ಮಹಾಲಕ್ಷ್ಮೀ ದೇವಿ ವಾಹನ ‘ಗೂಬೆ’ಗೂಬೆಯನ್ನು ‘ಅಪಶಕುನದ ಜೀವಿ’ ಎಂದೂ ಕರೆದವರೇ ಹೆಚ್ಚು. ಆದರೆ ಲೇಖಕ ನಾಗರಾಜ್ ಲೇಖನ್ ಅವರು ಗೂಬೆಯನ್ನು ʼಮಹಾಲಕ್ಷ್ಮೀ ದೇವಿʼಯ ವಾಹನವೆಂದು ಸಂಭೋದಿಸುವುದರ ಮೂಲಕ ಗೂಬೆಯ ಸಾಕಷ್ಟು ವಿಷಾಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. 

ಇಂದಿನ ಲೇಖನದಲ್ಲಿ ಹೇಳ ಹೊರಟಿರುವುದು ಅಪರೂಪದ ಇರುಳು ಜೀವಿಯ ಬಗ್ಗೆ. ಅದರ ಬಗ್ಗೆ ಬಹಳಷ್ಟು ಜನ ತಿಳಿದಿರುವುದು, ಸಂಶೋಧನೆ ಮಾಡಿರುವವರು ಕೂಡ ಕಡಿಮೆಯೆ ಎನ್ನಬಹುದು. ಈ ಜೀವಿಯ ಬಗ್ಗೆ ಅಧ್ಯಯನವು ಅಪರೂಪವೆ ಆಗಿದೆ. ಈ ಜೀವಿ ನಮಗೆ ದೂರದ ಜೀವಿಯೆನ್ನಲ್ಲ. ಇಂದಿಗೂ ನಮ್ಮ ಜನಗಳ ಮನಸ್ಸಿನಲ್ಲಿ ಭಯಾನಕ ಜೀವಿ, ಅಪಶಕುನದ ಜೀವಿಯೆಂದು ಕಡೆಗಣಿಸುವ ಅಮಾಯಕ ಜೀವಿ ಗೂಬೆ (Owl). ಹೌದು, ಗೂಬೆ ಇದು ಪ್ರಕೃತಿಯಲ್ಲಿ ತುಂಬಾ ವಿಶೇಷವಾದ ಜೀವಿಯೆಂದರು ತಪ್ಪಿಲ್ಲಾ.

ಧನ ಪ್ರಾಪ್ತಿಗಾಗಿ ನಾವೆಲ್ಲಾ ಪೂಜಿಸುವ ʼಮಹಾಲಕ್ಷ್ಮೀ ದೇವಿʼಯ ವಾಹನವು ಇದಾಗಿದೆ. ಕೆಲವು ಚಿತ್ರಗಳಲ್ಲಿ ನೋಡಿರುತ್ತೇವೆ ಆದರೆ ಅಷ್ಟಾಗಿ ಗಮನಿಸಿರುವುದಿಲ್ಲಾ. ಆದರೆ ನಮ್ಮ ಜನಗಳು ಮಾತ್ರ ಇದರ ಬಗ್ಗೆ ತಿಳಿದಿರುವುದಕ್ಕಿಂತ, ತಪ್ಪಾಗಿ ಭಾವಿಸಿರುವುದೇ ತುಂಬಾ ಇದೆ. ಯಾಕೆಂದರೆ ಅದರ ವಿಭಿನ್ನವಾದ ಧ್ವನಿ ಸಂವಹನ ಕೇಳುಗರಿಗೆ ಭಯವನ್ನುಂಟು ಮಾಡುತ್ತದೆ. ಅದಕ್ಕೆ ಅದನ್ನು ಉಪದ್ರವಿ ಜೀವಿಯೆಂದು ಮೂಲೆ ಗುಂಪು ಮಾಡಿ ಬಿಟ್ಟಿದ್ದಾರೆ. ತನ್ನಷ್ಟಕ್ಕೆ ತಾನು ಒಬ್ಬಂಟಿಯಾಗಿ ಎಲ್ಲೊ ಕುಳಿತು ಹಾಡು ಹೇಳುತ್ತಿದ್ದರು. ಅದನ್ನು ಕರ್ಕಶವೆಂದು ಹೇಳಿ. ಅದಕ್ಕಿಂತ ಕರ್ಕಶವಾಗಿ ಶಬ್ಧ ಮಾಡಿ ಮಾನವ ಹೆದರಿಸಿ ಓಡಿಸುತ್ತಿದ್ದಾನೆ ಪಾಪ. ಹೆಚ್ಚಾಗಿ ಚಲನಚಿತ್ರಗಳಲ್ಲು ಸಹ, ಇವುಗಳನ್ನು ಭಯಾನಕ ಜೀವಿಯನ್ನಾಗಿಯೆ ತೋರಿಸಿದ್ದಾರೆ. ಗೂಬೆ ಕೂಡ ರಾತ್ರಿ ಹೊತ್ತು ಸಂಚರಿಸುವುದರಿಂದ, ಜನರ ಕಣ್ಣಿಗೆ ಕಾಣಿಸುವುದು ತೀರಾ ಅಪರೂಪವೆ. ಅದರ ಶಬ್ಧ ಮಾತ್ರ ಆವಾಗಾವಗ ಕೇಳುತ್ತಿರುತ್ತದೆ ಅಷ್ಟೆ.

ಫೋಟೋ ಕೃಪೆ : Pinterest

ಅದರಲ್ಲೂ ಅರಣ್ಯ ಪ್ರದೇಶವಾದ ನಮ್ಮ ಕಡೆಯಂತೂ ಗೂಬೆಯ ವಿಭಿನ್ನ ಧ್ವನಿ ಹುಂ…ಹುಂ… ಎಂದು ರಾತ್ರಿ ಸಮಯದಲ್ಲಿ ಜಾಸ್ತಿ ಕೇಳುತ್ತಿರುತ್ತವೆ. ಇದಕ್ಕೆ “ಗುಮ್ಮ” ಎಂದು ಕೂಡ ಹಳ್ಳಿ ಕಡೆ ಕರೆಯುವುದುಂಟು. ಸಂಸ್ಕೃತದಲ್ಲಿ “ಉಲೂಕಾ” ಎಂದು ಕರೆಯುತ್ತಾರೆ. ಇವುಗಳು ಪಕ್ಷಿಗಳ ಗುಂಪಿಗೆ ಸೇರಿದಂತವು. ನಿಶಾಚರಿ ಜೀವಿಗಳು. ಹೆಚ್ಚಾಗಿ ಒಬ್ಬಂಟಿಯಾಗಿರುತ್ತವೆ. ರಾತ್ರಿ ಸಮಯದಲ್ಲಿ ಮಾತ್ರ ಎಚ್ಚರವಾಗಿ, ಚುರುಕಾಗಿರುತ್ತವೆ. ಪಕ್ಷಿ ತಜ್ಞರ ಪ್ರಕಾರ ವಿಶ್ವದಲ್ಲಿ ೧೫೦ಕ್ಕೂ ಹೆಚ್ಚು ಗೂಬೆಯ ವಿವಿಧ ಪ್ರಭೇದಗಳು ಇದೆಯೆಂದು ಹೇಳುತ್ತಾರೆ.ಇವು ಕೆಲವು ದ್ವೀಪ ಪ್ರದೇಶವನ್ನು ಬಿಟ್ಟು,ಇತರೆ ಎಲ್ಲಾ ದೇಶಗಳಲ್ಲಿಯೂ ಕಂಡು ಬರುತ್ತದೆ ಎನ್ನುತ್ತಾರೆ. ಎಲ್ಲಾ ಥರದ ವಾತಾವರಣಕ್ಕೂ ಹೊಂದಿಕೊಂಡು ಹೋಗುವಂತಹವು.ಗೂಬೆಗಳ ಜಾತಿ:

ಗೂಬೆಗಳಲ್ಲಿ ಮಲೆನಾಡಿನ ಗೂಬೆ, ಕೊಂಬಿನ ಗೂಬೆ, ಕಾಡು ಗೂಬೆ, ಮಂಜಿನ ಗೂಬೆ, ಕಣಜದ ಗೂಬೆ, ಕುಬ್ಜ ಗೂಬೆ. ಹೀಗೆ ನಾನಾ ಥರದ ಜಾತಿಯ ಗೂಬೆಗಳಿವೆ. ಅದರಲ್ಲಿ ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣ ಸಿಗುವುದು ಕಣಜದ ಗೂಬೆ, ಮಲೆನಾಡ ಗೂಬೆ ಹಾಗೂ ಕಾಡು ಗೂಬೆಳಾಗಿವೆ. ಗೂಬೆಯ ಮುಖವು ನೋಡಲು ಗುಂಡಾಗಿ, ತಟ್ಟೆಯಾಕಾರದಲ್ಲಿರುತ್ತದೆ. ಕಣ್ಣುಗಳ ಗುಡ್ಡೆಗಳು ಗೋಲಾಕಾರದಲ್ಲಿ ಮುಖದ ಹೊರಗೆ ಬಂದಂತಿರುತ್ತದೆ. ಕೋತಿಯ ಮುಖದ ಲಕ್ಷಣವನ್ನೆ ಹೊಂದಿದ್ದು, ಸುಂದರವಾಗಿರುತ್ತದೆ.

ಫೋಟೋ ಕೃಪೆ : peopleforanimals

ಕಟ್ಟು ಕಥೆಗಳಲ್ಲಿ ಹೇಳುವ ಪ್ರಕಾರ ನೋಡಿದಾಗ, ಭಯ-ಭೀತರಾಗುವ ಅವಶ್ಯಕತೆಯೆನ್ನಿಲ್ಲಾ. ನಾನು ಒಂದೆರಡು ಬಾರಿ ನಮ್ಮಊರಿನಲ್ಲಿ ರಾತ್ರಿ ಸಂಚರಿಸುವಾಗ ನೋಡಿದ್ದು ಇದೆ. ಉದ್ದ ಕಾಲು, ಕಾಲಿನ ಮೇಲೆಲ್ಲಾ ಗರಿಗಳಿರುತ್ತವೆ. ಬೆರಳಿನ ಮಧ್ಯೆ ಏಣುಗಳ ಥರದ ಹಣಿಗೆಯ ಥರ ರಚನೆ ಇರುತ್ತದೆ. ಬಣ್ಣ ಬಂಗಾರ, ಬೂದಿ ಮಿಶ್ರಿತವಾಗಿರುತ್ತದೆ. ದೇಹದಲ್ಲಿ ರೆಕ್ಕೆ-ಪುಕ್ಕಗಳಿರುತ್ತದೆ. ಕೆಲವೊಂದಕ್ಕೆ ಕಪ್ಪು-ಬಿಳಿ ಮಚ್ಚೆಗಳು ಇರುತ್ತವೆ. ೩೫ ರಿಂದ ೪೫ ಸೆಂ.ಮೀ ಉದ್ದವಿರುತ್ತದೆ. ಹೆಣ್ಣು ಗೂಬೆ ಗಂಡು ಗೂಬೆಗಿಂತ ಆಕಾರದಲ್ಲಿ ದೊಡ್ಡದಿರುತ್ತದೆ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಇವು ಮರದ ಪೊಟರೆ, ಕಲ್ಲು ಬಂಡೆಗಳ ಸಂದುಗಳು, ಪಾಳು ಬಿದ್ದ ಮನೆಗಳು, ಚರ್ಚ್ ನ ಎತ್ತರದ ಭಾಗಗಳಲ್ಲಿ, ನಿರ್ಜನವಾಗಿ, ನಿಶ್ಯಬ್ಧವಾಗಿ ಇರುವಂತಹ ಜಾಗಗಳಲ್ಲಿ ಗೂಡು ಕಟ್ಟಿ ವಾಸಿಸುತ್ತವೆ. ನಿರ್ಜನವಾದ ಪ್ರದೇಶಗಳಂತು ಇವುಗಳಿಗೆ ತುಂಬಾ ಇಷ್ಟ.ಕರ್ಕಶವಾಗಿ, ಕಿರುಚುವ ರೀತಿ,ಮನುಷ್ಯನ ಗೊರಕೆಯ ರೀತಿ,ಕಿರುಚ್ಚುತ್ತಾ,ಕೂಗುತ್ತಾ ಸದ್ದು ಮಾಡುತ್ತ ಇರುತ್ತದೆ. ಬಹುಶಃ ಅದು ಅವುಗಳ ಸಂಭಾಷಣೆಗಳಾಗಿರಬಹುದು. ಆದರೆ ಅಲ್ಲಿ ಅಡ್ಡಾಡುವ ಮನುಷ್ಯರಿಗದು ಭೀಕರತೆಯಾಗಿದೆ. ತನ್ನ ಜಾಗವನ್ನು ಬದಲಾಯಿಸದೆ. ಒಂದೆ ಜಾಗದಲ್ಲಿ ಜೀವಿಸುವುದು ಕೂಡ ಇದರ ವಿಶಿಷ್ಟತೆಯಾಗಿದೆ.

ಫೋಟೋ ಕೃಪೆ : Blendspace

ಗೂಬೆಗಳ ಜೀವನ ಚಕ್ರ:

ಗೂಬೆಗಳ ಜೀವಿತಾವಧಿ ೧೫ ರಿಂದ ೨೦ ವರ್ಷಗಳೆಂದು ಹೇಳಲಾಗಿದೆ. ಇವುಗಳು ಸಹ ಇತರೆ ಹಕ್ಕಿಗಳಂತೆ ೪ ರಿಂದ ೬ ಗುಂಡಾಗಿರುವ ಬಿಳಿಯ ಮೊಟ್ಟೆಗಳನ್ನಿಡುತ್ತವೆ. ಗಂಡು ಮತ್ತು ಹೆಣ್ಣು ಎರಡು ಒಂದಕ್ಕೊಂದು ಸಹಕಾರಿಯಾಗಿ ಕಾವು ಕೊಟ್ಟು ಮರಿ ಮಾಡುತ್ತವೆ. ಹೆಚ್ಚಾಗಿ ಗೂಬೆಗಳು ರಾತ್ರಿ ಹೊತ್ತು ಮಾತ್ರ ಸಂಚರಿಸುತ್ತವೆ. ಸಂಜೆ ಸಮಯದಲ್ಲಿ ತಮ್ಮ ಸ್ಥಳವನ್ನು ಬಿಟ್ಟು ಹೊರಗೆ ಬರಲು ಶುರು ಮಾಡುತ್ತವೆ. ಬಹಳಷ್ಟು ಜನ ಇದನ್ನು ನೋಡಿ ಗೂಬೆಗಳಿಗೆ ಹಗಲಿನಲ್ಲಿ ಕಣ್ಣುಗಳು ಕಾಣುವುದಿಲ್ಲಾ. ರಾತ್ರಿ ಮಾತ್ರ ಕಾಣೆಸುತ್ತದೆ ಎಂದು ತಪ್ಪು-ತಪ್ಪಾಗಿ ಕಲ್ಪನೆ ಮಾಡಿಕೊಂಡಿದ್ದಾರೆ. ಗೂಬೆಯ ಕಣ್ಣು ಹಾಗೂ ಕಿವಿಗಳು ಮನುಷ್ಯರಿಗಿಂತ ಚುರುಕಾರುತ್ತವೆ. ಗೂಬೆಗಳು ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸಲು ಮುಖ್ಯಕಾರಣ. ಅವುಗಳ ಆಹಾರ ಮತ್ತು ನಿಶ್ಯಬ್ಧ ವಾತವರಣ. ರಾತ್ರಿ ಸಮಯದಲ್ಲಿ ಸಂಚರಿಸುವ ಜೀರಳೆಗಳು, ಓತಿಕ್ಯಾತ, ಹೆಗ್ಗಣ, ಇಲಿ, ಕೀಟ ಚಿಕ್ಕ ಸಸ್ತನಿಗಳು ಇವುಗಳ ಮುಖ್ಯ ಆಹಾರವಾಗಿರುವುದರಿಂದ ರಾತ್ರಿ ಹೊತ್ತು ಮಾತ್ರ ಹೊರಗೆ ಬರುತ್ತವೆ. ಬಯಲು ಪ್ರದೇಶಗಳು,ಮುಳ್ಳು ಪೊದೆಗಳು ಇವುಗಳಿಗೆ ಬೇಟೆಯಾಡಲು ಉತ್ತಮ ಜಾಗಗಳಾಗಿದೆ. ಗೂಬೆಗಳು ನಮ್ಮ ರೈತನ ಪರಮ ಮಿತ್ರ ಕೂಡ ಹೌದು. ಯಾಕಂದರೆ,ರಾತ್ರಿ ಹೊತ್ತು ಬೆಳೆಗಳಿಗೆ ಹಾನಿಯುಂಟು ಮಾಡುವ ಜೀವಿಗಳನ್ನು ಇವು ಹಿಡಿದು ತಿನ್ನುವುದರಿಂದ ರೈತರಿಗೆ ಸಹಕಾರಿಯಾಗಿದೆ.

ಫೋಟೋ ಕೃಪೆ : pinterest

ನಮ್ಮ ಪೂರ್ವಜರ ಕಾಲದಲ್ಲಿ ತೋಟಗಳ ಸುತ್ತಲೂ ಒಂದೊಂದು ಉದ್ದನೆಯ ಕೋಲನ್ನು(ಗೂಟವನ್ನು) ನೆಡುತ್ತಿದ್ದರಂತೆ. ಕಾರಣ,ರಾತ್ರಿ ಹೊತ್ತು ಗೂಬೆಗಳು ಅವುಗಳ ಮೇಲೆ ಬಂದು ಕುಳಿತು. ಸುತ್ತಲೂ ತನ್ನ ಕತ್ತನ್ನು ತಿರುಗಿಸಿ ನೋಡುತ್ತಾ, ರಾತ್ರಿ ಕಾವಲುಗಾರನಂತೆ ಕಾದು ಕುಳಿತು ತಮ್ಮ ಬೇಟೆಯನ್ನು ಹುಡುಕುತ್ತಿದ್ದವಂತೆ. ಬೆಳೆಗಳಿಗೆ ಹಾನಿಯುಂಟು ಮಾಡುವ ಜೀವಿಗಳನ್ನು, ವಿಷಜಂತುಗಳನ್ನು ಹಿಡಿದು ತಿನ್ನುತ್ತಿದ್ದವು. ಇವುಗಳ ಕಿವಿಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚಾಗಿ ಬೇಟೆಯಾಡಲು ಕಿವಿಗಳನ್ನೆ ಬಳಸುತ್ತವೆ ಎನ್ನಲಾಗಿದೆ. ದ್ರಾಕ್ಷಿ ತೋಟಗಳಲ್ಲಿ ಹೆಚ್ಚಾಗಿ ಕೀಟ ಬಾಧೆಯಿರುವುದರಿಂದ ಗೂಬೆಗಾಗಿಯೇ ಗೂಡನ್ನು ಕಟ್ಟುತ್ತಿದ್ದರಂತೆ. ಆದರೆ ಇಂದು ಮಾನವನ ಅಜ್ಞಾನದಿಂದ ಗೂಬೆಗಳನ್ನು ಕಂಡಾಗ ಭಯಬೀಳಿಸಿ ಓಡಿಸುವುದು, ಮೌಢ್ಯತೆಯಿಂದ ಕೊಲ್ಲುವುದು. ಇದರ ಪರಿಣಾಮ ಇಂದು ಗೂಬೆಗಳು ಅಳವಿನಂಚಿನಲ್ಲಿದೆ ಎಂದೆ ಹೇಳಬಹುದು. ಇದರ ಬಗ್ಗೆ ಸರ್ಕಾರವಾಗಲಿ, ಅರಣ್ಯ ಇಲಾಖೆ ತಜ್ಞರಾಗಲಿ ಹೆಚ್ಚು ಕಾಳಜಿ ವಹಿಸದೆ ಇರುವುದು ಗೂಬೆಗೆ ತನ್ನವರು ಯಾರಿಲ್ಲಾ ಎಂಬಂತಾಗಿದೆ. ಅಷ್ಟೆ ಅಲ್ಲದೆ ಗೂಬೆಗಳ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಸಹ ಇದೆ. ಗೂಬೆಯು ಮನೆಯ ಮುಂದೆ ಕುಳಿತರೆ ಗಂಡಾಂತರ, ಮನೆಯ ಮೇಲೆ ಕುಳಿತರೆ ನಾಶ, ಎಡಬದಿಯಿಂದ ಗೂಬೆಯ ಧ್ವನಿ ಕೇಳಿದರೆ ಶುಭಸೂಚಕ, ಬಲ ಬದಿಯಿಂದ ಕೇಳಿದರೆ ಅಶುಭ. ಹಾಗೆ ಹೀಗೆ ಎಂದು ನೂರಾರು ನಂಬಿಕೆಗಳು ಜನರಲ್ಲಿ ಗೂಬೆಗಳ ಬಗ್ಗೆ ಇದೆ.ಪುರಾಣದಲ್ಲಿ ಗೂಬೆಗೆ ತನ್ನದೇ ಆದ ಸ್ಥಾನವಿದೆ. ಕಥೆಯೂ ಇದೆ. ಲಿಂಗ ಪುರಾಣದ ಪ್ರಕಾರ ನಾರದ ಮಹರ್ಷಿಗಳಿಗೆ ಮಾನಸ ಸರೋವರದಲ್ಲಿ ಸಂಗೀತ ಜ್ಞಾನವನ್ನು ಗೂಬೆಯು ಹೇಳಿ ಕೊಟ್ಟಿತು ಎನ್ನಲಾಗಿದೆ. ಕೆಲವು ಪುರಾಣ ಗ್ರಂಥಗಳಲ್ಲೂ ಸಹ ಗೂಬೆಯ ಬಗ್ಗೆ ಉಲ್ಲೇಖಸಲಾಗಿದೆ. ಆದರೆ ಇಂದು ಮಹಾಲಕ್ಷ್ಮೀಯ ವಾಹನವಾದ ಗೂಬೆಯ ಪರಿಸ್ಥಿತಿ ಮಾತ್ರ ಪಾಪವೆನಿಸುತ್ತಿದೆ. ಮಹಾಲಕ್ಷ್ಮೀಯನ್ನು ಶುಭವೆಂದು ಪೂಜಿಸುವ ನಮ್ಮ ಜನ ಅದರ ವಾಹನವನ್ನು ಅಪಶಕುನ, ಅಶುಭವೆಂದು ದೂರ ಇಡುತ್ತಿದ್ದಾರೆ. ಅದರ ಕೆಲವು ಸಾಮಾನ್ಯ ಸೂಚಕಗಳನ್ನು ಮನುಷ್ಯ ಅವನ ಮನಸ್ಸಿಗೆ ಬಂದಂತೆ ದುರಾಲೋಚನೆಯಾಗಿಸಿಕೊಂಡಿದ್ದಾನೆ. ಬೇರೆಯವರನ್ನು ಗೇಲಿ ಮಾಡಲು, ಅಪಹಾಸ್ಯ ಮಾಡಲು ಗೂಬೆಯನ್ನು ಬಳಸುತ್ತಿದ್ದಾನೆ.ಇಂತಹವರನ್ನು ಅಜ್ಞಾನಿ ಮಾನವರೆನ್ನದೆ ಜ್ಞಾನಿ ಏನ್ನಲು ಸಾಧ್ಯವೇ……?

ಫೋಟೋ ಕೃಪೆ : National audubon

ಗೂಬೆಯ ವಿಶೇಷ ಲಕ್ಷಣಗಳು:

ಗೂಬೆಯ ಕಣ್ಣುಗಳು ಮನುಷ್ಯರ ಕಣ್ಣಿಗಿಂತ ೧೫ ಪಟ್ಟು ದೊಡ್ಡದಿರುತ್ತವೆಯಂತೆ,ಹಾಗೂ ೧೧೦ ಡಿಗ್ರಿಯಷ್ಟು ವಿಶಾಲವಾಗಿ ನೋಡಬಹುದಾಗಿದೆಯಂತೆ.ಕತ್ತುಗಳು ಸಹ ಯಾವ ಕಡೆ ಬೇಕಾದರು ಸುಲಭವಾಗಿ ಬಾಗುವಂತಿದ್ದು.೨೭೦ ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಕಿವಿಗಳಿಂದ ಸೂಕ್ಷ್ಮ ಶಬ್ಧಜ್ಞಾನವನ್ನು ಹೊಂದಿದ್ದು ಯಾವುದೇ ಜೀವಿಗಳು ಎಷ್ಟೆ ಸೂಕ್ಷ್ಮ ಶಬ್ಧ ಮಾಡಿದರು ಗ್ರಹಿಸಲು ಸಾಧ್ಯವಾಗಿದೆ.ಹಾಗೂ ಬೇಟೆಯಾಡಲು ಸುಲಭವಾಗಿದೆ. ಹಗಲಿನಲ್ಲಿ ತಮ್ಮ ಮರಿಗಳ ಪೋಷಣೆಯಲ್ಲಿ ತೊಡಗಿದ್ದಾಗ.ಕಣ್ಣಿನ ಅರ್ಧ ರೆಪ್ಪೆನ್ನಷ್ಟೆ

ಮುಚ್ಚಿ ಸ್ವಲ್ಪ ಬೆಳಕನ್ನು ಒಳಗೆ ಹಾಯಿಸಿ, ಹೊರಗಿನ ಕಡೇ ಹೆಚ್ಚು ಜಾಗೃತರಾಗಿರುತ್ತವೆ. ಹಾಗೂ ನಿದ್ರಾ ಸಮಯದಲ್ಲೂ ಕೂಡ ಯಾವುದಾರು ಒಂದು ರೆಪ್ಪೆಯನ್ನಷ್ಟೆ ಮುಚ್ಚಿ ನಿದ್ರಿಸುತ್ತವೆಯೆಂತೆ. ಆಹಾರಕ್ಕಾಗಿ ತಾವುಗಳು ಹಿಡಿದ ಜಂತುಗಳನ್ನು ಇಡಿಯಾಗಿ ನುಂಗತ್ತವೆ ಎಂದು ಹೇಳುತ್ತಾರೆ. ಹೊಟ್ಟೆಯಲ್ಲಿನ ಜಠರ ನುಂಗಿದ ಆಹಾರವನ್ನು ಜೀರ್ಣವಾಗಿಸುತ್ತವೆಯಂತೆ. ಹಾಗೂ ಇವುಗಳು ಹಾರುವಾಗ ಬೇರೆ ಪಕ್ಷಿಗಳಿಂತೆ ಶಬ್ದ ಮಾಡುವುದಿಲ್ಲಾ.

ಫೋಟೋ ಕೃಪೆ : Reddit

ನಿಶ್ಯಬ್ದವಾಗಿ ಬೇಟೆಯಾಡಿ ಸುಲಭವಾಗಿ ಬೇಟೆಯನ್ನು ಹಿಡಿಯುತ್ತವೆ. ಇದರ ರೆಕ್ಕೆಗಳು ಅಷ್ಟೊಂದು ಮೃದುವಾಗಿದೆ. ಗೂಬೆಗಳ ಬಗ್ಗೆ ಮಾಹಿತಿ ಕಲೆ ಹಾಕುವವರು ತುಂಬಾ ಕಡಿಮೆಯಿದ್ದರು. ಕೆಲವು ವಿಮರ್ಶಕರು ಅದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ‘ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆ, ಸ್ಫೂರ್ತಿವನ, ಬೆಂಗಳೂರು’ ಇವರು ಗೂಬೆಗಳ ಬಗ್ಗೆ ವಿಶೇಷ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ಓದಿದ್ದೇನೆ. ನಮ್ಮ ಜನ ಗೂಬೆಯ ವಿಷಯವಾಗಿ ಮೂಢ ನಂಬಿಕೆ ಬಿಟ್ಟು ಸ್ವಲ್ಪ ಗಮನ ಹರಿಸಿದರೆ, ಗೂಬೆಯ ಸಂತತಿಯನ್ನು ಉಳಿಸಬಹುದು. ಇತರೆ ಪ್ರಾಣಿ, ಪಕ್ಷಿಗಳಂತೆ ಗೂಬೆಗಳು ರಾತ್ರಿ ಸಮಯದಲ್ಲಿ ಸ್ವತಂತ್ರವಾಗಿ ಸಂಚರಿಸಬಹುದು. ಗೂಬೆ ಕೃಷಿಕರಿಗೆ ನೆರವಾಗುವಂತಹ ಜೀವಿಯಾಗಿದೆ.ಗೂಬೆಯನ್ನು ಕೆಲವು ದೇಶಗಳಲ್ಲಿ ಜ್ಞಾನದ ಸಂಕೇತವಾಗಿ ಬಳಸುತ್ತಾರೆ.ಶೈಕ್ಷಣಿಕ ಚಿಹ್ನೆಯಾಗಿ ಕೂಡ ಗೂಬೆಯನ್ನು ಬಳಸುವುದಿದೆ. ಪ್ರಕೃತಿಯಲ್ಲಿನ ನಾಶಕ ಕೀಟಗಳನ್ನು,ಜಂತುಗಳನ್ನು ಕಡಿಮೆ ಮಾಡುವಲ್ಲಿ ಗೂಬೆಯ ಪಾತ್ರವೆ ಮುಖ್ಯವಾಗಿದೆ. ಆದರಿಂದ ಇನ್ನು ಮುಂದಾದರು ಗೂಬೆಗಳನ್ನು, ಅವುಗಳ ಧ್ವನಿಯನ್ನು ಪೀಡನೆ ಎಂಬುದನ್ನು ಬಿಟ್ಟು.ಪ್ರೀತಿಸುವುದನ್ನು ಕಲಿತುಕೊಂಡರೆ ನಮಗೆ ಒಳ್ಳೇಯದು.


  • ಲೇಖನ್ ನಾಗರಾಜ್ (ಹರಡಸೆ,ಹೊನ್ನಾವರ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW