧರಾಗುತ್ತಾ ಹೋಗುತ್ತಾರೆ…

ಉದ್ದಿನ ಬೇಳೆ ಈಗ
ಜೀರ್ಣಿಸಿಕೊಳ್ಳಲಾರರು, ಅದಕ್ಕೇ
ಸೋರೇಕಾಯಿ, ಹೀರೇಕಾಯಿ
ತೊಳೆದ ಹೆಸರು ಬೇಳೆಯನ್ನೇ
ಹೆಚ್ಚಾಗಿ ತಿನ್ನುತ್ತಾರೆ.

ಹಲ್ಲಿನಲ್ಲಿ ಸಿಕ್ಕಿದ ಆಹಾರವನ್ನು,
ಕಡ್ಡಿಯಿಂದ ಕೆರೆಯುತ್ತಾರೆಯೇ
ವಿನಃ ಡಾಕ್ಟರ್ ಬಳಿ
ಹೋಗುವುದಕ್ಕೆ ಹೆದರುತ್ತಾರೆ.

“ಕೆಲಸ ನಡೆಯುತ್ತಾ ಇದೆ”,
ಎನ್ನುವ ರಾಗವನ್ನೇ ಹೇಳುತ್ತಾರೆ
ನೋಡು-ನೋಡುತ್ತಲೇ
ಹರೆಯದ ಅಮ್ಮ-ಅಪ್ಪ
ವೃದ್ಧರಾಗುತ್ತಾ ಹೋಗುತ್ತಿದ್ದಾರೆ

ಪ್ರತಿ ಹಬ್ಬದಲ್ಲೂ
ನಾವು ಬರುವ ಹಾದಿ
ನೋಡುತ್ತಾರೆ
ತಮ್ಮ ಹಳೆಯ ಮನೆಯನ್ನು
ಹೊಸ ಮಧು ಮಗಳ ಹಾಗೆ
ಹೊಳೆಯುಂತೆ ಮಾಡುತ್ತಾರೆ…

ನಮ್ಮ ಇಷ್ಟದ ಪದಾರ್ಥಗಳ
ರಾಶಿ ಹಾಕುತ್ತಾರೆ,
ಪ್ರತಿ ಚಿಕ್ಕ-ದೊಡ್ಡ ಅಭಿಲಾಶೆ,
ಪೂರೈಸುವುದಕ್ಕಾಗಿ,
ಅಮ್ಮ ಅಡುಗೆ ಮನೆಯಲ್ಲಿ,
ಮತ್ತು ಅಪ್ಪ ಪೇಟೆಗೆ,
ಓಡುತ್ತಾ ಹೋಗುತ್ತಾರೆ..

ಮೊಮ್ಮಗ-ಮೊಮ್ಮಗಳನ್ನು
ಭೇಟಿಯಾಗಲು ಎಷ್ಟೆಲ್ಲಾ
ಕಣ್ಣೀರು ಸುರಿಸುತ್ತಾರೆ…
ನೋಡು-ನೋಡುತ್ತಲೇ
ಹ‌ರೆಯದ ಅಮ್ಮ-ಅಪ್ಪ
ವೃದ್ಧರಾಗಿ ಬಿಡುತ್ತಿದ್ದಾರೆ…

ನೋಡ-ನೋಡುತ್ತಲೇ
ಹರೆಯದ ಅಮ್ಮ-ಅಪ್ಪ
ವೃದ್ಧರಾಗಿ ಬಿಡುತ್ತಿದ್ದಾರೆ…

ಮೂಲ: ಹಿಂದಿ
ಕನ್ನಡಕ್ಕೆ: ಮಂಜುಳಾ.


  • ಮಂಜುಳಾ ಅಮರನಾಥ್, ಶಿರಸಿ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW