ನಿನ್ನನು ಮರೆತ ದಿನಗಳೇ ಇಲ್ಲ, ಸಲ್ಲಿಸುವೆನು ನಾ ಪ್ರಾರ್ಥನೆ ….ಸಾಹಿತಿ ಗುರುನಾಥ ಶೀಲವಂತರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಓದಿ….
ಕಾಡಿ ನಿನ್ನನು ಬೇಡಿಕೊಂಬುವೆನು
ನೋಡು ನನ್ನನು ದೇವನೆ!
ಪಾಡಿ ಹೊಗಳುತ ಮಾಡಿ ಭಜನೆಯ
ನೀಡು ಅಭಯ ದೈವನೆ !. (ಪ)
ಅನಂತ ಆಸೆಗಳ ನಾಶ ಮಾಡುತ
ತೋಷ ನೀಡೋ ಧನ್ಯನೆ.
ಮೋಸ ವರ್ಜಿಸಿ ಪಾಷ ಕಳಚುತ
ಪೋಷಿಸೆನ್ನನು ಮಾನ್ಯನೆ. (೧)
ಕಾಮ ಕ್ರೋಧ ವಿಷಯಂಗಳನು
ಕಳೆಯೋ ಓ ಜಗದೀಶನೆ
ಜ್ವರದ ಮೇಲತೀ ಸಾರ ನೀಗುತ
ಸಲಹು ತೇಜೋಪುಂಜನೆ. (೨)
ಬೆಂಬಿಡದೆ ಕಾಡುವ ದುರಿತವನು
ದೂರ ಸರಿಸೊ ಭಗವಂತನೆ
ಜಂಬದಿ ಮೆರೆದ ತಪ್ಪನು ಮನ್ನಿಸಿ
ಕಾಯೊ ಅಂಬುಜನಾಭನೆ. (೩)
ನಿನ್ನನು ಮರೆತ ದಿನಗಳೇ ಇಲ್ಲ
ಸಲ್ಲಿಸುವೆನು ನಾ ಪ್ರಾರ್ಥನೆ
ನಿನ್ನ ಹೊರತು ನನಗಾರೂ ಇಲ್ಲ
ನಡೆಸುವೆ ನಿನ್ನಯ ಕೀರ್ತನೆ !. (೪)
- ಗುರುನಾಥ ಶೀಲವಂತರ – ಸಾಹಿತಿಗಳು