ಇರುವಷ್ಟು ದಿನ ಒಲವನ್ನು ಹರಿಸಿ… ಎನ್ನುವ ಅರ್ಥಪೂರ್ಣವಾದ ಸಂದೇಶವನ್ನುಈ ಕವನ ಸಾರುತ್ತದೆ. ಕವಿಯತ್ರಿ ರೇಶ್ಮಾಗುಳೇದಗುಡ್ಡಾಕರ್ ಅವರು ಸುಂದರವಾಗಿ ಬರೆದಿದ್ದಾರೆ. ಮುಂದೆ ಓದಿ…
ಹರಿಸಲೇ ಬೇಕಿದೆ
ಎದೆಯೊಳಗಿನ ಒಲವ ಸುಧೆ
ನಾವು ನಾವಾಗಿಯೇ ಉಳಿಯಲು
ನಮ್ಮದೇ ಅಹಂನ ಕೋಟೆ ತೊರೆದು
ಸ್ವಚ್ಛಂದವಾಗಿ ಅರಳಲು…
ಹಣ ಕೊಟ್ಟರೆ ಕರಗುವದು ಆದರೆ
ಅಲ್ಲಿ ಪ್ರೀತಿ ಎಂದೂ ಉಳಿಯದು
ಹೀಡಿ ಆತ್ಮೀಯತೆ
ಹೃದಯವ ಬೆಳಗುವದು
ಬೇಗುದಿಗಳ ಬಡಿದೂಡಿಸುವದು…
ಕಂಡವರ ಮನೆಯ ಕಿಚ್ಚಲ್ಲಿ
ಚಳಿಕಾಸಿದ್ದು ಸಾಕು
ಒಮ್ಮೆ ತೆರೆದು ನೋಡಿ ನಿಮ್ಮ
ಮನೆಯೊಳಗಿನ ಕಿಡಿಗಳ…
ಜಾಲಿಯ ಮರದಂತೆ ನೆರಳು
ನೀಡದೆ ಬದುಕಿ ಮನೆ ಯ ಮೇಲೆ
ಮನೆ ಕಟ್ಟಿದರೆ ಎನು ಬಂತು ?
ಮಮತೆ ಇಲ್ಲದ ಮನ, ಮನವೇ ?
ಸ್ನೇಹವಿಲ್ಲದ ಬದುಕು ಬದುಕಲ್ಲ
ಹರಿಸಲೇ ಬೇಕಿದೆ ಎದೆಯೊಳಗೆ
ಒಲವ ಸುಧೆ…
- ರೇಶ್ಮಾಗುಳೇದಗುಡ್ಡಾಕರ್