ಮನದ ಹೊರಣ,ಭಾವ ತೋರಣ- ರೇಶ್ಮಾ ಗುಳೇದಗುಡ್ಡಾಕರ್



‘ಸನಿಹ‌ ಬಯಸಿದರು… ಮನವು‌ ನಾಚಿದೆ…’ ಕವಿಯತ್ರಿ  ರೇಶ್ಮಾ ಗುಳೇದಗುಡ್ಡಾಕರ್ ಅವರ ಮನದ ಹೊರಣ, ಭಾವ ತೋರಣ…ಕವನ. ಮುಂದೆ ಓದಿ…

ತಂಗಾಳಿಯು ನಾಚುವಂತೆ
ತಂಪಾಗಿ ಸೇರಿದೆ ನನ್ನ ಹೃದಯವ
ನಿನ್ನದೇ ವಾಸಸ್ಥಾನ ಮಾಡಿದೆ…..

ಕ್ಷಣ ಕ್ಷಣಕೊ ನಿನ್ನದೇ ನೆನಪು
ತುಂಬಿ ಧುಮ್ಮಿಕ್ಕುವ ಜಲಪಾತದಂತೆ
ಭೋರ್ಗರೆಯುತಿದೆ …..

ಸನಿಹ‌ ಬಯಸಿದರು
ಮನವು‌ ನಾಚಿದೆ
ಬಿಸಿಯುಸಿರ ಹಾಜರಿಯಲ್ಲಿ
ನಿನ್ನ ಕಂಗಳನು ಎದುರಿಸಲು …..

ಅಳೆಯಲಾಗದಷ್ಟು ಒಲವು
ನನ್ನೊಳಗೆ ವಿಶಾಲವಾಗಿ ಹರಡಿದೆ
ಆದರೂ ಹುಸಿ ಮುನಿಸು ತೋರಿ
ನಿನ್ನ ಕಾಯಿಸಿದೆ …..

ಬಯಕೆಗೆ ಬೇಡ ನಿನ್ನ
ಒಲವು
ಚೆಲುವಿಗೆ ಬೇಡ ನಿನ್ನ ತನುವು
ಎಲ್ಲವ ಮೀರಿದ ಒಲವಿನ
ಆರಾಧನೆಯು
ಬೆಳಕು ಬೆಳಗಲಿ ನಮ್ಮಿಬ್ಬರಲ್ಲಿ ….

ಹರೆಯದ ಉನ್ಮಾದವಿಲ್ಲ
ವಿರಹದ ಉದ್ರೇಕವಿಲ್ಲ
ಎನಿದ್ದರು ನಿನ್ನೊಡಲ ಮಮತೆಯ
ಕಡಲಲಿ ಮೀಯುವ ಕೂಸು ನಾನು ….
ನಿನ್ನ ಹೆಸರ ಕರೆಯಲು ಅಂಜಬೇಕೇನು …..!!?


  • ರೇಶ್ಮಾ ಗುಳೇದಗುಡ್ಡಾಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading