ಬೂದಿಹಾಳ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ



ಬೂದಿಹಾಳ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಮಾರನಬಸರಿಯ ಭಗತ್‍ಸಿಂಗ್ ಯುವಕ ಸಂಘ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.

ಕನ್ನಡ ಪ್ರೀತಿಯು ನಮ್ಮ ಅಂತರಾಳದಿಂದ ಹೊರಹೊಮ್ಮಬೇಕು – ಡಾ. ಸಂಗಮೇಶ ತಮ್ಮನಗೌಡ್ರ.

This slideshow requires JavaScript.

ಕನ್ನಡ ವೆಂದರೆ ಅದು ಒಂದು ಭಾಷೆಯಲ್ಲ, ಅದು ನಮ್ಮ ಉಸಿರಿನ ತಿದಿ ಇದ್ದಂತೆ. ಈ ನೆಲದಲ್ಲಿ ಹುಟ್ಟಿದ ನಾವು ಈ ಭಾಷೆಯನ್ನು ಸದಾ ಪ್ರೀತಿಸಬೇಕು. ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಕನ್ನಡ ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಂಡು ಶುದ್ಧವಾಗಿ ಓದುವುದು ಮತ್ತು ಬರೆಯುವುದನ್ನು ರೂಢಿಸಿಕೊಂಡು ತಮ್ಮ ವಿಶಿಷ್ಟ ಪ್ರತಿಭೆಯನ್ನು ಮಕ್ಕಳು ಕನ್ನಡ ಶಾಲೆಗಳಲ್ಲಿ ತೋರಿ¸ಬೇಕು ಕನ್ನಡ ಅಂಕಿಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಬೇಕು. ಎಂದು ಸಾಹಿತಿ ಹಾಗೂ ಮುಖ್ಯ ಶಿಕ್ಷಕ ಡಾ. ಸಂಗಮೇಶ ತಮ್ಮನಗೌಡ್ರ ಕರೆಕೊಟ್ಟರು. ಅವರು ಬೂದಿಹಾಳ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಶಾಲಾ ಸಿಬ್ಬಂದಿಯನ್ನುದ್ದೇಶಿಸಿ ಉಪನ್ಯಾಸ ನೀಡಿದರು. ಸಹಶಿಕ್ಷಕ ಚಂದ್ರಶೇಖರ ಕೇಸರಿಯವರು ಮಾತನಾಡುತ್ತ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬರುವುದರೊಂದಿಗೆ ನಮ್ಮ ನಾಡಿನ ಮತು ನಮ್ಮ ಭಾಷೆಯ ಹಿರಿಮೆಯನ್ನು ಹೆಚ್ಚಿಸಿವೆ. ನಾವು ಕನ್ನಡ ಭಾಷೆಯನ್ನು ಸದಾ ಪ್ರೀತಿಸೋಣ ಎಂದು ಹೇಳಿದರು. ಸಹ ಶಿಕ್ಷಕ ಬಸವರಾಜ ದೇಸಾಯಿಪಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕಿ ಚೇತನಾ ಬೆಳ್ಳಟ್ಟಿ ಸ್ವಾಗತಿಸಿದರು.



ಚನ್ನಮ್ಮನ ಲಾವಣಿ ಮತ್ತು ರಾಜ್ಯೋತ್ಸವ ಉಪನ್ಯಾಸ…

ಆಲೂರ ವೆಂಕಟರಾಯರು ಕರ್ನಾಟಕ ಏಕೀಕರಣದ ರೂವಾರಿಯಾಗಿದ್ದಾರೆ – ಡಾ. ಸಂಗಮೇಶ ತಮ್ಮನಗೌಡ್ರ.

ಅಖಂಡ ಕರ್ನಾಕತ್ವದ ಕನಸು ಕಂಡಿದ್ದ ಏಕೀಕರಣ ಶಿಲ್ಪಿ ಆಲೂರ ವೆಂಕಟರಾಯರು ಕರ್ನಾಟಕತ್ವದ ರೂವಾರಿಯೆಂದೆನಿಸಿ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಒಂದುಗೂಡಿಸಿ, ಪ್ರಾತಃಸ್ಮರಣೀಯರೆನಿಸಿದ್ದಾರೆ. ಕನ್ನಡ ನಾಡು ವಿಶಾಲತೆಯ ಪರಿಕಲ್ಪತೆಯಿಂದ ಸಮಗ್ರತೆ ಹೊತ್ತು ತನ್ನದೇ ಆದ ಘನವಂತಿಕೆಯನ್ನು ಹೊಂದಿದೆ. ಹಾಗೆಯೇ ಗದುಗಿನ ಹುಯಿಲಗೋಳ ನಾರಾಯಣರಾರು ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ನಾಡಗೀತೆಯನ್ನು ಬರೆಯುವದರೊಂದಿಗೆ ಸುಂದರ ಕನ್ನಡ ನಾಡಿನ ಕನಸು ಕಂಡಿದ್ದರು. ಹುಯಿಲಗೋಳದಲ್ಲಿ ನಾರಾಯಣರಾಯರ ಸ್ಮಾರಕ ಭವನವು ನಿರ್ಮಾಣವಾಗಿ ಅವರ ಸಾಹಿತ್ಯ ಚಿಂತನ ವರ್ಷಾಂತ್ಯವೂ ನಡೆಯುವಂತಾದರೆ ಈ ರಾಜ್ಯೋತ್ಸವಕ್ಕೆ ಅರ್ಥಪೂರ್ಣತೆ ಬರುತ್ತದೆ.

This slideshow requires JavaScript.

ಕಿತ್ತೂರ ಚನ್ನಮ್ಮನ ಲಾವಣಿಗಳು ಆಕೆಯ ಧೀರೋದ್ಧಾತ್ತÀ ಪರಿಕಲ್ಪನೆಯಲ್ಲಿ ಮೂಡಿಬಂದಿತು. ಅಂದಿನ ಕಾಲದಲ್ಲಿ ಉತ್ತರಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿಯೂ ಲಾವಣಿಗಳನ್ನು ಹಾಡುತ್ತಿದ್ದರು. ಈ ಲಾವಣಿ ಗೀತೆಗಳನ್ನು ಡಾ. ಎಂ.ಎಂ. ಕಲಬುರ್ಗಿಯವರು ಗ್ರಂಥ ರೂಪದಲ್ಲಿ ಸಂಗ್ರಹಿಸುವ ಸತ್ಕಾರ್ಯ ಮಾಡಿದ್ದಾರೆ ಮಹರ್ಷಿ ವಾಲ್ಮೀಕಿಯು ರಾಮಾಯಣ ರಚಿಸಿ, ರಾಮ-ಲಕ್ಷ್ಮಣ ಮತ್ತು ಸೀತೆಯ ಪಾತ್ರದೊಂದಿಗೆ ಸಹೋದರತ್ವದ ಪರಿಕಲ್ಪನೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಹೇಳಿದರು.

ಅವರು ನರೇಗಲ್ಲ ಸಮೀಪದ ಮಾರನಬಸರಿಯ ಭಗತ್‍ಸಿಂಗ್ ಯುವಕ ಸಂಘದವರು ಏರ್ಪಡಿಸಿದ ರಾಜ್ಯೋತ್ಸವ, ಚೆನ್ನಮ್ಮ ವಿಜಯೋತ್ಸವ ಮತ್ತು ವಾಲ್ಮೀಕಿ ಜಯಂತಿಯ ತ್ರಿವೇಣಿ ಸಂಗಮದ ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಭಗತ್ ಯುವಕ ಸಂಘವು ರೈತರ ಕೃಷಿ ಚಟುವಟಿಕೆಯನ್ನು

ಉತ್ತೇಜಿಸುವ ಸಲುವಾಗಿ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ದಾವಲಬಿ ದೋಟಿಹಾಳ, ಉಪಾಧ್ಯಕ್ಷರಾದ ಶಶಿÀಕುಮಾರ ದಿಂಡೂರ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಮತ್ತು ಭಗತ್‍ಸಿಂಗ್ ಯುವಕ ಸಂಘದ ಎಲ್ಲಾ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತಂದರು.ಉಪನ್ಯಾಸ ನೀಡಿದ ಡಾ. ಸಂಗಮೇಶ ತಮ್ಮನಗೌಡ್ರ ಕಿತ್ತೂರ ಚೆನ್ನಮ್ಮನ ಲಾವಣಿ ಹಾಡಿ ಕೇಳುಗರ ಗಮನ ಸೆಳೆದರು. ವಕೀಲರಾದ ಶ್ರೀಶೈಲ ಎಸ್. ಹೂಗಾರ ಸ್ವಾಗತಿಸಿದರು. ಡಿ.ಡಿ. ದೋಟಿಹಾಳ ನಿರೂಪಿಸಿ ವಂದಿಸಿದರು.


  • ಆಕೃತಿನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading