‘ಪ್ರೇಮಿ’ ಕವನ – ಡಾ.ಲಕ್ಷ್ಮಣ ಕೌಂಟೆ



‘ಇನ್ನು ದೂರ ಸರಿಯುವುದು ಬೇಡ ಎರಡಾಗಿರುವ ಹೃದಯಗಳು ಮತ್ತೆ ಒಂದಾಗಲಿ ಬಿಡು’… ಕವಿ ಡಾ.ಲಕ್ಷ್ಮಣ ಕೌಂಟೆ ಅವರ ಕವನದ ಸುಂದರ ಸಾಲುಗಳಿವು, ಮುಂದೆ ಓದಿ…

ಕರೆಯುವವನು ಅವನಲ್ಲ
ಅವನೊಳಗಿರುವ ಪ್ರೇಮಿ..
ಕರೆದರೆ ಬರುವವಳೂ ಅವಳಲ್ಲ
ಅವಳೊಳಗಿರುವೆ ಪ್ರೇಯಸಿ

ಅವರಿಬ್ಬರೂ ಮೊದಲು
ಒಂದೇ ಹೃದಯವಾಗಿ ಇದ್ದವರು
ಅದಾವುದೋ ಕರ್ಮವೋ
ಎರಡು ಸಮಾನ ಭಾಗಗಳನ್ನಾಗಿಸಿ
ಒಂದೊಂದರಲ್ಲಿ ಒಂದೊಂದು
ಜೀವಿಯನ್ನಾಗಿ ಸೃಷ್ಟಿಸಿತು..

ಹೃದಯದ ಎರಡು ಭಾಗಗಳ
ಒಂದರ ತುಡಿತ ಇನ್ನೊಂದರಲ್ಲಿ
ಇರಿಸಿ ಈಗ ಹೀಗೆ ಪೀಡಿಸುತಿದೆ
ಇದು ನೀನರಿಯೇ ಪ್ರಿಯೆ..
ಒಮ್ಮೆ ಯೋಚಿಸಿ ನೋಡು..!!

ಇರಲಿಕ್ಕಾಗದು
ನಿನ್ನ ಬಿಟ್ಟು ನಾನು
ನನ್ನ ಬಿಟ್ಟು ನೀನು
ಏನೇನೋ ನೆಪಗಳ ಹೇಳಿ
ದೂರ ಉಳಿಯದಿರು ಜೀವವೇ
ಉಸಿರು ನಿಂತರೆ
ಎದೆ ಬಡಿತ ನಿಲ್ಲದೇ..!!

ಇನ್ನು ದೂರ ಸರಿಯುವುದು ಬೇಡ
ಎರಡಾಗಿರುವವುಗಳು
ಮತ್ತೆ ಒಂದಾಗಲಿ ಬಿಡು
ಅಪಧಮನಿ ಅಭಿಧಮನಿ
ಬೇರೆ ಬೇರೆ ಇರುವುದಟೆ?!!


  • ಡಾ.ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು)  ಕಲಬುರಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading