ಹುಡುಗರು ಬ್ಯಾಟ್ -ಬಾಲ್ ಹಿಡಿದು ಮೈದಾನಕ್ಕೆ ಇಳಿದರೆ, ಈ ಹದಿನಾಲ್ಕರ ಪೋರ ಕ್ಯಾಮೆರಾ ಹಿಡಿದು ಸೃಷ್ಠಿಯ ಸೌಂದರ್ಯವನ್ನು ಸೆರೆ ಹಿಡಿಯಲು ಯಾವಾಗಲೂ ತಲ್ಲೀನನಾಗಿರುತ್ತಾನೆ.
ಈ ಬಾಲಕನ ಹೆಸರು ವಿಸ್ಮಯ.ಎಸ್. ವಸಿಷ್ಠ. ಭವಾನಿ ದಿವಾಕರ್ ಹಾಗು ಶಾಮ್ ಪ್ರಸಾದ್ ದಂಪತಿಯ ಪುತ್ರ. ಕುಮಾರನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಛಾಯಾಗ್ರಹಣ ಈ ಬಾಲಕನ ಹವ್ಯಾಸದಲ್ಲಿಯೊಂದಾಗಿದೆ. ತನ್ನ ಓದಿನ ಬಿಡುವಿನ ಸಮಯದಲ್ಲಿ ಕ್ಯಾಮೆರಾ ಕತ್ತಿಗೆ ನೇತು ಹಾಕಿಕೊಂಡು ಕಸ- ಕಂಟಿಯನ್ನದೆ ಅವುಗಳ ಮಧ್ಯೆದಲ್ಲಿ ನಿಂತು ನಿಸರ್ಗವನ್ನು ತನ್ನ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿಯುತ್ತಾನೆ. ಅವನ ಹವ್ಯಾಸಕ್ಕೆ ಅಪ್ಪ-ಅಮ್ಮನು ನೀರೆರೆಯುತ್ತಿದ್ದಾರೆ. ಅವನು ಸೆರೆ ಹಿಡಿದ ಕೆಲವೊಂದು ಛಾಯಾಚಿತ್ರಗಳು ನಿಮ್ಮ ಕಣ್ಮುಂದಿದೆ. ಈ ಬಾಲಕನ ಛಾಯಾಚಿತ್ರಗಳು ಇಷ್ಟವಾದರೆ ಲೈಕ್ಸ್, ಕಾಮೆಂಟ್ಸ್ ಮೂಲಕ ಪ್ರೋತ್ಸಾಹಿಸಿ…
- ವಿಸ್ಮಯ. ಎಸ್. ವಸಿಷ್ಠ